ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾಲೀಕತ್ವದ ಟಿ ದಾಸರಹಳ್ಳಿಯ ರಾಕ್‌ಲೈನ್ ಮಾಲ್‌ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಸೀಲ್ ಹಾಕಿದ್ದಾರೆ. ಬುಧವಾರ ಅಧಿಕಾರಿಗಳು ಮಾರ್ಷಲ್‌ಗಳೊಂದಿಗೆ ಮಾಲ್‌ಗೆ ಭೇಟಿ ನೀಡಿ ಮಾಲ್‌ಗೆ ಬೀಗ ಹಾಕಿದರು.
ಬಿಬಿಎಂಪಿ ಅಧಿಕಾರಿಗಳ ಪ್ರಕಾರ ರಾಕ್‌ಲೈನ್ ಮಾಲ್ 11.51 ಕೋಟಿ ಆಸ್ತಿ ತೆರಿಗೆ ಬಾಕಿಯಿರಿಸಿಕೊಂಡಿದೆ. ಬಾಕಿ ಪಾವತಿಸುವಂತೆ ಮಾಲ್‌ಗೆ ಬಿಬಿಎಂಪಿ ಡಿಮ್ಯಾಂಡ್ ನೋಟಿಸ್ ನೀಡಿದ್ದರೂ, ಬಾಕಿ ಪಾವತಿ ಮಾಡಿಲ್ಲ.
ವಲಯ ಆಯುಕ್ತರು ಸೇರಿದಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಲ್‌ಗೆ ಭೇಟಿ ನೀಡಿ ಸೀಲ್ ಮಾಡಿದ್ದಾರೆ.
ಈ ಮಾಲ್ ಅನ್ನು 2011ರಲ್ಲಿ ಅಂದಿನ ಗೃಹ ಸಚಿವ ಆರ್ ಅಶೋಕ ಉದ್ಘಾಟಿಸಿದ್ದರು. ಅಂದಿನಿಂದ ಮಾಲ್ ಅಧಿಕಾರಿಗಳು ಆಸ್ತಿ ತೆರಿಗೆ ಪಾವತಿಸಲು ವಿಫಲರಾಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಆರೋಪಿಸಿದ್ದಾರೆ.