ಮಧ್ಯಪ್ರದೇಶ: ಮಿರ್ಚಿ ಬಾಬಾ ಎಂದು ಕರೆಯಲ್ಪಡುವ ಬಾಬಾ 'ವೈರಾಗ್ಯಾನಂದಗಿರಿ'ಯನ್ನು ಅತ್ಯಾಚಾರ ಆರೋಪದ ಮೇಲೆ ಬಂಧಿಸಲಾಗಿದೆ.
ಸ್ವಯಂ ಘೋಷಿತ ದೇವಮಾನವ, ಸ್ವಾಮಿ ವೈರಾಗ್ಯಾನಂದಗಿರಿ ಅಲಿಯಾಸ್ ಮಿರ್ಚಿ ಬಾಬಾ ಅವರ ಮೇಲೆ ಅತ್ಯಾಚಾರ ಆರೋಪದಡಿ, ಐಪಿಸಿ ಸೆಕ್ಷನ್ 376 ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಭೋಪಾಲ್ ಎಸಿಪಿ ನಿಧಿ ಸಕ್ಸೇನಾ ಇನ್ನು ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.