ಬೆಳಗಾವಿ: ವಿದ್ಯಾರ್ಥಿಯ ಬರ್ಬರ ಕೊಲೆ, ಪ್ರಕರಣ ದಾಖಲು

ಬೆಳಗಾವಿ: 16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಗುರುವಾರ ಬೆಳಗಾವಿ ನಗರದ ಹೊರವಲಯದಲ್ಲಿ ನಡೆದಿದೆ.

ಮೃತ ಯುವಕನನ್ನು ಬೆಳಗಾವಿಯ ಶಿವಾಜಿ ನಗರದ ನಿವಾಸಿ ಪ್ರಜ್ವಲ್ ಶಿವಾನಂದ್ ಕರಿಗಾರ್ ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಪೋಲೀಸರು, ಮೃತನ  ಕುಟುಂಬದವರು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು, ದೂರಿನ ಮೇರೆಗೆ ತನಿಖೆ ನಡೆಯುತ್ತಿತ್ತು. ಗುರುವಾರ ಪ್ರಜ್ವಲ್ ಶವ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಜ್ವಲ್ ನಾಪತ್ತೆಯಾದಾಗ ಧರಿಸಿದ್ದ ಶಾಲಾ ಸಮವಸ್ತ್ರವನ್ನು ಖಚಿತಪಡಿಸಿಕೊಂಡು ಶವವನ್ನು ಗುರುತಿಸಲಾಗಿದೆ. ಆದರೆ ಬಾಲಕನ ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು