ಹೆಡ್ ಬುಷ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ಅವರು ನಿನ್ನೆ ಭಾನುವಾರ ಬಿಗ್ ವಾಸ್ ಸೀಸನ್ 9 ವೇದಿಕೆಗೆ ಅತಿಥಿಯಾಗಿ ಬಂದಿದ್ದರು. ಕಿಚ್ಚ ಸುದೀಪ್ ಹೆಡ್ ಬುಷ್ ಎಂದರೆ ಏನು? ಎಂದು ಕೇಳಿದಾಗ, ಡಾಲಿ ಧನಂಜಯ ಮಾತನಾಡಿ “ಹೆಡ್ ಮತ್ತು ಟೇಲ್ ಎಂದು ಅರ್ಥ. ಲೈಫ್ ಅನ್ನೋದು ಒಂದು ಗ್ಯಾಂಬ್ಲಿಂಗ್ ಇದ್ದಹಾಗೆ ಎರಡು ಶೇಡ್ಗಳು ಇರ್ತದೆ ಎಂದು ಹೇಳಿದರು.
ನೆಗೆಟಿವ್ ಕ್ಯಾರೆಕ್ಟರ್ ಅಷ್ಟು ಇಷ್ಟವೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾಲಿ, ಹೌದು, “ರಿಯಲ್ ಲೈಫ್‌ನಲ್ಲಿ ಮಾಡದೇ ಇರುವುದನ್ನು ಮಾಡಲಿಕ್ಕೆ ಆಗುತ್ತದೆ” ಎಂದು ಹೇಳಿದರು. ಅದಕ್ಕೆ ಸುದೀಪ್ ಮಾತನಾಡಿ “ರಿಯಲ್ ಲೈಫ್‌ನಲ್ಲಿ ಎಲ್ಲವೂ ಮಾಡುತ್ತೀರಲ್ಲ”ಎಂದು ಕಾಲೆಳೆದಿದ್ದಾರೆ.
ಡಾಲಿ ಧನಂಜಯ್ ರಾತ್ರೆ ಎಷ್ಟು ಹೊತ್ತು ಎಚ್ಚರ ಇರ್ತಾರೆ? ಬೆಳಿಗ್ಗೆ ಎಷ್ಟು ಗಂಟೆಗೆ ಏಳ್ತಾರೆ? ಎಂದು ಕೇಳಿದ ಪ್ರಶ್ನೆಗೆ, ಪ್ರತಿ ದಿನ ಬೇಗ ಏಳ್ತಿನಿ, ರಾತ್ರೆ ತಡವಾಗಿ ಮಲ್ಗೊದು ಅಭ್ಯಾಸ ಆದರೆ ರಾತ್ರಿ ಸೆಲೆಬ್ರೇಷನ್ ಇದ್ದರೆ ಮಲ್ಗೊದು ಲೇಟು ಎದ್ದೇಳೊದು ಲೇಟಾಗುತ್ತೆ ಎಂದು ಹೇಳಿದ್ದಾರೆ. ವಾರದಲ್ಲಿ ಆರು ದಿನ ಸೆಲೆಬ್ರೆಷನ್ ಇರತ್ತ ಎಂದು ಸುದೀಪ್ ಡಾಲಿ ಧನಂಜಯ್ ಅವರ ಕಾಲೆಳೆದಿದ್ದಾರೆ.
ಮತ್ತೊಂದು ವಿಶೇಷ ಏನೆಂದರೆ, ಡಾಲಿ ಧನಂಜಯ ಮತ್ತು ಕಿಚ್ಚ ಸುದೀಪ್ ಇಬ್ಬರು ಬೆಲ್ ಬಾಟಂನ ಡ್ರೆಸ್‌ನಲ್ಲಿ ಮಿಂಚಿದರು. ನಿಮ್ಮ ಚಿತ್ರಕ್ಕೆ ನಾನು ಬೆಲ್ ಬಾಟಂ ಹಾಕುವ ಮೂಲಕ ಸಪೋರ್ಟ್ ಮಾಡ್ತಿದ್ದೀನಿ ನೋಡಿ ಎಂದು ಸುದೀಪ್ ಡಾಲಿಗೆ ಕಿಚಾಯಿಸಿದರು.
ಕೊನೆಯಲ್ಲಿ ಡಾಲಿ ಧನಂಜಯ ಅವರು, ಚಿತ್ರಮಂದಿರಗಳಲ್ಲೇ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.