Home ಜನ-ಗಣ-ಮನ ಕಲೆ – ಸಾಹಿತ್ಯ ಬಸೂ ಬೇವಿನಗಿಡದ ಅವರ ಕಥೆಗಳು ಮಹಿಳಾಪರ ಪ್ರತಿಭಟನೆಗೆ ಮುನ್ನುಡಿ: ಕಥೆಗಾರ ಚನ್ನಪ್ಪ ಅಂಗಡಿ

ಬಸೂ ಬೇವಿನಗಿಡದ ಅವರ ಕಥೆಗಳು ಮಹಿಳಾಪರ ಪ್ರತಿಭಟನೆಗೆ ಮುನ್ನುಡಿ: ಕಥೆಗಾರ ಚನ್ನಪ್ಪ ಅಂಗಡಿ

0

ಹುಬ್ಬಳ್ಳಿ : ಅಕ್ಷರ ಸಾಹಿತ್ಯ ವೇದಿಕೆ ಮತ್ತು ನಾಗಸುಧೆ ಜಗುಲಿ, ಹುಬ್ಬಳ್ಳಿ ಜಂಟಿಯಾಗಿ ಹಮ್ಮಿಕೊಂಡಿದ್ದ ಡಾ. ಬಸು ಬೇವಿನಗಿಡದ ಅವರ ನಿವೃತ್ತ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಡಾ. ಬಸು ಬೇವಿನಗಿಡದ ಸಾಹಿತ್ಯದ ಕುರಿತು ಕವಿ, ಕಥೆಗಾರರಾದ ಚನ್ನಪ್ಪ ಅಂಗಡಿ ಮಾತನಾಡಿದರು.

ಮುಖ್ಯ ಮಾತುಗಾರರಾಗಿ ಆಗಮಿಸಿದ್ದ ಅವರು ಮಾತನಾಡುತ್ತಾ, ನಮಗೆ ಬೇವಿನಗಿಡದ ಬಸಣ್ಣ ಆಗಿಯೇ ಹೆಚ್ಚು ಆತ್ಮೀಯರು. ಬಿಎ ಮತ್ತು ಎಮ್‌ಎ ಶಿಕ್ಷಣದಲ್ಲಿ ಕನ್ನಡ-ಇಂಗ್ಲಿಷ್ ಪದವೀಧರರು ಹಾಗಾಗಿ ಅವರು ಆಕಾಶವಾಣಿಯಲ್ಲಿದ್ದುಕೊಂಡು ವೃತ್ತಿ ಮತ್ತು ಪ್ರವೃತ್ತಿಯನ್ನು ವಸ್ತುನಿಷ್ಠವಾಗಿ, ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಕತೆ ಹೆಣೆಯೋದು ಅಷ್ಟು ಸುಲಭವಲ್ಲ. ನಮ್ಮದೇನೋ ಅನ್ನಿಸುವಷ್ಟು ಬೇವಿನಗಿಡದ ಅವರ ಕತೆಗಳಿವೆ. ಕೇಂದ್ರ ಸಾಹಿತ್ಯ ಬಾಲ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಹೊಂದಿದ ಅವರು ಕತೆಗಾರರಾಗಿ ಹೆಚ್ಚು ಪ್ರಮುಖರು. ಒಬ್ಬ ಕತೆಗಾರ ಯಶಸ್ವಿಯಾಗಲು ಭಾಷೆ ಮತ್ತು ಆ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಬಹುಮುಖ್ಯ ಅದನ್ನು ಸಾಧಿಸಿದ್ದಾರೆ ಎಂದರು.

ಬೇವಿನಗಿಡದ ಅವರ ಪಡಿಚಕ್ಕಡಿ ರೈತರ ಬಗ್ಗೆಯ ಕತೆ ಓದಿ ವಿಶ್ಲೇಷಿಸಿದರು. ಸಾಹಿತ್ಯದ ಗ್ರಾಮೀಣ ಭಾಗದ ಚಕ್ಕಡಿಯಾದ ಬಸಣ್ಣ ಕತೆಗಳ ಕುರಿತು ಹಿರಿಯ ವಿಮರ್ಶಕರು ಅಲ್ಲಲ್ಲಿ ನಿರೂಪಣೆಯಲ್ಲಿ ಸಡಿಲತೆ ಇದೆ ಎಂದು ಬರೆದಿದ್ದನ್ನು ನಾನು ಗಮನಿಸಿದ್ದೇನೆ ಅದು ಒಬ್ಬ ಕತೆಗಾರನಿಗೆ ಸಹಜವಾದದ್ದು. ಆಶಾವಾದದಿಂದ, ಆದರ್ಶವಾದದಿಂದ, ಪರಿಣಾಮಕಾರಿ ಕತೆಗಳು ಬರೆದಿದ್ದಾರೆ. ದಿನಾಲೂ ಸಾಯಂಕಾಲ ಅವರು ವಿರಾಮಕ್ಕೆ ಜಾಸ್ತಿ ಹೋಗದೇ ಹೊರಗಡೆ ಚಹಾ, ಮಿರ್ಚಿ, ಗಿರಮಿಟ್ ಅಲ್ಲಲ್ಲಿ ತಿನ್ನಲು ಬರೀ ಗೆಳೆಯರೊಂದಿಗೆ ತಿರುಗಾಡುತ್ತಿದ್ದಾರೆ ಎಂದು ಅವರ ಶ್ರೀಮತಿಗೆ ಹೇಳಿ ಜಗಳ ಹಚ್ಚಬೇಕೆಂದರೂ, ಅವರ ಪತ್ನಿ ನಮ್ಮ ಮನೆಗೆ ಊಟಕ್ಕೆ ಬಂದಾಗ ಅವರೆಷ್ಟು ಹೊರಗೆ ತಿಂದಿದ್ದಾರೆಂದು ನಮಗೆ ಗೊತ್ತಾಗುತ್ತೆ ಎನ್ನುತ್ತಲೇ ನನ್ನ ಜಗಳ ಹಚ್ಚುವ ಕಾರ್ಯಕ್ಕೆ ಹಿಂದೊಮ್ಮೆ ಎಳ್ಳುನೀರು ಬಿಟ್ಟು ನಿರಾಸೆಗೊಳಿಸಿದರು ಆದರೂ ಜಗಳ ಹಚ್ಚುವ ನನ್ನ ಕೆಲಸ ಸದಾ ಇರುತ್ತದೆ ಎಂದು ಹಾಸ್ಯ ಚಟಾಕಿ ಬೀಸಿದರು.

ನಿರೂಪಣೆಯನ್ನು ವಿರುಪಾಕ್ಷ ಕಟ್ಟಿಮನಿ ನಿರ್ವಹಿಸಿದರೆ, ಸ್ವಾಗತವನ್ನು ಪ್ರಕಾಶ ಕಡಮೆ ಹಾಗೂ ವಂದನಾರ್ಪಣೆಯನ್ನು ಸುನಂದಾ ಕಡಮೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಡಾ. ರಂಗನಾಥ ಕಂಟನಕುಂಟೆ, ಡಾ. ವೈ. ಎಂ. ಭಜಂತ್ರಿ, ತೇಜಾವತಿ, ಮಲ್ಲಿಕಾರ್ಜು‌ನ ಸಿದ್ದಣ್ಣನವರ, ನಿರ್ಮಲಾ ಶೆಟ್ಟರ್, ಲಿಂಗರಾಜ್ ಅಂಗಡಿ, ಕಾವ್ಯಾ ಕಡಮೆ ಹಾಗೂ ಸಾಹಿತ್ಯಾಸಕ್ತರಾದ ನವ್ಯಾ ಕಡಮೆ, ಮಲ್ಲಮ್ಮ ಯಾಟಗಲ್, ಶಿವರಾಜ್ ಮೋತಿ, ಶಿವಾನಂದ ಉಳ್ಳಿಗೇರಿ ಇನ್ನೀತರರು ಇದ್ದರು

You cannot copy content of this page

Exit mobile version