Home ಬ್ರೇಕಿಂಗ್ ಸುದ್ದಿ “ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ” : ಬಳ್ಳಾರಿ ಬಿಜೆಪಿ ಸಂಸದನ ಪುತ್ರನ ವಿರುದ್ಧ ದೂರು, ಎಫ್ಐಆರ್...

“ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ” : ಬಳ್ಳಾರಿ ಬಿಜೆಪಿ ಸಂಸದನ ಪುತ್ರನ ವಿರುದ್ಧ ದೂರು, ಎಫ್ಐಆರ್ ದಾಖಲು

0

ಬಳ್ಳಾರಿಯ ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್ ವಿರುದ್ಧ ಬೆಂಗಳೂರಿನಲ್ಲಿ ಯುವತಿಯೊಬ್ಬರು ವಂಚನೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಮೈಸೂರು ಮಹಾರಾಜ ಕಾಲೇಜಿನ ಉಪನ್ಯಾಸಕರೂ ಆಗಿರುವ ರಂಗನಾಥ್ ವಿರುದ್ಧ 24 ವರ್ಷದ ಯುವತಿ ಮಾಡಿರುವ ಆರೋಪ ಆಧರಿಸಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

2022ರಲ್ಲಿ ಪರಸ್ಪರ ಪರಿಚಯ ಮಾಡಿಕೊಂಡ ಮೂಲಕ ರಂಗನಾಥ್ ಅವರನ್ನು ಭೇಟಿಯಾಗಿದ್ದೆ ಎಂದು ಯುವತ ಹೇಳಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಪದೇ ಪದೇ ಫೋನ್ ಸಂಭಾಷಣೆ ಕೂಡಾ ಇಬ್ಬರ ನಡುವೆ ನಡೆದಿತ್ತು. ತನ್ನ ವೃತ್ತಿ ಮತ್ತು ಆರ್ಥಿಕ ಸ್ಥಿರತೆಯ ಕಾರಣ ಆತನನ್ನು ನಂಬಲು ಕಾರಣವೆಂದು ಯುವತಿ ಹೇಳಿಕೊಂಡಿದ್ದಾರೆ.

ಅಷ್ಟೆ ಅಲ್ಲದೆ ತನ್ನನ್ನು ಮದುವೆಯಾಗುವ ಇಂಗಿತವನ್ನೂ ಸಹ ಆತ ನನ್ನ ಬಳಿ ಹೇಳಿಕೊಂಡಿದ್ದ ಹಿನ್ನೆಲೆಯಲ್ಲಿ ರಂಗನಾಥ್ ನನ್ನು ಈಕೆ ನಂಬಿದ್ದರು ಎನ್ನಲಾಗಿದೆ. ಆದರೆ, ಮದುವೆಯ ಭರವಸೆ ಬಗ್ಗೆ ಪ್ರಸ್ತಾಪಿಸದೇ ರಂಗನಾಥ್ ಆಕೆಯನ್ನು ಹೋಟೆಲ್ಗೆ ಕರೆದೊಯ್ದು ದೈಹಿಕ ಸಂಪರ್ಕದಲ್ಲಿ ತೊಡಗಿದಾಗ ಘಟನೆ ತಿರುವು ಪಡೆದುಕೊಂಡಿದೆ.

ದೂರಿನ ಪ್ರಕಾರ, ಮಹಿಳೆಯು ರಂಗನಾಥ್‌ಗೆ ಮದುವೆಯ ವಿಷಯವಾಗಿ ಪ್ರಸ್ತಾಪಿಸಿದಾಗ ಆತ ತನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. 2023 ರ ಜನವರಿ 23 ಮತ್ತು 24 ರಂದು ಈ ಘಟನೆ ನಡೆದಿದ್ದು, ರಂಗನಾಥ್ ಅವರು ಬೆಂಗಳೂರಿನ ಕೊಡಿಗೇಹಳ್ಳಿಯ ಹೋಟೆಲ್‌ನಲ್ಲಿ ಸಭೆ ಏರ್ಪಡಿಸಿದ್ದರು ಮತ್ತು ನಂತರ ಅವಳನ್ನು ತನ್ನ ಮನೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಮೈಸೂರಿನ ಲಲಿತ್ ಮಹಲ್ ಹೋಟೆಲ್‌ಗೆ ಕರೆದೊಯ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ರಂಗನಾಥ್ ಅವರು ಮದ್ಯದ ಅಮಲಿನಲ್ಲಿ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದರು. ಆ ದಿನದಲ್ಲಿ ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದರು ಆದರೆ ನಂತರ ಮದುವೆಯ ಸಂಬಂಧವನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಂಗನಾಥ್ ಮದುವೆ ವಿಚಾರ ಪ್ರಸ್ತಾಪಿಸಿದ ನಂತರ ಯುವತಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಆ ನಂತರ ಆಕೆ ಅನಿವಾರ್ಯ ಕಾರಣಗಳಿಂದ ದೂರು ದಾಖಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ದೂರು ದಾಖಲಿಸಿದ ಎರಡು ದಿನಗಳ ನಂತರ ಸಂತ್ರಸ್ತೆ ಆರೋಪಿಯ ಆಧಾರ್ ಕಾರ್ಡ್ ವಿವರಗಳನ್ನು ನೀಡುವುದರೊಂದಿಗೆ ಅಧಿಕಾರಿಗಳು ಎರಡೂ ಕಡೆಯವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸಂತ್ರಸ್ತೆ ರಂಗನಾಥ್ ಅವರನ್ನು ಮದುವೆ ಆಗುವ ಬಗ್ಗೆ ಹೊಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳು ದೂರಿನಲ್ಲಿ ನೀಡಿರುವ ವಿವರಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಸಂತ್ರಸ್ತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಂಗನಾಥ್ ಅವರು ಕೇವಲ ದೈಹಿಕ ಸಂಪರ್ಕದ ಕಾರಣಕ್ಕೆ ನಾನು ಅವರ ಜೊತೆಗೆ ಸೇರಿರಲಿಲ್ಲ. ಬದಲಾಗಿ ಅವರ ಮದುವೆಯ ಭರವಸೆಯ ಕಾರಣಕ್ಕೆ ಅವರ ಜೊತೆ ಸೇರಿದ್ದೇನೆ. ದಯಮಾಡಿ ತನಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾರೆ.

You cannot copy content of this page

Exit mobile version