ನವದೆಹಲಿ, ನವೆಂಬರ್.2: ಅಬಕಾರಿ ನೀತಿ ಸಂಬಂಧಿತ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಗೈರು ಹಾಜರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಗುರುವಾರ ಸತ್ಯವನ್ನು ಎದುರಿಸಲು ಇವರು ಸಿದ್ಧರಿಲ್ಲ ಎಂದು ಟೀಕಿಸಿದೆ.
ಕೇಜ್ರಿವಾಲ್ ಈ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗದೆ, “ಅಕ್ರಮ ಮತ್ತು ರಾಜಕೀಯ ಪ್ರೇರಿತ” ಎಂದು ಆರೋಪಿಸಿ ತಮಗೆ ಸಮನ್ಸ್ ನೀಡಿದ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ಏಜೆನ್ಸಿಗೆ ಪತ್ರ ಬರೆದ ನಂತರ ಬಿಜೆಪಿ ಈ ಮಾತಿನ ದಾಳಿ ನಡೆಸಿದೆ.
ಇದನ್ನೂ ಓದಿ: ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು
“ಅರವಿಂದ್ ಕೇಜ್ರಿವಾಲ್ ಇಡಿ ಸಮನ್ಸ್‌ನಿಂದ ಓಡಿಹೋದರು. ಅವರು ಸತ್ಯವನ್ನು ಎದುರಿಸದೆ ಓಡಿಹೋಗಿದ್ದಾರೆ … ದೆಹಲಿಯ ಮದ್ಯ ಹಗರಣದ ಅರಸ ತಾನು ಮದ್ಯ ಹಗರಣ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.