ಗುಂಡ್ಲುಪೇಟೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿರುವ ಭಾರತ್ ಜೋಡೋಯಾತ್ರ ಸೆ.30ಕ್ಕೆ ಕರ್ನಾಟಕ ಪ್ರವೇಶಿಸಲಿದ್ದು ಇದರ ಸ್ವಾಗತಕ್ಕೆ ಗುಂಡ್ಲುಪೇಟೆಯಲ್ಲಿ ಅದ್ದೂರಿಯಾಗಿ ಬ್ಯಾನರ್ ಗಳನ್ನು ಹಾಕಿಸಿ ಸಿದ್ದತೆ ನಡೆದಿತ್ತು. ಆದರೆ ರಾತ್ರೋ ರಾತ್ರಿ ಕಿಡಿಗೇಡಿಗಳು ಬ್ಯಾನರ್ ಗಳನ್ನು ಹರಿದುಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ಸಿನ ರಕ್ಷಾ ರಾಮಯ್ಯನವರು, ನೀವು ಮಧ್ಯರಾತ್ರಿ ಬ್ಯಾನರ್ ಹರಿಯಬಹುದು ಆದರೆ ನಿಮಗೆ ತಾಕತ್ತು ಇದ್ರೆ ನಾಳೆ ಬರೊ ಜನರನ್ನಾ ತಡೆಯೋಕೆ ಸಾಧ್ಯಾನ? ಎಂದು ಪ್ರಶ್ನಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಯು ಕರ್ನಾಟಕದ ಗುಂಡ್ಲುಪೇಟೆಗೆ ಇದೇ 30 ನೇ ತಾರೀಕಿನಂದು ಪ್ರವೇಶಿದಲಿದೆ. ನಗರದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಿಗೆ ಸ್ವಾಗತ ಕೋರಲು ಅಳವಡಿಸಿದ್ದ ಪ್ಲೆಕ್ಸ್ ಗಳನ್ನ ಸಹಿಸಲಾಗದ ದುಷ್ಕರ್ಮಿಗಳು ರಾತ್ರೋರಾತ್ರಿ ಕಿಡಿಗೇಡಿತನ ಮೆರೆದಿದ್ದಾರೆ ಎಂದು ಗುಡುಗಿದ್ದಾರೆ.
ಭಾರತ ಐಕ್ಯತಾ ಯಾತ್ರೆಯನ್ನ ತಡೆಯುವ ಹಾಗೂ ಕರ್ನಾಟಕ ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಿರುವ ಬೆಂಬಲ ಸಹಿಸಲಾಗದೆ ರಾಜ್ಯದ ಈ ಯಾತ್ರೆಯನ್ನ ಯಶಸ್ವಿಯಾಗುವುದನ್ನ ತಡೆಯಲು ಅವರ ಉದ್ದೇಶವಿರಬೇಕು, ಈ ಕಾರಣ ಪೊಲೀಸ್ ಇಲಾಖೆಯು ಕೂಡಲೇ ಇವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಸಾಮಾಜಿಕ ಜಾಲಾತಾಣವಾದ ಪೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನೂ ಓದಿ: ಚೀನಾ ಕ್ರಾಂತಿ, ಭಾರತೀಯ ಮಾಧ್ಯಮ ಜಗತ್ತು ಇತ್ಯಾದಿ…
ಸುದ್ದಿ ಮೂಲಗಳ ಅಧಿಕೃತತೆಯನ್ನು ಪರಿಶೀಲಿಸದೆ ಆತುರಕ್ಕೆ ಬಿದ್ದು ಸುದ್ದಿ ಮಾಡುವ ಸೆನ್ಸೇಷನಲ್ ಮಾಧ್ಯಮಗಳ ಕುರಿತು ಹಿರಿಯ ಪತ್ರಕರ್ತರಾದ ರಾಜಾರಾಮ್ ತಲ್ಲೂರು ಅವರ ಬರಹ ನಿಮ್ಮ ಓದಿಗಾಗಿ…