ನವದೆಹಲಿ : ಕೇವಲ ಕ್ರಿಕೆಟ್‌ನಿಂದ (Cricket) ದೇಶಭಕ್ತಿ (Patriotism) ಅಳೆಯಲು ಸಾಧ್ಯವಿಲ್ಲ ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (B K Hariprasad) ವಾಗ್ದಾಳಿ ನಡೆಸಿದ್ದಾರೆ.ಪಾಕ್ ವಿರುದ್ಧ ಭಾರತ ಏಷ್ಯಾಕಪ್ ಗೆದ್ದ ಬಗ್ಗೆ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕ್ರಿಕೆಟ್ ಗೆದ್ದರೆ ಯುದ್ಧವನ್ನೇ ಗೆದ್ದಂತಾಗಿಬಿಡ್ತಾ ಎಂದು ಪ್ರಶ್ನಿಸಿದ್ದಾರೆ. ಪಹಲ್ಗಾಮ್ ಘಟನೆ ಜನರ ಮನಸ್ಸಿನಿಂದ ಇನ್ನೂ ಅಳಿಸಿಲ್ಲ, ನೋವು ಹಾಗೇ ಇದೆ. ಈ ಸಂದರ್ಭದಲ್ಲಿ ಪಾಕ್ ಜೊತೆಗೆ ಕ್ರಿಕೆಟ್ ಆಡೋದು ಬೇಕಿತ್ತಾ? ನಿಜವಾದ ದೇಶಭಕ್ತಿ ಇದ್ರೆ ಕ್ರಿಕೆಟ್ ಅಲ್ಲ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಎಂದು ಕಿಡಿಕಾರಿದರು. ಈ ಆಟದಲ್ಲಿ ಸಾವಿರಾರು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತೆ. ಅಮಿತ್ ಶಾ ಅವರ ಮಗಾ ಜಯ್ ಶಾ ಬ್ಯುಸಿನೆಸ್ ಮಾಡೋಕೆ ಪಂದ್ಯ ಆಯೋಜಿಸುತ್ತಿದ್ದಾರೆ. ಇವರಿಗೆ ಕಾಂಗ್ರೆಸ್ ದೇಶಭಕ್ತಿ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಕ್ರಿಕೆಟ್ ಗೆದ್ದರೇ ಯುದ್ಧ ಗೆದ್ದಂತಾಗಿಬಿಡುತ್ತಾ ಎಂದು ಲೇವಡಿ ಮಾಡಿದ್ದಾರೆ.
ಇನ್ನೂ ಜಾತಿ ಜನಗಣತಿಗೆ ಮಾಹಿತಿ ನೀಡಬೇಡಿ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದು ಕೇಂದ್ರ ಸಚಿವರ, ಸಂಸದರ ಹೇಳಿಕೆ ಅನಾರೋಗ್ಯ ಮನಸ್ಥಿತಿಯ ಹೇಳಿಕೆಯಾಗಿದೆ. ಇವರ ಪಿತೃಪಕ್ಷ ಆರ್‌ಎಸ್‌ಎಸ್. ಆರ್‌ಎಸ್‌ಎಸ್ ಎಂದಿಗೂ ಹಿಂದುಳಿದ ಜನರು, ಶೂಧ್ರರನ್ನು, ಪಂಚಮರನ್ನ ಗೌರವದಿಂದ ನೋಡಿಲ್ಲ. ಅವರನ್ನು ಕಾಲಾಳುಗಳಾಗಿ ಬಳಸಿಕೊಂಡಿದೆ. ಓಬಿಸಿಗಳಿಗೆ ಅವಕಾಶಗಳು ಸಿಕ್ಕರೇ ಅವರು ಸಮಾಜದಲ್ಲಿ ಮೇಲೆ ಬರುತ್ತಾರೆ ಎಂಬ ದುರುದ್ದೇಶದಿಂದ ಈ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ಉದ್ದೇಶವನ್ನು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಜಾನಗಣತಿ ಗಣತಿ ಮಾಡುತ್ತದೆ. ನಾವು ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡುತ್ತಿದ್ದೇವೆ. ಸಮಾಜದಲ್ಲಿ ತುಳಿತಕ್ಕೊಳಾದ ಜನರ ಅಭಿವೃದ್ಧಿಗೆ ಮಾಡುತ್ತಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಸಭೆ ಮಾಡಿದ್ದಾರೆ. ಬಿಜೆಪಿ ನಾಯಕರು ಪ್ರಚೋಧನೆ ನೀಡಿ ಸರ್ಕಾರಿ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಪಹಲ್ಗಾಮ್ ಸಂತ್ರಸ್ತರಿಗೆ ಟೀಂ ಇಂಡಿಯಾ ದೇಣಿಗೆ: ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ 9 ನೇ ಬಾರಿಗೆ ಏಷ್ಯಾ ಕಪ್ ಒಂಬತ್ತನೇ ಬಾರಿಗೆ ಏಷ್ಯಾಕಪ್ ಪಟ್ಟ ಅಲಂಕರಿಸಿತು. ಇದೀಗ ಟೀಂ ಇಂಡಿಯಾಗೆ ಬಿಸಿಸಿಐ ಕಡೆಯಿಂದ ಭಾರೀ ಉಡುಗೊರೆ ನೀಡಿದ್ದು, ಗಣ್ಯಾತಿಗಣ್ಯರು ಶುಭಕೋರಿದ್ದಾರೆ.
ಪಾಕ್ ವಿರುದ್ಧ ಫೈನಲ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಗೆಲುವು ದಾಖಲಿಸಿದ ಸೂರ್ಯಕುಮಾರ್ ಪಡೆಗೆ ಬಿಸಿಸಿಐ ಬರೋಬ್ಬರಿ 21 ಕೋಟಿ ನಗದು ಬಹುಮಾನ ಘೋಷಿಸಿದೆ. ಅಷ್ಟೇ ಅಲ್ಲದೆ ಎಸಿಸಿ ಕಡೆಯಿಂದ ಚಾಂಪಿಯನ್ ತಂಡಕ್ಕೆ 2.6 ಕೋಟಿ ಬಹುಮಾನ ನೀಡಲಾಗಿದೆ. ಏಷ್ಯಾ ಕಪ್ ಗೆದ್ದ ಹಿನ್ನಲೆ ಟೀಂ ಇಂಡಿಯಾಗೆ 2.6 ಕೋಟಿ ರೂ. ನೀಡಿದರೆ, ರನ್ನರ್ ತಂಡ ಪಾಕ್ ಗೆ 1.3 ಕೋಟಿ ರೂ. ನೀಡಲಾಗಿದೆ.