ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ನವೆಂಬರ್ 5ರಿಂದ ಸರ್ಕಾರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳ – ಸಚಿವ ಭೈರತಿ ಸುರೇಶ್CEC ಜ್ಞಾನೇಶ್ ಕುಮಾರ್ ವಿರುದ್ಧ ನ, 5 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ – ಇಂಡಿಯಾ ಬ್ಲಾಕ್ ಘೋಷಣೆ22,400.58 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಜಿ. ಪರಮೇಶ್ವರ್ ಪತ್ರ – ರಾಜ್ಯದಲ್ಲಿ ಭೀಕರ ಬರಗಾಲ‘ರಾಮಾಯಣ’ ಚಿತ್ರಕ್ಕೆ ಕಾನೂನು ಕವಚ; ಪೈರಸಿ ವಿರುದ್ಧ ಬಾಂಬೆ ಹೈಕೋರ್ಟ್ ಸಮರ! ಸಿನಿಮಾ ದೃಶ್ಯ, ಹಾಡು ಮತ್ತು ಧ್ವನಿಮುದ್ರಣಗಳ ಅನಧಿಕೃತ ಬಳಕೆಗೆ ನಿರ್ಬಂಧಸೂಪರ್‌ಮಾರ್ಕೆಟ್ ಫ್ರೀಜರ್‌ನ್ನೇ ಹ್ಯಾಕ್ ಮಾಡಿದ ಸೈಬರ್ ಕಳ್ಳರು! ನಿಮ್ಮ ಮನೆಯ ಸ್ಮಾರ್ಟ್ ಟಿವಿ, ಎಸಿ, ಕ್ಯಾಮೆರಾಗಳೂ ಸುರಕ್ಷಿತವೇ?ಗಾಂಧಿ ಕುರಿತ ನಾಟಕದಿಂದ ಬೀದಿಗೆ ಬಂದ ಸಂಘರ್ಷ: ಅಡ್ಡಂಡ ಕಾರ್ಯಪ್ಪ ವಿವಾದಗಳ ಹಿಂದಿನ ಇತಿಹಾಸವೇನು?ಬೆಂಗಳೂರಿಗರೇ, ಕೊಡೆ ಮರೆಯಬೇಡಿ: ಆಂಧ್ರ ಕರಾವಳಿಯತ್ತ ಚಂಡಮಾರುತದ ಅಬ್ಬರ; ಕರ್ನಾಟಕಕ್ಕೂ ಮಳೆ, ಗುಡುಗು, ಸಿಡಿಲಿನ ಎಚ್ಚರಿಕೆ!ರಾಹುಲ್ ಗಾಂಧಿ v/s ಅಮಿತ್ ಶಾ: ‘ವೋಟ್ ಚೋರಿ’ ಆರೋಪಕ್ಕೆ ಸಂಸತ್ತಿನ ವಿಶೇಷ ಅಧಿವೇಶನದ ಸವಾಲು; ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು!ಎಐ ಈಗ ಸೈಬರ್ ದಾಳಿಕೋರರಿಗೂ ಅಸ್ತ್ರ: ವಿದ್ಯುತ್, ನೀರು, ಆಹಾರ ಪೂರೈಕೆಗೂ ಕಾದಿದೆಯೇ ಡಿಜಿಟಲ್ ಕಂಟಕ?ನನ್ನ ಮೇಲೆ ಇಡಿ, ಐಟಿ ದಾಳಿ ನಡೆಸಲು ಕೇಂದ್ರ ಸಚಿವರಿಂದ ಸಂಚು – ಪ್ರಿಯಾಂಕ್‌ ಖರ್ಗೆತೆರೆ ಹಿಂದೆ ಮಗು ಚಿವುಟಿ, ಮಾಧ್ಯಮಗಳ ಮುಂದೆ ತೊಟ್ಟಿಲು ತೂಗುತ್ತಿದ್ದರು HD ಸ್ಟಿಂಗ್ ಸ್ವಾಮಿ – ಎಂ. ಲಕ್ಷ್ಮಣ್ಮನುವ್ಯಾದಿ ಅಡ್ಡಂಡ ಕಾರಿಯಪ್ಪನ ಮುಖಕ್ಕೆ ಮಸಿರಾಜಧಾನಿಯಲ್ಲಿ ಅಕ್ರಮ ಪಿಜಿಗಳ ಹಾವಳಿ ನಿಯಂತ್ರಣಕ್ಕೆ – GBA ಹೊಸ ಮಾರ್ಗಸೂಚಿವಾರದ ಹಿಂದೆ ನಾಪತ್ತೆಯಾಗಿದ್ದ ದಲಿತ ನಾಯಕ – ಧರ್ಮಸ್ಥಳದಲ್ಲಿ ಶವವಾಗಿ ಪತ್ತೆಆಂಧ್ರ ಕರಾವಳಿಗೆ ಭಾಗಗಳಿಗೆ ಅಪ್ಪಳಿಸಿದ ಚಂಡಮಾರುತ, ಮೀನುಗಾರಿಕೆ ದೋಣಿಗಳಿಗೆ ಹಾನಿ – ಭಾರಿ ಅನಾಹುತಅಮಿತ್ ಶಾ ಭೇಟಿಯಾದ ಚಿರಂಜೀವಿ, ರಾಮ್ ಚರಣ್; ಭೇಟಿಯ ಉದ್ದೇಶ ಏನು ಗೊತ್ತಾ?ವಿಜಯ ಪ್ರಸಾದ್ ಹೊಸ ಸಿನಿಮಾದಲ್ಲಿ ರಚಿತಾ ರಾಮ್; ಈ ಬಾರಿ ಡಿಫರೆಂಟ್ ಆಗಿ ಪ್ರೇಕ್ಷಕರ ಮುಂದೆ!ಕೆಪಿಎಸ್‌ಸಿ ನೇಮಕಾತಿ ಅಕ್ರಮ ತನಿಖೆಗೆ ಹೊಸ ಸಾರಥಿ: ಎಸ್‌ಐಟಿ ಜವಾಬ್ದಾರಿ ಆರ್. ಹಿತೇಂದ್ರ ಹೆಗಲಿಗೆಕಬ್ಬು ಬೆಲೆ ಬಿಕ್ಕಟ್ಟು: ಇಂದು ಕಾರ್ಖಾನೆ ಮಾಲೀಕರು-ರೈತ ಸಂಘಟನೆಗಳ ಸಭೆ; ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆಗಾಂಧಿ ಹತ್ಯೆಯ ಸತ್ಯ ನಾಟಕ ವಿವಾದ: ಸುಚಿತ್ರಾ ಫಿಲಂ ಸೊಸೈಟಿಗೆ ಬನಶಂಕರಿ ಪೊಲೀಸರ ನೋಟಿಸ್

ನವೆಂಬರ್ 5ರಿಂದ ಸರ್ಕಾರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳ – ಸಚಿವ ಭೈರತಿ ಸುರೇಶ್

ನವೆಂಬರ್ 5ರಿಂದ ಸರ್ಕಾರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳ – ಸಚಿವ ಭೈರತಿ ಸುರೇಶ್

ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡಿದ ಕೆಲವೇ ದಿನಗಳಲ್ಲಿ, ರಾಜ್ಯ ಸರ್ಕಾರ ಇದೇ ನವೆಂಬರ್ 5ರಿಂದ ಸರ್ಕಾರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಮುಂದಾಗಿದೆ. ದರ ಪರಿಷ್ಕರಣೆ ಜಾರಿಯಾಗುವುದು ಖಚಿತ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ನಾಳೆ ನಡೆಯುವ ಸಭೆಯ ಬಳಿಕ ದರ ಏರಿಕೆಯ ನಿಖರ ಪ್ರಮಾಣವನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದರ ಪರಿಷ್ಕರಣೆ ಕುರಿತು ಚರ್ಚಿಸಲಾಗಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಾರಿಗೆ ಇಲಾಖೆಗೆ ವಹಿಸಲಾಗಿದೆ ಎಂದು ಸುರೇಶ್ ಹೇಳಿದ್ದಾರೆ.

ಪರಿಷ್ಕೃತ ದರ ರಚನೆಯನ್ನು ನಿರ್ಧರಿಸಲು ನಾಳೆ ಸಾರಿಗೆ ಇಲಾಖೆಯು ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ಮರುದಿನದಿಂದಲೇ ಹೊಸ ದರಗಳು ಜಾರಿಗೆ ಬರಲಿವೆ. ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚ ಮತ್ತು ಸಾರಿಗೆ ವಲಯದ ಆರ್ಥಿಕ ಸಂಕಷ್ಟದಿಂದಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ದರ ಏರಿಕೆ ಅನಿವಾರ್ಯ

ಕೇಂದ್ರ ಸರ್ಕಾರ ಡೀಸೆಲ್ ಬೆಲೆಯನ್ನು ನಾಲ್ಕು ಬಾರಿ ಹೆಚ್ಚಿಸಿರುವುದರಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಮೇಲೆ ವಾರ್ಷಿಕ ಹೆಚ್ಚುವರಿಯಾಗಿ 2,000 ಕೋಟಿ ರೂಪಾಯಿ ಹೊರೆ ಬಿದ್ದಿದೆ. ಇದರಿಂದ ನಿಗಮಗಳ ಒಟ್ಟು ನಷ್ಟ 9,000 ಕೋಟಿ ರೂಪಾಯಿಗೆ ತಲುಪಿದೆ ಎಂದು ಸಚಿವರು ಹೇಳಿದರು.

ದರ ಏರಿಕೆ ಮಾಡದೆ ನಮಗೆ ಬೇರೆ ದಾರಿಯಿಲ್ಲ. ಸಾರಿಗೆ ನಿಗಮಗಳನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸುರೇಶ್ ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಾರ್ವಜನಿಕ ಸಾರಿಗೆ ಪ್ರಯಾಣ ದರ ನಿಯಂತ್ರಣ ಸಮಿತಿಯು (ಪಿಟಿಎಫ್‌ಆರ್‌ಸಿ), ಮೂರು ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಶೇ.25ರಷ್ಟು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ದರವನ್ನು ಶೇ.40ರಷ್ಟು ಹೆಚ್ಚಿಸುವಂತೆ ಶಿಫಾರಸು ಮಾಡಿದೆ.

ವಿಷಯಗಳು: #karnataka #news
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು