ಮುಂಬೈ: ಹೆಂಡತಿಯ ಉಡುಪು ಮತ್ತು ಅಡುಗೆ ಮಾಡುವ ಶೈಲಿಯ ಬಗ್ಗೆ ಪತಿ ಮಾಡುವ ಟೀಕೆಗಳು ತೀವ್ರ ಕ್ರೂರತ್ವ ಅಥವಾ ಕಿರುಕುಳ ಎಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಪತಿ ಮತ್ತು ಆತನ ಸಂಬಂಧಿಕರನ್ನು ಶುಕ್ರವಾರ ಬಿಡುಗಡೆಗೊಳಿಸಿದೆ. ಹೆಂಡತಿ ಸರಿಯಾದ ರೀತಿಯಲ್ಲಿ ಬಟ್ಟೆ ಧರಿಸುತ್ತಿಲ್ಲ, ಸರಿಯಾಗಿ ಅಡುಗೆ ಮಾಡುತ್ತಿಲ್ಲ ಎಂದು ಪತಿ ಟೀಕಿಸುತ್ತಿದ್ದರೆ, ಅಂತಹ ಹೇಳಿಕೆಗಳನ್ನು ತೀವ್ರ ಕ್ರೂರತ್ವ ಅಥವಾ ಕಿರುಕುಳ ಎಂದು ಪರಿಗಣಿಸಲಾಗದು ಎಂದು ಕೋರ್ಟ್ ಹೇಳಿದೆ.
ಪತಿ-ಪತ್ನಿಯರ ನಡುವಿನ ಸಂಬಂಧ ಹದಗೆಟ್ಟಾಗ, ಸಣ್ಣ ವಿಷಯಗಳನ್ನೂ ದೊಡ್ಡದಾಗಿ ಮಾಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಮದುವೆಗೆ ಮೊದಲು ಎಲ್ಲ ವಿಷಯಗಳನ್ನು ಬಹಿರಂಗಪಡಿಸಿದಾಗ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿಯಲ್ಲಿ ಕ್ರೂರತ್ವ ಎಂದು ಪರಿಗಣಿಸುವಷ್ಟು ಗಂಭೀರ ಆರೋಪಗಳಿಲ್ಲದಿದ್ದಾಗ, ಪತಿ ಮತ್ತು ಅವರ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.