Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ರಾಹುಲ್ ಗಾಂಧಿಗೆ ಟ್ರೋಲ್ ಮಾಡಲು ಹೋಗಿ ಪೇಚಿಗೆ ಸಿಲುಕಿದ ಬಿಜೆಪಿ

ರಾಹುಲ್ ಗಾಂಧಿಗೆ ಟ್ರೋಲ್ ಮಾಡಲು ಹೋಗಿ ಪೇಚಿಗೆ ಸಿಲುಕಿದ ಬಿಜೆಪಿ

0

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ 3,570 ಕಿಲೋಮೀಟರ್ ನ ಐತಿಹಾಸಿಕ ಪಾದಯಾತ್ರೆ ‘ಭಾರತ್ ಜೋಡೋ’ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸಹಜವೆಂಬಂತೆ ಪಾದಯಾತ್ರೆ ಹಿನ್ನೆಲೆಯಲ್ಲಿ ಬಿಜೆಪಿ ಒಂದೊಂದಾಗಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ಟ್ರೋಲ್ ಮಾಡಲು ಇಳಿದಿದೆ.

ಅದೇ ರೀತಿ ಟ್ರೋಲ್ ಮಾಡಲು ಹೋಗಿ ಬಿಜೆಪಿ ಪಕ್ಷ ಮೊದಲ ಬಾರಿಗೆ ತನ್ನದೇ ಫೇಸ್ಬುಕ್ ಪುಟದಲ್ಲಿ ನೆಟ್ಟಿಗರಿಂದ ಛೀಮಾರಿ ಹಾಕಿಸಿಕೊಂಡ ಅಪರೂಪದ ಬೆಳವಣಿಗೆ ನಡೆದಿದೆ. ಇನ್ನೊಂದು ವಿಶೇಷ ಎಂದರೆ ಈ ಬಾರಿ ಬಿಜೆಪಿ ಬೆಂಬಲಿಗರೇ ಬಿಜೆಪಿಯ ವಿರುದ್ಧ ಒಂದು ಪೋಸ್ಟ್ ಬಗ್ಗೆ ಮಾತನಾಡಿದ್ದಾರೆ

‘ಭಾರತ್ ಜೋಡೋ’ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ತೊಟ್ಟ ಟೀ ಶರ್ಟಿನ ಬೆಲೆಯನ್ನು ಉಲ್ಲೇಖಿಸಿ ಬಿಜೆಪಿ ಟ್ರೋಲ್ ಗೆ ಇಳಿದಿದೆ. ಆದರೆ ಅದಕ್ಕೆ ಬಂದ ಪ್ರತಿಕ್ರಿಯೆಗಳು ಮಾತ್ರ ಬಿಜೆಪಿ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಬಂದಿದೆ.

https://m.facebook.com/story.php?story_fbid=pfbid02C81JF3D9MhZfqNS5wa4tZ8GtEmFCS4JgLhewAqboKK6g5LNPejESRdu7b3RP827fl&id=100064928850532

ಈ ಪೋಸ್ಟಿನಲ್ಲಿ ರಾಹುಲ್ ಗಾಂಧಿಯವರು ತೊಟ್ಟ ಟೀ ಶರ್ಟಿನ ಬೆಲೆ 41,257 ಎಂದಿದೆ. ಇದಕ್ಕೆ ಬಂದ ಬಹುತೇಕ ಪ್ರತಿಕ್ರಿಯೆಗಳಲ್ಲಿ ಮೋದಿಯವರ 10 ಲಕ್ಷ ಬೆಲೆಯ ಬಟ್ಟೆಯನ್ನು ಉಲ್ಲೇಖಿಸಲಾಗಿದೆ. ಇನ್ನೂ ಕೆಲವರು ಕಾಂಗ್ರೆಸ್ ಟೀಕೆಯ ನೆಪದಲ್ಲಿ ಬಿಜೆಪಿ ಈ ಮಟ್ಟಕ್ಕೆ ಇಳಿದದ್ದು ನಾಚಿಕೆಗೇಡು ಎಂಬಂತೆ ಬರೆದಿದ್ದಾರೆ.

ಬಿಜೆಪಿ ಪಕ್ಷ ಹಿಂದಿನಿಂದಲೂ ಬೆಳೆಸಿಕೊಂಡು ಬಂದ ನೆಹರೂ ಕುಟುಂಬದ ಅವಹೇಳನಕ್ಕೆ ಈ ಬಾರಿ ಸ್ವತಃ ಬಿಜೆಪಿಗರೇ ತಿರುಗಿ ಬಿದ್ದದ್ದು ಅದೂ ಬಿಜೆಪಿ ಪಕ್ಷದ ಅಧಿಕೃತ ಫೇಸ್ಬುಕ್ ಪುಟದಲ್ಲಿ ಆಗಿರುವುದು ವಿಶೇಷವೇ ಸರಿ‌.

You cannot copy content of this page

Exit mobile version