ತುಮಕೂರು: ಮಂಜಿನಲ್ಲಿ ನಿಯಂತ್ರಣ ತಪ್ಪಿದ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸೋಮವಾರ ಮುಂಜಾನೆ ಜಿಲ್ಲೆಯ ಮಧುಗಿರಿ ತಾಲೂಕಿನ ಜಡಗೊಂಡನಹಳ್ಳಿ ಬಳಿ ಬೆಂಗಳೂರು ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
ನೆರೆಯ ಆಂಧ್ರ ಪ್ರದೇಶದ ಮಡಕಸಿರ ತಾಲೂಕಿನ ಗುಂಡಂಪಳ್ಳಿ ನಿವಾಸಿಗಳಾದ ಕೃಷ್ಣ ರೆಡ್ಡಿ (45) ಮತ್ತು ಜ್ಯೋತಿ (42) ಸ್ಥಳದಲ್ಲೇ ಸಾವಿಗೀಡಾದರೆ, ಅವರ ಪುತ್ರ ಮಧುಸೂಧನ್ ರೆಡ್ಡಿ (17) ಮತ್ತು ಸಂಬಂಧಿ ಚಿದಂಬ ರೆಡ್ಡಿ (45) ಗಂಭೀರವಾಗಿ ಗಾಯಗೊಂಡರು.
ಜ್ಯೋತಿ ಬೆಂಗಳೂರು ನಗರದ ಡಾನ್ ಬಾಸ್ಕೋ ಶಾಲೆಯಲ್ಲಿ ಉದ್ಯೋಗಿಯಾಗಿದ್ದರು. ಅವರ ಪತಿ ಕೂಡ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಕುಟುಂಬದೊಂದಿಗೆ ಜಾತ್ರೆಗೆ ತಮ್ಮ ಊರಿಗೆ ಹಿಂತಿರುಗುತ್ತಿದ್ದಾಗ, ದಟ್ಟವಾದ ಮಂಜಿನಲ್ಲಿ ದಾರಿ ತಪ್ಪಿದರು. ಕೃಷ್ಣ ರೆಡ್ಡಿ ತಮ್ಮ ಊರಿನಲ್ಲಿ ವೈಎಸ್‌ಆರ್‌ಸಿಪಿ ವಾರ್ಡ್ ಸದಸ್ಯರಾಗಿದ್ದರು.
