ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಮತ್ತೆ ಸುಪ್ರೀಂ ಕೋರ್ಟ್ ಶಾಕ್; ಜಾಮೀನು ರದ್ದು, ಎರಡು ವಾರಗಳಲ್ಲಿ ಶರಣಾಗತಿಗೆ ಸೂಚನೆಒಂದೇ ದಿನದಲ್ಲಿ 4.16 ಲಕ್ಷ ಮತದಾರರ ಅರ್ಜಿ; ಒಂದೇ ವಿಳಾಸದಿಂದ 44 ಅರ್ಜಿಗಳು: ಉತ್ತರ ಪ್ರದೇಶದಲ್ಲಿ ಮತದಾರರ ನೋಂದಣಿಯಲ್ಲಿ ಅಸಾಮಾನ್ಯ ಏರಿಕೆ ಪತ್ತೆಸ್ವತಂತ್ರ ಭಾರದ್ವಾಜ್ ವಿರುದ್ಧ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಪೋಸ್ಟ್‌ ಹಾಕಿದ ಆರೋಪ: ದೆಹಲಿ ಪೊಲೀಸರಿಂದ ವರದಿ ಕೇಳಿದ ನ್ಯಾಯಾಲಯ‘‌ಕೃಷ್ಣನ ಕುರಿತ ಹೇಳಿಕೆಯಿಂದ ನನಗೆ ಬಹಳ ನೋವಾಗಿತ್ತು…’: ಧೀರೇಂದ್ರ ಶಾಸ್ತ್ರಿ ನನ್ನ ತಮ್ಮನಿದ್ದಂತೆ – ಬಾಬಾ ರಾಮದೇವ್ಕಬ್ಬನ್ ಪಾರ್ಕ್‌ನಲ್ಲಿ ಇಂದಿನಿಂದ 13 ದಿನಗಳ ಪುಷ್ಪ ಪ್ರದರ್ಶನ; 15 ಲಕ್ಷಕ್ಕೂ ಅಧಿಕ ಹೂವುಗಳ ಆಕರ್ಷಣೆಮೋದಿ ಸರ್ಕಾರ ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡಿದೆ: ಹ್ಯೂಮನ್ ರೈಟ್ಸ್ ವಾಚ್ ವರದಿಸಾಮಾಜಿಕ ಜಾಲತಾಣಗಳ ರೀಲ್ಸ್‌, ಕಿರು ವಿಡಿಯೊಗಳಿಗೆ ದಿನಾಂಕ ಮತ್ತು ಎಐ ಲೇಬಲ್ ಕಡ್ಡಾಯಗೊಳಿಸಲು ಕೇಂದ್ರಕ್ಕೆ ಉದ್ಯಮಿಗಳ ಸಂಘದಿಂದ ಒತ್ತಾಯಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ರಮ್ಯಾ ಸಾಥ್; ಸರ್ಕಾರದ ಭರವಸೆ ನೆನಪಿಸಿದ ಮಾಜಿ ಸಂಸದೆಒಂದು ಬ್ಯಾಚ್‌ನ ನೀರಿನ ಮಾದರಿಯನ್ನಷ್ಟೇ ಪರೀಕ್ಷೆ ಮಾಡಿದ್ದು: ಬಿಸ್ಲೇರಿ ನೀರು ಸುರಕ್ಷಿತವೆಂದು ಸ್ಪಷ್ಟಪಡಿಸಿದ ಎಫ್‌ಎಸ್‌ಎಸ್‌ಎಐ₹3.5 ಕೋಟಿ ಲಂಚಕ್ಕೆ ಕೆಪಿಎಸ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಮೊಬೈಲ್‌ ವಶಕ್ಕೆ ಪಡೆದ ಇಡಿಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ; ಭದ್ರತೆ ಹೆಚ್ಚಳಗುರುನಾನಕ್ ಜಯಂತಿ: ಪಾಕಿಸ್ತಾನದ ನಂಕಾನಾ ಸಾಹಿಬ್‌ನಲ್ಲಿ ಸಾವಿರಾರು ಭಾರತೀಯ ಸಿಖ್ ಭಕ್ತರ ಸಂಗಮಯುಎಇಯಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯರೂ ಸೇರಿ 13 ಮಂದಿ ಸಾವುಭಾವಪುಂಜ : ಮಾತೆಂಬುದು ಜ್ಯೋತಿರ್ಲಿಂಗತಿರುಪ್ಪರಂಕುಂದ್ರಂ ಬೆಟ್ಟದ ದೀಪ ವಿವಾದ: ಸುಪ್ರೀಂ ಕೋರ್ಟ್ ಆದೇಶ, ತಮಿಳುನಾಡು ಸರ್ಕಾರದ ವಿರೋಧ; ಧರ್ಮ ಮತ್ತು ಸಂವಿಧಾನದ ನಡುವೆ ಸಂಘರ್ಷರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎ.ಐ (AI) ತಂತ್ರಜ್ಞಾನದ ಬಲ – ಸಿಎಸ್ ಡಾ. ಶಾಲಿನಿ ರಜನೀಶ್ಜಿಲ್ಲಾಧಿಕಾರಿ ವಿರುದ್ಧದ ಆರೋಪ – ಪೊಲೀಸ್ ನೋಟಿಸ್‌ಗೆ ಡೋಂಟ್‌ ಕೇರ್ ಎಂದ ಕುಮಾರಸ್ವಾಮಿಬಾಂಗ್ಲಾದೇಶಕ್ಕೆ ಶೇಖ್ ಹಸೀನಾ: ಭಾರತದಿಂದ ವಾಪಸ್; ರಾಷ್ಟ್ರೀಯ ವಿಮಾನವೇ ಬೇಕೆಂಬ ಬೇಡಿಕೆ; ಬಂಧನಕ್ಕೆ ಸಿದ್ಧವಾಗಿರುವ ಸರ್ಕಾರ!ರಾಜಧಾನಿಯಲ್ಲಿ ಕುಡಿದು ವಾಹನ ಚಾಲನೆ – ಒಂದೇ ವಾರದಲ್ಲಿ 744 ಕೇಸ್‌28 ಎಸೆತಗಳಲ್ಲಿ ಶತಕ, 15ನೇ ವಯಸ್ಸಿನಲ್ಲೇ ವಿಶ್ವದಾಖಲೆ: ವೈಭವ್ ಸೂರ್ಯವಂಶಿ ಎಂಬ ಕ್ರಿಕೆಟ್ ವಿಸ್ಮಯ!

ಹಾಸನಾಂಬ – 2026, 30 ಲಕ್ಷಕ್ಕೂ ಅಧಿಕ ಭಕ್ತರು; ₹29.55 ಕೋಟಿ ಆದಾಯ ಸಂಗ್ರಹ

ಹಾಸನಾಂಬ – 2026, 30 ಲಕ್ಷಕ್ಕೂ ಅಧಿಕ ಭಕ್ತರು; ₹29.55 ಕೋಟಿ ಆದಾಯ ಸಂಗ್ರಹ

ಹಾಸನ: ಐತಿಹಾಸಿಕ ಹಾಸನಾಂಬ ದೇವಿಯ ದರ್ಶನಕ್ಕೆ ಈ ಬಾರಿ ಭಕ್ತಸಾಗರವೇ ಹರಿದುಬಂದಿದ್ದು, 12 ದಿನಗಳ ಅವಧಿಯಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಭಕ್ತರಿಂದ ಟಿಕೆಟ್ ಮಾರಾಟ, ಲಾಡು ಪ್ರಸಾದ, ಹುಂಡಿ ಕಾಣಿಕೆ ಸೇರಿದಂತೆ ಒಟ್ಟು ₹29.55 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2026ರ ಅಕ್ಟೋಬರ್ 29ರಂದು ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಂದು ಸಾರ್ವಜನಿಕ ದರ್ಶನಕ್ಕೆ ಅಧಿಕೃತ ಅವಕಾಶವಿಲ್ಲದಿದ್ದರೂ ಆಗಮಿಸಿದ್ದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಂದು 5,600 ಮಂದಿ ದೇವಿಯ ದರ್ಶನ ಪಡೆದಿದ್ದರು. ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ 12 ದಿನಗಳಲ್ಲಿ ದೇಶದ ವಿವಿಧ ಭಾಗಗಳು, ಹೊರರಾಜ್ಯಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 30 ಲಕ್ಷದ 6 ಸಾವಿರ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದರು.

2025ರಲ್ಲಿ 13 ದಿನಗಳ ಜಾತ್ರಾ ಅವಧಿಯಲ್ಲಿ 25 ಲಕ್ಷದ 36 ಸಾವಿರ ಭಕ್ತರು ದರ್ಶನ ಪಡೆದಿದ್ದರು. ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ತಿಳಿಸಿದರು.

₹29.55 ಕೋಟಿ ಆದಾಯ ಸಂಗ್ರಹ

ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಈ ಬಾರಿ ಒಟ್ಟು ₹29,55,27,852 ಆದಾಯ ಸಂಗ್ರಹವಾಗಿದೆ.

ಕಳೆದ ವರ್ಷ ₹25.59 ಕೋಟಿ ಆದಾಯ ಬಂದಿದ್ದು

ಈ ಬಾರಿ ಸುಮಾರು ₹4 ಕೋಟಿ ಹೆಚ್ಚುವರಿ ಆದಾಯ ಬಂದಿದೆ

  • ₹1,000 ವಿಶೇಷ ದರ್ಶನ ಟಿಕೆಟ್ ಮಾರಾಟ: ₹16,98,11,257
  • ₹300 ವಿಶೇಷ ದರ್ಶನ ಟಿಕೆಟ್ ಮಾರಾಟ: ₹7,24,14,000
  • ಲಾಡು ಪ್ರಸಾದ ಮಾರಾಟ: ₹1,35,99,156
  • ದೇಣಿಗೆ ರೂಪದಲ್ಲಿ: ₹5,91,228
  • ಇ-ಹುಂಡಿ ಮೂಲಕ: ₹13,13,264
  • ಜಾಹೀರಾತುಗಳಿಂದ: ₹5,74,000
  • ಈ ಮೂಲಗಳಿಂದ ಸಂಗ್ರಹವಾದ ಒಟ್ಟು ಮೊತ್ತ: ₹25,82,88,199
  • ಹುಂಡಿ ಕಾಣಿಕೆ: ₹3,71,63,933
  • ಒಟ್ಟು ಆದಾಯ: ₹29,55,27,852 ಎಂದು ವಿವರಿಸಿದರು.

ಚಿನ್ನ, ಬೆಳ್ಳಿ ಕಾಣಿಕೆ:

ಭಕ್ತರು ದೇವಿಗೆ ಕಾಣಿಕೆಯಾಗಿ 43 ಗ್ರಾಂ 170 ಮಿಲಿಗ್ರಾಂ ಚಿನ್ನ ಹಾಗೂ 1 ಕೆ.ಜಿ. 255 ಗ್ರಾಂ 300 ಮಿಲಿಗ್ರಾಂ ಬೆಳ್ಳಿಯನ್ನು ಅರ್ಪಿಸಿದ್ದಾರೆ. ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ ₹18,99,100 ಸಂಗ್ರಹವಾಗಿದೆ ಎಂದು ಜಗದೀಶ್ ಗಂಗಣ್ಣನವರ್ ಮಾಹಿತಿ ನೀಡಿದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು