ಬೆಂಗಳೂರಿನ ‘ನಮ್ಮ ಮೆಟ್ರೋ’ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಕಂಡುಬಂದ ಹಿನ್ನೆಲೆಯಲ್ಲಿ ಸಾವಿರಾರು ಮೆಟ್ರೋ ಪ್ರಯಾಣಿಕರು ಪರದಾಡುವಂತಾಗಿತ್ತು. ತಂತ್ರಜ್ಞರ ಸಹಕಾರದಿಂದ ಕೆಲವು ದುರಸ್ತಿ ಕಾಮಗಾರಿ ಕೈಗೊಂಡ ನಂತರ ಈಗ ಮೆಟ್ರೋ ಸಂಚಾರ ಮುಂದುವರೆದಿದೆ.
ರೇಷ್ಮೆ ಸಂಸ್ಥೆಯಿಂದ ನಾಗಸಂದ್ರ ಹೋಗುವ ಮಾರ್ಗದಲ್ಲಿ ಈ ವ್ಯತ್ಯಯ ಕಂಡುಬಂದಿದ್ದು, ಪ್ರಯಾಣಿಕರು ಯಶವಂತಪುರದಲ್ಲೇ ಇಳಿದು ಸಂಚಾರವನ್ನು ಬಸ್ ಅಥವಾ ಆಟೋಗಳ ಮೂಲಕ ಪ್ರಯಾಣಿಸುವಂತಾಗಿತ್ತು. ಯಶವಂತಪುರದಿಂದ ನಾಗಸಂದ್ರದ ವರೆಗಿನ ಸಂಚಾರ ಸಂಪೂರ್ಣ ನಿಂತ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿತ್ತು.
ಪೀಣ್ಯ ಇಂಡಸ್ಟ್ರಿ ಬಳಿ ಸಿಗ್ನಲ್ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಸುಮಾರು 35 ನಿಮಿಷಗಳ ಕಾಲ (10.15 ರಿಂದ 10.50 ರ ವರೆಗೂ ) ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ತಂತ್ರಜ್ಞರು ಸರಿಯಾದ ಸಮಯಕ್ಕೆ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥಪಡಿಸಿದ ಹಿನ್ನೆಲೆಯಲ್ಲಿ ಈಗ ಮೆಟ್ರೋ ಸಂಚಾರ ಮುಂದುವರೆದಿದೆ.