‘Menstruation is not handicap no need for paid leave’ -ಸ್ಮೃತಿ ಇರಾನಿ
ಅವರ ಇಂದಿನ ಸ್ಟೇಟ್ಮೆಂಟ್ ಅವರು ಹೇಳ್ತಾರೆ ನಾನು ಒಂದು ಹೆಣ್ಣಾಗಿ ಹೇಳ್ತಾ ಇದ್ದೇನೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಂತ ಆಗ ಸಭೆ ಚಪ್ಪಾಳೆ ಹೊಡೆದು ಅದನ್ನು ಪ್ರೋತ್ಸಾಹಿಸುತ್ತಾರೆ ಒಂದು ಹೆಣ್ಣೇ ಹೀಗೆ ಹೇಳಿದ ಮೇಲೆ ಮುಗಿಯುತ್ತಲ್ಲ ಇನ್ನು ಯಾವ ಗಂಡಸಿಗೂ ಇದರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂಬ ತೀರ್ಮಾನಕ್ಕೆ ಬಂದ ಸ್ಪೀಕರ್ ಕೂಡ ಪ್ರೊಫೆಸರ್ ಮನೋಜ್ ಕುಮಾರ್ ಝಾ ಗೆ ಅವರಿಗೆ ನೀವು ನನ್ನ ಗಂಟಲ ಸಮಸ್ಯೆಗೆ ಔಷಧಿ ಕೊಟ್ಟಂತೆ ನಿಮಗೂ ಔಷಧಿ ತೆಗೆದುಕೊಳ್ಳುವ ಅವಶ್ಯಕತೆ ಎಂದು ಭಾವಿಸುತ್ತೇನೆ ಎನ್ನುತ್ತಾರೆ.
ಅಂದರೆ ನೀವು ನಿಮ್ಮ ಆಲೋಚನೆಗಳಿಗೆ ಔಷಧಿ ತೆಗೆದುಕೊಳ್ಳಿ ನಿಮ್ಮ ಆಲೋಚನೆ ಸರಿ ಇಲ್ಲ ಎನ್ನುವುದನ್ನು ಹೇಳುವುದಕ್ಕೋಸ್ಕರ ಈ ರೀತಿ ಹೇಳುತ್ತಾರೆ. ಅದರ ಅರ್ಥ ಋತುಚಕ್ರದ ಸಮಯದಲ್ಲಿ ಪೇಡ್ ರಜೆ ಕೇಳುವುದು ಮಾನಸಿಕ ಅಸ್ವಸ್ಥರು ಎಂದು ಸ್ಪೀಕರ್ ಮುದ್ರೆ ಒತ್ತುತ್ತಾರೆ. ಆಯ್ತಲ್ಲಾ ಸಭೆಯಲ್ಲಿ ಒಂದು ಒಳ್ಳೆ ಚರ್ಚೆಯಾಗಬಹುದಾದ ವಿಷಯವನ್ನು ಇಬ್ಬರೂ ಹಾಗೆ ಮೂಲೆಗೆ ತಳ್ಳಿದರು.
ಸ್ಮೃತಿ ಇರಾನಿ ಅವರ ತಲೆಯಲ್ಲಿ ಈ ರೀತಿ ಆಲೋಚನೆಗಳು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಬಿಜೆಪಿಯ ಪ್ರಾಣ ವಾಯು ಆಗಿರುವ ಆರ್ ಎಸ್ ಎಸ್ ನ ಯಾವುದೋ ಕಾರ್ಯಗಾರಕ್ಕೆ ಹೋಗಿ ಸ್ಮೃತಿ ಇರಾನಿ ಅವರ ತಲೆಯಲ್ಲಿ ಈ ರೀತಿಯ ಆಲೋಚನೆ ಬಂದಿದೆ.
ನನ್ನ ಪೀರಿಯಡ್ ಸಮಯದ ಒಂದು ಅನುಭವವನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ ಆಗ ನಾನು 7ನೇ ಕ್ಲಾಸ್, ತರಗತಿಯಲ್ಲಿ ಕುಳಿತಿರುವಾಗ ನನಗೆ ಬ್ಲೀಡಿಂಗ್ ಸ್ಟಾರ್ಟ್ ಆಯ್ತು ಅದನ್ನ ಹೇಗೆ ನಿಭಾಯಿಸಬೇಕು ಎಂಬುದು ನನಗೆ ತಿಳಿದಿರಲಿಲ್ಲ ನನ್ನ ತರಗತಿಯ ಆರು ಹೆಣ್ಣು ಮಕ್ಕಳು ನನ್ನನ್ನು ಅವರ ಗುಂಪಿನ ಮಧ್ಯದಲ್ಲಿ ಬಿಟ್ಟು ಸಮಾಜಕ್ಕೆ ನನ್ನ ಬಟ್ಟೆಯಲ್ಲಾಗಿರುವ ರಕ್ತದ ಕಲೆ ಕಾಣಿಸದಂತೆ ನನ್ನನ್ನು ಬಚ್ಚಿಟ್ಟುಕೊಂಡು ಬಂದು ಹಾಸ್ಟೆಲ್ ತಲುಪಿಸಿದರು 7ನೇ ತರಗತಿಯ ಮುಗ್ದ ಮನಸ್ಸುಗಳಿಗೆ ಅದು ಮುಚ್ಚಿಡಬೇಕಾದ ವಿಷಯ ಎಂದು ತಲೆಗೆ ತುಂಬಿಸಿರುವ ಈ ಸಮಾಜದಲ್ಲಿ ನಿಂತುಕೊಂಡು ಸ್ಮೃತಿ ಇರಾನಿ ಯವರ ಈ ಸ್ಟೇಟ್ಮೆಂಟ್ ಎಷ್ಟು ಸಮಂಜಸ?
ಋತುಚಕ್ರದ ಸಮಯದಲ್ಲಿ ಪೇಯ್ಡ್ ರಜೆ ಕೊಡುವ ಅವಶ್ಯಕತೆ ಇದೆಯೇ ಎಂಬುದನ್ನು ಚರ್ಚಿಸೋಣ ಈ ಸಮಯದಲ್ಲಿ ಒಂದೊಂದು ಹೆಣ್ಣು ಬೇರೆ ಬೇರೆ ರೀತಿಯ ಅನುಭವಕ್ಕೊಳಗಾಗುತ್ತಾರೆ ಇದನ್ನು ಸಾರ್ವತ್ರಿಕರಿಸಲು ಸಾಧ್ಯವಿಲ್ಲ, ಇದು ಒಂದೊಂದು ಮಹಿಳೆಗೂ ಬಿಟ್ಟ ಆಯ್ಕೆಯಾಗಿರಬೇಕು ಕೆಲಸ ಮಾಡುತ್ತೇವೆ ಎಂದು ನಿರ್ಧರಿಸುವ ಮಹಿಳೆಗೆ ಕೆಲಸ ಮಾಡಲು, ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸುವ ಮಹಿಳೆಗೆ ಪೇಯ್ಡ್ ಲೀವ್ ಕೊಡುವಂತ ವ್ಯವಸ್ಥೆ ಇರಬೇಕು ನಮ್ಮ ಸಾಮಾಜಿಕ ವ್ಯವಸ್ಥೆ ಋತುಚಕ್ರದ ಕುರಿತು ಒಂದಷ್ಟು ಪೂರ್ವಗ್ರಹ ಪೀಡಿತವಾಗಿದೆ ಈ ಮನಸ್ಥಿತಿ ತೊಲಗುವವರೆಗೂ ಋತುಚಕ್ರದ ಸಮಯದಲ್ಲಿ ಕೆಲಸ ಮಾಡುವ ಜಾಗದಲ್ಲಿ ಮಹಿಳೆಗೆ ಪಾಸಿಟಿವ್ ಎನ್ವಿರಾನ್ಮೆಂಟ್ ಸಿಗಲು ಸಾಧ್ಯವಿಲ್ಲ ಒಂದು ಸ್ಯಾನಿಟರಿ ಪ್ಯಾಡ್ medical shopನಿಂದ ತೆಗೆದುಕೊಳ್ಳಲೇ ಹಿಂಜರಿದುಕೊಳ್ಳಬೇಕಾದ ಸ್ವಭಾವ ಸೃಷ್ಟಿ ಮಾಡಿರುವ ಸಮಾಜ ಪಕ್ವವಾಗುವವರೆಗೂ ಮಹಿಳೆಗೆ ಋತುಚಕ್ರದ ಸಮಯದಲ್ಲಿ ವಿಶೇಷ ಅವಕಾಶ ಕಲ್ಪಿಸಿ ಕೊಡುವುದು ಅಗತ್ಯವಿದೆ. ಎಲ್ಲಾ ಕ್ಷೇತ್ರದ ಮಹಿಳೆಯರಿಗೂ ಈ ಅವಕಾಶ ದೊರೆಯಬೇಕು.
ಈ ರೀತಿಯ ವಿಶೇಷ ಅವಕಾಶ ಕಲ್ಪಿಸಿ ಕೊಡುವಾಗ ಆಗುವ ಸಮಸ್ಯೆ ಎಂದರೆ ಮಹಿಳೆಯನ್ನು ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೇ ಯೋಚನೆ ಮಾಡುತ್ತಾರೆ ಮಹಿಳೆ ಮದುವೆಯಾಗಿ ಹೋಗುವುದು ಗರ್ಭವತಿಯಾಗಿರುವಾಗ ಮೆಟರ್ನೆಟಿ ರಜೆ ಕೊಡುವುದು ಇದೆಲ್ಲ ತೊಂದರೆಯಾಗಿ ನೋಡುವ ಮನಸ್ಥಿತಿ ಇರುವವರೆಗೂ ಋತುಚಕ್ರದ ಸಮಯದಲ್ಲಿನ ಪೇಡ್ ಲೀವ್ ನಿಂದ ಮಹಿಳೆಯೇ ಮತ್ತಷ್ಟು ತುಳಿತಕ್ಕೊಳವಾಗುತ್ತಾಳೆ. ಹಾಗಾಗಿ ಅದು ಆಗದಂತೆ ತಡೆಯುವುದು ಸಹ ಸರ್ಕಾರದ ಜವಾಬ್ದಾರಿ. ಆದರೆ ಸ್ಮೃತಿ ಇರಾನಿಯವರಂತಹ ಮನಸ್ಥಿತಿಗಳು ಅಧಿಕಾರ ಸ್ಥಾನದಲ್ಲಿರುವಾಗ ಈ ರೀತಿಯ ಕೆಲಸಗಳು ಆಗುವುದನ್ನು ಬಯಸುವುದೇ ಅಪರಾಧವೇನೋ!?
ಇನ್ನು ಪೀರಿಯಡ್ ಸಮಯದಲ್ಲಿ ಮಹಿಳೆ ಅನುಭವಿಸುವ ಮಾನಸಿಕ ತೊಳಲಾಟದ ಕುರಿತು ಇನ್ನೂ ಹೆಚ್ಚು ಸಂಶೋಧನೆಗಳಾಗಬೇಕು ಇದರ ಕುರಿತು ಪ್ರತಿ ವ್ಯಕ್ತಿಗೂ ಮಾಹಿತಿ ದೊರೆಯಬೇಕು ಈ ಎಲ್ಲಾ ಸಮಸ್ಯೆಗೆ ಮೂಲ ಕಾರಣ ಇರುವುದೇ ಶಾಲೆಗಳಲ್ಲಿ ಸೆಕ್ಸ್ ಎಜುಕೇಶನ್ ಕೊಡದಿರುವುದು, ಸೆಕ್ಸ್ ಎಜುಕೇಶನ್ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಿದರೆ ಬಹುಶಃ ಮುಂದಿನ ಪೀಳಿಗೆಯವರಾದರು ಸ್ಮೃತಿ ಇರಾನಿಯವರ ಈ ರೀತಿಯ ಅಪಕ್ವ ಸ್ಟೇಟ್ಮೆಂಟನ್ನು ಕಣ್ಣು ಮುಚ್ಚಿ ನಂಬುವುದಿಲ್ಲ, ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆಯಾಗಬೇಕು. ದೇಶದಾದ್ಯಂತ ಚರ್ಚೆಯಾಗಬೇಕು ಈ ಚರ್ಚೆಯಲ್ಲಿ ಪುರುಷಾಧಿಪತ್ಯದಲ್ಲಿ ಮಿಂದೆದ್ದ ಮಾತುಗಳೇ ಹೆಚ್ಚಿದ್ದರು ಇದರ ಕುರಿತು ಈಗಲಾದರೂ ಚರ್ಚಿಸಬೇಕಾದ ಅವಶ್ಯಕತೆ ಇದೆ ಸೂಕ್ಷ್ಮತೆ ಇರುವ ಯಾರಾದರೂ ಇದನ್ನು ನಿಭಾಯಿಸಬೇಕಿದೆ.
- ಮೇಘನಾ ಸೌಮಿನಿ