ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಅಸಾನ್ಸೋಲ್ ವಿಧಾನ ಸಭಾ ಕ್ಷೇತ್ರದ ಶಾಸಕಿಯಾದ ಅಗ್ನಿಮಿತ್ರ ಪಾಲ್ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಪಟ್ಟಿದ್ದಾರೆ.ಬಿಜೆಪಿ ಶಾಸಕಿಯಾದ ಅಗ್ನಿಮಿತ್ರ ಪಾಲ್ ತಮ್ಮ ಮತಕ್ಷೇತ್ರದಲ್ಲಿ ಕೇರಂ ಬೋರ್ಡ್ ಅನ್ನು ಉದ್ಘಾಇಸಿರುವ ಫೊಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರೆಲ್ಲಾ ಕಮೆಂಟ್ ಮಾಡುವ ಮೂಲಕ ಬಿಜೆಪಿ ಹಾಗೆಯೇ ಅಗ್ನಿಮಿತ್ರ ಪಾಲ್ ಅವರ ಕಾಲು ಎಳೆದಿರುದು ಬಹಳ ಹಾಸ್ಯಾಸ್ಪದವಾಗಿದೆ.
ವೈರಲ್ ಆಗಿರುವ ಒಂದು ಟ್ವೀಟ್ ಅಲ್ಲಿ “ದೇಶದಲ್ಲಿ ಉದ್ಘಾಟಿಸುವಂತಯ ಯಾವುದೇ ರೀತಿಯ ಅವಕಾಶವನ್ನು ಬಿಡದ ಮೋದಿ. ಅಗ್ನಿಮಿತ್ರ ಪಾಲ್ ತಮಗಾಗಿ ಅವಕಾಶವನ್ನು ಸ್ಥಾಪಿಸೊಕೊಂಡಿದ್ದಾರೆ” ಎಂಬ ಬರಹ ಈಗ ಸದ್ದು ಮಾಡುತ್ತಿದೆ.ಕೆಲವು ಟ್ವಿಟ್ಟರ್ ಅಕೌಂಟುಗಳಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಈ ಪಟ ಪಡೆದುಕೊಂಡಿದೆ.