Tuesday, August 26, 2025

ಸತ್ಯ | ನ್ಯಾಯ |ಧರ್ಮ

ಇಡಿ ವಿಚಾರಣೆಗೆ ಹಾಜರಾಗದ ಕೇಜ್ರೀವಾಲ್‌ ಮದ್ಯ ಹಗರಣದ ರಾಜ: ಬಿಜೆಪಿ ಮಾತಿನ ದಾಳಿ

ನವದೆಹಲಿ, ನವೆಂಬರ್.2: ಅಬಕಾರಿ ನೀತಿ ಸಂಬಂಧಿತ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಗೈರು ಹಾಜರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಗುರುವಾರ ಸತ್ಯವನ್ನು ಎದುರಿಸಲು ಇವರು ಸಿದ್ಧರಿಲ್ಲ ಎಂದು ಟೀಕಿಸಿದೆ.

ಕೇಜ್ರಿವಾಲ್ ಈ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗದೆ, “ಅಕ್ರಮ ಮತ್ತು ರಾಜಕೀಯ ಪ್ರೇರಿತ” ಎಂದು ಆರೋಪಿಸಿ ತಮಗೆ ಸಮನ್ಸ್ ನೀಡಿದ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ಏಜೆನ್ಸಿಗೆ ಪತ್ರ ಬರೆದ ನಂತರ ಬಿಜೆಪಿ ಈ ಮಾತಿನ ದಾಳಿ ನಡೆಸಿದೆ.

ಇದನ್ನೂ ಓದಿ: ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು

“ಅರವಿಂದ್ ಕೇಜ್ರಿವಾಲ್ ಇಡಿ ಸಮನ್ಸ್‌ನಿಂದ ಓಡಿಹೋದರು. ಅವರು ಸತ್ಯವನ್ನು ಎದುರಿಸದೆ ಓಡಿಹೋಗಿದ್ದಾರೆ … ದೆಹಲಿಯ ಮದ್ಯ ಹಗರಣದ ಅರಸ ತಾನು ಮದ್ಯ ಹಗರಣ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page