ಉತ್ತಮ ಬ್ಯಾಟಿಂಗ್ ನ ಹೊರತಾಗಿಯೂ 208 ರನ್ ಗಳ ಸವಾಲಿನ ಮೊತ್ತವನ್ನು ಎದುರಾಳಿ ಆಸೀಸ್ ಮುಂದಿಟ್ಟ ಭಾರತ ತಂಡ ಕೊನೆಗೂ ಮೊದಲ ಟಿ 20 ಪಂದ್ಯದಲ್ಲಿ ಸೋಲನುಭವಿಸಬೇಕಾಯ್ತು.
ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಕೊಟ್ಟ ಆಸ್ಟ್ರೇಲಿಯಾ ತಂಡ ನಾಯಕ ರೋಹಿತ್ ಅವರನ್ನು ಕೇವಲ 11 ರನ್ ಗೆ ಔಟ್ ಮಾಡಿತು. ಇದಾದ ನಂತರ ಕಳೆದ ಪಂದ್ಯದ ಶತಕ ವೀರ ವಿರಾಟ್ ಕೊಹ್ಲಿ ಕೂಡಾ ಕೇವಲ 2 ರನ್ ಗಳಿಸಿ ನಿರ್ಗಮಿಸಿದರು. ಆದರೆ ನಂತರ ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಮತ್ತು ಶ್ರೇಷ್ಠ ಪ್ರದರ್ಸನ ತೋರಿದ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ನೆರವಿನಿಂದ ಭಾರತ 208 ರನ್ ಗಳ ಮೊತ್ತ ಕಲೆ ಹಾಕಿತು. ಇದನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ ಫಿಂಚ್ ಮತ್ತು ಗ್ರೀನ್ ಅಬ್ಬರದ ಆರಂಭ ಕೊಟ್ಟರು. ಅದರಲ್ಲೂ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೊದಲ ಪಂದ್ಯದಲ್ಲೇ ಕ್ಯಾಮೆರಾನ್ ಗ್ರೀನ್ ಅಬ್ಬರಿಸಿದರು. 30 ಬಾಲುಗಳಲ್ಲಿ 61 ರನ್ ಗಳಿಸಿದ ಅವರು ತಮ್ಮ ತಂಡದ ಗೆಲುವಿನ ರೂವಾರಿ ಎನಿಸಿದರು.
ನಂತರದ ಕೆಲವು ಓವರ್ ಗಳಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡರೂ ಮ್ಯೂಥ್ಯೂ ವೇಡ್ 21 ಬಾಲ್ ಗಲಲ್ಲಿ 45 ರನ್ ಗಳಿಸಿ ತಂಡವನ್ನು ಗೆಲುವನಿನ ದಡ ಮುಟ್ಟಿಸಿದರು. ಈ ಮಧ್ಯೆ ಹಲವು ಕ್ಯಾಚ್ ಗಳನ್ನು ಕೈ ಚೆಲ್ಲಿದ್ದು ಭಾರತ ತಂಡಕ್ಕೆ ದುಬಾರಿ ಆಯಿತು. ಅಲ್ಲದೆ 4 ಓವರ್ ನಲ್ಲಿ 3 ವಿಕೆಟ್ ತೆಗೆದು 17 ರನ್ ಕೊಟ್ಟ ಅಕ್ಸರ್ ಪಟೇಲ್ ಅವರನ್ನು ಬಿಟ್ಟರೆ ಭಾರತದ ಇತರ ಎಲ್ಲಾ ಬೋಲರ್ ಗಳ ಪ್ರದರ್ಶನ ನೀರಸವಾಗಿತ್ತು. ಹಾಗಾಗಿ ಉತ್ತಮ ಮೊತ್ತಮ ಗಳಿಸಿದ ನಂತರವೂ ಭಾರತ ತಂಡ ಸೋಲಿನ ರುಚಿ ಕಾಣಬೇಕಾಯಿತು. ಕ್ಯಾಮರೂನ್ ಗ್ರೀನ್ ಪಂದ್ಯ ಶ್ರೇಷ್ಟ ಎನಿಸಿಕೊಂಡರು. ಅನುಭವಿ ಬೋಲರ್ ಬುಮ್ರಾ ಅವರ ಕೊರತೆ ಈ ಪಂದ್ಯದಲ್ಲಿ ಎದ್ದು ಕಂಡಿತು. ಜೊತೆಗೆ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹೇಳುವುದಾದರೆ ಎಡಗೈ, ಬಲಗೈ ಕಾಂಬಿನೇಷನ್ ನೆಪದಲ್ಲಿ ತಂಡದಲ್ಲಿ ದಿನೇಶ್ ಕಾರ್ತಿಕ್ ಇದ್ದರೂ ಅವರಿಗಿಂತ ಮುಂಚೆ ಅಕ್ಸರ್ ಪಟೇಲ್ ಅವರನ್ನು ಬ್ಯಾಟಿಂಗಿಗೆ ಕಳಿಸುವ ನಾಯಕ ರೋಹಿತ್ ಅವರ ಕೆಟ್ಟ ನಿರ್ಧಾರ ಮತ್ತು ಹಲೆಯ ಚಾಳಿ, ಇಲ್ಲೂ ಮುಂದುವರೆಯಿತು. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಬೋಲಿಂಗ್, ಫೀಲ್ಡಿಂಗ್ ಮತ್ತು ತಂಡದ ಆಯ್ಕೆಯ ಬಗ್ಗೆ ಭಾರತ ಗಮನಹರಿಸಬೇಕಾಗಿದೆ.