Home ರಾಜ್ಯ ಅನ್ಯಾಯ ತಡೆಯದಿದ್ರೆ ಸರಕಾರದ ವಿರುದ್ಧ ಹೋರಾಟ: ತಮ್ಮ ಕೈ ಪಕ್ಷಕ್ಕೆ ಎಚ್ಚರಿಕೆ ಕೊಟ್ಟ ಬಿ. ಶಿವರಾಂ

ಅನ್ಯಾಯ ತಡೆಯದಿದ್ರೆ ಸರಕಾರದ ವಿರುದ್ಧ ಹೋರಾಟ: ತಮ್ಮ ಕೈ ಪಕ್ಷಕ್ಕೆ ಎಚ್ಚರಿಕೆ ಕೊಟ್ಟ ಬಿ. ಶಿವರಾಂ

0

ಹಾಸನ: ಕಂದಾಯ ಇಲಾಖೆ ಸುತ್ತೋಲೆಯು ಬಗರ್ ಹುಕುಂ ಸಾಗುವಳಿದಾರ ರೈತನಿಗೆ ಕಂಟಕವಾಗಿದ್ದು, ಬಡ ರೈತರಿಗೆ ಆಗುವ ಅನ್ಯಾಯ ತಡೆಯಬೇಕು. ಅಗತ್ಯವಿದ್ದರೆ ಸರ್ಕಾರದ ವಿರುದ್ದ ಹೋರಾಟಕ್ಕೂ ಮುಂದಾಗುತ್ತೇವೆ ಎಂದು ಸರ್ಕಾರದ ನಿರ್ಧಾರದ ವಿರುದ್ದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಿ, ಶಿವರಾಂ ಗಂಭೀರವಾಗಿ ಆರೋಪಿಸಿ ತಮ್ಮ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ಕೂಡ ಕೊಟ್ಟ ಪ್ರಸಂಗ ನಡೆಯಿತು.

  ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬಗರ್ ಹುಕುಂ ಭೂಮಿ ಮಂಜೂರಾತಿಗೆ ಇದ್ದ ಸಮಿತಿ ಅದಿಕಾರ ಮೊಟಕು ಮಾಡಲಾಗಿದೆ. ಸ್ಥಳೀಯ ವಿದಾನ ಸಭಾ ಸದಸ್ಯರ ಹೊರತಾಗಿಯು ಅರ್ಜಿ ವಜಾಗೊಳಿಸಲು ಅದಿಕಾರಿಗಳಿಗೆ ಅದಿಕಾರ ನೀಡಲಾಗಿದೆ. ಕಂದಾಯ ಭೂ ಕಂದಾಯ ಅದಿನಿಯಮ ೧೯೬೪ರ ೯೪ಚಿ, ೯೪b ,೯೪ಚಿ(೪) ಅವಕಾಶದಂತೆ ರಾಜ್ಯದಲ್ಲಿ ಲಕ್ಷಾಂತರ ಕುಟುಂಬದಿಂದ ೫೦,೫೩,೫೭ ಅಡಿ ಅರ್ಜಿ ಸಲ್ಲಿಕೆ ನಡೆದಿದೆ. ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿ ಕಾದಿದ್ದ ಬಡ ರೈತರಿಗೆ ಸರ್ಕಾರ ಶಾಕ್ ಕೊಟ್ಟಿದೆ. ದಶಕಗಳಿಂದ ಸಾಗುವಳಿ ಮಾಡುತ್ತಿರೊ ಲಕ್ಷ ಲಕ್ಷ ರೈತರಿಗೆ ಈಗ ಸಂಕಷ್ಟ ಎದುರಾಗಿದೆ. ಡಿಸೆಂಬರ್ ಮೊದಲ ವಾರದೊಳಗೆ ಅರ್ಜಿ ವಿಲೆ ಮಾಡಲು ಗಡುವು ಕೊಡಲಾಗಿದ್ದು, ಸರ್ಕಾರದ ಗಡುವಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಅದಿಕಾರಿಗಳ ಮಾತು ಕೇಳಿ ಕಂದಾಯ ಸಚಿವರು ಎಡವಿದ್ದಾರೆ.

ಕಂದಾಯ ಇಲಾಖೆ ಸುತ್ತೊಲೆ ಬಗ್ಗೆ ಯಾವುದೇ ಶಾಸಕರು ಸಚಿವರು ಗಮನ ಹರಿಸಿಲ್ಲ. ಇಂತಹ ಸುತ್ತೊಲೆ ಇರೋದೆ ಎಷ್ಟೊ ಶಾಸಕರಿಗೆ ಗೊತ್ತಿಲ್ಲ. ಶಾಸಕರ ಅದಿಕಾರ ಮೊಟಕುಗೊಳಿಸಲಾಗಿದೆ ಎಂದು ದೂರಿದರು.

ಈ ಅದಿಕಾರಿಗಳ ಪರಿಶೀಲನೆ ವೇಳೆ ಅರ್ಜಿ ವಜಾ ಆದರೆ ಕಾನೂನು ಹೋರಾಟಕ್ಕೆ ಅವಕಾಶ ಇಲ್ಲ. ಒಮ್ಮೆ ಐದು ಗುಂಟೆ ಮಂಜೂರಾಗಿ ಮತ್ತೆ ಅರ್ಜಿ ಸಲ್ಲಿಸಿದ್ರು ಅವರಿಗೆ ಮಂಜೂರಿಗೆ ಅವಕಾಶ ರದ್ದು ಮಾಡಲಾಗಿದೆ.

ಮಂಜೂರಾಗಿ ಭೂಮಿಯ ನಿಗದಿತ ಗಡಿಯೊಳಗೆ ಇದ್ದರೂ ಅವಕಾಶ ಇಲ್ಲ ಎಂದು ಸುತ್ತೋಲೆ ಹೊರಡಿಸಿದ್ದಾರೆ. ೧/೧೨/೨೦೨೩ ರಂದು ಕಂದಾಯ ಇಲಾಖೆಯಿಂದ ಸುತ್ತೋಲೆ ಬಂದು ೫೦,೫೩,೫೭ ಅಡಿ ಅರ್ಜಿ ಸಲ್ಲಿಸಿದ್ದ ಅರ್ಜ ಶೀಘ್ರ ವಿಲೆವಾರಿಗೆ ಗಡುವು ನೀಡಲಾಗಿದೆ. ಗಡುವು ನೆಪಮಾಡಿ ಬಹುತೇಕ ಅರ್ಜಿ ವಜಾ ಮಾಡಲಾಗುತ್ತಿದೆ ಎಂದು ಸಿಡಿಮಿಡಿಗೊಂಡರು. ಬಡ ರೈತರಿಗೆ ಆಗುವ ಅನ್ಯಾಯ ತಡೆಯಿರಿ ಎಂದು ಒತ್ತಾಯಿಸಿದರು. ಅಗತ್ಯವಿದ್ದರೆ ಸರ್ಕಾರದ ವಿರುದ್ದ ಹೋರಾಟಕ್ಕೂ ಮುಂದಾಗುತ್ತೇವೆ ಎಂದು ಇದೆ ವೇಳೆ ಎಚ್ಚರಿಕೆ ನೀಡಿದರು. ತಮ್ಮದೆ ಸರ್ಕಾರದ ನಡೆಗೆ ಕಾಂಗ್ರೆಸ್ ಹಿರಿಯ ನಾಯಕ ಬಿ ಶಿವರಾಂ ವಾಗ್ದಾಳಿ ನಡೆಸಿದ ಅವರು, ಒಂದೆಡೆ ಕಾಫಿ ಬೆಳೆಗಾರರಿಗೆ ೨೫ ಎಕರೆ ಬರೆಗೆ ಭೂಮಿ ಗುತ್ತಿಗೆಗೆ ಕಾನೂನು. ಇನ್ನೊಂದೆಡೆ ಬಡ ರೈತರ ಬಗರ್ ಹುಕುಂ ಭೂಮಿ ವಶಕ್ಕೆ ಪಡೆಯಲು ಪ್ಲಾನ್ ಮಾಡಲಾಗಿದೆ. ಮುಂದೆ ನಡೆಯಲಿರುವ ಅಧಿವಶನದ ಒಳಗೆ ಸ್ಪಷ್ಟ ನಿಲುವು ಸಿಗಬೇಕು ಎಂದು ಆಕ್ರೋಶಭರಿತವಾಗಿ ಮಾತನಾಡಿದರು.

  ಭೂ ಕಂದಾಯ ಅಧಿನಿಯಮ ೧೦೮ ಸಿ.ಸಿ.ಯಂತೆ ನಮೂನೆ ೫೩ ಮತ್ತು ೫೭ ಅರ್ಜಿಗಳನ್ನು ಯಾವುದೇ ನೋಟಿಸ್ ಅಥವಾ ತಿಳುವಳಿಕೆ ಮಾಹಿತಿ ಕೊಡದೇ, ಅಧಿಕಾರಿಗಳ ಹಂತದಲ್ಲೇ ವಜಾ ಮಾಡುವುದರಿಂದ ಬಡ ರೈತರನ್ನು ಅವಕಾಶ ವಂಚಿತರನ್ನಾಗಿ ಈಗಿನ ತಿದ್ದುಪಡಿ ಕಾನೂನು ಮಾಡುತ್ತಿದೆ. ಈ ಕಾನೂನಿಗೆ ಅಮೂಲಾಗ್ರ ಬದಲಾವಣೆಯ ಮೂಲಕ ಮೊದಲಿನಂತೆ ಕಾನೂನನ್ನು ಜಾರಿಗೆ ತರುವುದರ ಮೂಲಕ ಬಡರೈತರಿಗೆ ಅನುಕೂಲ ಮಾಡಿಕೊಡಬೇಕು. ಹತ್ತು ಅಪರಾಧಿಗಳಿಗೆ ಶಿಕ್ಷೆ ಅದರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆ ಅಗಬಾರದು. ಜಿಲ್ಲಾಧಿಕಾರಿಗಳು ಅರ್ಜಿಗಳನ್ನು ವಜಾ ಮಾಡದೇ ಮತ್ತೊಂದು ಅವಕಾಶಕ್ಕಾಗಿ ನೋಟಿಸ್ ಮತ್ತು ತಿಳುವಳಿಕೆ ಕೊಟ್ಟು ಪರಿಶೀಲಿಸುವುದರ ಅವಶ್ಯಕವಿದೆ ಎಂದರು. ಅನರ್ಹಗೊಳಿಸಿರುವ ಅರ್ಜಿಗಳನ್ನು ಪರಿಶೀಲಿಸಿದಾಗ ಒಮ್ಮೆ ಮಂಜೂರಾದವರಿಗೆ ಮತ್ತೊಮ್ಮೆ ಮಂಜೂರಾತಿ ಇಲ್ಲ. ಅನುಭವದಲ್ಲಿ ಇರುವುದಿಲ್ಲ.

ಗೋಮಾಳ ಸಾಕಷ್ಟು ಇರುವುದಿಲ್ಲ. ಈ ರೀತಿ ನಾನಾ ಕಾರಣಗಳನ್ನು ಕೊಡುವುದರ ಮೂಲಕ ಅರ್ಜಿಯನ್ನು ತಿರಸ್ಕೃತ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಹಿಂದಿನ ಸಮಿತಿಯ ಮಂಜೂರಾತಿ ಮತ್ತು ಈಗಿನ ಮುಜೂರಾತಿಯ ವ್ಯತ್ಯಾಸವನ್ನು ಗಮನಿಸಬೇಕು. ಸರ್ಕಾರದ ಗುರಿಗಾಗಿ ಬಡವರಿಗೆ ಅನ್ಯಾಯ ಮಾಡುವುದು ಸರಿಯಲ್ಲ “ ರೈತರೇ ದೇಶದ ಬೆನ್ನಲುಬು ಎಂಬುದನ್ನು ಮರೆಯಬಾರದು ಎಂದು ಕಾಂಗ್ರೆಸ್ ಸರಕಾರಕ್ಕೆ ಕೈ ನಾಯಕ ಹಾಗೂ ಮಾಜಿ ಸಚಿವರು ಕುಟುಕಿದರು.

You cannot copy content of this page

Exit mobile version