ಬೆಂಗಳೂರು: ಫ್ಯಾಸಿಸ್ಟ್ ಸರ್ಕಾರದ ಕುತಂತ್ರದಿಂದ ದೇಶದ ಜಾತ್ಯಾತೀತತೆ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಂವಿಧಾನ ಬದ್ಧವಾಗಿ ಸ್ಥಾಪನೆಗೊಂಡ ಪಿಎಫ್ಐ ಸಂಘಟನೆ ನಾಯಕರ ಬಂಧನವಾಗುತ್ತಿದೆ, ಈ ಮೂಲಕ ಪ್ಯಾಶಿಷ್ಟ್ ಸರಕಾರದ ಮಿತಿಮೀರಿದ ಸರ್ವಾಧಿಕಾರ ತಾಂಡವವಾಡುತ್ತಿದ್ದು, ಇವತ್ತು ಪಿಎಫ್ಐ, ನಾಳೆ ಯಾರು ಎಂಬುದರ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದಿದ್ದಾರೆ.
ಈಗಾಗಿ ದೇಶದಲ್ಲಿ ಜಾತ್ಯಾತೀತತೆ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು ಎಂದು ತಿಳಿಸಿದ್ದಾರೆ.