ಶಿವಮೊಗ್ಗ: ಜಿಲ್ಲೆಯಲ್ಲಿ ಬಿಟ್ಟು-ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಾರ್ವತಮ್ಮ ಎಂಬುವರ ಮನೆ ಕುಸಿದಿದೆ.
ಶಿವಮೊಗ್ಗ ತಾಲೂಕಿನ ಮಲಗೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಟ್ಟಿಗೆಯಲ್ಲಿ ಕುಟುಂಬಸ್ಥರು ವಾಸವಾಗಿದ್ದಾರೆ.
ಮನೆ ಕುಸಿದು ನಾವೆಲ್ಲ ಕಂಗಾಲಾಗಿದ್ದೇವೆ, ಸಧ್ಯಕ್ಕೆ ಕೊಟ್ಟಿಗೆಯಲ್ಲಿ ನಾವೇಲ್ಲ ವಾಸಿಸುತ್ತಿದ್ದೇವೆ, ಮನೆ ಕುಸಿದಿರುವ ಮಾಹಿತಿ ಅಧಿಕಾರಿಗಳಿಗೆ ತಿಳಿದಿದೆ ಆದರೆ ಯಾರೊಬ್ಬ ಅಧಿಕಾರಿಯು ಬಂದು ಘಟನೆ ಬಗ್ಗೆ ವಿಚಾರಿಸಿಲ್ಲ ಎಂದು ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.