Home ಸಿನಿಮಾ ಬೆಂಕೋಶ್ರೀ ಪುತ್ರನ ತುಂಟಾಟ, ಅಕ್ಷರ್ – ರೀಷ್ಮಾ ಅಭಿನಯದ ಛೀ ಕಳ್ಳ

ಬೆಂಕೋಶ್ರೀ ಪುತ್ರನ ತುಂಟಾಟ, ಅಕ್ಷರ್ – ರೀಷ್ಮಾ ಅಭಿನಯದ ಛೀ ಕಳ್ಳ

0

ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಬೆಂ.ಕೋ.ಶ್ರೀ ಅರ್ಥಾತ್ ಬಿಕೆ ಶ್ರೀನಿವಾಸ್ ಅವರ ಅವರ ಪುತ್ರ ಅಕ್ಷರ್ ಹಾಗೂ “ಏಕ್ ಲವ್ ಯಾ” ಬೆಡಗಿ ರೀಷ್ಮಾ ನಾಣಯ್ಯ ಅಭಿನಯಿಸಿರುವ “ಛೀ ಕಳ್ಳ” ಆಲ್ಬಂ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಗಾಯಕ ನವೀನ್ ಸಜ್ಜು  ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಆಲ್ಬಂ ವಿಡಿಯೋ ಸಾಂಗ್ ಪ್ರತಿಷ್ಠಿತ A2 music ಸಂಸ್ಥೆ ಮೂಲಕ  ಬಿಡುಗಡೆಯಾಗಿದೆ. ಈವರೆಗೂ ಸಾಕಷ್ಟು ಜನಪ್ರಿಯ ಸಿನಿಮಾಗಳ ಹಾಡುಗಳನ್ನು ಹಾಗೂ ಆಲ್ಬಮ್ ಗಳನ್ನು A2 music ಸಂಸ್ಥೆ ಬಿಡುಗಡೆ ಮಾಡಿದೆ.

ಪನರ್ವ್ ಆಕರ್ಷ್ ನಿರ್ದೇಶಿಸಿರುವ ಈ ವಿಡಿಯೋ ಸಾಂಗ್ ಅನ್ನು ವಿಸ್ಮಯ ಜಗ ಬರೆದಿದ್ದಾರೆ. ವಿಸ್ಮಯ ಜಗ ಅವರೇ ರಾಗ ಸಂಯೋಜನೆ ಕೂಡ ಮಾಡಿದ್ದಾರೆ.

ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ನಿರ್ಮಾಪಕ ಬೆಂ.ಕೋ.ಶ್ರೀ  “ಛೀ ಕಳ್ಳ” ಆಲ್ಬಂ ಬಿಡುಗಡೆ ಮಾಡಿ ಶುಭ ಹಾರೈಸಿದರು.

ನಾನು ಏಳು ಚಿತ್ರಗಳನ್ನು ನಿರ್ಮಿಸಿದ್ದೇನೆ. ಆ ಪೈಕಿ ಕೆಲವು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಹ ಬಂದಿದೆ. ನನಗೆ ಮೊದಲಿನಿಂದಲೂ ಮಾಧ್ಯಮದವರು ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ. ಅದೇ ಪ್ರೋತ್ಸಾಹವನ್ನು ನನ್ನ ಮಗನಿಗೂ ನೀಡಿ ಎಂದಿದ್ದಾರೆ ನಿರ್ಮಾಪಕ ಬೆಂ.ಕೋ.ಶ್ರೀ. ನನಗೆ ಸಿನಿಮಾದಲ್ಲಿ ನಟಿಬೇಕೆಂಬ ಆಸೆ. ಅದರ ಪೂರ್ವಭಾವಿಯಾಗಿ ಈ ಆಲ್ಬಂ ನಲ್ಲಿ ಅಭಿನಯಿಸಿದ್ದೇನೆ. ರೀಷ್ಮಾ ನಾಣಯ್ಯ ಅವರ ಆಭಿನಯ ಈ ಹಾಡನ್ನು ಮತ್ತಷ್ಟು ಸುಂದರವಾಗಿಸಿದೆ.  ವಿಸ್ಮಯ ಜಗ ಅದ್ಭುತವಾದ ಹಾಡನ್ನು ಬರೆದು, ರಾಗ ಸಂಯೋಜನೆ ಕೂಡ ಮಾಡಿದ್ದಾರೆ. ಅಷ್ಟೇ ಅದ್ಭುತವಾಗಿ ಪುನರ್ವ್ ಆಕರ್ಶ್ ನಿರ್ದೇಶಿಸಿದ್ದಾರೆ. ನವೀನ್ ಸಜ್ಜು ಸುಮಧುರವಾಗಿ ಹಾಡಿದ್ದಾರೆ. ನವೀನ್ ಕುಮಾರ್ ಹಾಗೂ ಎ.ಜೆ.ಶೆಟ್ಟಿ ಅವರ ಛಾಯಾಗ್ರಹಣದಲ್ಲಿ ಈ ಹಾಡನ್ನು ನೋಡುವುದೆ ಸೊಗಸು. ನಾಗೇಂದ್ರ ಈ ಹಾಡಿನ ನೃತ್ಯ ನಿರ್ದೇಶಕರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ “ಛೀ ಕಳ್ಳ” ಆಲ್ಬಂ ಬಿಡುಗಡೆ ಮಾಡಿರುವ A2 music ಅವರಿಗೆ ಧನ್ಯವಾದ ಎನ್ನುತ್ತಾರೆ ಅಕ್ಷರ್.

You cannot copy content of this page

Exit mobile version