ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ 4 ರಾಜ್ಯಗಳಿಗೆ ತನ್ನ ರಾಜ್ಯಾಧ್ಯಕ್ಷರುಗಳ ಹೆಸರನ್ನು ಘೋಷಣೆ ಮಾಡಿದೆ. 2024 ರ ಆರಂಭದಲ್ಲಿ ನಡೆಯಲಿರುವ ಚುನಾವಣಾ ತಯಾರಿಯ ಮುನ್ಸೂಚನೆ ಇದಾಗಿದ್ದು ಆಯಾ ರಾಜ್ಯಗಳಲ್ಲಿ ಪಕ್ಷದ ಬಲಾಬಲ ತೋರಿಸಲು ರಾಜ್ಯಾಧ್ಯಕ್ಷರ ಘೋಷಣೆಯನ್ನು ಬಿಜೆಪಿ ಮಾಡಿದೆ.
https://twitter.com/ANI/status/1676163291696201728?t=UN4y7V-N6KH5viiIKFLfZA&s=19
ಆಂದ್ರಪ್ರದೇಶ, ತೆಲಂಗಾಣ, ಪಂಜಾಬ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ತನ್ನ ಹೊಸ ರಾಜ್ಯಾಧ್ಯಕ್ಷರನ್ನು ಘೋಷಣೆ ಮಾಡಿದೆ. ಅದರಲ್ಲಿ ಆಂದ್ರಪ್ರದೇಶದ ನೂತನ ರಾಜ್ಯಾಧ್ಯಕ್ಷರಾಗಿ ಪುರಂದರೇಶ್ವರಿ, ತೆಲಂಗಾಣದಿಂದ ಕಿಶನ್ ರೆಡ್ಡಿ, ಪಂಜಾಬ್ ನಿಂದ ಸುನಿಲ್ ಜಾಖರ್ ಹಾಗೂ ಜಾರ್ಖಂಡ್ ನಿಂದ ಬಾಬುಲಾಲ್ ಮರಾಂಡಿ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದು ಇಲ್ಲಿಂದ ಹೊಸ ರಾಜ್ಯಾಧ್ಯಕ್ಷರು ಮತ್ತು ವಿಧಾನಸಭಾ ಅಧ್ಯಕ್ಷರ ಘೋಷಣೆ ಮಾಡುವ ಬಗ್ಗೆ ನಿರೀಕ್ಷೆ ಇದ್ದು, ಈ ಬಗ್ಗೆ ಬಿಜೆಪಿ ಕಡೆಯಿಂದ ಯಾವುದೇ ನಿರ್ಧಾರ ಹೊರಬಂದಿಲ್ಲ.