ಗುಜರಾತ್ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಸೇತುವೆಯ ಒಂದು ಭಾಗ ಕುಸಿತಗೊಂಡು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದಿವೆ. ಇದರ ಪರಿಣಾಮ ವಾಹನಗಳಲ್ಲಿ ಇದ್ದ 9 ಮಂದಿ ಮೃತಪಟ್ಟಿದ್ದಾರೆ. ಇನ್ನು ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ 7:45 ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವೆ ನಿರ್ಮಿಸಲಾಗಿತ್ತು. 45 ವರ್ಷದ ಹಳೆಯ ಸೇತುವೆ ಇದಾಗಿದೆ.
ವಡೋದರಾ ಜಿಲ್ಲೆಯ ಪದ್ರಾದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಸೇತುವೆ ಕುಸಿದಿದೆ. ರಾಜ್ಯ ಹೆದ್ದಾರಿಯ ಉದ್ದಕ್ಕೂ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ವಡೋದರಾ ಮತ್ತು ಆನಂದ್ ಅನ್ನು ಸಂಪರ್ಕಿಸುತ್ತದೆ.
ಮುಜ್ಪುರ್ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು, ಎರಡು ಟ್ರಕ್ಗಳು, ಒಂದು ಬೊಲೆರೊ ಜೀಪ್ ಮತ್ತು ಇನ್ನೊಂದು ಜೀಪ್ ದಾಟುತ್ತಿದ್ದಾಗ ಸೇತುವೆ ಇದ್ದಕ್ಕಿದ್ದಂತೆ ಕುಸಿದು ಬಿತ್ತು. ನಾಲ್ಕು ವಾಹನಗಳು ಕುಸಿತದ ಎರಡೂ ಬದಿಗಳಲ್ಲಿ ಹರಿಯುವ ಮಹಿಸಾಗರ್ ನದಿಗೆ ಉರುಳಿದವು. ಸ್ಥಳೀಯರು ಕೂಡಲೇ ಬೇಗನೆ ಜಮಾಯಿಸಿದರು ಮತ್ತು ರಕ್ಷಣಾ ಕಾರ್ಯಗಳು ತಕ್ಷಣವೇ ಪ್ರಾರಂಭವಾದವು.