Home ಬೆಂಗಳೂರು ಸುಬ್ರಮಣ್ಯ ಜಾತ್ರೆಯಲ್ಲಿ ಎಲ್ಲಾ ಧರ್ಮಗಳಿಗೂ ವ್ಯಾಪಾರಕ್ಕೆ ಅವಕಾಶ: ಉದಯ್‌ ಗರುಡಾಚಾರ್

ಸುಬ್ರಮಣ್ಯ ಜಾತ್ರೆಯಲ್ಲಿ ಎಲ್ಲಾ ಧರ್ಮಗಳಿಗೂ ವ್ಯಾಪಾರಕ್ಕೆ ಅವಕಾಶ: ಉದಯ್‌ ಗರುಡಾಚಾರ್

0

ಬೆಂಗಳೂರು :  ನಾನು ಮನೆಯಲ್ಲಿ ಮಾತ್ರ ಬ್ರಾಹ್ಮಣ, ಹೊರಗೆ ಬಂದರೆ ನಾನು ವಿಶ್ವ ಮಾನವ. ಹಿಂದೂಗಳಿಗೆ ಮಸೀದಿಗಳ ಮುಂದೆ ವ್ಯಾಪಾರಕ್ಕೆ ಅವಕಾಶ ಕೊಡದೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ, ಇತರ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಮನವಿಗೆ ಬಿಜೆಪಿ ಶಾಸಕ ಉದಯ್‌ ಗರುಡಾಚಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ವಿವಿಪುರಂನಲ್ಲಿ ನಡೆಯುತ್ತಿರುವ ಸುಬ್ರಮಣ್ಯ ಜಾತ್ರೆಯಲ್ಲಿ ಹಿಂದೂ ಅಲ್ಲದೇ ಬೇರೆ ಯಾವುದೇ ಧರ್ಮದವರಿಗೆ ವ್ಯಾಪಾರ ಮಾಡಲು ಅನುಮತಿ ನೀಡಬಾರದು ಎಂದು ಹಿಂದೂ ಸಂಘಟನೆಗಳು ಬಿಬಿಎಂಪಿ ಆಯುಕ್ತರಿಗೆ ಮತ್ತು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.

ಮೂರ್ತಿ ಪೂಜೆಯನ್ನು ನಂಬದೆ , ವ್ಯಾಪಾರದಲ್ಲಿ ಜಿಹಾದ್‌ ಮಾಡುವ, ಹಿಂದೂಗಳು ಪೂಜಿಸುವ ಗೋವನ್ನು ಕಡಿದು ತಿನ್ನುವವರಿಗೆ ಪ್ರತೀ ಭಾರಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅವರಿಗೆ ಹಿಂದೂ ಹಬ್ಬದಲ್ಲಿ ವ್ಯಾಪಾರ ಮಾಡುವುದಕ್ಕ ಯಾವುದೇ ರೀತಿಯ ಅರ್ಹತೆ ಇಲ್ಲಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು.

ಈ ಹಿನ್ನೆಲೆಯಲ್ಲಿ, ಇಂದು ವಿವಿ ಪುರಂನ ಸುಬ್ರಮಣ್ಯ ದೇವಾಲಯಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಉದಯ್‌ ಗರುಡಾಚಾರ್‌ ಅವರು ಪ್ರತಿಕ್ರಿಯೆ ನೀಡಿದ್ದು, ಮಾಧ್ಯಮಗಳ ಮುಂದೆ ಮಾತನಾಡಿದ ಇವರು, ʼನಾನು ಅಧಿಕಾರಕ್ಕೆ ಬಂದಾಗ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದೇನೆ. ಅಧಿಕಾರದಲ್ಲಿರುವಾಗ ನನಗೆ ಯಾವುದೇ ಜಾತಿ, ಧರ್ಮದ ಭೇದಭಾವವಿಲ್ಲ. ನಾನು ಮನೆಯಲ್ಲಿ ಮಾತ್ರ ಬ್ರಾಹ್ಮಣ ಹೊರಗೆ ಬಂದರೆ ನಾನು ವಿಶ್ವಮಾನವ. ಜಾತ್ರೆಯಲ್ಲಿ ಎಲ್ಲಾ ಧರ್ಮದವರಿಗೂ ಅವಕಾಶ ಮಾಡಿಕೊಡಬೇಕು. ಜಾತ್ರೆಗಳಲ್ಲಿ ಯಾವುದೇ ಗಲಾಟೆಗಳಿಗೆ ಅವಕಾಶ ಇರುವುದಿಲ್ಲ. ಒಂದು ವೇಳೆ ಈ ವಿರುದ್ಧ ನಡೆದುಕೊಂಡರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದುʼ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ʼಹಿಂದೂಗಳಿಗೆ ದರ್ಗಾ ಮತ್ತು ಮಸೀದಿಗಳ ಮುಂದೆ ವ್ಯಾಪಾರಕ್ಕೆ ಅವಕಾಶ ನೀಡದೆ ಇರುವ ಬಗ್ಗೆ ಇನ್ನು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿ. ಹಿಂದೂ ಕಾರ್ಯಕರ್ತರಾಗಿರುವ ಕೆಲವರು ಉದ್ಧೇಶಪೂರ್ವಕವಾಗಿ ಅವರಿಗೆ ಮಾಡಲಿಕ್ಕೆ ಬೇರೆ ಕೆಲಸ ಇಲ್ಲದೆ ಈ ರೀತಿಯ ಕೆಲಸಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆʼ ಎಂದು ಉದಯ್‌ ಗರುಡಾಚಾರ್‌ ಕಿಡಿಕಾರಿದ್ದಾರೆ.

You cannot copy content of this page

Exit mobile version