Home ಬೆಂಗಳೂರು ಬೆಂಗಳೂರು: ಮಲ್ಲೇಶ್ವರಂನಲ್ಲಿ ಮರಗಳ ಗಣತಿ

ಬೆಂಗಳೂರು: ಮಲ್ಲೇಶ್ವರಂನಲ್ಲಿ ಮರಗಳ ಗಣತಿ

0

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ವೃಕ್ಷ ಗಣತಿ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದ ಮೂರು ವರ್ಷಗಳ ನಂತರ, ನಾಗರಿಕ ಸಂಸ್ಥೆಯ ಅರಣ್ಯ ಘಟಕವು ಅಂತಿಮವಾಗಿ ನಗರದ ಮಲ್ಲೇಶ್ವರಂ ಪ್ರದೇಶದಲ್ಲಿ ವೃಕ್ಷ ಗಣತಿ ನಡೆಸಿದೆ.

ಪ್ರಾಯೋಗಿಕ ಆಧಾರದ ಮೇಲೆ ಯೋಜನೆಯನ್ನು ಪ್ರಾರಂಭಿಸಿರುವ ನಾಗರಿಕ ಸಂಸ್ಥೆಯ ಅರಣ್ಯ ಘಟಕವು, ವೃಕ್ಷ ಗಣತಿಯ ಭಾಗವಾಗಿ, ಪ್ರತಿ ಮರಕ್ಕೆ ಕ್ಯೂಆರ್ ಕೋಡ್ ಅನ್ನು ಅಂಟಿಸಲಾಗುತ್ತಿದ್ದು, ಕ್ಯೂಆರ್ ಕೋಡ್‌ ಮರದ ಹೆಸರು ಮತ್ತು  ಆರೋಗ್ಯ ಸ್ಥಿತಿ, ಹೀಗೆ ಸಂಬಂಧಪಟ್ಟ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ ಎಂದು ಅರಣ್ಯ ಘಟಕ ಮಾಹಿತಿ ನೀಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಅರಣ್ಯ ಕೋಶದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋವಿಂದರಾಜು ವಿ ಮಾತನಾಡಿ, ʼನಾವು ಕಳೆದ ವಾರ ಮಲ್ಲೇಶ್ವರಂನ ವಾರ್ಡ್ ಸಂಖ್ಯೆ 61 ರಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಪ್ರತಿಯೊಂದು ಮರವು ವಿಶಿಷ್ಟವಾದ ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ, ಇದು ಸ್ಕ್ಯಾನಿಂಗ್ ಮಾಡಿದಾಗ ಮರದ ಹೆಸರು, ಮರದ ಸುತ್ತಳತೆ, ಅದರ ಆರೋಗ್ಯ ಸ್ಥಿತಿ ಮತ್ತು ಪ್ರಯೋಜನಗಳಂತಹ ಮಾಹಿತಿಯನ್ನು ನೀಡುತ್ತದೆ. ಇದಕ್ಕಾಗಿ ಬಿಬಿಎಂಪಿ ಆ್ಯಪ್ ಅಭಿವೃದ್ಧಿಪಡಿಸಿದೆ’ ಎಂದು ಹೇಳಿದರು.

ʼಮರಗಳ ಗಣತಿಯು ಮುಖ್ಯವಾಗಿದೆ, ಏಕೆಂದರೆ ಇದು ಪ್ರತಿ ಮರದ ಮಹತ್ವವನ್ನು ಜನರಿಗೆ ತಿಳಿಸುತ್ತದೆ, ಹೀಗಾಗಿ ಮರಗಳ ಗಣತಿಯನ್ನು ನಗರದ ಇತರ ಪ್ರದೇಶಗಳಿಗೆ ವಿಸ್ತರಿಸಿದರೆ ಪ್ರತಿ ವಾರ್ಡ್‌ಗೆ ತಗಲುವ ವೆಚ್ಚದ ಅಂದಾಜನ್ನು ಪ್ರಾಯೋಗಿಕ ಯೋಜನೆಯು ನೀಡುತ್ತದೆʼ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2019 ರಲ್ಲಿ, ಹೈಕೋರ್ಟ್ ಮರಗಳ ಗಣತಿಯನ್ನು ನಡೆಸುವಂತೆ ನಾಗರಿಕ ಸಂಸ್ಥೆಗೆ ನಿರ್ದೇಶನ ನೀಡಿತ್ತು. ಅದೇ ವರ್ಷ ಸಮೀಕ್ಷೆ ನಡೆಸಲು ಬಿಬಿಎಂಪಿಯು ಇನ್ ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತು ಆದರೆ ನಂತರ ಅದನ್ನು ರದ್ದುಗೊಳಿಸಿತು.

ವಿಶೇಷವೆಂದರೆ, ಪ್ರಾಜೆಕ್ಟ್ ವೃಕ್ಷ ಫೌಂಡೇಶನ್ನ ಸ್ಥಾಪಕ ವಿಜಯ್ ನಿಶಾಂತ್ ಅವರು 2019 ರಲ್ಲಿ ಪಟ್ಟಾಭಿರಾಮನಗರ ವಾರ್ಡ್‌ನಲ್ಲಿ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ವೃಕ್ಷ ಗಣತಿಯನ್ನು ನಡೆಸಿದರು. ಅವರು ವಾರ್ಡ್ ನಲ್ಲಿ 3,700 ಮರಗಳನ್ನು ಗುರುತಿಸಿದ್ದರು.

You cannot copy content of this page

Exit mobile version