Home ರಾಜಕೀಯ ಜೆಡಿಎಸ್‌ ಮತ್ತು ಬಿಜೆಪಿಯಿಂದ ‘ಗ್ಯಾರಂಟಿ ಯೋಜನೆ’ಗಳನ್ನು ನಿಲ್ಲಿಸುವ ಪ್ರಯತ್ನ: ಡಿಕೆ ಶಿವಕುಮಾರ್

ಜೆಡಿಎಸ್‌ ಮತ್ತು ಬಿಜೆಪಿಯಿಂದ ‘ಗ್ಯಾರಂಟಿ ಯೋಜನೆ’ಗಳನ್ನು ನಿಲ್ಲಿಸುವ ಪ್ರಯತ್ನ: ಡಿಕೆ ಶಿವಕುಮಾರ್

0

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳು ರದ್ದಾಗಲಿವೆ ಎಂಬ ಬಿಜೆಪಿ ಮತ್ತು ಜೆಡಿಎಸ್ ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆ ನಿಲ್ಲಲಿ ಎಂಬ ಪ್ರಯತ್ನ ನಡೆಸಿವೆ ಎಂದಿದ್ದಾರೆ.

ಇಂದು ಚನ್ನಪಟ್ಟಣ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವ ಪ್ರಯತ್ನವನ್ನು ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿವೆ. ದೇವೇಗೌಡರು ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಬೇಕೆಂದಿದ್ದಾರೆ, ಅದೇ ಕಾರಣಕ್ಕೆ ಜನ ಬಹಳ ಎಚ್ಚರಿಕೆ ಇರಬೇಕೆಂದು ಶಿವಕುಮಾರ್ ಹೇಳಿದರು.

ಮೂರೂ ಕಡೆ ಚುನಾವಣಾ ಪ್ರಚಾರ ಮುಗಿಸಿ ಬಂದಿದ್ದೇನೆ, ಇವತ್ತು ಮುಖ್ಯಮಂತ್ರಿಯವರನ್ನು ಕರೆದುಕೊಂಡು ಚನ್ನಪಟ್ಟಣಕ್ಕೆ ಹೋಗುತ್ತಿದ್ದೇನೆ, ಎಲ್ಲ ಕಡೆ ಬಹಳ ಚೆನ್ನಾಗಿ ರೆಸ್ಪಾನ್ಸ್ ಬಂದಿದೆ, ಮೂರು ಉಪ ಚುನಾವಣೆಗಳಲ್ಲೂ ಕಾಂಗ್ರೆಸ್ ನಿಶ್ಚಿತವಾಗಿ ಗೆಲುವು ಸಾಧಿಸಲಿದೆ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿದ್ದಾರೆ ಎಂದರು.

You cannot copy content of this page

Exit mobile version