ಉತ್ತರ ಪ್ರದೇಶ: ಕೇಂದ್ರ ಸರ್ಕಾರದ ಸೇನಾ ನೇಮಕಾತಿಯ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಆಗಸ್ಟ್ 7 ರಿಂದ ರೈತರೆಲ್ಲ ಸೇರಿ ದೇಶದ್ಯಂತ ಅಭಿಯಾನವನ್ನು ಕೈಗೊಳ್ಳುತ್ತೇವೆ ಎಂದು ಭಾರತೀಯ ಕಿಸಾನ್ ಯುನಿಯನ್ ಸಂಘಟನೆಯ(ಬಿಕೆಯು) ಅಧ್ಯಕ್ಷ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಬುಧವಾರ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಟಿಕ್ರಿ ಪ್ರದೇಶದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್, ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶದೊಂದಿಗಿನ ಹೋರಾಟ ಇನ್ನೂ ಆರಂಭವಾಗಿಲ್ಲ ಎಂದು ಹೇಳಿದರು.
ಅಗ್ನಿಪಥ್ ಯೋಜನೆಯ ವಿರುದ್ಧದ ಅಭಿಯಾನ ಆಗಸ್ಟ್ 7 ರಿಂದ ಆರಂಭಗೊಂಡು ಒಂದು ವಾರದವರೆಗೆ ಮುಂದುವರೆಯುತ್ತದೆ ಎಂದು ಬಿಕೆಯು ರಾಷ್ಟ್ರೀಯವಕ್ತಾರರು ರೈತ ಸಮುದಾಯದ ಬೆಂಬಲವನ್ನು ಕೋರಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ, ಬಿಜೆಪಿ ಸದಸ್ಯರ ಮೇಲಿನ ಪ್ರಕರಣಗಳನ್ನು ಮುಚ್ಚಲಾಯಿತು. ಆದ್ದರಿಂದ ಅವರು ಪ್ರಕರಣಗಳಿಗೆ ಸಿದ್ಧರಿರಬೇಕು ಅಥವಾ ನಾವು ಚಳುವಳಿಗೆ ಸಿದ್ಧರಿದ್ದೇವೆ ಎಂದು ರಾಕೇಶ್ ಟಿಕಾಯತ್ ಹೇಳಿದರು.