Home ರಾಜಕೀಯ ಚುನಾವಣಾ ಆಯೋಗ ಬಿಜೆಪಿಯ ‘ಎಲೆಕ್ಷನ್ ಮೋರ್ಚಾ’ವೇ?; ಪ್ರಿಯಾಂಕ್ ಖರ್ಗೆ ಪ್ರಶ್ನೆ

ಚುನಾವಣಾ ಆಯೋಗ ಬಿಜೆಪಿಯ ‘ಎಲೆಕ್ಷನ್ ಮೋರ್ಚಾ’ವೇ?; ಪ್ರಿಯಾಂಕ್ ಖರ್ಗೆ ಪ್ರಶ್ನೆ

0

ಬೆಂಗಳೂರು: ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಅದರ ವಿರುದ್ಧ ಕೇಳಿಬರುತ್ತಿರುವ ಪ್ರಶ್ನೆಗಳ ವಿಚಾರವಾಗಿ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪ್ರಶ್ನೆಗಳನ್ನು ಎತ್ತಿದ್ದಾರೆ.

ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗಲೆಲ್ಲಾ ಬಿಜೆಪಿ ಅದರ ಪರವಾಗಿ ಸಮರ್ಥನೆಗೆ ಮುಂದಾಗುವುದೇಕೆ ಎಂದು ಪ್ರಶ್ನಿಸಿರುವ ಅವರು, “ಚುನಾವಣಾ ಆಯೋಗ ಬಿಜೆಪಿಯ ‘ಎಲೆಕ್ಷನ್ ಮೋರ್ಚಾ’ವೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ್ ಖರ್ಗೆ ಮಾಡಿರುವ ಹೇಳಿಕೆ ಹೀಗಿದೆ:

“ಒಂದು ಉತ್ತರ ಸಿಗದ ಪ್ರಶ್ನೆ..
ಸ್ವಾಯುತ್ತ ಸಂಸ್ಥೆ ಎನಿಸಿಕೊಳ್ಳುವ ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗಲೆಲ್ಲಾ ಅದರ ಪರವಾಗಿ ಸಮರ್ಥನೆಗೆ ಬಿಜೆಪಿ ಮುನ್ನುಗ್ಗಿ ಬರುವುದೇಕೆ?
ಚುನಾವಣಾ ಆಯೋಗ ಬಿಜೆಪಿಯ ‘ಎಲೆಕ್ಷನ್ ಮೋರ್ಚಾ’ವೇ?
ಬಿಜೆಪಿಗೂ ಸ್ವಾಯುತ್ತ ಸಂಸ್ಥೆಯಾದ ಚುನಾವಣಾ ಆಯೋಗಕ್ಕೂ ಏನು ಅವಿನಾಭಾವ ಸಂಬಂಧ?
‘ಆಯೋಗ’ ಎಂದರೆ ಒಬ್ಬ ವ್ಯಕ್ತಿಯಲ್ಲ, ಆ ಸಂಸ್ಥೆಯಲ್ಲಿರುವ ಸದಸ್ಯರೆಲ್ಲರೂ ಸೇರಿ ಆಯೋಗ ಎನಿಸಿಕೊಳ್ಳುತ್ತದೆ, ಸರ್ವಾನುಮತದ ನಿರ್ಧಾರಗಳು ಮಾತ್ರ ಆಯೋಗದ ನಿರ್ಧಾರ ಎನಿಸಿಕೊಳ್ಳುತ್ತದೆ,
ಆದರೆ,
ಪ್ರಸ್ತುತ ಕೇಂದ್ರ ಚುನಾವಣಾ ಆಯೋಗದ ನಿರ್ಧಾರಗಳು ಕೇವಲ ಒಬ್ಬ ವ್ಯಕ್ತಿಯ ನಿರ್ಧಾರವಾಗಿರುವುದು ಬಯಲಾಗಿದೆ.
ಹೀಗಾಗಿ ಆ ಎಲ್ಲಾ ನಿರ್ಧಾರಗಳ ಆಧಾರದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಕಾನೂನು ಬಾಹಿರ ಮತ್ತು ಅನರ್ಹ ಪ್ರಕ್ರಿಯೆಗಳಾಗಿವೆ.
ಮತ್ತೊಂದು ಪ್ರಶ್ನೆ..
ಈ ಹಿಂದೆ ಶ್ರೀ ರಾಹುಲ್ ಗಾಂಧಿಯವರು ಓಟ್ ಚೋರಿಯನ್ನು ಸಾಕ್ಷಿ ಸಮೇತ ದೇಶದ ಮುಂದಿಟ್ಟಾಗ ತಕ್ಷಣವೇ ರಾಜಕೀಯ ಪಕ್ಷದಂತೆ ಪತ್ರಿಕಾಗೋಷ್ಠಿ ನಡೆಸಿದ CEC ಜ್ಞಾನೇಶ್ ಕುಮಾರ್ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆ ಎದ್ದಿರುವಾಗ ನಾಪತ್ತೆಯಾಗಿದ್ದಾರೆ!
ಅವರು ಪತ್ರಿಕಾಗೋಷ್ಠಿ ಮಾಡುವ ಬದಲು ಬಿಜೆಪಿ ವಕ್ತಾರಿಕೆ ನಡೆಸುತ್ತಿದೆ.
ಬಿಜೆಪಿಗೆ ಕೇಳುವ ಒಂದು ಬಹುಮುಖ್ಯ ಪ್ರಶ್ನೆ,
ಜ್ಞಾನೇಶ್ ಕುಮಾರ್ ರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ?”

ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆ ಮೂಲಕ ಚುನಾವಣಾ ಆಯೋಗದ ಸ್ವಾಯತ್ತತೆ, ಅದರ ನಿರ್ಧಾರ ಕೈಗೊಳ್ಳುವ ವಿಧಾನ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಸಾರ್ವಜನಿಕ ಪ್ರತಿಕ್ರಿಯೆ ಕುರಿತಂತೆ ಪ್ರಶ್ನೆಗಳನ್ನು ಎತ್ತಲಾಗಿದೆ.

ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿರುವ ವಾಗ್ವಾದದ ನಡುವೆಯೇ ಗೃಹ ಸಚಿವರ ಈ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.

You cannot copy content of this page

Exit mobile version