Saturday, June 15, 2024

ಸತ್ಯ | ನ್ಯಾಯ |ಧರ್ಮ

‘ಬಾಯ್’ಗಿದೆ ಅಪ್ಪು ಆಶೀರ್ವಾದ: 17ಕ್ಕೆ ತೆರೆ ಮೇಲೆ ಅಬ್ಬರ

ಬೆಂಗಳೂರು:ಭಾರತ ಭಿನ್ನ ಸಂಸ್ಕೃತಿಗಳ ದೇಶ. ಈ ನೆಲದ ಸಂಸ್ಕೃತಿ, ಸಮುದಾಯದ ಸಂಸ್ಕೃತಿಯನ್ನು ತೆರೆ ಮೇಲೆ ತಂದು ಸೋತವರಿಲ್ಲ. ಇದೀಗ ಬಂಜಾರ ಸಮುದಾಯದ ಸಂಸ್ಕೃತಿಯನ್ನು ತೆರೆ ಮೇಲೆ ತರಲು ಯುವಪಡೆ ರೆಡಿಯಾಗಿದೆ. ಅದೇ ʼಬಾಯ್ʼ.

ಬಾಯ್ ಎಂದರೆ ಸೋದರತ್ವ. ಈ ಸೋದರತ್ವದ ಕಥನವನ್ನು ಇಟ್ಟುಕೊಂಡು ಚಿತ್ರದ ಮೂಲಕ ಬಂಜಾರ ಸಂಸ್ಕೃತಿ ತಿಳಿಸಲು ಹೊರಟಿದ್ದಾರೆ. ಚಿತ್ರದ ಟ್ರೇಲರ್ ಹಾಗೂ ಹಾಡು ರಿಲೀಸ್ ಆಗಿದೆ. ಖಳ ನಟ ಚಲುವರಾಜ್ ಟ್ರೇಲರ್ ಲಾಂಚ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ‌.

ನಟ, ನಿರ್ದೇಶಕ ಯುವ ಮಾತನಾಡಿ, “ಇದು ಮಾಸ್ ಓರಿಯೆಂಟ್ ಸಿನಿಮಾ. ಇದರಲ್ಲಿ ಬಂಜಾರ ಸಮುದಾಯದ ಸಂಪ್ರದಾಯ ತೋರಿಸಿದ್ದೇವೆ. ಸಿನಿಮಾ ಅಂತು ಅದ್ಭುತವಾಗಿ ಮೂಡಿ ಬಂದಿದೆ. ಇದು ಫ್ಯಾಮಿಯೆಲ್ಲಾ ಕೂತು ನೋಡುವಂತ, ಫ್ಯಾಮಿಲಿ ಒರಿಯೆಂಟೆಡ್ ಸಿನಿಮಾ ಆಗಿದೆ. ಇದಕ್ಕೆ ನೀವೆಲ್ಲಾ‌ ಸಪೋರ್ಟ್ ಮಾಡಿ, ಬೆಂಬಲ ನೀಡಿ. ಇಡೀ ಟೀಂ ಬೆಂಬಲ ಅಂತು ತುಂಬಾ ಚೆನ್ನಾಗಿ ಇತ್ತು. ಬೆಳಗಾವಿಯ ಹುಡುಗ ನಾನು. ಕನಸು ಹೊತ್ತು ಬೆಂಗಳೂರಿಗೆ ಬಂದೆ. ಗ್ಯಾಂಗ್‌ಸ್ಟರ್, ಜೂನಿಯರ್ ಆರ್ಟಿಸ್ಟ್ ಆಗಿ ಕೂಡ ಮಾಡಿದ್ದೀನಿ. ಥ್ರಿಲ್ಲರ್ ಮಂಜು ಸರ್ ಕೂಡ ಒಮ್ಮೆ‌ ನಾನು ಒಳ್ಳೆ ಕಲಾವಿದ ಆಗಬಹುದು ಎಂದಿದ್ದರು. ಅಲ್ಲಿಂದ ಪ್ರಯತ್ನ ಶುರು ಮಾಡಿದೆ. ಬಂಜಾರ ಸಮುದಾಯ ಸಂಸ್ಕೃತಿಯನ್ನು ತೆರೆ ಮೇಲೆ ತರಬೇಕೆಂದು ನಿರ್ದೇಶನಕ್ಕೆ ಇಳಿದೆ. ಸಿನಿಮಾ ರೆಡಿ ಇದೆ. ಇದೇ ತಿಂಗಳ 17ಕ್ಕೆ ತೆರೆಗೆ ಬರಲಿದೆ,” ಎಂದಿದ್ದಾರೆ.

ಈ ಸಿನಿಮಾಗೆ ಕಥೆ ಬರೆದ ಸುರೇಶ್ ಮಾತನಾಡಿ, “ಈ ಸಿನಿಮಾಗೆ ಕಥೆ ಬರೆಯಲು ಅಪ್ಪು ಸರ್ ಸ್ಪೂರ್ತಿ. ನಾನು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರಬೇಕಾದರೆ, ಅಲ್ಲಿ ಶಾಲೆಗೆ ಮಕ್ಕಳನ್ನು ಬಿಡಲು ಬರುತ್ತಿದ್ದರು. ಅಲ್ಲಿ ಸಿಕ್ಕಾಗ ಮಾತನಾಡಿಸುತ್ತಿದ್ದೆ. ಅವರು ಕೂಡ ಏನ್ರಿ ಪೊಲೀಸಪ್ಪ ಚೆನ್ನಾಗಿದ್ದೀರಾ ಅಂತ ಮಾತನಾಡಿಸೋರು. ಇವತ್ತು ಅವರನ್ನ ಮಿಸ್ ಮಾಡಿಕೊಳ್ಳುತ್ತಾ ಇದ್ದೇವೆ. ಆಗ ನಾನು ಅವರಿಗೋಸ್ಕರ ಕಥೆ ಬರಿಬೇಕು ಎಂದು ಹೇಳಿದ್ದೆ. ಅದು ಬಂಜಾರ ಹಾಗೂ ಕನ್ನಡ ಭಾಷೆಯಲ್ಲಿರಬೇಕು ಸರ್ ಎಂದಿದ್ದ. ಆಗ ಅವರು ಬರಿಯಪ್ಪ, ನೀನು ಪೋಲಿಸ್ ಆಗಿದ್ದು ಸ್ಟೋರಿ ಬರೆಯೋಕೆ ಬರುತ್ತಾ ಎಂದಿದ್ದರು. ಇದು ಅವರಿಗೋಸ್ಕರ ಬರೆದ ಕಥೆ. ಅವರು ಇದ್ದಿದ್ದರು ಇವತ್ತು, ಇಲ್ಲಿಗೆ ಬರ್ತಾ ಇದ್ದರು,” ಎಂದು ನೋವು ವ್ಯಕ್ತಪಡಿಸಿದ್ದಾರೆ.

ಚಿತ್ರದ ನಾಐಕಿ ಪೂಜಾ ಮಾತನಾಡಿ, “ನನ್ನದು ವಿದೇಶಿ ಹುಡುಗಿಯ ಪಾತ್ರ. ಬಂಜಾರ ಕಲೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕಾಗಿ ಬಂದಿರುತ್ತೇನೆ. ಮುಂದೆ ಏನೆಲ್ಲಾ ಆಗುತ್ತೆ ಎಂಬುದನ್ನು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ,” ಎಂದಿದ್ದಾರೆ.

ಸಿನಿಮಾ ಈಗಾಗಲೇ ತನ್ನೆಲ್ಲಾ ಕೆಲಸ ಮುಗಿಸಿದ್ದು, ರಿಲೀಸ್ ಗೆ ಸಿದ್ದವಾಗಿದೆ. ಇದೇ ತಿಂಗಳ 17ಕ್ಕೆ ತೆರೆಗೆ ಬರಲಿದ್ದು, ಇಡೀ ತಂಡ ಕುತೂಹಕದಿಂದ ಕಾಯುತ್ತಿದೆ. ಈ ಸಿನಿಮಾಗೆ ಮಾಲಾಶ್ರೀ ಸುರೇಶ್ ಬಂಡವಾಳ ಹೂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು