ಬಾಲಿವುಡ್ ನ ಹಿರಿಯ ಹಾಸ್ಯನಟ 58 ವರ್ಷದ ರಾಜು ಶ್ರೀವಾಸ್ತವ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲಘು ಹೃದಯಾಘಾತದ ಹಿನ್ನೆಲೆಯಲ್ಲಿ ಆಗಸ್ಟ್ 10 ರಂದು ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಜು ಶ್ರೀವಾಸ್ತವ್ ಹಲವು ದಿನಗಳ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಆಗಸ್ಟ್ 10 ರಂದು ಜಿಮ್ ನಲ್ಲಿ ಕಸರತ್ತು ಮಾಡುವಾಗ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು ಒಂದೂವರೆ ತಿಂಗಳ ಸುದೀರ್ಘ ಚಿಕಿತ್ಸೆಯಲ್ಲಿ ಬಹು ಅಂಗಾಂಗ ವೈಫಲ್ಯಕ್ಕೆ ನಟ ರಾಜು ಶ್ರೀವಾಸ್ತವ್ ತುತ್ತಾಗಿದ್ದರು.
ಬಾಲಿವುಡ್ ನ ಘಟಾನುಘಟಿ ನಾಯಕರುಗಳ ಜೊತೆಗೆ ತೆರೆ ಹಂಚಿಕೊಂಡಿದ್ದ ನಟ ರಾಜು ಶ್ರೀವಾಸ್ತವ್ ಅವರ ನಿಧನಕ್ಕೆ ಬಾಲಿವುಡ್ ನ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ.