ಪ್ರವಾಸ ಕಥನ – Peepal Media

ಮಟ್ಟಂಚೇರಿ ಅರಮನೆಯ ಮುರಾಲ್‌ ಚಿತ್ರಕಲೆ
ಕೇರಳದ ಕೊಚ್ಚಿಯ ಮಟ್ಟಂಚೇರಿ ಬೀದಿಗಳಲ್ಲಿ ಅಲೆದಾಡುವುದು ಎಂದರೆ ಚರಿತ್ರೆಯ ಕಡೆಗೆ ಚಲಿಸಿದಂತೆ. ವಸಾಹತು ಕಾಲದ ಕಟ್ಟಡಗಳು, ರಸ್ತೆಗಳು, ಅಂಗಡಿಗಳು, ಎಲ್ಲವೂ ಒಂದೊಂದು ಕತೆಯನ್ನು ಹೇಳುತ್ತವೆ. ವರ್ತಮಾನವನ್ನು ಬಿಟ್ಟು ಆಗಿಹೋಗಿರುವ ಕಾಲದ ಕಡೆಗೆ ಹಿಂತುರಿಗಿ ನೋಡುವಂತೆ ಮಾಡುತ್ತವೆ.

ಕೊಚ್ಚಿಯ ರಾಜರ ರಾಜಧಾನಿಯಾಗಿದ್ದ ಈ ಪಟ್ಟಣದಲ್ಲಿ ಡಚ್ಚರ ಅರಮನೆಯೊಂದಿದೆ. ಇದನ್ನು 1557 ರಲ್ಲಿ ಪೋರ್ಷುಗೀಸರು ನಿರ್ಮಿಸಿದರು. ಡಚ್ಚರು ಇದಕ್ಕೆ ಪುನರುಜ್ಜೀವ ನೀಡಿದರು. ಸದ್ಯ ಸಂರಕ್ಷಿಸಲ್ಪಟ್ಟ ಕಟ್ಟೋಣವಾಗಿರುವ ಈ 500 ವರ್ಷಗಳ ಹಳೆಯ ಅರಮನೆಯಲ್ಲಿ, ಅರಮನೆಯಷ್ಟೇ ಹಳೆಯದಾದ ಮುರಾಲ್‌ ಪೈಂಟಿಂಗ್‌ಗಳಿವೆ. ಈ ಅರಮನೆ ಈ ಚಿತ್ರಕಲೆಗಾಗಿಯೇ ಹೆಸರುವಾಸಿ.

ರಾಜ ವೀರ ಕೇರಳ ವರ್ಮನನ್ನು ಮೆಚ್ಚಿಸಲು ಈ ಅರಮನೆಯನ್ನು ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಪೋರ್ಚುಗೀಸರು ಸುತ್ತಮುತ್ತಲಿನ ಶಿವ ದೇವಾಲಯವನ್ನು ಲೂಟಿ ಮಾಡಿದಾಗ ರಾಜ ಕೋಪಗೊಂಡಿದ್ದ.  ಪೋರ್ಚುಗೀಸರು ರಾಜನಿಗೆ ಈ ಅರಮನೆಯನ್ನು ಉಡುಗೊರೆಯಾಗಿ ನೀಡಿದ ನಂತರ, ಇದು ಕೊಚ್ಚಿನ್ ರಾಜಮನೆತನದ ನಿವಾಸವಾಯಿತು.

ಡಚ್ಚರು ಕೊಚ್ಚಿಯನ್ನು ಆಳುತ್ತಿದ್ದಾಗ ನವೀಕರಿಸಿದ ಕಟ್ಟಡಕ್ಕೆ ಡಚ್ ಅರಮನೆ ಎಂಬ ಹೆಸರು ಬಂದಿತು. ಆಗಲೂ ಅರಮನೆಯು ಮಹಾಕಾವ್ಯ ರಾಮಾಯಣದ ಕಥೆಗಳನ್ನು ಹೇಳುವ ಭಿತ್ತಿಚಿತ್ರಗಳನ್ನು ಸಂರಕ್ಷಿಸಲಾಗಿದೆ. ಅರಮನೆಯಲ್ಲಿನ ಎಲ್ಲಾ ಪೈಂಟಿಂಗ್‌ಗಳು ಬೇರೆ ಬೇರೆ ಕಾಲದಲ್ಲಿ ರಚಿಸಲ್ಪಟ್ಟಿವೆ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಪಟ್ಟಾಭಿಷೇಕ ಸಭಾಂಗಣದಲ್ಲಿ ಇರುವ ರಾಮಾಯಣದ ಪೈಂಟಿಂಗ್ ಇಡೀ ಕೊಟ್ಟಾರದಲ್ಲಿರುವ ಅತ್ಯಂತ ಸುಂದರ ಕಲಾಕೃತಿಗಳಲ್ಲಿ ಒಂದು.

ಪ್ರತಿಯೊಂದು ಕಥೆ ಮತ್ತು ಪಾತ್ರವನ್ನು ಮೊದಲ ಬಾರಿಗೆ ನೋಡಿದಾಗ ಅದನ್ನು ಅರ್ಥೈಸಲು ಕಷ್ಟವಾಗಿದ್ದರೂ, ಈ ಕೃತಿಗಳು ‘ಮಣಿಮಾಲಾ’ ಎಂಬ ಒಗಟಿನ ಮಾದರಿಯನ್ನು ಅನುಸರಿಸುತ್ತವೆ. ಮಗುವಿಗೆ ಜನ್ಮ ನೀಡುವ ಮಹಿಳೆಯನ್ನು ಚಿತ್ರಿಸಿದ ಏಕೈಕ ಮುರಾಲ್ ಕೃತಿಗಳಲ್ಲಿ ಇದೂ ಒಂದು. ಇದರಲ್ಲಿ ರಾಮ ಮತ್ತು ಅವನ ಸಹೋದರರ ಜನನವನ್ನು ಚಿತ್ರಿಸಲಾಗಿದೆ.

ಅಯೋಧ್ಯೆಯ ರಾಜ ರಾಮನು ಜನಕನನ್ನು ಭೇಟಿಯಾಗಿ ಸೀತೆಯನ್ನು ಮದುವೆಯಾಗುವುದು, ರಾಜ್ಯವನ್ನು ತೊರೆದು ವನವಾಸಕ್ಕೆ ಹೋಗುವುದು, ಶೂರ್ಪನಖಿಯ ಭವ್ಯ ಸೌಂದರ್ಯ, ರಾವಣ ಸೀತೆಯನ್ನು ಅಪಹರಿಸುವುದು ಮತ್ತು ಯುದ್ಧದ ಸಂಪೂರ್ಣ ಕಥನವನ್ನು ಪಟ್ಟಾಭಿಷೇಕ ಸಭಾಂಗಣದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಈ ಭಿತ್ತಿಚಿತ್ರಗಳನ್ನು ಯಾರು ಚಿತ್ರಿಸಿದ್ದಾರೆ ಅಥವಾ ಅದನ್ನು ಯಾವಾಗ ಮಾಡಲಾಗಿದೆ ಎಂದು ಯಾರಿಗೂ ತಿಳಿದಿಲ್ಲ.

ಈ ಪಾತ್ರಗಳನ್ನು ಪೂರ್ವ ನಿರ್ಧಾರಿತ ಲೆಕ್ಕಾಚಾರಗಳಲ್ಲಿ ರಚಿಸಲಾಗಿದೆ. ಮಾರೀಚ, ಶೂರ್ಪನಖಿಯಂತಹ ರಾಕ್ಷಸ ಪಾತ್ರಗಳನ್ನೂ ಭವ್ಯವಾಗಿ ಚಿತ್ರಿಸಲಾಗಿದೆ.

ಈ ಮುರಾಲ್‌ ಪೈಟಿಂಗ್‌ಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಲಾಗಿದೆ.  ಹಸಿರು ಬಣ್ಣವು ಇಂಡಿಗೋ ಸಸ್ಯದಿಂದ, ಕಪ್ಪು ಬಣ್ಣವನ್ನು ಎಳ್ಳನ್ನು ಸುಟ್ಟು ತಯಾರಿಸಲಾಗಿದೆ. ಕೆಂಪು ಮತ್ತು ಹಳದಿ ಬಣ್ಣಗಳು ವಿವಿಧ ರೀತಿಯ ಕಲ್ಲುಗಳಿಂದ ತಯಾರಿಸಲಾಗಿದೆ. ಈ ಕಲ್ಲುಗಳನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ನದಿಯ ಸುತ್ತಲಿನಿಂದ ಸಂಗ್ರಹಿಸಲಾಗಿದೆ ಎಂದು ನಂಬಲಾಗಿದೆ.

ಈ ಮ್ಯೂರಲ್ ಪೇಂಟಿಂಗ್‌ಗಳನ್ನು ‘ತ್ರಿಗುಣ’ ತತ್ವವನ್ನು ರಚಿಸಲಾಗಿದೆ: ರಜೋ ಗುಣ, ತಮೋ ಗುಣ ಮತ್ತು ಸಾತ್ವಿಕ ಗುಣ. ಪ್ರತಿಯೊಂದು ಬಣ್ಣವು ನಿರ್ದಿಷ್ಟ ಗುಣವನ್ನು ಪ್ರತಿನಿಧಿಸುತ್ತದೆ. ರಜೋ ಗುಣವನ್ನು ಹೊಂದಿರುವ ಪಾತ್ರಗಳಿಗೆ ಕೆಂಪು ಬಣ್ಣವನ್ನು ನೀಡಲಾಗುತ್ತದೆ, ಕೆಲವೊಮ್ಮೆ ಹಳದಿ ಮಿಶ್ರಿತ ಕೆಂಪು. ವೈಷ್ಣವ ಅಥವಾ ಸಾತ್ವಿಕ ಪಾತ್ರಗಳಿಗೆ ಹಸಿರು ಬಣ್ಣವನ್ನು ನೀಡಲಾಗಿದೆ. ತಮೋ ಗುಣ ಹೊಂದಿರುವ ಪಾತ್ರಗಳ ಶಾಂತ ಪಾತ್ರಗಳನ್ನು ಪ್ರತಿನಿಧಿಸಲು ಬಿಳಿ ಬಣ್ಣವನ್ನು ಬಳಸಲಾಗಿದೆ.

ಕೃಷ್ಣಲೀಲೆ, ತ್ರಿಪುಣಿತುರ ಅಪ್ಪನ್ (ವಿಷ್ಣು), ಶಿವನ ಕುಟುಂಬ, ಕೂಡಲ್ಮಾಣಿಕ್ಯ ಸ್ವಾಮಿ, ಕಾಳಿಂದಿ ಮರ್ದನ ಚಿತ್ರಗಳನ್ನು ಈ ಅರಮನೆಯಲ್ಲಿ ಕಾಣಬಹುದು.  ಮದನ ರಾಜ ಗೋಪಾಲನ್, ಪಾರ್ವತಿ ಚಮಯುಮ್, ಶಿವನ್ ಮೋಹಿನಿಯೊಂದಿಗೆ ಆಟವಾಡುವುದನ್ನು ನೋಡುತ್ತಿರುವ ಪಾರ್ವತಿಯ ಪೈಂಟಿಂಗ್‌ಗಳನ್ನು ಇಲ್ಲಿ ನೋಡಬಹುದು.

ಕಲಬುರಗಿಯಿಂದ ನಾಗಪುರದ ದೀಕ್ಷಾ ಭೂಮಿಗೆ …
ಮನುಷ್ಯನ ಜ್ಞಾನ ವೃದ್ಧಿಗಾಗಿ ಅನುಭವಸ್ಥ ಹಿರಿಯರು ಹೇಳಿದ ಮಾತೊಂದಿದೆ – ಕೋಶ ಓದು ದೇಶ ಸುತ್ತು . ಪರಿರ್ವಾಜಕರಾಗಿ ದೇಶ ಸಂಚರಿಸುವ ವ್ಯಕ್ತಿಯ ಜ್ಞಾನದ ಆಳ-ಅಗಲ ನಿತ್ಯ ವಿಸ್ತರಿಸುತ್ತಲೇ ಹೋಗುತ್ತದೆ. ಪಯಣದ ಉದ್ದಕ್ಕೂ ವಿವಿಧ ಸಾಮಾಜಿಕ ಹಿನ್ನೆಲೆಯ, ವಿವಿಧ ಸ್ತರಗಳ ಜನರ ಒಡನಾಟದ ಅನುಭವ, ವಿಭಿನ್ನ ಭಾಷೆ, ಪ್ರದೇಶ, ವೃತ್ತಿ, ಜೀವನ ಶೈಲಿ ಹೊಸ ಕಲಿಕೆಯನ್ನು ಮೂಡಿಸುತ್ತದೆ. ಈ ವಾಸ್ತವ ಸತ್ಯದ ಸಾಕ್ಷಾತ್ಕಾರಕ್ಕಾಗಿಯೇ ನಾವು ಪ್ರತಿವರ್ಷ ಕಲಬುರಗಿಯಿಂದ ನಾಗಪುರದ ದೀಕ್ಷಾ ಭೂಮಿಗೆ ಯಾತ್ರೆ ಕೈಗೊಳ್ಳುವ ಬುದ್ಧನೆಡೆಗೆ ಧಮ್ಮ ಸಂಪ್ರದಾಯವನ್ನು ಆರಂಭಿಸಿದ್ದೇವೆ. ಕಳೆದ ಹಲವು ವರ್ಷಗಳಂತೆ ನಾವು ಈ ವರ್ಷವೂ ಸುಮಾರು ಅರುವತ್ತು (60) ಜನರ ಒಂದು ತಂಡವನ್ನು ಕಟ್ಟಿಕೊಂಡು ದೀಕ್ಷಾ ಭೂಮಿಯ ದರ್ಶನಕ್ಕೆ ತೆರಳಿದ್ದೆವು.

ಡಾ. ಬಿ. ಆರ್. ಅಂಬೇಡ್ಕರ್ ಅವರು 1956 ಅಕ್ಟೋಬರ್ 14 ರಂದು ಲಕ್ಷಾಂತರ ಜನರೊಂದಿಗೆ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧಮ್ಮವನ್ನು ಸ್ವೀಕರಿಸಿದ್ದ ನೆಲವೇ ದೀಕ್ಷಾ ಭೂಮಿ. ಇದೊಂದು ಚರಿತ್ರಾರ್ಹ ದಿನ ಅಗಿರುವಂತೆಯೇ ಈ ದೀಕ್ಷಾ ಭೂಮಿ ಪವಿತ್ರ ಸ್ಥಳವೂ ಆಗಿದೆ. ಅಕ್ಟೋಬರ್ 14 ದಲಿತ ಶೋಷಿತ, ತುಳಿತಕ್ಕೆ ಒಳಗಾದ ಅಳಿವಿನಂಚಿನ ಜನರ ಪಾಲಿಗೆ ಬಿಡುಗಡೆಯ ದಿನ. ಬಾಬಾ ಸಾಹೇಬರು ಜನ್ಮತಃ ಅಸ್ಪೃಶ್ಯತೆಯ ದೌರ್ಜನ್ಯಗಳಿಗೆ ತುತ್ತಾಗುತ್ತಲೇ ಬಂದವರು. ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಯ ನೋವುಗಳನ್ನು ಸ್ವಾನುಭವದಿಂದಲೇ ಅರಿತಿದ್ದ ಬಾಬಾ ಸಾಹೇಬರು ಭಾರತದಲ್ಲಿನ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯಂತಹ ಕೆಟ್ಟ ರೂಢಿ ಆಚರಣೆಗಳನ್ನು ನಿವಾರಿಸಲು ಅವಿರತ ಹೋರಾಟ ಮಾಡಿದ್ದರು. ಬಾಬಾ ಸಾಹೇಬರು ಹಿಂದು ಧರ್ಮದಲ್ಲಿನ ಕೊಳಕನ್ನೆಲ್ಲ ತೊಳೆದು ಪರಿಶುದ್ಧ ಮಾರ್ಗ ತೋರಲು ಸತತ ಪ್ರಯತ್ನ ಮಾಡಿದರು. ಸವರ್ಣೀಯ ಹಿಂದುಗಳ ಮನ ಪರಿವರ್ತನೆಗಾಗಿ ಅವಿರತವಾಗಿ ಶ್ರಮಿಸಿದರು. ಆದರೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗುಗಳು ಸಾಧಾರಣವಾದವುಗಳಲ್ಲ, ಅವು ಕ್ಯಾನ್ಸರ್ ಮತ್ತು ಏಡ್ಸ್‌ ಗಿಂತಲೂ ಭಯಾನಕ ವಾದವುಗಳು. ಅವುಗಳಿಗೆ ಔಷಧಿ ಕಂಡು ಹಿಡಿದು ಗುಣಪಡಿಸುವುದು ಬಹು ದೂರದ ವಿಚಾರ ಎಂದು ತಿಳಿದ ಬಾಬಾ ಸಾಹೇಬರು ಹಿಂದು ಧರ್ಮದ ಸಂಕೋಲೆಗಳಿಂದ ಬಿಡಿಸಿ ಕೊಂಡು ಬೌದ್ಧ ಧರ್ಮದಂತಹ ಸರ್ವ ಸಮಾನತೆಯ ತರ್ಕಬದ್ಧ ಮಹಾನ್ ಧಮ್ಮವನ್ನು ಅಪ್ಪಿಕೊಳ್ಳಲು ನಿರ್ಧರಿಸಿದರು. ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ ಎಂದು ಬಾಬಾ ಸಾಹೇಬರು  ಪ್ರತಿಜ್ಞೆ ಮಾಡಿ 1956 ರ ಅಕ್ಟೋಬರ್ 14 ರಂದು ನಾಗಪುರದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಹಿಂದೂ ಧರ್ಮವನ್ನು ಧಿಕ್ಕರಿಸಿ ಬೌದ್ಧ ಧಮ್ಮ ಪಡೆದು ಕೊಂಡರು. ಅದೊಂದು ಪ್ರಪಂಚದ ಚರಿತ್ರೆಯಲ್ಲಿಯೇ ಐತಿಹಾಸಿಕ ದಿನ. ಯಾವ ಕಾಲದಲ್ಲೂ, ಯಾವ ದೇಶದಲ್ಲಿಯೂ ಅಷ್ಟೊಂದು ಜನರು ಏಕಕಾಲದಲ್ಲಿಯೇ ಒಂದು ಧರ್ಮವನ್ನು ಸ್ವೀಕರಿಸಿದ ನಿದರ್ಶನ ಮತ್ತೆಲ್ಲಿಯೂ ದೊರೆಯದು.

ಅಶ್ವಿನಿ ಮದನಕರ

ಇಂತಹ ಒಂದು ಮಹತ್ವದ ದೀಕ್ಷಾ ಭೂಮಿಯನ್ನು ನೋಡುವ ಭಾಗ್ಯದಿಂದ ಯಾರೂ ವಂಚಿತರಾಗಬಾರದು ಮತ್ತು ವಿಮೋಚನೆಯ ದಾರಿ ಹಿಡಿಯಲು ದೀಕ್ಷಾ ಭೂಮಿ ನಡೆಯಿಂದ ಸಾಧ್ಯವೆಂದು ಅರಿತು ಈ ಸಲ ಅತಿ ಹೆಚ್ಚು ಮಹಿಳೆಯರು ಭಾಗಿಯಾಗಬೇಕು ಎಂದು ಮಹಿಳಾ ತಂಡಗಳನ್ನು ತಯಾರಿ ಮಾಡಿ ನಾಗಪುರಕ್ಕೆ ಪ್ರಯಾಣ ಬೆಳೆಸಿದೆವು. ಬಹಳ ನೋವಿನ ವಿಚಾರ ಏನೆಂದರೆ ನಾಗಪುರಕ್ಕೆ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ವಿಫಲವಾಗಿದ್ದು. ಅರ್ಜಿ ಹಾಕಿದ ಎಲ್ಲ ಮಹಿಳೆಯರಿಗೆ ಕೆಂಪು ಬಸ್ಸುಗಳಿಗೆ ಹೋಗಬೇಕೆಂದು ಮಾರ್ಗಸೂಚಿ ನೀಡಿ ಉಳಿದವರಿಗೆ ರಾಜಹಂಸ ಬಸ್ಸುಗಳನ್ನು ಮಾಡಿದರು. ಬುದ್ಧ ಭೂಮಿಗೆ ಹೊರಟ ಮಹಿಳೆಯರು ಬುದ್ಧ ಹೇಳಿದಂತೆ ʼಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬೇಡಿʼ ಎಂಬಂತೆ ನಮಗೆ ಕೆಂಪು ಬಸ್ಸಿನಲ್ಲಿ ಪ್ರಯಾಣ ಮಾಡಲು ಆಗಲ್ಲ ನಮಗೂ ರಾಜಹಂಸ ಬಸ್ಸುಗಳೆ ಬೇಕು ಎಂದು ಪಟ್ಟು ಹಿಡಿದು ಕುಳಿತು ಕೊನೆಗೆ ರಾಜಹಂಸ ಬಸ್ಸಿನಲ್ಲಿಯೇ ಪ್ರಯಾಣ ಬೆಳೆಸಿದೆವು.

ಬಸ್ಸಿನಲ್ಲಿ ಪ್ರಾರಂಭಿಸಿದ ಭಜನಾ ಹಾಡುಗಳು ದೀಕ್ಷಾ ಭೂಮಿಯವರೆಗೂ ಮೊಳಗಿದವು. ಹಾಡುಗಾರರಾದ ಚಂದ್ರಭಾಗಮ್ಮ, ಮರೆಮ್ಮ, ಭಾಗಮ್ಮ, ಭೀಮಬಾಯಿ, ನಾಗಮ್ಮ, ರತ್ನಮ್ಮ, ಪಾರ್ವತಿ, ದೇವಮ್ಮ, ಹೀಗೆ ಅನೇಕ ಮಹಿಳೆಯರೊಂದಿಗೆ  ಬುದ್ಧ-ಬಾಬಾಸಾಹೇಬರ ಹಾಡುಗಳನ್ನು ಹಾಡುತ್ತ ನಾಗಪುರ ತಲುಪಿದೆವು. ನಮೋ ಬುದ್ಧ ಭಗವಂತ ಸಂವಿಧಾನ ಪೀತಾ ಹಾಡಿನೊಂದಿಗೆ ಪ್ರಾರಂಭವಾಗಿ ಓಂ ಜೈಭೀಮ್ ದೇವರ ಜಗವೆಲ್ಲ ಉದ್ಧಾರ, ಬಾಂಬೆ ದಾದರ ಬಾಬಾನ ಮಂದಿರ ಜೈ ಭೀಮಾ ದೇವರ.. ನಮ್ ದೇವರ ಜೈ ಭೀಮಾ ದೇವರ. ನಾಗಪುರಕ್ಕ ನಡಿಯಿರಿ ಧಮ್ಮದೀಕ್ಷಾ ಪಡೆಯರಿ ಜೈ ಭೀಮಾ ದೇವರ ನಮ್ ದೇವರ ಜೈ ಭೀಮಾ ದೇವರ. ನಾಗಪುರಕ್ಕೆ ಹೋಗಿ ದೀಕ್ಷಾ ಪಡೆಯಬೇಕು ಬೌದ್ಧ ಧಮ್ಮವನ್ನು ಸ್ವೀಕರಿಸಿ ಬಾಬಾಸಾಹೇಬರ ದಾರಿಯಲ್ಲಿ ಸಾಗೋಣ ಎಂಬ ಪ್ರಬುದ್ಧತೆಯ ಹಾಡು ಇದಾಗಿತ್ತು. ಇನ್ನೊಂದು ಹಾಡು ಬಹಳ ಮಹತ್ವದ ಸಂದೇಶ ಸಾರುವ ಹಾಡು ನಾರಿ ಅದಾಲತೆ. ಹೆಣ್ಣಾ ಹುಟ್ಟಿದರೇನು ಗಂಡಾ ಹುಟ್ಟಿದರೇನು ಹೆರಗಿಗೊಂಬತ್ತ ತಿಂಗಳರೆವ್ವ ನಾರಿ ಅದಾಲತೆ…. ಸರಿಯಾಗಿ ನಡ್ಸ ನಾರಿ ಭಾರತ ದೇಸ. ಈ ಹಾಡಿನಲ್ಲಿ ಸಮಾನತೆಯನ್ನು ಸಾರುವ ಸಂದೇಶವಿದೆ. ಭಾರತ ದೇಶವನ್ನು ನಡೆಸುವವರು ನಾರಿಯರು. ಬಾಬಾಸಾಹೇಬರು ಈ ದೇಶವನ್ನು ನಡೆಸುವ ಕಾನೂನನ್ನು ನಾರಿಯರ ಕೈಯೊಳಗೆ ಕೊಟ್ಟಿದ್ದಾರೆ ಎಂಬ ಅರ್ಥಪೂರ್ಣ ಹಾಡುಗಳನ್ನು ಹಾಡುತ್ತ ಮೆಲ್ಲಗ ಮೆಲ್ಲಗ ನಡಿ ಬಾಯಲಿ ಜೈ ಭೀಮ ಜೈ ಭೀಮ ನುಡಿ ಎಂದು ನಾಗಪುರದ ದೀಕ್ಷಾ ಭೂಮಿಗೆ ಬಂದು ತಲುಪಿದೆವು.

ರಾತ್ರಿ ದೀಕ್ಷಾ ಭೂಮಿಯಲ್ಲಿ ಮಲಗಿದ್ದ ಲಕ್ಷಾಂತರ ಜನರನ್ನು ನೋಡಿ ಮೈ ರೋಮಾಂಚನವಾಯಿತು. ಇಲ್ಲಿ ಯಾರು ಕುರಿ, ಕೋಳಿ ಕೊಯ್ದಿಲ್ಲ, ಹರಕೆ ಹೊತ್ತಿಲ್ಲ, ಒಂದು ಗಿಡಗಳಿಗೂ ನಿಂಬೆಹಣ್ಣು ಚಿಂದಿ ಬಟ್ಟೆ ಕಟ್ಟಿಲ್ಲ, ಕಾಯಿ ಇಲ್ಲ ಕರ್ಪೂರ ಇಲ್ಲ ಆದ್ರೂ ಲಕ್ಷಾಂತರ ಜನ ಕೊರೆವ ಛಳಿಯಲ್ಲಿ ದೀಕ್ಷಾ ಭೂಮಿಯ ಮೈದಾನದಲ್ಲಿ ಹಾಸಿಗೆಗಳಿಲ್ಲದೆ ನೆಲದ ಮೇಲೆ ಮಲಗಿದ್ದರು. ನಾನು ನಮ್ಮ ಮಹಿಳೆಯರಿಗೆ ಕೇಳಿದೆ- ಬೌದ್ಧ ಅನುಯಾಯಿಗಳು ನಿಮಗೆ ಇರಲು ನಿವಾಸಗಳ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ರಾತ್ರಿ ಮಲಗಿ ಬೆಳಿಗ್ಗೆ ಬಂದು ದರ್ಶನ ಪಡೆಯ ಬಹುದಿತ್ತಲ್ಲ? ಎಂದು. ದಿನಾ ರಾತ್ರಿ ಮನೆಯಲ್ಲಿ ಬೆಚ್ಚಗೆ ಮಲಗುತ್ತೇವೆ ಆದರೆ ಇಂದು ನಮ್ಮ ಜೀವನದ ಸಾರ್ಥಕತೆಯ ದಿನ. ಈ ನೆಲ ಬಾಬಾ ಸಾಹೇಬರು ಸ್ಪರ್ಶ ಮಾಡಿದ ನೆಲ. ಬಾಬಾರ ಪಾದದ ಧೂಳು ನಮ್ಮನ್ನು ಸ್ಪರ್ಶಿಸಿ ನಮ್ಮ ಬದುಕು ಸಾರ್ಥಕವಾಗಲೆಂದು ನಾವು ನೆಲದ ಮೇಲೆ ಮಲಗಿದ್ದೇವೆ ಎಂದರು ಅವರು. ಮಡಿ ಮೈಲಿಗೆ ಇಲ್ಲದ ಮನಸ್ಸನ್ನು ಶುದ್ಧಗೊಳಿಸುವ ಬುದ್ಧನ ತಾಣದಲ್ಲಿ ಎಲ್ಲರೂ ಸಮಾನವಾಗಿ ಸಾಲಿನಲ್ಲಿ ನಡೆದು ದೀಕ್ಷಾಭೂಮಿಯ ದರ್ಶನ ಪಡೆದರು. ಇಷ್ಟು ದಿನ ಗುಡಿಗುಂಡಾರಗಳನ್ನೆ ಓಡಾಡಿದ ಮಹಿಳೆಯರು ಮೊದಲ ಬಾರಿ ಬುದ್ಧನ ಈ ಐತಿಹಾಸಿಕ ಸ್ಥಳ ನೋಡಿ ಬೆರಗಾದರು ಮತ್ತು ಮನಸ್ಸಿನೊಳಗೆ ಆನಂದ ಪಟ್ಟರು. ನಮ್ಮ ಪರಂಪರೆಯು ಇಷ್ಟೊಂದು ಮಹತ್ತರವಾಗಿದೆ. ಬಂದವರೆಲ್ಲ ಬುದ್ಧನ ಮೂರ್ತಿಗಳನ್ನು ಖರೀದಿಸಿ ಕೂಸಿನಂತೆ ಕಂಕುಳಲ್ಲಿ ಇಟ್ಟುಕೊಂಡು ಬಸ್ಸು ಹತ್ತಿದರು. ಅದಕ್ಕೆ ಹಿರಿಯರು ಹೇಳಿದ್ದು ಕೋಶ ಓದು ದೇಶ ಸುತ್ತು ಎಂದು.

ಅಶ್ವಿನಿ ಮದನಕರ, ಕಲಬುರಗಿ

ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತೆ

ಮೊ. 7090565419

ಇದನ್ನೂ ಓದಿ-ಅಂಬೇಡ್ಕರರ ಚಿಂತನೆಗಳ ಹಿನ್ನೆಲೆಯಲ್ಲಿ ಮಹಿಷಾಸುರ ಮತ್ತು ಮಹಿಷಮರ್ದಿನಿ

ಅಂಡಮಾನ್‌ ಡೈರಿ – 4 |ಸೃಜನಶೀಲ ವಿನಾಶ ವಿನಾಶಕಾರಿ ಸೃಜನಶೀಲತೆ
ಹಿಂದಿನ ಮೂರು ಭಾಗಗಳಲ್ಲಿ ಕೇವಲ  ಮಹಿಳೆಯರ ಅನುಭವಕ್ಕೆ  ನನ್ನ ಬರಹ ಸೀಮಿತವಾಗಿತ್ತು. ಈ ನಾಲ್ಕನೆಯ ಹಾಗೂ ಅಂತಿಮ ಭಾಗದಲ್ಲಿ  ಅಂಡಮಾನ್‌ ನಲ್ಲಿ ಅಭಿವೃದ್ಧಿಯ ಕಲ್ಪನೆ ರೂಪುಗೊಂಡ ಬಗ್ಗೆ  ಮತ್ತು ಅದು ತಂದ ಪರಿವರ್ತನೆಯ ಬಗ್ಗೆ  ಈ ದ್ವೀಪ ಯಾವೆಲ್ಲ ಪ್ರಶ್ನೆಗಳನ್ನು ನನ್ನ ಮುಂದೆ ಇಟ್ಟಿತು ಎಂಬುದನ್ನು ಹಂಚಿಕೊಳ್ಳುತ್ತಿದ್ದೇನೆ – ರಾಜಲಕ್ಷ್ಮಿ ಎನ್‌ ಕೆ.

ಶ್ರೀಲಂಕಾ, ಬಾಲಿ ಯಂತಹ ದ್ವೀಪಗಳ ಪ್ರವಾಸದ  ಅನುಭವದ ಹಿನ್ನೆಲೆಯಲ್ಲಿ ನನಗೆ ಅಂಡಮಾನ್ ದ್ವೀಪದ ಪ್ರವಾಸದ ಬಗ್ಗೆ ಕುತೂಹಲವಿತ್ತು. ನನಗೆ ತಿಳಿದಂತೆ ಪ್ರತಿಯೊಂದು ದ್ವೀಪವು ತನ್ನದೇ ಆದ ವಿಭಿನ್ನತೆಯನ್ನು ಹೊಂದಿದ್ದುಅಲ್ಲಿಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸರ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ.   ಶ್ರೀಲಂಕಾ ಪ್ರವಾಸದಲ್ಲಿ ದಕ್ಕಿದ ಎಲ್ಲ ಅನುಭವಗಳನ್ನೂ ಮೀರಿ ಕನಸುಕಂಗಳ ಸಿಪಾಯಿಗಳು ತಮ್ಮ ಅಮೂಲ್ಯವಾದ ಕ್ಷಣಗಳನ್ನು ಒಂದು ಸೇತುವೆಯನ್ನು ಕಾವಲು ಕಾಯುವುದರಲ್ಲಿ ಕಳೆಯುತ್ತಿದ್ದಾರೆ ಎಂಬ ವಿಷಾದದ ಛಾಯೆ ಉಳಿದೆಲ್ಲ ಸವಿ ನೆನಪುಗಳನ್ನು ಹತ್ತಿಕ್ಕಿ ಉಳಿದುಬಿಟ್ಟಿತು. ಇಂಡೋನೇಷ್ಯಾದ ಬಾಲಿ ದ್ವೀಪವು ತನ್ನ ಹಲವು ಮಜಲುಗಳನ್ನು ತೆರೆದಿಟ್ಟು ಒಂದು ರಮ್ಯ  ಕಲ್ಪನೆಯಾಗಿ ಉಳಿಯಿತು. ಅಲ್ಲಿನ ಜನರು ಎದುರಿಸುವ ಜ್ವಾಲಾಮುಖಿಯಾಗಲಿ, ಚಂಡಮಾರುತವಾಗಲಿ, ಅದರಿಂದ ಉಂಟಾಗುವ ಕಷ್ಟ ನಷ್ಟಗಳಾಗಲಿ ಕಾಣಬರದೆ ಪ್ರಕೃತಿ ಸೌಂದರ್ಯ ಹಾಗೂ ಸಾಂಸ್ಕೃತಿಕ ಗಾಢತೆಯೊಂದಿಗೆ ದಕ್ಕಿದ ಅನುಭವ ಅಪೂರ್ವ. ಅಂಡಮಾನ್ ಪ್ರವಾಸದಲ್ಲಿ  ಪ್ರಕೃತಿ ಸೌಂದರ್ಯ ಹಾಗೂ ರಾಜಕೀಯ ಕೈದಿಗಳು ಅನುಭವಿಸಿದ ನೋವುಗಳ ಚಿತ್ರಣ ನನ್ನ ಅನುಭವಕ್ಕೆ ಬರಬಹುದು ಎಂದು ಅಂದುಕೊಂಡಿದ್ದೆ… ಆದರೆ ಇದರೊಂದಿಗೆ ಅಲ್ಲಿನ ಮಣ್ಣು ನನಗೆ ಬೇರೊಂದು ಪ್ರಪಂಚವನ್ನೇ ತೆರೆದಿಟ್ಟಿತು. ಅಲ್ಲಿನ ಗಾಳಿ, ಮಣ್ಣು, ಕಡಲ ತೆರೆಗಳು ಸಾಕಷ್ಟು ಕಥೆಗಳನ್ನು ನನ್ನ ಮುಂದಿಟ್ಟ ಅನುಭವ. ಹಿಂದಿನ ಮೂರು ಭಾಗಗಳಲ್ಲಿ ಕೇವಲ  ಮಹಿಳೆಯರ ಅನುಭವಕ್ಕೆ ಸೀಮಿತವಾಗಿತ್ತು ನನ್ನ ಬರಹ. ಈ ನಾಲ್ಕನೆಯ ಹಾಗೂ ಅಂತಿಮ ಭಾಗದಲ್ಲಿ  ಅಂಡಮಾನ್‌ ನಲ್ಲಿ ಅಭಿವೃದ್ಧಿಯ ಕಲ್ಪನೆ ರೂಪುಗೊಂಡ ಬಗ್ಗೆ  ಮತ್ತು ಅದು ತಂದ ಪರಿವರ್ತನೆಯ ಬಗ್ಗೆ  ಈ ದ್ವೀಪ ಯಾವೆಲ್ಲ ಪ್ರಶ್ನೆಗಳನ್ನು ನನ್ನ ಮುಂದೆ ಇಟ್ಟಿತು ಎಂಬುದನ್ನು ಹಂಚಿಕೊಳ್ಳುತ್ತಿದ್ದೇನೆ.  ಇಲ್ಲಿ ಪ್ರಕೃತಿ ಸೌಂದರ್ಯಕ್ಕೇನು ಕೊರತೆ ಇಲ್ಲ. ಆತ್ಮೀಯ ಸಂವಾದಕ್ಕೂ ಬಡತನವಿಲ್ಲ. ಪೋರ್ಟ್ ಬ್ಲೇರ್ ನ ವಿಮಾನ ನಿಲ್ದಾಣದಲ್ಲಿ ಕಾಲಿಟ್ಟ ಕ್ಷಣದಿಂದ ಹಿಂತಿರುಗಿ ಬಂದ ನಂತರವೂ ನನ್ನನ್ನು ಕಾಡಿದ್ದು ಈ ಮಣ್ಣಿನ ಮಕ್ಕಳ ಮುಗ್ಧತೆ, ಸಹಜತೆ, ಜೊತೆಗೆ ಅವರ ದಣಿವರಿಯದ ಶ್ರಮಭರಿತ  ಜೀವನ.

ಪ್ರತಿಯೊಂದು ಸಮಾಜವು ಕಾಲಾನುಕಾಲಕ್ಕೆ ಬದಲಾವಣೆಯನ್ನು ಕಾಣುತ್ತದೆ. ಸಮುದಾಯಗಳ ಸಾರ್ವಜನಿಕ ಬದುಕಾದ ಸಮಾಜ ಸದಾ  ಚಲನಶೀಲವಾಗಿರುತ್ತದೆ. ಚಲನಶೀಲತೆಯು ಕೆಲವೊಮ್ಮೆ  ತ್ವರಿತ ಕೆಲವೊಮ್ಮೆ ನಿಧಾನಗತಿಯಲ್ಲಿ ಇರುತ್ತದೆ. ಈ ಚಲನಶೀಲತೆಯ ಫಲವನ್ನು ಸಾಮಾನ್ಯವಾಗಿ ಪ್ರಗತಿಯೆಂದು, ಅಭಿವೃದ್ಧಿಯೆಂದು ಗುರುತಿಸುತ್ತೇವೆ. ಉದಾಹರಣೆಗೆ ಕಾಡಾಡಿಗಳಾಗಿದ್ದ ಜನರು ನಾಡಾಡಿಗಳಾಗಿ ಬೀಡಾಡಿಗಳಾಗಿ ಬದಲಾದದ್ದು ಮನುಕುಲದ ಚರಿತ್ರೆಯಲ್ಲಿ ಪ್ರಗತಿ ಎಂದು ಗುರುತಿಸಲ್ಪಟ್ಟಿದೆ. ಯಾವುದೇ ದೇಶದ, ಪ್ರದೇಶದ ಪ್ರಗತಿಯಲ್ಲಿ ನಾವು ಗಮನಿಸಬಹುದಾದ ಗುಣವೆಂದರೆ ಹೊಸತನ್ನು ಪಡೆಯುವಾಗ ಕೆಲವು ಹಳತನ್ನು ಕಳೆದುಕೊಳ್ಳಬೇಕಾಗುವುದು. ಇದನ್ನು ಸೃಜನಶೀಲ ವಿನಾಶವೆಂದೂ ವಿನಾಶಕಾರಿ ಸೃಜನಶೀಲತೆ ಎಂದೂ ಹೇಳಬಹುದು. ಪ್ರಗತಿ ಹಾಗೂ ಅಭಿವೃದ್ಧಿಯ ಈ ಕಲ್ಪನೆಯೊಂದಿಗೆ ಅಂಡಮಾನ್ ಪ್ರವೇಶಿಸಿದ ನನಗೆ ಅಲ್ಲಿನ ಜನತೆ ಅಭಿವೃದ್ಧಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸಿದರು.

ಅಂಡಮಾನ್ ದ್ವೀಪದ ಮೂಲ ನಿವಾಸಿಗಳು ಮೂಲತಃ ಬೇಟೆಗಾರರು.  ಬೇಟೆಯಾಡಿದ ಪ್ರಾಣಿಗಳು, ಕಾಡಿನಲ್ಲಿ ದೊರೆಯುವ ಗೆಡ್ಡೆಗೆಣಸು ಹಣ್ಣು ಹಂಪಲುಗಳನ್ನು ಆಹಾರವಾಗಿ ಸೇವಿಸುತ್ತಿದ್ದರು. ಇಲ್ಲಿನ ಮೂಲ ನಿವಾಸಿಗಳನ್ನು ನಾಲ್ಕು ಪಂಗಡಗಳಾಗಿ  ಗ್ರೇಟ್ ಅಂಡಮಾನೀಸ್, ಆಂಜೆ, ಜಾರವ ಮತ್ತು ಸೆಂಟಿನಲ್ಸ್ ಎಂದು ಗುರುತಿಸಲ್ಪಟ್ಟಿರುತ್ತಾರೆ. ಇವರು  ಇಂದಿಗೂ ಇಲ್ಲಿನ ಕೆಲವು ದ್ವೀಪಗಳಲ್ಲಿ ವಾಸಿಸುತ್ತಿದ್ದಾರೆ. ಈ ಮೂಲ ನಿವಾಸಿಗಳು ಸುಮಾರು 60 ಸಾವಿರ ವರ್ಷಗಳ ಹಿಂದೆ ಆಫ್ರಿಕಾದ ದ್ವೀಪಗಳಿಂದ ಇಲ್ಲಿಗೆ ಬಂದಿರಬಹುದು ಎಂದು ಊಹಿಸಲಾಗಿದೆ. ಗ್ರೇಟ್ ಅಂಡಾಮಾನೀಸ್ ಪಂಗಡದಲ್ಲಿ ಒಂದು ಕಾಲದಲ್ಲಿ 10 ಒಳಪಂಗಡಗಳಿದ್ದು ಆ ಎಲ್ಲಾ ಪಂಗಡದವರು ಅವರದ್ದೇ ಆದ ಭಾಷೆಯನ್ನು ಬಳಸುತ್ತಿದ್ದರು. ಆದರೆ ಇಂದು ಅವರ ಎರಡು ಒಳಪಂಗಡಗಳು ಮಾತ್ರ ಅಸ್ತಿತ್ವದಲ್ಲಿವೆ. 18ನೇ ಶತಮಾನದ ಕೊನೆಯವರೆಗೂ ಈ ಜನರು ಪ್ರಪಂಚದ ಇತರರೊಡನೆ ಸಂಪರ್ಕ ಇಟ್ಟುಕೊಳ್ಳಲು ಬಯಸಲಿಲ್ಲ. ಅವಘಡಕ್ಕೆ ಈಡಾದ ಹಡಗಿನ ಪಯಣಿಗರು ಅಕಸ್ಮಾತ್ತಾಗಿ  ಇವರು ವಾಸಿಸುವ ದ್ವೀಪಕ್ಕೆ ಬಂದರೆ  ಅವರನ್ನು ಶತ್ರುಗಳೆಂದೇ ಪರಿಗಣಿಸುತ್ತಿದ್ದರು. ತಮ್ಮವರಲ್ಲದವರನ್ನು  ಹತ್ತಿರ ಬಿಟ್ಟು ಕೊಳ್ಳುತ್ತಿರಲಿಲ್ಲ.

18ನೇ ಶತಮಾನದ ಕೊನೆಯ ಭಾಗದಲ್ಲಿ  ಪ್ರಥಮ ಬಾರಿಗೆ  ಬ್ರಿಟಿಷರು ದ್ವೀಪವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಅಲ್ಲಿನ ಮೂಲ ನಿವಾಸಿಗಳ ಸಂಖ್ಯೆ  ಸುಮಾರು 5,000 ದಿಂದ 8,000ದಷ್ಟಿತ್ತು ಎಂದು ಹೇಳಲಾಗುತ್ತದೆ.  ಮೂಲ ನಿವಾಸಿಗಳು  ತಮ್ಮ ಬಿಲ್ಲು ಬಾಣಗಳ  ಶಕ್ತಿಯಿಂದ  ಯುಕ್ತಿಯಿಂದ  ಬ್ರಿಟಿಷರನ್ನು ಹೊಡೆದೋಡಿಸಿದರು. 1858ರಲ್ಲಿ  ಬ್ರಿಟಿಷರು  ಮರಳಿ ಯತ್ನವ ಮಾಡಿ   ಪೋರ್ಟ್ ಬ್ಲೇರನ್ನು  ವಶಪಡಿಸಿಕೊಳ್ಳುವಲ್ಲಿ  ಫಲಪ್ರದರಾದರು. ಅಬರ್ದೀನ್ ಕಾಳಗವೆಂದು ಕರೆಯಲ್ಪಡುವ  ಈ ಕದನದಲ್ಲಿ  ಮೂಲ ನಿವಾಸಿಗಳು  ದೊಡ್ಡ ಸಂಖ್ಯೆಯಲ್ಲಿ  ತಮ್ಮ ಯುವಜನರನ್ನು  ಕಳೆದುಕೊಂಡರು.  ಒಂದು ಗಣತಿಯ ಪ್ರಕಾರ  1901ರಲ್ಲಿ  ಕೇವಲ  625  ಮಂದಿ ಮಾತ್ರ ಉಳಿದರು. ಅವರ ಭಾಷೆಗಳು ಕೂಡ  ವಿನಾಶದಂಚಿಗಿಳಿದು ಈಗಿರುವ ಗ್ರೇಟ್ ಅಂಡಾಮಾನೀಸ್ ಹೆಚ್ಚಾಗಿ  ಹಿಂದಿ ಭಾಷೆಯನ್ನೇ ಅವಲಂಬಿಸಿದ್ದಾರೆ. ಆಂಜೆ ಪಂಗಡದವರು ಲಿಟಲ್ ಅಂಡಮಾನ್ ನಲ್ಲಿ ವಾಸಿಸುತ್ತಾರೆ. ಬ್ರಿಟಿಷ್ ವಸಾಹತೀಕರಣದ ಸಂದರ್ಭದಲ್ಲಿ  672 ಮಂದಿ ಇದ್ದವರು  1901ಕ್ಕಾಗುವಾಗ  92ಕ್ಕೆ ಇಳಿದರು.

ಭಾರತ ಸರ್ಕಾರವು ಮೂಲ ನಿವಾಸಿಗಳ ಶ್ರೇಯೋಭಿವೃದ್ಧಿಗೆ ಸತತವಾಗಿ ಶ್ರಮಿಸುತ್ತಲೇ ಬಂದಿದೆ. ಹಲವು ಯೋಜನೆಗಳನ್ನು ಹಾಕಿಕೊಂಡು ಮೂಲ ನಿವಾಸಿಗಳ ಬದುಕನ್ನು ಸುಧಾರಿಸುವ ಪ್ರಯತ್ನವನ್ನು ಮಾಡುತ್ತಿದೆ. ಸರಕಾರ ನೀಡುವ ಕೆಲವು ಸವಲತ್ತುಗಳನ್ನು ಆಂಜೆ ಗಳು ಬಳಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೃಷಿ ಹಾಗೂ ಕೋಳಿ ಸಾಗಣೆಯಲ್ಲಿ ತೊಡಗಿ ಕೊಂಡಿದ್ದಾರೆ. ಇತರರೊಂದಿಗೆ ಬೆರೆಯುವ ಪ್ರಯತ್ನವನ್ನು ಮಾಡಿದ್ದಾರೆ. ಇವರು ಪಕ್ಕಾ ಮನೆಗಳಲ್ಲಿ ವಾಸಿಸುತ್ತಾ ಸಣ್ಣ ದೋಣಿಗಳನ್ನು ನಿರ್ಮಿಸುತ್ತಾ ಮುಖ್ಯ ವಾಹಿನಿಯೊಂದಿಗೆ ಒಂದಾಗಿದ್ದಾರೆ. ಅವರಿಗಾಗಿ ಶಾಲೆಗಳನ್ನು ತೆರೆಯಲಾಗಿದೆ.   ಆದರೆ  ಇವರಿಗೆ ಇರುವ ದೊಡ್ಡ ದೌರ್ಬಲ್ಯವೆಂದರೆ  ಸಾರಾಯಿ ಸೇವನೆ.  ಇದರಿಂದ ಪ್ರಾಣ ಕಳೆದು ಕೊಂಡವರೂ ಇದ್ದಾರೆ. ಗ್ರೇಟ್ ಅಂಡಾಮನಿಸ್ ಹಾಗೂ  ಆಂಜೆ ಪಂಗಡದವರಿಗೂ  ಜಾರವ ಹಾಗೂ ಸೆಂಟಿನೆಲ್ಸ್ ಪಂಗಡದವರಿಗೂ ಬಹಳ ವ್ಯತ್ಯಾಸವಿದೆ. ಜಾರವರು 250 ರಿಂದ 400ರಷ್ಟು ಇದ್ದಾರೆ. ಅವರು ಹೊರಗಿನವರೊಂದಿಗೆ ಸ್ನೇಹಪರರಲ್ಲ. ಅವರು ಇಂದಿಗೂ  ತಮ್ಮವರಲ್ಲದವರನ್ನು  ಶತ್ರುಗಳಂತೆ ನೋಡುತ್ತಾರೆ. ಕಾಡು ಹಂದಿ, ಉಡ,  ಹಣ್ಣು,  ಗೆಡ್ಡೆ ಗೆಣಸು, ಜೇನು ಇವರ ಆಹಾರ. ವಸ್ತ್ರಧಾರಿಗಳಾಗದೆ  ನಗ್ನರಾಗಿರುವ ಇವರು  ಚಿಪ್ಪು ಹಾಗೂ ಎಲೆಗಳಿಂದ ಮಾಡಿದ ಆಭರಣಗಳನ್ನು ಧರಿಸುತ್ತಾರಾದರೂ  ಅದು ನಗ್ನತೆಯನ್ನು ಮುಚ್ಚಿಕೊಳ್ಳುವ ಉದ್ದೇಶದಿಂದಲ್ಲ.

6,000 ವರ್ಷಗಳ ಹಿಂದೆ  ಈ ಪ್ರದೇಶಕ್ಕೆ ಬಂದವರು  ಬಂದಾಗ  ಹೇಗಿದ್ದರೋ ಇಂದಿಗೂ ಅದೇ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಸೆಂಟಿನೆಲರು ಕೂಡ ಸ್ನೇಹಪರರಲ್ಲ. ಅವರು ಯಾರನ್ನು ಕೂಡ ತಮ್ಮ ಬಳಿ ಬಿಟ್ಟುಕೊಳ್ಳುವುದಿಲ್ಲ. ಸೆಂಟೇನಲ್ ದ್ವೀಪವಾಸಿಗಳಾದ ಇವರು ನೋಡಲು ಹೇಗಿದ್ದಾರೆ? ಒಟ್ಟು ಜನಸಂಖ್ಯೆ ಎಷ್ಟಿರಬಹುದು ? ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಸರಕಾರವು ಹಲವು ಬಾರಿ ಅವರಿಗೆ ಸಹಾಯ ನೀಡುವ ಪ್ರಯತ್ನ ನಡೆಸಿದರೂ ವಿಫಲವಾಗಿದೆ. ತಮ್ಮ ದ್ವೀಪದ ಸುತ್ತ ಯಾರನ್ನೇ ಕಂಡರೂ ಬಾಣಗಳ ಸುರಿಮಳೆಯನ್ನೇ ಸುರಿಸುತ್ತಾರೆ. 2006ರಲ್ಲಿ ಇಬ್ಬರು ಮೀನುಗಾರರು ಇವರ ಬಾಣದ ಸುಳಿಗೆ ಸಿಕ್ಕಿ ಹತರಾದರು. ಹೀಗೆ ಹತರಾದವರ ದೇಹ ಕೂಡ ಪಡೆಯಲು ಸಾಧ್ಯವಾಗಲಿಲ್ಲ.

ನಮಗೆಲ್ಲ ತಿಳಿದಿರುವಂತೆ ಮೂಲ ನಿವಾಸಿಗಳು ವಾಸವಿದ್ದ ಈ ಭೂ ಪ್ರದೇಶದಲ್ಲಿ ವಿವಿಧ ಕಾರಣಗಳಿಗಾಗಿ ವಿವಿಧ ಕಾಲಘಟ್ಟಗಳಲ್ಲಿ ಸ್ಥಳಾಂತರಗೊಂಡು ಬಂದ ಜನರು ಇಂದು ಅಂಡಮಾನ್ ಸ್ಥಳೀಯರು ಎಂದು ಗುರುತಿಸಲ್ಪಟ್ಟಿದ್ದಾರೆ. ಕೈದಿಗಳಾಗಿ ಬಂದವರು, ಉದ್ಯೋಗ ನಿಮಿತ್ತ ಬಂದವರು, ಬಾಂಗ್ಲಾದೇಶಿ ನಿರಾಶ್ರಿತರು ಹೀಗೆ ವಿಭಿನ್ನ ಉದ್ದೇಶ ಹಾಗೂ ಸಂಸ್ಕೃತಿಗಳಿಂದ ಬಂದು ಇಲ್ಲಿ ಒಟ್ಟಾಗಿ ಜೀವನ ನಡೆಸುತ್ತಿರುವ ಸಮೂಹ ಇದು.

ಸ್ಥಳೀಯ ನಿವಾಸಿಗಳು ಮೂಲ ನಿವಾಸಿಗಳ ಬಗ್ಗೆ ಪ್ರೀತಿ ಹಾಗೂ ಗೌರವದಿಂದ ಮಾತನಾಡುತ್ತಾರೆ. ನಮ್ಮೊಡನೆ ಮಾತಿಗಿಳಿದ ಟ್ಯಾಕ್ಸಿ ಚಾಲಕನೊಬ್ಬ ಅವನಿಗೆ ತಿಳಿದ ಕೆಲವು ಮಾಹಿತಿಗಳನ್ನು ಹಂಚಿಕೊಂಡ. ಅದರಲ್ಲಿ ಒಂದು ವಿದೇಶಿ  ಸಂಶೋಧನಾಕಾರನ ದುರಂತ. ಈ ಸಂಶೋಧನಾಕಾರ ಬಹುಶಃ ಮಾನವ ಶಾಸ್ತ್ರ ಸಂಶೋಧನಾಕಾರನಿರಬಹುದು. ಆತನಿಗೆ ಸೆಂಟಿನೆಲ್ ಪಂಗಡದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ. ಹಾಗಾಗಿ ಹಲವು ಬಾರಿ ತನ್ನ ದೇಶದಿಂದ ಅಂಡಮಾನ್ ಗೆ ಬರುತ್ತಿದ್ದ. ಸೆಂಟಿನೆಲ್ ದ್ವೀಪದ ಸುತ್ತ ದೋಣಿ ನಡೆಸುವುದು ನಿಶಿದ್ಧ ಹಾಗೂ ಅಪಾಯಕಾರಿ ಎಂದು ಆತನಿಗೆ ತಿಳಿದಿದ್ದರೂ ಆತ ದೋಣಿಯಲ್ಲಿ ತೆರಳಿ ಆಹಾರದ ಪೊಟ್ಟಣಗಳನ್ನು  ದ್ವೀಪದ ತೀರದೆಡೆಗೆ ಎಸೆದು  ದೂರದಿಂದಲೇ  ಅವರ ಚಲನವಲನಗಳನ್ನು  ಗಮನಿಸುವ ಪ್ರಯತ್ನ  ನಡೆಸಿದನಂತೆ.  ಅವರಿಂದ  ಯಾವುದೇ ರೀತಿಯ  ಪ್ರತಿಕ್ರಿಯೆ ಬಾರದಿದ್ದರಿಂದ  ತನಗೇನೂ ಅಪಾಯವಿಲ್ಲವೆಂದು ಭಾವಿಸಿ ದ್ವೀಪ ತೀರದವರೆಗೂ  ದೋಣಿ ಚಲಾಯಿಸುವ  ಅಪಾಯಕಾರಿ ಪ್ರಯತ್ನವನ್ನು  ಮಾಡಿದನಂತೆ.  ಸೆಂಟಿನೆಲರ  ಕೈವಶನಾಗಿ  ಮೃತನಾದನಂತೆ. ಆತ ವಿದೇಶಿಯನಾದದ್ದರಿಂದ ಆತನ ದೇಹವನ್ನು ಪಡೆಯುವ ಮತ್ತು ಆತನ ದೇಶಕ್ಕೆ ರವಾನಿಸುವ ಅವಶ್ಯಕತೆ ಇತ್ತಾದರೂ ಆತನ ದೇಹವನ್ನು ಪಡೆಯಲು ಸಾಧ್ಯವಾಗಲೇ ಇಲ್ಲ.

ಈ ಘಟನೆಯನ್ನು ನಮಗೆ ನಿರೂಪಿಸುವಾಗ ಟ್ಯಾಕ್ಸಿ ಚಾಲಕನ ದನಿಯಲ್ಲಿ ವಿದೇಶಿಯನ ಬಗ್ಗೆ ಅನುಕಂಪವಿತ್ತಾದರೂ ಅದಕ್ಕಿಂತ ಹೆಚ್ಚಾಗಿ ಅಸಮಾಧಾನವೇ ತುಂಬಿತ್ತು. ಅವರನ್ನು ಅವರಿಚ್ಛೆಗನುಗುಣವಾಗಿ ಬದುಕಲು ಬಿಡಬೇಕು ಮತ್ತು ಅವರ ಜೀವನದಲ್ಲಿ ಅತಿಕ್ರಮ ಪ್ರವೇಶ ತಪ್ಪು ಎಂಬ ಭಾವ ಸ್ಪಷ್ಟವಾಗಿತ್ತು. ಮೂಲ ನಿವಾಸಿಗಳು ಹಾಗೂ ಮುಖ್ಯವಾಹಿನಿಯ ಭಾಗವಾಗಿರುವ ಸ್ಥಳೀಯ ನಿವಾಸಿಗಳು ಕಟ್ಟಿಕೊಂಡ ಬದುಕಿನಲ್ಲಿ ಭಿನ್ನತೆ ಇದ್ದರೂ ಅವರೆಲ್ಲರೂ ಸರ್ಕಾರದ ದೃಷ್ಟಿಯಲ್ಲಿ ಭಾರತದ ಪ್ರಜೆಗಳು ಅಂತೆಯೇ ಸರ್ಕಾರದ ಇಷ್ಟಾನಿಷ್ಟಗಳನ್ನು ಒಪ್ಪಿಕೊಂಡವರ ಬದುಕು  ಬದಲಾದದ್ದಂತೂ ನಿಜ.

ಕಾಡಿನ ವಾಸಿಗಳಾದ ಮೂಲ ನಿವಾಸಿಗಳು ಹಾಗೂ ನಾಡಿನ ವಾಸಿಗಳಾದ ಸ್ಥಳೀಯರು, ಇಬ್ಬರ ಬದುಕು ನೋಡಲು ಸಿಗುವ ಒಂದು ಅಪರೂಪದ ಪ್ರದೇಶ ಇದು. ಇವರಿಬ್ಬರ ನಡುವೆ ನಾಗರೀಕತೆ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಶತಮಾನಗಳ ಅಂತರವಿದೆ. ಇದೊಂದು ರೀತಿಯಲ್ಲಿ ಬೆಳವಣಿಗೆಯ ವಿವಿಧ ಹಂತಗಳಾಗಿ ಕಂಡರೂ ಪೂರ್ವ ಪಶ್ಚಿಮದ ಸಂಗಮವಾಗಿಯೂ ಕಾಣುತ್ತದೆ. ಇಲ್ಲಿನ ಸ್ಥಳೀಯರು ತಮ್ಮ ಬೆಳವಣಿಗೆಯನ್ನು ಪ್ರಗತಿಯನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲಿ ನಾವು ಕಾಣಬಹುದು.

ಸ್ವರಾಜ್ ಮತ್ತು ಲೇಖಕಿ

ಸುಮಾರು 60-65 ವಯಸ್ಸಿನವನಿರಬಹುದಾದ ಸ್ವರಾಜ್ ದ್ವೀಪದಲ್ಲಿನ ಕರಕುಶಲ ವಸ್ತುಗಳ ಮಳಿಗೆಯ ಮಾಲೀಕ.  ಬಹಳ ಉತ್ಸಾಹದಿಂದ  ತನ್ನ ಬಗ್ಗೆ  ತನ್ನ ಕುಟುಂಬದ ಬಗ್ಗೆ  ಮಾಹಿತಿಯನ್ನು ಹಂಚಿಕೊಂಡ. ಆತ ಮೂಲತಃ  ಬಾಂಗ್ಲಾದೇಶದವನು. 1970ರ ದಶಕದಲ್ಲಿ  ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ನಡುವೆ ಯುದ್ಧವಾದಾಗ  ಬಾಂಗ್ಲಾದೇಶದಿಂದ ನಿರಾಶ್ರಿತರಾಗಿ  ಭಾರತದ ಆಶ್ರಯ ಬಯಸಿ ಬಂದವರಲ್ಲಿ  ಆತನ ತಂದೆಯು ಒಬ್ಬರು. ಭಾರತದ ಆಗಿನ ಪ್ರಧಾನಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು  ಒಂದಷ್ಟು  ವಲಸಿಗರಿಗೆ  ಅಂಡಮಾನ್ ನಲ್ಲಿ  ಆಶ್ರಯ ಒದಗಿಸಿದರು.  ಈತನ ತಂದೆಯಂತೆಯೇ  ಹಲವು ನಿರಾಶ್ರಿತರು  ಅಂಡಮಾನ್ ನಲ್ಲಿ ಆಶ್ರಯವನ್ನು ಪಡೆದುಕೊಂಡರು.  ಒಂದೇ ಪ್ರದೇಶದಿಂದ ಬಂದವರಾಗಿದ್ದ  ಅವರೆಲ್ಲರೂ  ಒಟ್ಟಾಗಿ ಒಗ್ಗಟ್ಟಿನಿಂದ ತಮ್ಮ ಜೀವನವನ್ನು  ಪ್ರಾರಂಭಿಸಿದರು.  ಅವರಿಗೆ  ಕೃಷಿ ಮಾಡಲು  ಕಾಡನ್ನು ಸವರುವ  ಅನುಮತಿ ಇತ್ತು.  ಹೀಗೆ ಕಾಡನ್ನು ಸವರಿ  ತಮ್ಮ ತಾತ್ಕಾಲಿಕ ವಸತಿಯನ್ನು ಮಾಡಿಕೊಂಡರು.  ಅಂತೆಯೇ  ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡರು.  ಅವರಲ್ಲೊಬ್ಬ  ಭತ್ತ ಬೆಳೆದರೆ, ಮತ್ತೊಬ್ಬ  ಸಾಸಿವೆ, ಮಗದೊಬ್ಬ ತೊಗರಿ  ಹೀಗೆ  ತಮ್ಮ ದಿನನಿತ್ಯದ  ದವಸ ಧಾನ್ಯದ ಅವಶ್ಯಕತೆಯಂತೆ  ಒಬ್ಬೊಬ್ಬರು  ಒಂದೊಂದು  ಬೆಳೆಯುತ್ತಿದ್ದರು.ತಮ್ಮ ಶಕ್ತಿಗನುಸಾರವಾಗಿ  ತಮ್ಮ ಬೇಸಾಯ ಹಾಗೂ ವಸತಿಗೆ  ಭೂಮಿಯನ್ನು  ಉಪಯೋಗಿಸಿ ಕೊಂಡರು.  ಅವರು ಎಷ್ಟು ಭೂಮಿಯನ್ನು  ತಮ್ಮ ಅವಶ್ಯಕತೆಗೆ ಉಪಯೋಗಿಸಿಕೊಂಡರೋ ಅಷ್ಟು ಭೂಮಿಯನ್ನು ಸರಕಾರ ಅವರ ಹೆಸರಿಗೆ ಊರ್ಜಿತಗೊಳಿಸಿತು. ಆತ ಹೇಳಿದಂತೆ ಅವರಲ್ಲಿ ಜಾತಿ ಮತ ಭೇದವಿರಲಿಲ್ಲ. ಪರಸ್ಪರ ಹೊಂದಾಣಿಕೆ ಸೌಹಾರ್ದ ಸಮನ್ವಯತೆ ಇತ್ತು .ಅವರೆಲ್ಲರೂ ಜಾತಿ ಮತ ಭೇದವಿಲ್ಲದೆ ಒಂದೇ ಕುಟುಂಬದಂತೆ ಜೀವಿಸುತ್ತಿದ್ದರು.  ಸುಳ್ಳು ಹಾಗೂ ಕಪಟದ  ಅವಶ್ಯಕತೆಯೇ ಅವರಿಗಿರಲಿಲ್ಲ.

ಆತ ಹೇಳಿದ “ಸತ್ಯ ಹೇಳುತ್ತೇನೆ..  ಕಾಲ ಈಗ ಬದಲಾಗಿದೆ  ನಾವೀಗ  ಸುಳ್ಳು ಹೇಳುತ್ತೇವೆ . ನಾವು  ಸುಳ್ಳು ಹೇಳುವುದನ್ನು ಹಾಗೂ ಮೋಸ ಮಾಡುವುದನ್ನು  ಕಲಿತಿದ್ದೇವೆ”.  “ಸುಳ್ಳು ಹೇಳುತ್ತೇವೆ” ಎಂಬ ವಿಷಯವನ್ನು  ಆತ  ಪುನಃ ಪುನಃ ಹೇಳಿದ  ಹಾಗೂ  ಹಾಗೆ ಹೇಳುವಾಗ  ನಗುತ್ತಿದ್ದ . ನಾನು ಕೇಳಿದೆ  “ನೀವು ಬದಲಾಗುವುದಕ್ಕೆ ಕಾರಣವೇನು?”  ಅವನ ಉತ್ತರ ” ನಮಗೀಗ  ಹೊರ ಜಗತ್ತಿನ ಪರಿಚಯ , ಸಂಪರ್ಕ ಜಾಸ್ತಿಯಾಗಿದೆ”  ಆತ ಪುನಃ ನಕ್ಕ.  ಆತನ ಮಕ್ಕಳು  ಮುಖ್ಯ ಭೂಮಿಗೆ  ಆಗಾಗ ವ್ಯವಹಾರ ನಿಮಿತ್ತ ಹೋಗುತ್ತಾರೆ. ಒಳ್ಳೆಯ ವಿದ್ಯಾಭ್ಯಾಸವಿದೆ. ಆದರೆ ಆತನ ಮಗನಿಗೆ  ವಿವಾಹವಾಗಲು  ಬಂಗಾಳಿ ಹೆಣ್ಣು ಮಗಳು ಸಿಕ್ಕುತ್ತಿಲ್ಲ. ಕಾರಣವೇನೆಂದರೆ ವಿದ್ಯಾವಂತ ಬಂಗಾಳಿ ಹೆಣ್ಣು ಮಕ್ಕಳು  ದ್ವೀಪಕ್ಕೆ ಬಂದು ಜೀವನ ನಡೆಸಲು  ಇಚ್ಚಿಸುವುದಿಲ್ಲ. ಆತನಲ್ಲಿ  ದುಡ್ಡಿಗೇನೂ ಕೊರತೆ ಇಲ್ಲ. ಆದರೂ   ಹೆಣ್ಣು ಸಿಕ್ಕುತಿಲ್ಲ”. ನಮಗೀಗ  ಸಿರಿವಂತಿಕೆ ಇದೆ  ಆದರೆ  ಇಲ್ಲಿನ ಮೌಲ್ಯಗಳು,  ನೈತಿಕತೆ, ನಿಧಾನವಾಗಿ  ಬದಲಾಗುತ್ತಿದೆ  ಎಂಬುದನ್ನು  ಒಪ್ಪಿಕೊಳ್ಳಬೇಕಾಗಿದೆ” . ಆತ ಹೇಳಿದ  “ನಾವೀಗ  ಸುಳ್ಳು ಹೇಳುತ್ತೇವೆ” . ನಿರಾಶ್ರಿತರಾಗಿ ಇಲ್ಲಿಗೆ ಬಂದ ಜನ ಇಂದು ಸಿರಿವಂತರಾಗಿದ್ದಾರೆ. ಆದರೆ ಮದುವೆಯಾಗಲು ಹೆಣ್ಣು ಸಿಕ್ಕುತ್ತಿಲ್ಲ, ಮೌಲ್ಯಗಳು ಬದಲಾಗಿವೆ .

ಆನಂತರ ನಮಗೆ ಮಾತಿಗೆ ಸಿಕ್ಕಿದವನು ಟ್ಯಾಕ್ಸಿ ಚಾಲಕ. ಆತ ಉತ್ತರ ಪ್ರದೇಶದವನು. ಆತನ  ಅಜ್ಜ  ದ್ವೀಪಕ್ಕೆ ಬಂದು  ಕೃಷಿಯಲ್ಲಿ ತೊಡಗಿ ಕೊಂಡಾಗ  ಬಡತನವನ್ನೇ ಮೈಮೇಲೆ ಹೊದ್ದುಕೊಂಡಿದ್ದ. ಆದರೆ  ಸಮನ್ವಯದ, ಸಮಾನತೆಯ ಬದುಕು  ಅವರದಾಗಿತ್ತು.  ಜಾತಿ ಮತ ಭೇದ  ಅವರಲ್ಲಿರಲಿಲ್ಲ. ಕರಕುಶಲ  ಮಳಿಗೆಯ  ಮಾಲೀಕ

ಹೇಳಿದ್ದಕ್ಕೂ  ಈತ ಹೇಳಿದ್ದಕ್ಕೂ  ಯಾವುದೇ ವ್ಯತ್ಯಾಸವಿರಲಿಲ್ಲ.  ನಮ್ಮಲ್ಲಿ  ಬಾಂಧವ್ಯ, ಒಗ್ಗಟ್ಟು  ದೃಢವಾಗಿತ್ತು. ಆದರೆ  ನಿಧಾನವಾಗಿ  ಅದು ಕರಗಿ ಹೋಗುತ್ತಿದೆ  ಎಂದು ಹೇಳುವಾಗ  ಆ ಯುವಕನ ಸ್ವರದಲ್ಲಿ  ವಿಷಾದವಿತ್ತು . ಆತ  ಬದಲಾವಣೆಯನ್ನು ಒಪ್ಪಿಕೊಳ್ಳಬೇಕಾದ  ಅನಿವಾರ್ಯತೆಯ  ವಿಷಾದದೊಡನೆ  ಇನ್ನೊಂದಷ್ಟು

ವಿಷಯಗಳನ್ನು  ಅರಿತುಕೊಂಡಿದ್ದ . ಆತ ಹೇಳಿದ “ನಾವು ಇನ್ನೂ ಬಹಳ ಮುಂದುವರಿಯಬೇಕಿದೆ.  ಕನಿಷ್ಠ  ನಿಮಗಿಂತ ನಾವು  50 ವರ್ಷವಾದರೂ ಹಿಂದಿದ್ದೇವೆ. ಇಲ್ಲಿ ಸಾಕಷ್ಟು ಶಾಲೆಗಳಿವೆ. ಕಾಲೇಜುಗಳಿಲ್ಲ. ವೈದ್ಯಕೀಯ ವ್ಯವಸ್ಥೆ ಇಲ್ಲ…  ಸ್ವರಾಜ್ ದ್ವೀಪದ  ಮಹಿಳೆ ಒಬ್ಬಳು  ತನ್ನ ಮಗುವಿಗೆ ಜನ್ಮ ನೀಡಬೇಕಿದ್ದರೆ  ತಕ್ಕನಾದ ಆಸ್ಪತ್ರೆಯೇ ಇಲ್ಲ.  ಇಲ್ಲಿನ ಎಲ್ಲಾ ಮಹಿಳೆಯರು  ಹೆರಿಗೆ ಸಂಬಂಧವಾಗಿ  ಪೋರ್ಟ್ ಬ್ಲೇರ್‌ ಗೆ ಹೋಗುತ್ತಾರೆ.  ಸ್ವರಾಜ್ ದ್ವೀಪದಿಂದ ಪೋರ್ಟ್ ಬ್ಲೇರ್ ಗೆ  ದೋಣಿಯಲ್ಲಿ ಒಂದೂವರೆ ಗಂಟೆಯ ಪ್ರಯಾಣ. ಸಣ್ಣಪುಟ್ಟ ಕಾಯಿಲೆಗಳಿಗೆ  ಔಷಧ ನೀಡುವ  ವೈದ್ಯರಿದ್ದಾರಾದರೂ   ತುರ್ತು ಸಂದರ್ಭಗಳಲ್ಲಿ  ಇಲ್ಲಿ ಯಾವುದೇ  ವೈದ್ಯಕೀಯ ನೆರವು, ಆಸ್ಪತ್ರೆ  ಲಭ್ಯವಿಲ್ಲ.  ನಮಗೆ  ಅಭಿವೃದ್ಧಿಯ  ಅವಶ್ಯಕತೆ ಇದೆ. ಅಭಿವೃದ್ಧಿ ಆಗಬೇಕಿದ್ದರೆ  ಉಳಿದೆಲ್ಲ ಬದಲಾವಣೆಗಳನ್ನು ಒಪ್ಪಲೇಬೇಕಾಗುತ್ತದೆ.”

ಹಿಂದಿನ ತಲೆಮಾರಿನವರಿಗೆ  ಮೌಲ್ಯಗಳ ನಷ್ಟ  ವಿಶಾದವನ್ನುಂಟು ಮಾಡಿದರೆ  ಇಂದಿನ ತಲೆಮಾರಿನವರಿಗೆ ಅದನ್ನು ಒಪ್ಪಿಕೊಳ್ಳುವ ಅನಿವಾರ್ಯತೆ  ಹಾಗೂ  ಮುನ್ನಡೆಯುವ  ತವಕ  ಮತ್ತು  ಮುಖ್ಯವಾಹಿನಿಯ  ಅಭಿವೃದ್ಧಿಯ ಕಲ್ಪನೆಯಲ್ಲಿ  ಒಂದಾಗುವ  ನಿರೀಕ್ಷೆ   ಕಂಡು ಬಂತು. ಹಿಂದಿನ ತಲೆಮಾರಿನವರಿಗೆ  ತಾವು ಮೌಲ್ಯಗಳನ್ನು ಕಳೆದುಕೊಂಡು ಹಿನ್ನಡೆಯುತ್ತಿದ್ದೇವೆ  ಎನಿಸಿದರೆ  ಇಂದಿನ ತಲೆಮಾರಿಗೆ  ಮುಖ್ಯ ಭೂಮಿಯಂತೆಯೇ  ದ್ವೀಪವನ್ನು ಬೆಳೆಸಬೇಕೆಂಬ ಹಂಬಲ.  ನಾಗರಿಕ ಸಮಾಜದ  ಅಭಿವೃದ್ಧಿಯ  ವ್ಯಾಖ್ಯಾನ, ಕಲ್ಪನೆಗಳನ್ನು  ಪ್ರಶ್ನಾರ್ಥಕವಾಗಿಸುವುದರೊಂದಿಗೆ  ಈ ದ್ವೀಪವು  ಸಮನ್ವಯತೆ , ಮಾನವತೆ ಎಂಬ ಮೌಲ್ಯಗಳ ರೂಪಕವಾಗಿದ್ದ  ಸಮುದಾಯದ ಹುಟ್ಟು ಹಾಗೂ ಬೆಳವಣಿಗೆಯನ್ನು ಕಂಡುಕೊಳ್ಳುವಂತೆ ಮಾಡಿತು. ಹಲವು ದೃಷ್ಟಿಕೋನಗಳಿಂದ  ದ್ವೀಪಸಮಾಜವನ್ನು  ನಾವು ಗ್ರಹಿಸಬಹುದು.  ನಾನು ಹೇಳಿರುವುದು  ಆಂಶಿಕ  ಹಾಗೂ ಅಲ್ಪ.  ಮನುಕುಲವನ್ನು ಅರ್ಥೈಸಿಕೊಳ್ಳಬೇಕೆನಿಸುವವರಿಗೆ  ಬೇರೆ ಬೇರೆ ಕೋನಗಳಿಂದ  ಅಧ್ಯಯನ ಮಾಡಲು  ಇಲ್ಲಿ  ಸಾಕಷ್ಟು ಅವಕಾಶವಿದೆ. ಇಲ್ಲಿನ ಪ್ರಕೃತಿ  ಎಷ್ಟು ಆಹ್ಲಾದಕರವೋ  ಇಲ್ಲಿನ ಜನರು  ಅಷ್ಟೇ ಆತ್ಮೀಯರು. ಬಹುಶಃ ಪ್ರವಾಸಿಗರಾದ ನಮ್ಮ ಕರ್ತವ್ಯ  ಇನ್ನಷ್ಟು  ಕುಟಿಲತೆ,  ಸುಳ್ಳು ಹೇಳುವ ಕಲೆಯನ್ನು  ಅವರಿಗೆ ಕಲಿಸದಿರುವುದು . ಅವರ ಸ್ವಾಭಾವಿಕ ಬೆಳವಣಿಗೆಯನ್ನ  ಮೆಚ್ಚಿಕೊಳ್ಳುವುದು. ಕಾಡುಜನರೆಂಬ ಅಸ್ಮಿತೆ ಹೊತ್ತ ಮೂಲ ನಿವಾಸಿಗಳು, ಬದಲಾವಣೆ ಅಭಿವೃದ್ಧಿಯನ್ನು ಬಯಸುವ ಹೊಸ ತಲೆಮಾರಿನವರು ಮೂಡಿಸಿದ ಪ್ರಶ್ನೆ- ಅಭಿವೃದ್ಧಿ ಆನ್ನುವುದು ಆರ್ಥಿಕ ಬೆಳವಣಿಗೆ ಹಾಗೂ ಮೌಲ್ಯ ಪಥನವೇ ಆಗಿರುತ್ತದೆಯೇ?

ರಾಜಲಕ್ಷ್ಮಿ ಎನ್ ಕೆ.

ನಿವೃತ್ತ ಉಪನ್ಯಾಸಕಿ

ಓದಿ :

ಅಂಡಮಾನ್‌ ಡೈರಿ -1  ಉಸುಕಿನಲ್ಲಿ ಊರಿದ ಹೆಜ್ಜೆಗಳು

ಅಂಡಮಾನ್‌ ಡೈರಿ –2 ಮಣ್ಣಿನ ಜ್ವಾಲಾಮುಖಿಯೊಳಗಿನ ತಣ್ಣಗಿನ ಅಲೆಗಳು

ಅಂಡಮಾನ್‌ ಡೈರಿ – 3 – ಅಂಡಮಾನ್‌ ಡೈರಿ 3 |  ಇಬ್ಬದಿಯ ಕೀಲು ಇಂತಿಪ್ಪ ಬಾಳು

ಅಂಡಮಾನ್‌ ಡೈರಿ 3 | ಇಬ್ಬದಿಯ ಕೀಲು ಇಂತಿಪ್ಪ ಬಾಳು
ಅಂಡಮಾನ್ ಡೈರಿಯ ಈ ಮೂರನೆಯ ಭಾಗದಲ್ಲಿ ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನಿಯರು ದ್ವೀಪ ಸಮೂಹವನ್ನು ವಶಪಡಿಸಿಕೊಂಡಾಗ ಅಲ್ಲಿನ ಮಹಿಳೆಯರ ಬದುಕು ಹೇಗೆ ಇತ್ತು ಎಂಬುದನ್ನು ಕಟ್ಟಿಕೊಡುವ ಸಣ್ಣ ಪ್ರಯತ್ನವನ್ನು ಮಾಡಲಾಗಿದೆ – ರಾಜಲಕ್ಷ್ಮೀ ಎನ್ ಕೆ.

ಇದಕ್ಕೆಲ್ಲ ಪ್ರೇರಣೆ ದೊರೆತದ್ದು ನಾನು ಶಕುಂತಲಾ ಶಿವರಾಂ ರವರ ಅಂಡಮಾನ್ ಇತಿಹಾಸದ ಬಗೆಗಿನ ಪುಸ್ತಕದಿಂದಲೂ ಎಂದರೆ ತಪ್ಪಾಗಲಿಕ್ಕಿಲ್ಲ. ಅಂಡಮಾನ್ ಕುರಿತ ಮಾಹಿತಿಯಿರುವ ಪುಸ್ತಕ ಇದಾಗಿರಬಹುದು ಎಂಬ ಕುತೂಹಲದಿಂದ ಎತ್ತಿಕೊಂಡ ಪುಸ್ತಕ ನನ್ನನ್ನು ಇತಿಹಾಸದ ವಿಭಿನ್ನ ಗಲ್ಲಿಗಳಲ್ಲಿ ಸುತ್ತಾಡಿಸಿ ಹೊಸ ಅನುಭವ, ಮಹಿಳೆಯರ “ಬದುಕು/ ದೇಶ ಕಟ್ಟುವ” ವಿಶಿಷ್ಠ ರೂಪದರ್ಶನ ಮಾಡಿಸುವ ಮೂಲಕ ಇತಿಹಾಸದ ಸ್ವರೂಪವನ್ನು ಮರು ನಿರೂಪಿಸಿತು ಎಂದೇ ಹೇಳಬಹುದು. ಶಕುಂತಲಾ ಶಿವರಾಂರವರು ಶಾಲಾ ಶಿಕ್ಷಕಿ ಆಗಿದ್ದವರು, ಅಂಡಮಾನ್ ನಲ್ಲಿ ಹುಟ್ಟಿ ಬೆಳೆದವರು. ಅವರಿಗೀಗ 85 ವರ್ಷ. ಅಂಡಮಾನನ್ನು ಜಪಾನ್ ಅಕ್ರಮಿಸುವಾಗ ಆಕೆಗೆ ಸುಮಾರು ಆರು ಅಥವಾ ಏಳು ವರ್ಷವಿದ್ದಿರಬಹುದು. ಮಸುಕಾದ ತನ್ನ ಕೆಲವೇ ನೆನಪುಗಳು ಹಾಗೂ ತನ್ನ ಓರಗೆಯವರ ನೆನಪುಗಳು, ತದನಂತರದಲ್ಲಿ ಆ ಸಮಯದಲ್ಲಿ ಬದುಕಿ ಬಾಳಿದ ಮಹಿಳೆಯರ ನೆನಪುಗಳ ಆಧಾರದಲ್ಲಿ ಶಕುಂತಲಾರವರು  ಜಪಾನ್ ಆಕ್ರಮಿತ ಅಂಡಮಾನ್ ನ ಮಹಿಳೆಯರ ಸ್ಥಿತಿಗತಿಗಳನ್ನು ಹೇಳುತ್ತಾರೆ.

ಅವರು ಎರಡನೇ ಮಹಾಯುದ್ಧದ ಕಾಲಘಟ್ಟವನ್ನು ಕಟ್ಟಿಕೊಡುವ ರೀತಿ ಇತರಿಗಿಂತ ತುಸು ಭಿನ್ನವಾಗಿದೆ. ಈ ಭಿನ್ನತೆಗೆ ನಿಖರವಾದ, ನಿರ್ದಿಷ್ಟವಾದ ಕಾರಣವೇನಾದರೂ ಇರಬಹುದೇನೋ?  ಅವರು ನೀಡುವ ಕಥಾನಕದಲ್ಲಿ ನನ್ನ ಅರಿವಿಗೆ  ಎರಡು ವಿಷಯಗಳು ಎದ್ದು ಕಾಣುತ್ತವೆ. ಮೊದಲನೆಯದು ಹಳೆಯ ಅನುಭವಗಳ ಕುರಿತಂತಹ ಒಂದು ರಮ್ಯ ಕಲ್ಪನೆ. ಎರಡನೆಯದು ಶತ್ರುಗಳ ಆಡಳಿತದಲ್ಲಿ ಅವರಲ್ಲಿದ್ದಿರಬಹುದೆಂದು ಭಾವಿಸಿದ ಒಳ್ಳೆಯ ಗುಣಗಳ ಬಗೆಗಿನ ಆರಾಧಕತೆ. ಈ ಆರಾಧಕಾ ಮನೋಭಾವ ಚಿತ್ರನಟ ಡಾ. ರಾಜಕುಮಾರ್ ನ್ನು ವೀರಪ್ಪನ್ ಸೆರೆಹಿಡಿದು ನಂತರ ಬಿಡುಗಡೆಯಾದ ಸಂದರ್ಭದಲ್ಲಿ ವೀರಪ್ಪನ್ “ಬಹಳ ಸಂಭಾವಿತ ಮನುಷ್ಯ” ಎಂದು ಹೇಳಿದ ರೀತಿಯದು. ಇದೊಂದು ರೀತಿಯ ವಿಚಿತ್ರ ಮನಸ್ಥಿತಿಯಲ್ಲಿ ಕಾಣಬರುವ ಪ್ರೀತಿ. ಸೆರೆ ಹಿಡಿದದ್ದು ಮರೆತೇಹೋಗಿ ಆತನ ಸಂಭಾವಿತತನ ಮನಸ್ಸಲ್ಲಿ ಉಳಿಯಿತು. ಅದೇ ರೀತಿ ಶಕುಂತಲಾರವರು ಜಪಾನ್ ಆಡಳಿತದ ಸಂದರ್ಭದಲ್ಲಿ ಅವರ ಹಿಂಸೆಯ ಕ್ರೌರ್ಯದ ಆಡಳಿತವನ್ನು ಗುರುತಿಸುತ್ತಾರಾದರೂ ಅವರಲ್ಲಿದ್ದ ಒಳ್ಳೆಯತನವನ್ನು ಹೊಗಳುವುದಕ್ಕೆ ಹಿಂದೇಟು ಹಾಕುವುದಿಲ್ಲ. ಕೆಲವೊಮ್ಮೆ ನೆನಪು ಕಟ್ಟಿಕೊಡುವ ಚರಿತ್ರೆಗಳು ರಮ್ಯ  ಕಲ್ಪನೆಗಳು, ಸಮರ್ಪಕ ಮುಕ್ತಾಯದ ಕಥೆಗಳಾಗಿರುತ್ತವೆ.

1942 ರಲ್ಲಿ ಅಂಡಮಾನ್ ದ್ವೀಪದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು. ಮಹಾಯುದ್ಧವು ದ್ವೀಪವನ್ನು ಸಾಮಾಜಿಕವಾಗಿ, ರಾಜಕೀಯವಾಗಿ  ಆಡಳಿತಾತ್ಮಕವಾಗಿ ಅಲ್ಲೋಲಕಲ್ಲೋಲ ಮಾಡಿತು ಎನ್ನಲಾಗುತ್ತದೆ..ಆಗಷ್ಟೇ ಸುಂದರವಾಗಿ ನಿರ್ಮಾಣ ಗೊಳ್ಳುತ್ತಿದ್ದ ಒಂದು ಸಮಾಜ ಗುರುತಿಸಲಾರದಂತಹ ಹಾನಿಗೊಳಗಾಗುತ್ತದೆ. ಆರ್ಥಿಕ ಬೆಳವಣಿಗೆ ಕೂಡ ಚೇತರಿಸಲಾಗದಷ್ಟು ಕುಸಿಯುತ್ತದೆ. ಮಹಾಯುದ್ಧ ನಡೆಯುತ್ತಿದೆ ಎಂಬುದಷ್ಟೇ ದ್ವೀಪವಾಸಿಗಳಿಗೆ ಇದ್ದ ಜ್ಞಾನ. ಅವರಿಗೆ ಈ ಯುದ್ಧ ತಮ್ಮ ಜೀವನವನ್ನೇ ನಡುಗಿಸುವ ಭವಿಷ್ಯದ ದಿನಗಳ ಬಗ್ಗೆ ಒಂದಿಷ್ಟೂ ಕಲ್ಪನೆ ಇರಲಿಲ್ಲ.   ದ್ವೀಪದಲ್ಲಿ ಬೇರೆಡೆಯಿಂದ ಬಂದು ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಬ್ರಿಟಿಷ್ ಆಡಳಿತಗಾರರು ದ್ವೀಪವನ್ನು ತೊರೆದು ಹೋಗಲು ಅವಕಾಶವಿದೆ ಎಂದು ಘೋಷಿಸಿದಾಗ ಯುದ್ಧದ ಕಾರ್ಮೋಡಗಳು ತಮ್ಮ ದ್ವೀಪದ ಮೇಲೂ ಹಾದು ಹೋಗುತ್ತಿವೆ ಎಂಬ ಸೂಚನೆ ಅಲ್ಲಿನ ಜನರಿಗೆ ದೊರಕಿತು. ದ್ವೀಪದ ಮೇಲೆ ಬ್ರಿಟಿಷರ ಹಿಡಿತ ಸಡಿಲವಾಗುತ್ತಿದೆ ಎಂಬ ಸುಳಿವು ದೊರಕಿದ್ದು ಲಾರ್ಡ್ ವೇವಲ್ ಸಿಂಗಪುರದಿಂದ ಮಧ್ಯರಾತ್ರಿ  ಪೋರ್ಟ್ ಬ್ಲೇರ್ ನಲ್ಲಿ ಬಂದಿಳಿದಾಗ.

ಯುದ್ಧದ ತೀವ್ರತೆ ಹಾಗೂ ದ್ವೀಪದ ಮೇಲೆ ಅದರ ಪರಿಣಾಮವನ್ನು ಮನಗಂಡ ಹಲವು ಅಧಿಕಾರಿಗಳು ತಮ್ಮ ಸಂಸಾರವನ್ನು ತ್ವರಿತ ಗತಿಯಲ್ಲಿ ಭಾರತದ ಮುಖ್ಯ ಭೂಮಿಗೆ ಸ್ಥಳಾಂತರಿಸಿದ್ದರು. ತದನಂತರ ತಮ್ಮ ಅಳಿದುಳಿದ ಕರ್ತವ್ಯವನ್ನು ಪೂರೈಸಿ ಅವರು ಕೂಡ ಭಾರತ ಮುಖ್ಯ ಭೂಮಿಗೆ ತೆರಳಿದರು. ಆದರೆ ಇಲ್ಲಿಯೇ ಹುಟ್ಟಿ ಬೆಳೆದ ಅಪಾರ ಜನಸಂಖ್ಯೆಯ  ಅಂಡಮಾನಿಗರು ಹೋಗುವುದಾದರೂ ಎಲ್ಲಿಗೆ? ತಮ್ಮದೇ ಭೂಮಿ ತಮ್ಮದೇ ಊರು…. ಹಾಗಾಗಿ ಅವರು ದ್ವೀಪದಲ್ಲಿಯೇ ಉಳಿದರು. ಆಂಗ್ಲರ ಆಡಳಿತ ಕೊನೆಗೊಂಡು ಜಪಾನ್ ಆಡಳಿತಗಾರರು ಅಧಿಕಾರವನ್ನು ಕೈಗೆತ್ತಿಕೊಳ್ಳುವ ನಡುವೆ ಜಪಾನ್ ಮಿಲಿಟರಿ ಸಿಪಾಯಿಗಳದ್ದೇ ರಾಜ್ಯಭಾರ ಕಾರುಬಾರು. ಭಾರತದ ವಿವಿಧ ಭಾಗಗಳಿಂದ. ಬರ್ಮಾದಿಂದ ಬಂದು ನೆಲೆ ನಿಂತ ಈ ಜನರ ಬದುಕು ಕೆಲಕಾಲ ಆಂಗ್ಲರ ಆಡಳಿತದಲ್ಲಿ, ಅರೆಕಾಲ ಜಪಾನಿಯರ ಕೈಯಲ್ಲಿ ರೂಪ/ವಿರೂಪ ಗೊಂಡಿತು.

ತಮ್ಮೊಳಗೊಬ್ಬ ತಮ್ಮವನೇ ಆದ ನಾಯಕನಿದ್ದಿದ್ದರೆ ಬಸವಳಿದ ಈ ಜನರ ಬದುಕು ಬೇರೆಯೇ ಆಗುತ್ತಿತ್ತು. ಭಾರತ ಮುಖ್ಯ ಭೂಮಿಯ ಬ್ರಿಟಿಷ್ ವಸಾಹತೀಕರಣದ ಭಾರತೀಯರ ಬದುಕು ಒಂದು ತೆರನಾದರೆ ಇಲ್ಲಿಯ ಜನತೆಯ ಬದುಕು ಬೇರೆಯೇ ತೆರನಾಗಿತ್ತು. ಹಿಂಸೆಯ ಕುಲುಮೆ ಇಲ್ಲಿ ಜ್ವಲಂತವಾಗಿತ್ತು. ಎಲ್ಲಾ ಇತಿಹಾಸದ ಪುಸ್ತಕಗಳಲ್ಲಿ ಈ ವಿಷಯ ರಕ್ತ ರಂಜಿತವಾಗಿ, ವರ್ಣಮಯವಾಗಿ ಕಾಣಬರುತ್ತದೆ. ಅಸ್ಥಿರತೆ, ಭಯ, ಹಿಂಸೆ ತಾಂಡವವಾಡುತ್ತಿದ್ದ ವಾತಾವರಣದಲ್ಲಿ ಅಲ್ಲಿನ ಮಹಿಳೆಯರ ಸ್ಥಿತಿ ಏನಿತ್ತು ಎಂಬುದನ್ನು ಶಕುಂತಲಾ ಶಿವರಾಂರವರು ಪ್ರಸ್ತಾವಿಸುತ್ತಾರೆ. ಯಾವುದೇ ಜಪಾನಿ ಸೈನಿಕ ಅಂಡಮಾನ್ ಮಹಿಳೆಯರೊಂದಿಗೆ ದುರ್ನಡತೆ ತೋರಲಿಲ್ಲ, ಮಹಿಳೆಯರನ್ನು ಈ ಸೈನಿಕರು ಶೋಷಿಸಿದರು ಎಂಬುದು ಕೇವಲ ಗಾಳಿ ಸುದ್ದಿ ಅಷ್ಟೇ ಹೊರತು ನಿಜವಲ್ಲ. ಈ ಗಾಳಿ ಸುದ್ದಿ  ಹರಡುವುದಕ್ಕೆ ಕಾರಣವಾದ ಒಂದು ಕಥೆ  ಹೀಗಿದೆ.

ಜುಲ್ಫಿಕರ್ ಆಲಿ ಯ ಅಳಿಯ ಎರಡು ವರ್ಷದ ಹುಡುಗ ಕರಿಯರಂತಿಲ್ಲ. ಕಂದು ಬಣ್ಣದವನೂ ಅಲ್ಲ. ಆಂಗ್ಲರಂತೆ ಬಿಳಿಯ ತೊಗಲಿನವನು.. ಬಿಳಿ ತೊಗಲಿನ ಈ ಹುಡುಗ ಜಪಾನಿಯರ  ಸಂಶಯದ ಕಣ್ಣಿಗೀಡಾದ. ಜಪಾನಿ ಸೈನಿಕರಿಗೆ  ಅವನ ತಂದೆ ಆಂಗ್ಲನಿರಬಹುದು ಎಂಬ ಗುಮಾನಿ. ಹಾಗಾಗಿ ಆತನ ತಾಯಿಯನ್ನು ಸೈನಿಕರು ಹಿಂಬಾಲಿಸಿ ಗಮನಿಸುತ್ತಿದ್ದರು. ಆ ಹುಡುಗನ ತಾಯಿ ಗರ್ಭಿಣಿಯಾಗಿದ್ದಳು. ನಿರೀಕ್ಷೆಯಂತೆ  ಮಗುವನ್ನೂ ಹಡೆದಳು. ಆ ಮಗು ಕೂಡ ಮೊದಲಿನ ಮಗುವಿನಂತೆ ಬಿಳಿ ತೊಗಲನ್ನೇ ಹೊಂದಿತ್ತು. ಆನಂತರ ಸೈನಿಕರು ಆಕೆಯನ್ನು ಹಿಂಬಾಲಿಸುವುದು ನಿಂತಿತು. ಅವರ ಗುಮಾನಿ ಸರಿಯಲ್ಲ ಎಂದು ತಿಳಿಯಿತು. ಈ ಕಥೆಯಿಂದಾಗಿ  ಜಪಾನೀಯರು ಮಹಿಳೆಯರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಜನರು ಭಾವಿಸಿದ್ದರು.

ಜಪಾನಿಯರು “ಹೆಚ್ಚು ಆಹಾರ ಬೆಳೆಯಿರಿ” ಎಂಬ ಯೋಜನೆಯನ್ನು ಆರಂಭಿಸಿದರು. ಈ ಯೋಜನೆಯನುಸಾರ ಹೊಲದಲ್ಲಿ ದುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರ ಅಗತ್ಯವಿತ್ತು. ಅಂತೆಯೇ ಸ್ಥಳೀಯರನ್ನು ಹೊಲದಲ್ಲಿ ದುಡಿಯಲು ನೇಮಿಸಿಕೊಂಡರು.  ಅಧಿಕ ದೈಹಿಕ ಶ್ರಮದ ಕೆಲಸವನ್ನು ಪುರುಷರಿಗೂ  ಕಡಿಮೆ ದೈಹಿಕ ಶ್ರಮದ ಕೆಲಸವನ್ನು ಮಹಿಳೆಯರಿಗೂ ನೀಡಲಾಯಿತು. ಮಹಿಳೆಯರು ದುಡಿಯುವ ಸ್ಥಳದಲ್ಲಿ  ಅವರೊಂದಿಗೆ ಇತರರು ಅತಿ ಸಲುಗೆಯಿಂದ ವರ್ತಿಸುವುದಾಗಲಿ, ಅಶ್ಲೀಲವಾಗಿ ನಡೆದುಕೊಳ್ಳುವುದಾಗಲಿ ನಡೆಯದಂತೆ ಕಟ್ಟೆಚ್ಚರವನ್ನು ವಹಿಸಿದ್ದರು.

ಜಪಾನೀಯರು ಅಂಡಮಾನಿನ ಮಹಿಳೆಯರನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ಶಕುಂತಲಾ ರವರು ನೆನಪಿಸಿಕೊಳ್ಳುತ್ತಾರೆ. ಜಪಾನಿಯರು ವಿವಿಧ ಕೆಲಸಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದರು. ಮುತ್ಯಾಲಮ್ಮ ಎಂಬಾಕೆ ಸೈನಿಕರಿಗೆ ತಿಂಡಿ  ಮಾರುವ ಮಳಿಗೆಯಲ್ಲಿ ನೇಮಿತಳಾಗಿದ್ದಳು. ಒಂದು ದಿನ ತಿಂಡಿ ಮಾರಾಟ ಮಾಡುವ ವೇಳೆಯಲ್ಲಿ ಇಬ್ಬರು ಸೈನಿಕರು ಯಾವುದೋ ಕಾರಣಕ್ಕೆ ಮಳಿಗೆಯೆದುರು ತಮ್ಮೊಳಗೆ ಜಗಳವಾಡ ತೊಡಗಿದರು. ಅವರ ಜಗಳದಿಂದ ಭಯ ಭೀತಳಾದ ಮುತ್ಯಾಲಮ್ಮ ಮಳಿಗೆಯನ್ನು  ಬಿಟ್ಟು ತನ್ನ ಮನೆಗೆ ಓಡಿ ಹೋದಳು. ಓಡಿ ಹೋದ ಆಕೆಯನ್ನು ಮನೆಯಿಂದ ಕರೆತರಲಾಯಿತು. ಆಕೆ ಓಡಿ ಹೋಗಲು ಕಾರಣವೇನು ಎಂದು ತಿಳಿದು ಆಕೆಗೆ ತಿಳುವಳಿಕೆ ನೀಡಲಾಯಿತು. ಕರ್ತವ್ಯ  ನಿರ್ವಹಿಸುವಾಗ ಲೋಪವೆಸಗುವುದು ಶಿಕ್ಷಾರ್ಹ ಅಪರಾಧವೆಂದು ಎಚ್ಚರಿಕೆ ನೀಡಲಾಯಿತು. ಆಕೆ  ಮಳಿಗೆಗೆ ಹಿಂತಿರುಗುವಾಗ ಆಕೆಗೊಂದು ಅಚ್ಚರಿ ಕಾದಿತ್ತು. ಆಕೆಯ ರಕ್ಷಣೆಗಾಗಿ ಮಳಿಗೆಯ ಮುಂಭಾಗದಲ್ಲಿ ಇಬ್ಬರು ಪೇದೆಯರನ್ನು ನೇಮಿಸಲಾಗಿರುತ್ತದೆ.

ಜಪಾನ್ ಸೈನಿಕರು ತಮ್ಮ ಪತ್ನಿಯರನ್ನು ದ್ವೀಪಕ್ಕೆ ಕರೆತಂದಿರುವುದಿಲ್ಲ ಮತ್ತು ಅವರಿಗೆ ದ್ವೀಪದಲ್ಲಿ ವಿವಾಹವಾಗುವುದಕ್ಕೆ ಅನುಮತಿಯೂ ಇರುತ್ತಿರಲಿಲ್ಲ. ಬ್ರಿಟಿಷ್ ಆಡಳಿತವು ತಮ್ಮ ಸೈನಿಕರಿಗೆ ವಿವಾಹವಾಗುವುದಕ್ಕೆ ಅನುಮತಿ ನೀಡಿತ್ತು. ಈ ಸೌಲಭ್ಯವು ಜಪಾನ್ ಸೈನಿಕರಿಗೆ ಇರಲಿಲ್ಲ. ಹಾಗಾಗಿ ಜಪಾನಿಯರಿಗೆ ತಮ್ಮ ಲೈಂಗಿಕ ಅವಶ್ಯಕತೆಯನ್ನು ಪೂರೈಸಿಕೊಳ್ಳುವುದು ಸಮಸ್ಯೆಯಾಯಿತು. ಕುಟಿಲ ಬುದ್ಧಿಯ ಕೆಲವು ಸ್ಥಳೀಯ ದ್ವೀಪವಾಸಿಗಳು ಕೆಲವು ಗೌರವಾನ್ವಿತ ಕುಟುಂಬದ ಹೆಣ್ಣು ಮಕ್ಕಳನ್ನು ಹೆಸರಿಸಿ ಅವರು ತಮಗೆ ಲಭ್ಯವಿದ್ದಾರೆಂದು ಜಪಾನಿಯರಿಗೆ ಹೇಳಿದರು. ಆ ಮಹಿಳೆಯರನ್ನು ಗುಪ್ತ ಸ್ಥಳಕ್ಕೆ   ಕರೆ ತರಲಾಯಿತು. ಆ ಸಂದರ್ಭದಲ್ಲಿ  ಮಹಿಳೆಯರು ತಾವು ಕುಲೀನ ಮನೆತನದ  ಸ್ತ್ರೀಯರು ತಮ್ಮ ನಿರೀಕ್ಷೆ ತಪ್ಪು ಎಂದು ಹೇಳುತ್ತಾ ಇದು ಕೆಲವರ ಕುಟಿಲತೆಯ ಕರಾಮತ್ತು ಎಂಬುದನ್ನು ತಿಳಿಸುತ್ತಾರೆ. ಆಗ ಅವರನ್ನು ಗೌರವದಿಂದ ಹಿಂತಿರುಗಲು ವ್ಯವಸ್ಥೆ ಮಾಡಲಾಗುತ್ತದೆ.

ತಮ್ಮ ಅವಶ್ಯಕತೆಗಾಗಿ ಜಪಾನಿಯರು ಕೊರಿಯಾದ “ಕಂಫರ್ಟ್ ವಿಮೆನ್” ಗಳನ್ನು ದ್ವೀಪಕ್ಕೆ ಕರೆಸಿಕೊಳ್ಳುತ್ತಾರೆ. ಈ ಮಹಿಳೆಯರನ್ನು ವಿವಿಧ ಭಾಗಗಳಲ್ಲಿ ವಸತಿ ನೀಡಿ ನೆಲೆಗೊಳಿಸುತ್ತಾರೆ. ಇವರಿಗೆ ಬಿಳಿಯ ಸುಗಂಧರಾಜ ಹೂವಿನ ಸುಗಂಧ ಬಹಳ ಇಷ್ಟ. ಇದನ್ನು ಮನಗಂಡ ಸ್ಥಳೀಯರು ತಾವು ಬೆಳೆದ ಹೂವು ಹಾಗೂ ಹಣ್ಣುಗಳನ್ನು ಮಾರಲು ಆರಂಭಿಸುತ್ತಾರೆ.  ಪ್ರತಿನಿತ್ಯ ಮನೆ ಮನೆಗಳಿಗೆ ತೆರಳಿ ಮಕ್ಕಳು ಮಾರಾಟವನ್ನು ಮಾಡುತ್ತಿರುತ್ತಾರೆ. ಇಂತಹ ಹೆಣ್ಣು ಮಕ್ಕಳಲ್ಲಿ ಆನ್ನಿ ಕೂಡಾ ಒಬ್ಬಳು. ಆಕೆಗೆ ಸುಮಾರು 13 ಅಥವಾ 14 ವರ್ಷವಿರಬಹುದು. ನೋಡಲು ಬಹಳ ಸುಂದರವಾಗಿದ್ದಳು. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವಳು. ಆಕೆ ಹೂವು ಹಣ್ಣುಗಳನ್ನು ಮಾರಾಟ ಮಾಡುವಾಗ ಸರಕಾರಿ ಸ್ವಾಮ್ಯದ ಹೊಲದ ಉಸ್ತುವಾರಿಯನ್ನು ಹೊಂದಿದ್ದ ಜಪಾನಿಯನಾದ ಒಸಾಕನ ಕಣ್ಣಿಗೆ ಬೀಳುತ್ತಾಳೆ. ಒಸಾಕ ಆಕೆಯನ್ನು ಪ್ರೀತಿಸುತ್ತಾನೆ. ಆತನಿಗೆ ಆಕೆಯನ್ನು ಮದುವೆಯಾಗಲು ಕಾನೂನಿನ ಸಮ್ಮತಿ ಇರುವುದಿಲ್ಲ. ಆದಾಗ್ಯೂ ಆಕೆಯನ್ನು ಮದುವೆಯಾಗಲು ಬಯಸುತ್ತಾನೆ. ತನ್ನಿಚ್ಛೆಯನ್ನು ಆಕೆಯ ತಂದೆಯಲ್ಲಿ ನಿವೇದಿಸುತ್ತಾನೆ. ಆರಂಭದಲ್ಲಿ ಆತ ಇದನ್ನು ನಿರಾಕರಿಸಿ ವಿರೋಧಿಸಿದರೂ ಕೊನೆಗೆ ಒಪ್ಪಿಕೊಳ್ಳುತ್ತಾನೆ. ಆನ್ನಿ ಹಾಗೂ ಒಸಾಕನ  ಮದುವೆಯು ಆನ್ನಿಯ ಕುಟುಂಬ, ಒಸಾಕನ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಗರ್ಜಿಯಲ್ಲಿ ಧರ್ಮ ಗುರುಗಳ ಸಾರಥ್ಯದಲ್ಲಿ ರಹಸ್ಯವಾಗಿ  ನೆರವೇರುತ್ತದೆ. ಭವಿಷ್ಯದ ಬಗ್ಗೆ ಕನಸು ಕಾಣುವ ಸಮಾಜ, ಪರಿಸ್ಥಿತಿ ಇಲ್ಲದಿದ್ದರೂ ಅವರೊಂದಿಷ್ಟು ಕನಸು ಕಟ್ಟಿಕೊಂಡರೊ ಏನೋ. ದಿನನಿತ್ಯದ  ಕ್ಷಣಗಳನ್ನು ಅವರು ಒಲುಮೆಯಿಂದ, ಸಂತೋಷದಿಂದ ಅನುಭವಿಸಲಾರಂಭಿಸಿದರು. ಪ್ರೀತಿ ಮತ್ತು ಪುನುಗಿನ ಸುಗಂಧವನ್ನು ಅಡಗಿಸಿಡುವುದು ಕಷ್ಟಸಾಧ್ಯ. ಒಸಾಕ ಹಾಗೂ ಆನ್ನಿ ಯ ವಿವಾಹದ ಸುದ್ದಿ ಜಪಾನಿ ಅಧಿಕಾರಿಗಳ ಕಿವಿ ಮುಟ್ಟಲು ಹೆಚ್ಚು ದಿನ ಬೇಕಾಗಲಿಲ್ಲ. ಅಧಿಕಾರಿಗಳು ಆನ್ನಿ ಯ ತಂದೆಯನ್ನು ತಮ್ಮ ಕಛೇರಿಗೆ ಕರೆಸಿಕೊಂಡರು. ವಿವಾಹವನ್ನು ಅಸಿಂಧುಗೊಳಿಸಿ ಆನ್ನಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕೆಂದು ಆದೇಶ ನೀಡಿದರು. ಆದೇಶವನ್ನು ಪಾಲಿಸದಿದ್ದಲ್ಲಿ ಅವರ ಕುಟುಂಬವನ್ನು ಸರ್ವನಾಶ ಮಾಡುವುದರೊಂದಿಗೆ ಒಸಾಕನ ಜೀವ ತೆಗೆಯಲಾಗುವುದು ಎಂದು ಎಚ್ಚರಿಕೆ ನೀಡಿದರು. ಭಯಭೀತನಾದ ಆಕೆಯ ತಂದೆ ತನ್ನ ಮನೆಯ ಪಕ್ಕದಲ್ಲೇ ಮಗಳಿಗೊಂದು ಪುಟ್ಟ ಮನೆಯನ್ನು ಮಾಡಿ ಆಕೆಯ ವಸತಿಯ ವ್ಯವಸ್ಥೆ ಮಾಡಿದನು. ಗರ್ಭಿಣಿಯಾಗಿದ್ದ  ಆಕೆ ಆ ಮನೆಯಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು. ಅಷ್ಟರಲ್ಲೇ ಎರಡನೇ ಮಹಾಯುದ್ಧ ಮುಗಿದು ಸೋತ ಜಪಾನೀಯರ ದ್ವೀಪದ ಆಡಳಿತವೂ ಕೊನೆಗಾಣುತ್ತದೆ.

ಶರಣಾಗತರಾದ ಜಪಾನೀ ಸೈನಿಕರನ್ನು ಆಂಗ್ಲರು ಸೈನಿಕರ ಪಾಳ್ಯದಲ್ಲಿ ಸೆರೆ ಹಿಡಿದಿಟ್ಟರು. ಅಂಡಮಾನಿನ ಜನತೆ ಆಂಗ್ಲರ ಆಡಳಿತಕ್ಕೆ ಹಿಂತಿರುಗಿದರು. ಆಂಗ್ಲ  ಆಡಳಿತಾಧಿಕಾರಿಗಳಿಗೆ ಆನ್ನಿ ಹಾಗೂ ಒಸಾಕಾರ ವಿಷಯ ತಿಳಿಯುತ್ತದೆ. ಆನ್ನಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಬರಮಾಡಿಕೊಂಡು ಆಕೆಯ ವಿವಾಹದ ಬಗ್ಗೆ ಪ್ರಶ್ನಿಸಲಾಗುತ್ತದೆ. ಜಪಾನೀಯರು ಹಾಗೂ ಆಂಗ್ಲರು ಪರಸ್ಪರ ಶತ್ರುಗಳಾದ್ದರಿಂದ ತನಗೆ ಅಪಾಯವಾಗಬಹುದೆಂದು ಭಾವಿಸಿ ಭಯಗೊಂಡ ಆಕೆ ತನ್ನ ಗಂಡ ಚೈನಾದವನೆಂದು ಹೇಳುತ್ತಾಳೆ. ಆಕೆಯ ಬಗ್ಗೆ ಸಂಪೂರ್ಣ ಮಾಹಿತಿಯಿದ್ದ ಕಾರಣ ಆಕೆಗೆ ಸತ್ಯ ಹೇಳುವಂತೆ ಓಲೈಸಲಾಗುತ್ತದೆ.  ಆಕೆಯನ್ನು ಒಸಾಕನನ್ನು ಒಂದುಗೂಡಿಸುವ ಭರವಸೆಯನ್ನು ನೀಡಲಾಗುತ್ತದೆ. ಆದರೆ ಅಧಿಕಾರಿಗಳು ಭರವಸೆ ಈಡೇರಿಸದೆ ಒಸಾಕನನ್ನು ಇತರ ಯುದ್ಧ ಖೈದಿಗಳಂತೆ ಸೆರೆಮನೆಗೆ ದೂಡುತ್ತಾರೆ. ಆನ್ನಿ ಕಾಲಾಂತರದಲ್ಲಿ ಬೇರೊಬ್ಬನನ್ನು ಮದುವೆಯಾದರೂ ಒಸಾಕನ ನೆನಪು ಆಕೆಯಲ್ಲಿ ಹಸಿಯಾಗಿಯೇ ಉಳಿಯುತ್ತದೆ. ಶಕುಂತಲಾರವರು ಹೇಳುವಂತೆ, ವೃದ್ಧೆಯಾದ ಆನ್ನಿ ಒಸಾಕನ ನೆನಪನ್ನ ಹಂಚಿಕೊಳ್ಳುವಾಗೆಲ್ಲ ಕಂಬನಿ ಮಿಡಿಯುತ್ತಾಳೆ. ಆಕೆಯ ಮಗಳು ಮಿಸ್ಕೊ. ಈಗ ಮಿಸ್ಕೊಗೂ ಮಕ್ಕಳಿದ್ದಾರೆ. ಅನ್ನಿಯಂತೆ ಒಸಾಕನು ಎಲ್ಲೋ ಒಂದೆಡೆ ಬದುಕಿರಬಹುದೇನೋ, ತನ್ನ ಮಗಳು, ಮೊಮ್ಮಕ್ಕಳನ್ನು ಭೇಟಿಯಾದಾನೇನೋ…ಇದೊಂದು ಕ್ಷಣದ ರಮ್ಯ ಕಲ್ಪನೆಯಷ್ಟೇ….

ಇಬ್ಬದಿಯ ಕೀಲಾದ ಆಂಗ್ಲ ಹಾಗೂ ಜಪಾನೀಯರ ಆಡಳಿತದ ಬಗ್ಗೆ ಶಕುಂತಲಾರ ಧೋರಣೆ ಅಭಿಪ್ರಾಯ ಅಪರೂಪದ್ದೇನು ಅಲ್ಲ. ತಮ್ಮನ್ನು ಆಳುವವರನ್ನ ಸಮೂಹ ಸನ್ನಿಯಾಗಿ ಆರಾಧಿಸುವವರ ಸಂಖ್ಯೆ ಅಧಿಕವೆ. ರಾಜಮಹಾರಾಜರುಗಳ ಕಾಲದಿಂದ ಇಂದಿನವರೆಗೂ ನಾವಿದನ್ನು ಕಾಣುತ್ತಿದ್ದೇವೆ. ಇದು ಒಪ್ಪಿತವೇ ಒಪ್ಪಿತವಲ್ಲವೇ ಎನ್ನುವುದಕ್ಕಿಂತ ಹೆಚ್ಚಾಗಿ ನಾವು ಗಮನಿಸಬೇಕಾದ ಅಂಶ ಬೇರೆಯೇ ಇದೆ. ಒಂದು ಸಮುದಾಯವು ತಮ್ಮಿಚ್ಛೆಯಂತೆ ಬದುಕನ್ನು ಕಟ್ಟಿಕೊಳ್ಳುವ ಅವಕಾಶದಿಂದ ವಂಚಿತರಾಗುವ ಸತ್ಯವನ್ನು ಮರೆಮಾಚುವ ಶಕ್ತಿಯನ್ನ ಈ ಇಬ್ಬದಿಯ ಕೀಲುಗಳು ಹೊಂದಿದ್ದವು. ಆಳುವ ವರ್ಗದ ಸನ್ನಡತೆಯೇನು ಎಂದು ಸೂಕ್ಷ್ಮದರ್ಶಕದಲ್ಲಿ ಹುಡುಕಿ, ಮೆಚ್ಚಿ,  ಆರಾಧಿಸುವ ಮನಸ್ಥಿತಿಯನ್ನು ಆಳುವ ವರ್ಗವು ತನ್ನ ಕಥಾನಕದ ಮೂಲಕ ಜನರ ಮನದಲ್ಲಿ ಅಚ್ಚು ಹಾಕುತ್ತದೆ.. ಹಾಗಾಗಿ ದಾಸ್ಯದ ಮನಸ್ಥಿತಿ ಮತ್ತು ದಾಸ್ಯದಬಾಳು ಒಪ್ಪಿತವಾಗುತ್ತದೆ. ಇಬ್ಬದಿಯ ಕೀಲಿನಲಿ ಇಂತಿಪ್ಪ ಬಾಳು ಅಂಡಮಾನ್ ಜನತೆಯದಾಗಿತ್ತು.

ರಾಜಲಕ್ಷ್ಮೀ ಎನ್‌ ಕೆ

ನಿವೃತ್ತ ಉಪನ್ಯಾಸಕರು

ಓದಿ :ಅಂಡಮಾನ್‌ ಡೈರಿ -1  ಉಸುಕಿನಲ್ಲಿ ಊರಿದ ಹೆಜ್ಜೆಗಳು

ಅಂಡಮಾನ್‌ ಡೈರಿ –2 ಮಣ್ಣಿನ ಜ್ವಾಲಾಮುಖಿಯೊಳಗಿನ ತಣ್ಣಗಿನ ಅಲೆಗಳು

ಮಣ್ಣಿನ ಜ್ವಾಲಾಮುಖಿಯೊಳಗಿನ ತಣ್ಣಗಿನ ಅಲೆಗಳು
ಅಂಡಮಾನ್ ದ್ವೀಪದ ಚರಿತ್ರೆಯನ್ನು ಓದಿಕೊಂಡು ಜೊತೆಗೆ ಮೌಖಿಕವಾಗಿ ಏನಾದರೂ ಲಭ್ಯವಿದೆಯೇ ಎನ್ನುವ ಆಲೋಚನೆಯೊಂದಿಗೆ ಅಲ್ಲಿನ ಟ್ಯಾಕ್ಸಿ ಚಾಲಕರನ್ನು, ಉಪಹಾರ ಗೃಹದ ಪರಿಚಾರಕರನ್ನು, ಅತಿಥಿ ಗೃಹದ ನೌಕರರನ್ನು ಮಾತಿಗೆಳೆದಾಗ ಒಂದಷ್ಟು ಮಾಹಿತಿ ಲಭಿಸಿತು. ಈ ಸಂಭಾಷಣೆಗಳು ಮೌಖಿಕ ಕಥಾನಕ. ಅಲ್ಲಿನ ಯುವಕ ಯುವತಿಯರಿಗೆ ಅವರ ತಂದೆ ತಾಯಿಯರು ಅಥವಾ ಅಜ್ಜ-ಅಜ್ಜಿಯರು ಅವರ ವಂಶಾವಳಿಯ ಬಗ್ಗೆ ಹೇಳಿದ ಕಥೆಗಳಿವು. ಈ ನೆಲೆಯ ಒಂದು ಎಳೆಯನ್ನು ಹಂಚಿಕೊಳ್ಳುವ ಪ್ರಯತ್ನ ಇಲ್ಲಿದೆ – ರಾಜಲಕ್ಷ್ಮೀ ಎನ್‌ ಕೆ, ನಿವೃತ್ತ ಉಪನ್ಯಾಸಕರು.

ಮಂಗಳೂರಿನಿಂದ ಸರಿಸುಮಾರು 2140 ಕಿಲೋಮೀಟರ್ ದೂರವಿರುವ ಪೋರ್ಟ್ ಬ್ಲೇರ್  ನಲ್ಲಿ ನಾವು ಇದ್ದಷ್ಟು ಸಮಯವೂ ಸರಿ ಸುಮಾರು ಐದು ಮೂವತ್ತರ ಒಳಗೆ ಸೂರ್ಯೋದಯವಾಗುತ್ತಿತ್ತು. ಅಂತೆಯೇ ಸಂಜೆ ಐದು ಮೂವತ್ತರ ಒಳಗೆ ಕತ್ತಲಾಗುತ್ತಿತ್ತು. ಸಂಜೆ 7 ಗಂಟೆ ಆದರೂ ತುಸು ಬೆಳಕಿರುವ ಮಂಗಳೂರಿನಿಂದ ಹೋದ ನಮಗೆ ಸಂಜೆ ಬೇಗ ಕತ್ತಲಾಗುವುದನ್ನು ಒಪ್ಪಿಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಸಂಜೆಯ ನಂತರ ತಿರುಗಾಡಿ ಅಲ್ಲಿನ ಒಂದಿಷ್ಟು  ಜನಜೀವನ ಪರಿಚಯ ಮಾಡಿಕೊಳ್ಳುವುದಕ್ಕೆ ಇದು ಅಡ್ಡಿಯಾಗಬಹುದೇನೋ ಅಂದುಕೊಂಡೆವು. ಟ್ಯಾಕ್ಸಿಯವನನ್ನು ಕೇಳಿದಾಗ ಅವನು “ಅಂಗಡಿ ಮುಗ್ಗಟ್ಟುಗಳು ಎಂಟು ಗಂಟೆಗೆಲ್ಲ ಮುಚ್ಚುತ್ತವೆ. ರಾತ್ರಿ 12 ಗಂಟೆಯಾದರೂ ಓಡಾಟಕ್ಕೆ ಭಯ ಇಲ್ಲ. ಸುರಕ್ಷಿತ ಊರು ಇದು. ಹೆಣ್ಣು ಮಕ್ಕಳು ಕೂಡ ಒಬ್ಬರೇ ಓಡಾಡಬಹುದು” ಎಂದ. ನಮ್ಮ ಒಂದೆರಡು ದಿನಗಳ ತಿರುಗಾಟದಲ್ಲಿ ನಾವು ಕಂಡಂತೆ, ಯಾವುದೇ ಮುಜುಗರ, ಅನಾವಶ್ಯಕ ಭಯವಿಲ್ಲದೆ ಹೆಣ್ಣು ಮಕ್ಕಳು ಅಂಗಡಿಗಳಲ್ಲಿ, ಉಪಹಾರ  ಗೃಹಗಳಲ್ಲಿ ಮುಗುಳ್ನಗೆಯಿಂದ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರು. ಹ್ಯಾವ್ ಲಾಕ್ ದ್ವೀಪದಲ್ಲಿ ನಾವಿಳಿದುಕೊಂಡಿದ್ದ ವಸತಿಗೃಹದಲ್ಲಿ  ಮಹಿಳಾ ಉದ್ಯೋಗಿಗಳದ್ದೇ ಪಾರಮ್ಯ. ಪುರುಷರ ಸಂಖ್ಯೆ ಬೆರಳೆಣಿಕೆ ಯಷ್ಟೆ. ರಾತ್ರಿ ೧೦ ಗಂಟೆಗೂ ನೇಪಾಳಿ ಹುಡುಗಿ ಒಬ್ಬಳು ಎಲ್ಲಾ ಕೊಠಡಿಗಳು ವ್ಯವಸ್ಥಿತವಾಗಿದೆಯೇ ಎಂದು ಪರೀಕ್ಷಿಸುತ್ತಿದ್ದಳು.  ಈ ದ್ವೀಪ ಸಮೂಹದಲ್ಲಿ ಮಹಿಳೆಯ ಸ್ಥಾನಮಾನ ಎಂದಿಗೂ ಹೀಗೆ ಇತ್ತೇ ಎಂಬ ಪ್ರಶ್ನೆ ಸಹಜವಾಗಿ ಮೂಡಿತು. ಯಾವುದೇ ತಾರತಮ್ಯ ಎದುರಿಸದೆ ಆಕೆ ಘನತೆಯಿಂದ ಸ್ವಾವಲಂಬಿ ಬದುಕನ್ನು ಕಂಡಿದ್ದಳೆ? ಗೌರವಾನ್ವಿತಳಾಗಿದ್ದಳೆ?

ಯಾವುದೇ ಪ್ರದೇಶದ ಸಮಾಜದ ಹುಟ್ಟು ಹಾಗೂ ಬೆಳವಣಿಗೆಯನ್ನು ಅರಿತುಕೊಳ್ಳಲು ನಾವು ಚರಿತ್ರೆಯ ಪುಸ್ತಕಗಳ ಮೊರೆ ಹೋಗುತ್ತೇವೆ. ನಮಗೆಲ್ಲ ತಿಳಿದಿರುವಂತೆ ಯಾವುದೇ ಚರಿತ್ರೆಯ ಪುಸ್ತಕವು ಎಲ್ಲವನ್ನು ಹಿಡಿದಿಡುವುದು ಸಾಧ್ಯವಿಲ್ಲ. ಚರಿತ್ರಕಾರರ ಕಾಲಘಟ್ಟ, ಒಲವು, ನಿಲುವು  ಸ್ವಲ್ಪ ಮಟ್ಟಿಗಾದರೂ ಇಲ್ಲಿ ಜಾಗೃತವಾಗಿರುತ್ತದೆ. ಅಂತೆಯೇ ಪುಟದ ಮಿತಿ ಇತ್ಯಾದಿ  ಇತ್ಯಾದಿಗಳು ಕೂಡ ಹೇಳಬೇಕೆನಿಸುವ ಎಷ್ಟೋ ವಿಷಯಗಳನ್ನು ಹೇಳಗೊಡುವುದಿಲ್ಲ. ಆದರೂ ಚರಿತ್ರೆಯ ಪುಸ್ತಕಗಳ ಮತ್ತು ಇತರ ಪರಿಕರಗಳನ್ನು ಉಪಯೋಗಿಸಿಕೊಂಡು ಒಂದು ಕಾಲಘಟ್ಟದಲ್ಲಿ ಸಮಾಜ ಹೇಗಿತ್ತು ಎಂದು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಮಟ್ಟಿಗಾದರೂ ಸಾಧ್ಯವಾಗುತ್ತದೆ. ಈ  ದಿಸೆಯಲ್ಲಿ ಅಂಡಮಾನ್ ದ್ವೀಪದ ಚರಿತ್ರೆಯನ್ನು ಓದಿಕೊಂಡು ಜೊತೆಗೆ ಮೌಖಿಕವಾಗಿ ಏನಾದರೂ ಲಭ್ಯವಿದೆಯೇ ಎನ್ನುವ ಆಲೋಚನೆಯೊಂದಿಗೆ ಅಲ್ಲಿನ ಟ್ಯಾಕ್ಸಿ ಚಾಲಕರನ್ನು, ಉಪಹಾರ ಗೃಹದ ಪರಿಚಾರಕರನ್ನು, ಅತಿಥಿ ಗೃಹದ ನೌಕರರನ್ನು ಮಾತಿಗೆಳೆದಾಗ ಒಂದಷ್ಟು ಮಾಹಿತಿ ಲಭಿಸಿತು. ಈ ಸಂಭಾಷಣೆಗಳು ಮೌಖಿಕ ಕಥಾನಕ. ಅಲ್ಲಿನ ಯುವಕ ಯುವತಿಯರಿಗೆ ಅವರ ತಂದೆ ತಾಯಿಯರು ಅಥವಾ ಅಜ್ಜ-ಅಜ್ಜಿಯರು ಅವರ ವಂಶಾವಳಿಯ ಬಗ್ಗೆ ಹೇಳಿದ ಕಥೆಗಳಿವು. ಬಾಯಿಂದ ಬಾಯಿಗೆ, ನೆನಪಿನಿಂದ ನೆನಪಿಗೆ ಹಾದು ಬರುವಾಗ ಅನುಭವಗಳು ಕಥೆಗಳಾಗಿ, ಚದುರಿ ಹೋದ ಜೀವಗಳ ಎಳೆಯನ್ನೆಲ್ಲ ಹಿಡಿದಿಟ್ಟು  ಸುಂದರ ನೇಯ್ಗೆಯಾಗಿಸಿ, ನಿರ್ದಿಷ್ಟ ರೂಪ ಪಡೆದವು. ಜೀವನದ ಕೆಲವು ಘಟನೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಮಾತ್ರ ಮನಸ್ಸಿನಾಳದಲ್ಲಿ ಉಳಿಸಿ ತಮ್ಮ ಮಕ್ಕಳೊಂದಿಗೆ ಮೊಮ್ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ಓರಗೆಯವರೊಂದಿಗೆ ಮೆಲುಕು ಹಾಕುತ್ತಾ ಕನಸು ಕಂಗಳಿಂದ ಹರಟುತ್ತಿರುವ ಹಿರಿಯ ಜೀವಗಳು ಅಂಡಮಾನ್ ದ್ವೀಪ ಸಮೂಹದಲ್ಲಿ ಇವತ್ತಿಗೂ ಕಾಣ ಬರುತ್ತಾರೆ. ಈ ನೆಲೆಯ ಒಂದು ಎಳೆಯನ್ನು ಹಂಚಿಕೊಳ್ಳುವ ಪ್ರಯತ್ನ ಇಲ್ಲಿದೆ.

ಹಿಂದಿನ ಲೇಖನದಲ್ಲಿ ರಾಜಕೀಯೇತರ ಮಹಿಳಾ ಕೈದಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದೆ. 1862 ರಲ್ಲಿ ಪೋರ್ಟ್ ಬ್ಲೇರ್ ನಲ್ಲಿ ಬಂದಿಳಿದ ಈ ಮಹಿಳೆಯರು ಸ್ವ ಇಚ್ಛೆಯಿಂದ ಸ್ಥಳಾಂತರ ಹೊಂದಿದವರು. ಆದರೆ ಇವರನ್ನು ಸ್ಥಳಾಂತರಿಸುವುದಕ್ಕೆ ಬ್ರಿಟಿಷ್ ವಸಾಹತುಶಾಹಿ ಸರಕಾರಕ್ಕೆ ಇದ್ದ ಕಾರಣವೇನು?  ಈ ದ್ವೀಪದಲ್ಲಿ ಅದಕ್ಕೂ ಮೊದಲು ಪುರುಷ ಅಪರಾಧಿಗಳನ್ನು ತಂದಿಳಿಸಿದಾಗಲೇ  ಸೆರೆಮನೆಯಾಗಲಿ, ವಾಸಯೋಗ್ಯ ವಸತಿಯಾಗಲಿ ಇರಲಿಲ್ಲ. ಬಟಾ ಬಯಲಿನಲ್ಲಿ ಈ ಕೈದಿಗಳನ್ನು ಹಿಡಿದಿಟ್ಟು ಕಠಿಣ ಪರಿಶ್ರಮಕ್ಕೆ ಒಡ್ಡುವುದರ ಹಿಂದೆ ಆಂಗ್ಲರ ಗಾಢವಾದ ನಂಬಿಕೆಯೊಂದು ಇತ್ತು. ಅಪರಾಧ  ಮಾಡುವವರು ನೈತಿಕತೆಯನ್ನು ಬಿಟ್ಟವರು. ಅವರು  ನೈತಿಕತೆಯನ್ನು ಹೊಂದುವಂತೆ ಮಾಡುವುದು ಅವಶ್ಯ. ಹಾಗಾಗಿ ತಮ್ಮ ಕುಟುಂಬಗಳಿಂದ, ತಮ್ಮ ಊರು ಮನೆಗಳಿಂದ ಬೇರ್ಪಟ್ಟು, ಏಕಾಂಗಿಯಾಗಿ, ದೈಹಿಕ ಶ್ರಮದ ಜೀವನ ನಡೆಸಿದಾಗ ಮನಸ್ಸು ನಿರ್ಮಲವಾಗುತ್ತದೆ, ದೈವಿಕವಾಗುತ್ತದೆ ಮತ್ತು ಅಪರಾಧ ಮಾಡುವ ಮನಸ್ಥಿತಿ ಬದಲಾಗಿ ವ್ಯಕ್ತಿ ನೈತಿಕತೆಯನ್ನು ಮೈಗೂಡಿಸಿಕೊಂಡು ಸಜ್ಜನನಾಗುತ್ತಾನೆ ಎಂಬ ಆಂಗ್ಲರ ನಂಬಿಕೆಯೇ ಕೈದಿಗಳನ್ನು ಸ್ಥಳಾಂತರಿಸುವುದಕ್ಕೆ ಕಾರಣವಾಗಿತ್ತು. ಆದರೆ ಅವರ ನಂಬಿಕೆ ಸುಳ್ಳಾಯಿತು. ಕೇವಲ ಪುರುಷರೇ ತುಂಬಿದ್ದ ದ್ವೀಪದಲ್ಲಿ ತಮ್ಮ ಲೈಂಗಿಕ ತೃಷೆ ಯನ್ನು  ಪೂರೈಸಿಕೊಳ್ಳಲು ಅವರು ಅನ್ಯ ಮಾರ್ಗಗಳನ್ನು ಅನುಸರಿಸಲಾರಂಭಿಸಿದರು. ಆಗಿನ ಕಾಲದಲ್ಲಿ ಸಲಿಂಗ ಚಟುವಟಿಕೆಗಳನ್ನು ಅನೈತಿಕವೆಂದು ಪರಿಗಣಿಸಲಾಗುತ್ತಿತ್ತು. ಹಾಗಾಗಿ ಪುರುಷ ಕೈದಿಗಳು ಸಲಿಂಗ ಚಟುವಟಿಕೆಗಳಲ್ಲಿ ಒಳಗೊಂಡದ್ದು ಅನೈತಿಕವೆಂದು, ಅಪರಾಧವೆಂದು ಪರಿಗಣಿಸಲ್ಪಟ್ಟಿತು. ನೈತಿಕವಾಗಿ ಸದೃಢರಾಗಬೇಕಾಗಿದ್ದ ಕೈದಿಗಳು ಹೆಚ್ಚು ಹೆಚ್ಚು ಅನೈತಿಕ ರಾಗುತ್ತಿದ್ದಾರೆ ಎಂಬ ಭಾವನೆ ಅಧಿಕಾರಿಗಳಲ್ಲಿ ಮೂಡಲಾರಂಭಿಸಿತು.  ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ  ಕೈದಿಗಳಿಗೆ ತಮ್ಮ ಹೆಂಡತಿ ಮಕ್ಕಳನ್ನು ತಮ್ಮ ಊರುಗಳಿಂದ ಕರೆಸಿಕೊಳ್ಳುವ ಅವಕಾಶವನ್ನು ನೀಡಲಾಯಿತು. ಆದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ದ್ವೀಪಕ್ಕೆ ಬಂದರು. ‘ಕಾಲಾಪಾನಿ’ಯನ್ನು ದಾಟುವುದರ ಮೂಲಕ  ಜಾತಿ ಭ್ರಷ್ಟ ರಾಗುವುದು ಕೂಡ ಸಮಸ್ಯೆ ಎನಿಸಿ ಹೆಚ್ಚಿನವರು ದ್ವೀಪಕ್ಕೆ ಬರಲು ಹಿಂದೇಟು ಹಾಕಿದರು.

ಅಧಿಕಾರಿಗಳ ಮೊದಲ ಪ್ರಯತ್ನ ಸಫಲವಾಗದಿದ್ದಾಗ ಎರಡನೇ ಪ್ರಯತ್ನವಾಗಿ ಮಹಿಳಾ  ಕೈದಿಗಳನ್ನು ದ್ವೀಪಕ್ಕೆ ಸ್ಥಳಾಂತರಿಸಿದರು. ಆದರೆ ಈ ಮಹಿಳೆಯರಿಗೆ ತಾವು ಯಾವ ಕಾರಣಕ್ಕೆ ಸ್ಥಳಾಂತರವಾಗುತ್ತಿದ್ದೇವೆ ಎಂಬ ಅರಿವಿರಲಿಲ್ಲ. ಕಾನೂನಾತ್ಮಕವಾಗಿ ಪುರುಷ ಹಾಗೂ ಮಹಿಳಾ ಕೈದಿಗಳು ವಿವಾಹವಾಗುವುದಕ್ಕೆ ಅಧಿಕಾರಿ ವರ್ಗವು ಪರವಾನಗಿಯನ್ನು ನೀಡಿತು. ಹೀಗೆ ಸಂಸಾರಸ್ಥರಾದವರಿಗೆ  ಬಿತ್ತಿ ಬೆಳೆಯಲು ಭೂಮಿಯನ್ನು ನೀಡಲಾಯಿತು. ಮಹಿಳೆಯರು ದ್ವೀಪಕ್ಕೆ ಬರಲು ಪ್ರೋತ್ಸಾಹಿಸುವುದಕ್ಕೆ ಇದು ಒಂದು ಕಾರಣವಾದರೆ ಇನ್ನೊಂದು ಬಲವಾದ ಕಾರಣ ದ್ವೀಪದ ಅಭಿವೃದ್ಧಿ. ದ್ವೀಪವನ್ನು ಅಭಿವೃದ್ಧಿಗೊಳಿಸಲು, ಅಲ್ಲಿನ ನಿವಾಸಿಗಳ ಸೌಕರ್ಯವನ್ನು ಪೂರೈಸಲು ದುಡಿಯುವ ಜನರ ಅವಶ್ಯಕತೆ ಇತ್ತು. ಶ್ರಮಜೀವಿ ಮಹಿಳೆಯರನ್ನು ಕುಟುಂಬದ ನೆಲೆಯಲ್ಲಿ ಉಪಯುಕ್ತವೆಂದು ಪರಿಗಣಿಸಿ ಅವರ ಸಂಖ್ಯೆಯನ್ನು ಹೆಚ್ಚಿಸುವ ಅವಶ್ಯಕತೆಯನ್ನು ಬ್ರಿಟಿಷ್ ಸರಕಾರ ಗಮನಿಸಿತು. ಈ ಎರಡು ಕಾರಣಗಳಿಂದ ದ್ವೀಪಕ್ಕೆ ಮಹಿಳೆಯರು ಬಂದಿಳಿದು, ದುಡಿದು ಸಾಮಾಜಿಕ ಜೀವಿಗಳಾಗಿ ಬದುಕು ಕಟ್ಟಿಕೊಂಡರು. ಇಂದು ನಿರ್ಭೀತರಾಗಿ ದುಡಿಯುವ ಮಹಿಳೆಯರನ್ನು ನಾವು ಕಾಣುತ್ತಿರುವುದರ ಹಿಂದೆ  ಚಾರಿತ್ರಿಕ ಕಾರಣವೂ  ಪೂರಕವಾಗಿದೆಯೆಂದು ಹೇಳಬಹುದು.

ಆರಂಭಿಕ ಹಂತದಿಂದಲೂ ಈ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನವಿತ್ತು. ಇಲ್ಲಿ ‘ಸತಿ’ ಪದ್ಧತಿ ಇರಲಿಲ್ಲ. ವೇಶ್ಯಾವಾಟಿಕೆಯೂ ಇರಲಿಲ್ಲ. ಅವರು ಪುರುಷರಿಗೆ ಸಮನಾಗಿ ಕೆಲಸಗಳನ್ನು ನಿರ್ವಹಿಸ ಬೇಕಿತ್ತಾದರೂ ಅವರ ಅನಿಸಿಕೆ ಮತ್ತು ಭಾವನೆಗಳಿಗೆ ಬೆಲೆ ಹಾಗೂ ಅವನ್ನು ವ್ಯಕ್ತಪಡಿಸುವ ಸ್ವಾತಂತ್ರ‍್ಯವಿತ್ತು. ಜೀವಾವಧಿ ಶಿಕ್ಷೆಗೊಳಗಾಗಿ ಇಲ್ಲಿ ಬಂಧಿಯಾಗಿದ್ದವರು ತಮ್ಮ ಶಿಕ್ಷೆಯ ಅವಧಿ ಮುಗಿದ ನಂತರ ತಮ್ಮ ಊರುಗಳಿಗೆ ಹಿಂತಿರುಗಿ ಹೋಗುವಂತಿರಲಿಲ್ಲ. ಅವರ ಕುಟುಂಬವನ್ನು ದ್ವೀಪಕ್ಕೆ ಕರೆಸಿಕೊಳ್ಳಬಹುದಾಗಿದ್ದರೂ ಹೆಚ್ಚಿನ ಕುಟುಂಬಗಳು ಬರಲು ಇಚ್ಛಿಸಲಿಲ್ಲ. ಹಾಗಾಗಿ ಈ ಮಹಿಳೆಯರು ಸ್ವಾಬಲಂಬಿಗಳಾಗಿ ದುಡಿದು ದ್ವೀಪವನ್ನು ಕಟ್ಟಿ ಬೆಳೆಸುವಲ್ಲಿ ಸಹಕಾರಿಯಾದರು. ದ್ವೀಪದ ಬೆಳವಣಿಗೆಯಲ್ಲಿ ಭಾಗವಹಿಸುವ ಮೂಲಕ ತಾವು ವಿನೂತನವಾದ ಚಾರಿತ್ರಿಕ ಪಾತ್ರವನ್ನು ವಹಿಸಿದ್ದೇವೆ ಎಂಬ ಅರಿವು ಕೂಡ ಅವರಿಗಿರಲಿಲ್ಲ.

ಈ ಹೆಣ್ಣು ಮಕ್ಕಳ ಜೀವನವೇನೂ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ, ಕಲ್ಲು ಮುಳ್ಳುಗಳ ಹಾದಿ ಸವೆಸಿದ ಅವರಿಗೆ ಇದ್ದ ಆಶಾಕಿರಣವೆಂದರೆ -ಅಪರಾಧಿಗಳ ಪಟ್ಟ ಹೊರದೆ, ಶಿಕ್ಷೆಗೊಳಪಟ್ಟವರಾಗದೆ ,ಸ್ವತಂತ್ರ ಬದುಕನ್ನು ಬಾಳಬಲ್ಲ ಅವರ ಮಕ್ಕಳು ಮತ್ತು ಅವರ ಭವಿಷ್ಯ. ಈ ತಾಯಂದಿರು ತಮ್ಮ ಹಿಂದಿನ ಜೀವನವನ್ನು ಮತ್ತು ತಮಗಂಟಿಕೊಂಡಿದ್ದ “ಅಪರಾಧಿ”,  “ಶಿಕ್ಷೆಗೊಳಪಟ್ಟವಳು” ಎಂಬಿತ್ಯಾದಿ ಹಣೆ ಪಟ್ಟಿಯನ್ನು ಕಳಚಿಕೊಳ್ಳಲು ಸಾಧ್ಯವಿರಲಿಲ್ಲ. ಅವರ ಜೀವನದ ಮತ್ತೊಂದು ದುರಂತವೆಂದರೆ ಅವರೆಲ್ಲ ಹಿಂತಿರುಗಿ ತಮ್ಮೂರಿಗೂ ಮರಳಿ ತೆರಳುವಂತಿರಲಿಲ್ಲ, ಜೊತೆಗೆ ಇಲ್ಲಿನ ಹೊಸ ಜೀವನದ ಪ್ರಾರಂಭದಿಂದಲೂ ಅವರೆಲ್ಲರೂ “ಅವನತ ಹೆಣ್ಣು ಮಕ್ಕಳು”. ಆದರೆ ಪುರುಷರ ಪೂರ್ವಜೀವನದ ಬಗ್ಗೆ ಯಾರೂ ಕೆದಕುತ್ತಿರಲಿಲ್ಲ, ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮಹಿಳೆ ಮದುವೆಯಾದಲ್ಲಿ ತನ್ನ ಗಂಡನಿಗೆ ಸರಿಸಮನಾಗಿ ದುಡಿಯಬೇಕಿತ್ತು. ಕೆಲವೊಮ್ಮೆ ಆತನಿಗಿಂತಲೂ ಕಠಿಣವಾದ ದುಡಿಮೆ ಆಕೆಯ ಪಾಲಿನದಾಗಿರುತ್ತಿತ್ತು. ಈ ಹೊಸ ಜೀವನ ಎನ್ನುವುದು ದಟ್ಟ ಕಾಡಿನಲ್ಲಿ ಪುಟ್ಟ ವಸತಿ, ತನ್ನ ಗಂಡ ಮತ್ತು ಪ್ರಾಣಿಗಳು. ತಮ್ಮೂರಿನಲ್ಲಿ ಕೂಡು ಕುಟುಂಬದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ಬದುಕು ಮಾಡುತ್ತಿದ್ದ ಹುಡುಗಿಯರು ಇಲ್ಲಿ ಯಾವ ಆಸರೆಯೂ ಇಲ್ಲದೆ ಬದುಕನ್ನು ಎದುರಿಸಲೇಬೇಕಾದ ಅನಿವಾರ್ಯತೆ ಇತ್ತು. ಕಾಲಕ್ರಮೇಣ ಮಕ್ಕಳು ಮೊಮ್ಮಕ್ಕಳಾದಾಗ ಅವರು ಅವಿಭಕ್ತ ಕುಟುಂಬ, ಕೂಡು ಕುಟುಂಬವನ್ನು ಕಾಣಲು ಸಾಧ್ಯವಾಯಿತು.

ಕೆಲಸದಲ್ಲಿ ತೊಡಗಿ ಕೊಂಡಾಗ ನಡೆಯುವ ಆಕಸ್ಮಿಕ ಅಪಘಾತಗಳು ಹಾಗೂ ಅನಾರೋಗ್ಯ, ಅಧಿಕ ದುಡಿಮೆ ಇತ್ಯಾದಿಗಳಿಂದ ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಸಾವಿಗೀಡಾಗುತ್ತಿದ್ದರು. ವಿಧವಾ ವಿವಾಹ ಆಗುವುದಕ್ಕೆ ಕಾನೂನು ಹಾಗೂ ಸಮಾಜದ ಒಪ್ಪಿಗೆಯಿತ್ತು. ಪುರುಷರ ಸಂಖ್ಯೆ ಮಹಿಳೆಯರಿಗಿಂತ ಅಧಿಕವಾಗಿದ್ದರಿಂದ ಮರುಮದುವೆ ಕಷ್ಟವೇನು ಆಗಿರಲಿಲ್ಲ. ಆದರೆ ಸ್ವಜಾತಿ, ತಮ್ಮದೇ ಪಂಗಡ ಇಂತಹ ಆಯ್ಕೆಗಳು ಮಹಿಳೆಯರಿಗೆ ಇರಲಿಲ್ಲ. ಸಾಕಷ್ಟು ಹೊಂದಾಣಿಕೆಗಳನ್ನು ಮಾಡಿಕೊಂಡು ಮರು ವಿವಾಹ ಆಗಬೇಕಿತ್ತು. ವಿವಾಹ ನಂತರವೂ ಕೆಲವೊಮ್ಮೆ ಹೊಂದಾಣಿಕೆ ಅತೀ ಎನಿಸುವಷ್ಟು ಇರುತ್ತಿತ್ತು. ಹೆಂಡತಿಯ ಮನಸ್ಸು ಇರಾದೆಗಳನ್ನೆಲ್ಲ ನಿರ್ಲಕ್ಷಿಸಿ ಎಷ್ಟೋ ಗಂಡಸರು ತಮ್ಮ ಹೆಂಡತಿಯರನ್ನು ಬೇರೆ ಗಂಡಸಿನೊಂದಿಗೆ ದೈಹಿಕ ಸಂಬಂಧಕ್ಕೆ ಒತ್ತಾಯಿಸುವುದು ಮತ್ತು ಈ ಸಂಬಂಧವಾಗಿ ಗಂಡ ಹೆಂಡತಿ ನಡುವೆ ಜಗಳಗಳಾಗುವುದು ಸಾಮಾನ್ಯವಾಗಿತ್ತು. ಕೆಲವೊಂದು ಸಂದರ್ಭದಲ್ಲಿ ಹೆಂಡತಿ ತನ್ನ ಗಂಡನ ಇರಾದೆಯನ್ನು ಕಟುವಾಗಿ ವಿರೋಧಿಸಿ ಆತನನ್ನು ಕೊಲೆ ಮಾಡಿದ್ದು ಕೂಡ ಇದೆ .ಆಂಗ್ಲ ಅಧಿಕಾರಿಗಳು ಇಲ್ಲಿನ ಸಮಾಜದ ಬಗ್ಗೆ ಕಾಲಾನುಕಾಲಕ್ಕೆ ಸರಿಯಾಗಿ ತಮ್ಮ ವರದಿಯನ್ನು ನೀಡಬೇಕಾದಾಗ ಆ ವರದಿಗಳಲ್ಲಿ ಹೆಣ್ಣು ಗಂಡಿನ ನಡುವಿನ ಅನುಪಾತ ಸಮಾನವಾಗಿಲ್ಲದಿರುವುದು ಈ ಸಮಾಜದ ನೈತಿಕ ಅಧಃ ಪತನಕ್ಕೆ ಕಾರಣ ಎಂದು ನಮೂದಿಸುತ್ತಿದ್ದರು. ಈ ವರದಿಯ ವ್ಯಂಗ್ಯವೇನೆಂದರೆ ಎಲ್ಲಿಯೂ ಕೂಡ ಈ ಸಮಾಜದ ಮಹಿಳೆಯ ಸ್ಥಿತಿ ಏನು ? ಅವಳ ಅನಿಸಿಕೆ ಏನು ಎಂಬುದರ ಬಗ್ಗೆ ಉಲ್ಲೇಖವೇ ಇಲ್ಲದಿರುವುದು.

ಎರಡನೆಯ ಮದುವೆ ಎಂಬುದನ್ನು ಇಲ್ಲಿನ ಸಮಾಜ ಸಹಜವಾಗಿ ಸ್ವೀಕರಿಸುತ್ತಿತ್ತು. ಅನಿವಾರ್ಯ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಎರಡನೇ ಮದುವೆಯನ್ನು ಆಯ್ಕೆಯಾಗಿ ಮಾಡಿಕೊಂಡಿದ್ದರು. ಆರ್ಥಿಕವಾಗಿ ಸಬಲರಾಗಿದ್ದ ಮಹಿಳೆಯರು ಮರು ಮದುವೆಯಿಂದ ದೂರ ಉಳಿಯುತ್ತಿದ್ದರು. ಉದಾಹರಣೆಗೆ ಶ್ರೀಮತಿ ರೂತ್ ಮೇಶಕ್ ಎಂಬಾಕೆ ಶಾಲೆಯಲ್ಲಿ ಅಧ್ಯಾಪಕನಾಗಿದ್ದ ಹೆನ್ರಿ ಮೇಶಕ್ ಎಂಬಾತನನ್ನು ಮದುವೆಯಾಗಿರುತ್ತಾಳೆ. ಆತ ಟೆನಿಸ್ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಶಾಲೆಯಲ್ಲಿ ಮೃತನಾಗುತ್ತಾನೆ. ಮರಣಾನಂತರ ಆತನ ಉದ್ಯೋಗವು  ರೂತ್ ಗೆ ದೊರೆಯುತ್ತದೆ. ಆರ್ಥಿಕ  ಸಬಲತೆ ದೊರೆತ ಆಕೆ ಮರು ಮದುವೆ ಆಗುವುದಿಲ್ಲ.

ರಾಮಿಯಮ್ಮ ಎಂಬಾಕೆಯ ಬದುಕು  ರೂತ್ ಮೇಶಕ್ ಗಿಂತ ತುಸು ಭಿನ್ನ. ರಾಮಿಯಮ್ಮ ತನ್ನ ಹದಿನಾರನೇ ವಯಸ್ಸಿನಲ್ಲಿ ರಾಜರತನ ಎಂಬಾತನನ್ನು ಮದುವೆಯಾಗುತ್ತಾಳೆ. ಮದುವೆಯಾಗಿ ನಾಲ್ಕನೇ ದಿನಕ್ಕೆ ಆಕೆಯ ಗಂಡನನ್ನು ಜಪಾನ್ ಸೈನಿಕರು ಬಂಧಿಸಿ  ಕಾರಾಗೃಹಕ್ಕೆ ತಳ್ಳುತ್ತಾರೆ. ಒಂದು ತಿಂಗಳ ನಂತರ ಇತರ ಕಾರಾಗೃಹವಾಸಿಗಳೊಂದಿಗೆ ಆತನನ್ನು ಹಾಂಫ್ರೀಗಂಜ್ ಎಂಬ ಸ್ಥಳಕ್ಕೆ  ಕರೆದೊಯ್ದು ಗುಂಡಿಟ್ಟು ಕೊಲ್ಲಲಾಗುತ್ತದೆ. ನವ ವಿವಾಹಿತ ರಾಮಿಯಮ್ಮ ವಿಧವೆಯಾಗುತ್ತಾಳೆ. ಆಕೆ ತನ್ನೆಲ್ಲ ಆಭರಣಗಳು, ವರ್ಣಮಯ ವಸ್ತ್ರಗಳನ್ನು  ತೊರೆದು, ಬಿಳಿ ಬಟ್ಟೆ ಧರಿಸಿ ತನ್ನ ಉಳಿದ ಜೀವನವನ್ನು ಇತರರ ಸೇವೆಯಲ್ಲಿ ಕಳೆಯುತ್ತೇನೆಂದು ನಿರ್ಧರಿಸುತ್ತಾಳೆ. ೧೫ ವರ್ಷಗಳ ನಂತರ ಇತರರ ಒತ್ತಡಕ್ಕೆ ಮಣಿದು ಕಡುಕಷ್ಟವಾಗಿದ್ದ ವಿಧವಾ ಜೀವನಕ್ಕೆ ಇತಿಶ್ರೀ ಹಾಡಿ ಪುನರ್ ವಿವಾಹವಾಗುತ್ತಾಳೆ. ಆದರೆ ತನ್ನ ಜೀವನದುದ್ದಕ್ಕೂ ಬಿಳಿಯ ವಸ್ತ್ರವನ್ನು ಮಾತ್ರ ಧರಿಸುತ್ತಾಳೆ.

ಮಹಿಳೆ ತನ್ನ ಕುಟುಂಬದ ಸ್ವಾಸ್ಥ್ಯಕ್ಕೆ ದುಡಿದಂತೆ ಸಮಾಜದ ಸ್ವಾಸ್ಥ್ಯಕ್ಕೂ ದುಡಿಯುತ್ತಾಳೆ. ಸಮಾಜದ ಅಭಿವೃದ್ಧಿಯಲ್ಲಿ ಆಕೆಯ ಕೊಡುಗೆ ಗಮನೀಯವಾದುದು. ಅಂಡಮಾನ್ ದ್ವೀಪಗಳಲ್ಲಿ “ಅವನತ ಮಹಿಳೆ” ಎಂಬ ಹಣೆಪಟ್ಟಿ ಯೊಂದಿಗೆ ಹಗಲು ರಾತ್ರಿ ದ್ವೀಪದ ಅಭಿವೃದ್ಧಿಗಾಗಿ ದುಡಿದ ಮಹಿಳೆಯರು ವಂದನೀಯರು. ಈ ಮಹಿಳೆಯರ ಬದುಕು ಮಣ್ಣಿನ ಜ್ವಾಲಾಮುಖಿಯಂತೆ….ಈ ಮಹಿಳೆಯರು ಸತತವಾಗಿ ನಿರಂತರವಾಗಿ ತಣ್ಣನೆಯ ಅಲೆಗಳನ್ನೆ ದ್ವೀಪದಲ್ಲಿ ಹರಡಿದ್ದಾರೆ.. ಹರಡುತ್ತಲೇ ಇದ್ದಾರೆ.

ರಾಜಲಕ್ಷ್ಮೀ ಎನ್‌ ಕೆ

ನಿವೃತ್ತ ಉಪನ್ಯಾಸಕರು

ಅಂಡಮಾನ್‌ ಡೈರಿ -1 ಓದಿದ್ದೀರಾ? ಉಸುಕಿನಲ್ಲಿ ಊರಿದ ಹೆಜ್ಜೆಗಳು

ಪ್ರವಾಸಿಗರ ಸ್ವರ್ಗ – ಕವಲೇದುರ್ಗ
ಮಳೆಗಾಲವನ್ನು ಮಲೆನಾಡಿನಲ್ಲಿ ಇಷ್ಟ ಪಡದವರು ಯಾರಿದ್ದಾರೆ? ಸುತ್ತ ಹಸಿರ ಕಾಡುಗಳಿಂದ ತುಂಬಿ ತುಳುಕಾಡುತ್ತಿರುವ ಮಲೆನಾಡಿನ ಅರಣ್ಯಗಳ ನಡುವೆ ಅನೇಕ ಐತಿಹಾಸಿಕ ತಾಣಗಳಿವೆ.

ಮಳೆ ಬರುವ ಕಾಲದಲ್ಲಿ ಇಂತ ಒಂದು ಕಾಡಿಗೆ ಟ್ರಕ್ಕಿಂಗ್‌ ಹೋಗುವ ಮಜವೇ ಬೇರೆ. ನೀವು ಒಂದು ದಿನದ ಟ್ರಿಪ್‌ ಪ್ಲಾನ್‌ ಮಾಡೋದಾದ್ರೆ ನಾನು ನಿಮಗೆ ಒಂದು ಜಾಗ ಹೇಳ್ತೀನಿ.

ಅದೇ ಪ್ರವಾಸಿಗರ ಸ್ವರ್ಗ – ಕವಲೇದುರ್ಗ!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಹಸುರು ಹೊದ್ದಿರುವ ಪ್ರಕೃತಿ, ಮೋಡಗಳ ಕಣ್ಣಾಮುಚ್ಚಾಲೆ, ತಂಗಾಳಿ, ಮಂಜಿನಾಟ ಹಾಗೂ ಜಿಟಿ ಜಿಟಿ ಮಳೆ ….ಇವೆಲ್ಲಾ ಬೆರೆತು ಸ್ವರ್ಗ ಸದೃಶ ಅನುಭವವನ್ನು ನಮಗೆ ನೀಡುತ್ತವೆ.

ಒಂದಾನೊಂದು ಕಾಲದಲ್ಲಿ ರಾಜವೈಭೋಗದಿಂದ ಮೆರೆಯುತ್ತಿದ್ದ ಕವಲೆದುರ್ಗ ಈಗ ಅಕ್ಷರಶಃ ಪಾಳುಬಿದ್ದ ಕೋಟೆ. ಆದರೆ ಇದರ ಸುತ್ತ ಬೆಳೆದಿರುವ ದಟ್ಟ ಕಾಡಿನ ನಡುವೆ ಇರುವ ಕೋಟೆಯ ಒಳಗೆ ಇರುವ ರಾಜ, ರಾಣಿಯರ ಆರಮನೆಯ ದರ್ಬಾರು, ಈಜುಕೊಳ, ದೇವಾಲಯಗಳು ಅನೇಕ ಕಥೆಗಳನ್ನು ನಮಗೆ ಹೇಳುತ್ತವೆ.

ಕೋಟೆಯ ಗರ್ಭದ ಒಳಗಿದೆ ಚರಿತ್ರೆಯ ಪುಟಗಳು!

ಕವಲೇದುರ್ಗ ಎಂಬ ಹೆಸರು ಕಾವಲು ದುರ್ಗ ಎಂಬುದರಿಂದ ಬಂದಿದೆ. ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗಕ್ಕೆ ಭುವನಗಿರಿ ದುರ್ಗ ಎಂಬ ಹೆಸರಿದೆ.

9 ನೇ ಶತಮಾನದಲ್ಲಿ ಸ್ಥಾಪನೆಯಾದ ಕವಲೇದುರ್ಗ ಕೋಟೆಯು ವಿವಿಧ ಆಡಳಿತಗಾರರ ಆಳ್ವಿಕೆಯನ್ನು ಕಂಡಿದೆ. 14 ನೇ ಶತಮಾನದಲ್ಲಿ ಚೆಲುವರಂಗಪ್ಪರಿಂದ ನವೀಕರಿಸಲ್ಪಟ್ಟ ಈ ಕೋಟೆ ಕೆಳದಿ ಅರಸರ ತನಕ ವೈಭವದಿಂದ ಮೆರೆದಿದೆ. ಮಲ್ಲವರು ಮೊದಲು ಸಾಗರದ ಸಮೀಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ (ನಗರ) ಕೋಟೆಕೊತ್ತಲ ನಿರ್ಮಿಸಿ ರಾಜ್ಯಭಾರ ಮಾಡುತ್ತಿದ್ದರು. ಆಗ ಕವಲೇದುರ್ಗದ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾಧೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂದು ಹೆಸರಿಟ್ಟು ಆಳ್ವಿಕೆ ನಡೆಸಿದರು. ಮಲ್ಲವ ವಂಶದ ಪ್ರಖ್ಯಾತ ರಾಣಿ ಚೆನ್ನಮ್ಮಾಜಿ ಛತ್ರಪತಿ ಶಿವಾಜಿ ಮಹಾಹಾರಾಜರ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿದ್ದು ಇದೇ ಕವಲೇದುರ್ಗ ಸಂಸ್ಥಾನದ ಕೋಟೆಯಲ್ಲಿ.

ಕೆಳದಿಯ ಅರಸ ವೆಂಕಟಪ್ಪ ನಾಯಕನು ಹದಿನಾರನೇ ಶತಮಾನದಲ್ಲಿ ಇಲ್ಲಿ ಒಂದು ಅರಮನೆಯನ್ನು ಕಟ್ಟಿ ಅದನ್ನು ಒಂದು ಅಗ್ರಹಾರವನ್ನಾಗಿಸಿದ. ಮತ್ತಿನ ಮಠ ಎಂಬ ಶೃಂಗೇರಿ ಮಠದ ಶಾಖೆಯನ್ನೂ, ಒಂದು ಖಜಾನೆ, ಕಣಜ, ಆನೆಗಳಿಗಾಗಿ ಗಜಶಾಲೆ, ಕುದುರೆಗಳಿಗಾಗಿ ಅಶ್ವಶಾಲೆ ಮತ್ತು ಕೊಳಗಳನ್ನು ನಿರ್ಮಿಸಿದನು.

16 ನೇ ಶತಮಾನದ ಕೆಳದಿಯ ನಾಯಕರವರೆಗೆ, ಏಳು ಬುರುಜುಗಳನ್ನು ನಿರ್ಮಿಸುವ ಮೂಲಕ ಕೋಟೆಯನ್ನು ಬಲಪಡಿಸಲಾಯಿತು. 1763 ರಲ್ಲಿ ಕೋಟೆಯನ್ನು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಕ್ರಮಿಸಿಕೊಂಡರು.

ಏನಿದೆ ಈ ಕೋಟೆಯ ಒಳಗೆ?

ಸುಮಾರು ಆರು ನೂರು ವರ್ಷಗಳ ಇತಿಹಾಸ ಹೊಂದಿರುವ ಈ ಕೋಟೆಯನ್ನು ಮಳೆ ನೀರು ಆಧಾರಿತ ತಾಂತ್ರಿಕತೆ ಬಳಸಿರುವುದನ್ನು ಕಾಣಬಹುದು.

ಮೂರು ಸುತ್ತಿನ ಕೋಟೆಯಾದ ಈ ಕವಲೇ ದುರ್ಗವನ್ನು ಬೃಹತ್‌ ಗಾತ್ರದ ಪೆಡಸುಕಲ್ಲುಗಳ ಇಟ್ಟಿಗೆಗಳನ್ನು ಬಳಸಿ ಕಟ್ಟಲಾಗಿದೆ. ಪ್ರತಿ ಸುತ್ತಿನಲ್ಲೂ ಒಂದು ಹೆಬ್ಬಾಗಿಲಿದ್ದು,  ಅವುಗಳ ಇಕ್ಕೆಲಗಳಲ್ಲಿ ರಕ್ಷಣಾ ಕೊಠಡಿಗಳಿವೆ. ಕೋಟೆಯ ಮಧ್ಯ ದೇವಾಲಯಗಳು, ಒಂದು ಪಾಳುಬಿದ್ದ ಅರಮನೆ ಹಾಗೂ ಇತರ ರಚನೆಗಳಿವೆ.

ದುರ್ಗದ ತುತ್ತತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ಎಂಬ ಸಣ್ಣ ದೇವಸ್ಥಾನವಿದೆ.ಕೋಟೆ ಒಳಗಿರುವ ಅರಮನೆಯ ಜಾಗದಲ್ಲಿ ದೊಡ್ಡ ಅಡಿಪಾಯ ಕಂಡುಬರುತ್ತದೆ. ಇತ್ತೀಚಿನ ಉತ್ಖನನದಿಂದ, ಪರಸ್ಪರ ಹೊಂದಿಕೊಂಡಿರುವ ಕೊಠಡಿಗಳು,ವಿಶಾಲವಾದ ಕಂಬದ ಜಗುಲಿ, ಪೂಜಾಗೃಹ, ಅಡಿಗೆ ಕೋಣೆ ಮತ್ತು ಅದರಲ್ಲಿರುವ ಕಲ್ಲಿನ ಐದು ಉರಿಕ ಅಂದರೆ ಒಲೆ, ಕಲ್ಲಿನ ವೇದಿಕೆಯಿರುವ ಸ್ನಾನದ ಕೋಣೆ,ಉತ್ತಮ ನೀರು ಸರಬರಾಜು ವ್ಯವಸ್ಥೆ, ಒಂದು ವಿಶಾಲವಾದ ಒಳ ಪ್ರಾಂಗಣ ನಂತರ ಮೆಟ್ಟಿಲಿನಿಂದ ಕೂಡಿದ ಒಂದು ಕೊಳ – ಇವುಗಳಿಂದ ಕೂಡಿದ ಅರಮನೆಯ ವಾಸ್ತುಶಿಲ್ಪದ ಒಳನೋಟ ಕಾಣಸಿಗುತ್ತದೆ.

ಯಾವಾಗ ಚಾರಣ ಮಾಡಬಹುದು?

ನೀವು ಚಾರಣ ಪ್ರಿಯರಾಗಿದ್ದರೆ, ಒಂದು ದಿನ ಪೂರ್ತಿ ಕಾಡಿನಲ್ಲಿ, ಐತಿಹಾಸಿಕ ಅವಶೇಷಗಳ ನಡುವೆ ಇರಬೇಕು ಅಂತ ಇದ್ರೆ….ಕವಲೇದುರ್ಗ ಬೆಸ್ಟ್.‌ ನೀವು ವರ್ಷಪೂರ್ತಿ ಕವಲೇದುರ್ಗ ಕೋಟೆಗೆ ಚಾರಣ ಮಾಡಬಹುದು. ಆದರೂ ಆಗಸ್ಟ್ ಮತ್ತು ಏಪ್ರಿಲ್ ನಡುವೆ ಉತ್ತಮ ಸಮಯ. ಆದರೆ ಇಲ್ಲಿ ಯಾವುದೇ ವಾಸ್ತವ್ಯದ ಸೌಲಭ್ಯ ಇಲ್ಲ. ನೀವು ಹತ್ತಿರದಲ್ಲಿರುವ ತೀರ್ಥಹಳ್ಳಿ, ಶಿವಮೊಗ್ಗ ಅಥವಾ ಆಗುಂಬೆಯಲ್ಲಿ ತಂಗಬಹುದು. ಈ ಕೋಟೆ ಬೆಳಿಗ್ಗೆ 8:30 ರಿಂದ ಸಂಜೆ 5: 30 ರವರೆಗೆ ತೆರೆದಿರುತ್ತದೆ.

ಹೇಗೆ ತಲುಪುವುದು?

ಕವಲೇದುರ್ಗದಿಂದ ಸರಿಸುಮಾರು 51 ಮೈಲಿ ದೂರದಲ್ಲಿರುವ ಶಿವಮೊಗ್ಗ – ಹತ್ತಿರದ ರೈಲು ನಿಲ್ದಾಣ – ಉಳಿದ ದಾರಿಗಳಲ್ಲಿ ಕ್ಯಾಬ್ / ಟ್ಯಾಕ್ಸಿ ತೆಗೆದುಕೊಳ್ಳಿ. ಅಥವಾ ಕವಲೇದುರ್ಗ ಕೋಟೆಯಿಂದ ಸುಮಾರು 11 ಮೈಲಿ ದೂರದಲ್ಲಿರುವ ತೀರ್ಥಹಳ್ಳಿಯಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಕವಲೇದುರ್ಗದಲ್ಲಿ ನೀವು ನಡೆಯುತ್ತಾ, ಶಾಂತ ಕಾಡುಗಳ ಮಧ್ಯೆ ನೀವು ಚಾರಣ ಮಾಡಬಹುದು.

ಲೇಖನ – ಫೋಟೋಗ್ರಾಫಿ: ಚರಣ್‌ ಐವರ್ನಾಡು

ಉಸುಕಿನಲ್ಲಿ ಊರಿದ ಹೆಜ್ಜೆಗಳು
ಅಂಡಮಾನ್‌ ಡೈರಿ 1

ನಮ್ಮ ದೇಶದ ಬೇರೆ ಬೇರೆ ಪ್ರಾಂತ್ಯಗಳಿಂದ ವಿಭಿನ್ನ ಸನ್ನಿವೇಶಗಳಲ್ಲಿ ಅಪರಾಧಿಗಳೆಂದು ಹಣೆಪಟ್ಟಿ ಕಟ್ಟಿಕೊಂಡು ಶಿಕ್ಷೆಗೊಳಗಾಗಿ ಸುಲಲಿತ ಬದುಕಿನಿಂದ ವಂಚಿತರಾದ ಹೆಣ್ಣು ಮಕ್ಕಳ ಕಥನ – ಗಾಥೆಯಿದು. ರಾಜಲಕ್ಷ್ಮಿ ಎನ್‌ ಕೆ ಇವರು ಬರೆಯುತ್ತಿರುವ  ಅಂಡಮಾನ್‌ ಡೈರಿಯ ಮೊದಲ ಕಥನ ಇಲ್ಲಿದೆ

ಸಾಮಾನ್ಯವಾಗಿ ದೇಶಗಳ ಇತಿಹಾಸ ಯಾ ಚರಿತ್ರೆಯನ್ನು ಓದುವಾಗ ನಾವು ಅದು ಆ ದೇಶದ ಎಲ್ಲ ಜನರನ್ನು ಒಳಗೊಂಡ ಒಂದು ಸಮಗ್ರವಾದ ಒಳನೋಟ ನೀಡುತ್ತದೆ ಎಂದು ಭಾವಿಸುತ್ತೇವೆ. ಆದರೆ ಅದು ಹಾಗಿರುವುದಿಲ್ಲ. ನಾವಿಲ್ಲಿ ಹೆಚ್ಚಾಗಿ ಗಮನಿಸದೇ ಇರುವ ಒಂದು ಅಂಶವೇನೆಂದರೆ ದೇಶಗಳ, ಸಾಮ್ರಾಜ್ಯಗಳ ಚರಿತ್ರೆಯ ಕಥನಗಳು ಬಹುಪಾಲು ಪ್ರಭುತ್ವದ ಸುತ್ತವೇ ಗಿರಕಿ ಹೊಡೆಯುತ್ತ ನಾಡ ಪ್ರಭುಗಳ ನಾಯಕತ್ವವನ್ನು ಮಂಡಿಸುತ್ತಾ ಸಾಗುತ್ತದೆ. ಚರಿತ್ರೆಯ ಪುಟಗಳಲ್ಲಿ ಪ್ರಭುತ್ವಕ್ಕೆ ಪೂರಕ ಹಾಗೂ ಮಾರಕರಾದವರ ಸಾಲು ಸಾಲು ಮೆರವಣಿಗೆ ಕಾಣಬರುತ್ತದೆ. ದೇಶಗಳನ್ನ, ಸಾಮ್ರಾಜ್ಯಗಳನ್ನ ಪರಿಚಯಿಸುವಲ್ಲಿ ಪ್ರಾಯಶಃ ಈ ರೂಪದ ಕಥನಗಳು ಅನಿವಾರ್ಯವೂ ಇರಬಹುದಾದರೂ, ಒಂದು ಕಾಲಘಟ್ಟದ ಸಮಾಜವನ್ನು ಪರಿಚಯಿಸುವಲ್ಲಿ ಇವು ಸೋಲುತ್ತವೆ ಎಂದೇ ಹೇಳಬಹುದು. ಪ್ರಭುತ್ವದ ದೃಷ್ಟಿಯಿಂದ ಪರಿಚಯವಾಗುವ ಸಮಾಜ ಪರಿಪೂರ್ಣವಾಗಿರಲು ಈ ಕಾರಣದಿಂದ ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ನೀಡುವ ವಿವರಗಳಿಗಿಂತ ನೀಡದ ವಿವರಗಳೇ ಹೆಚ್ಚು.

ಒಂದರ್ಥದಲ್ಲಿ ಇದು ಎಲ್ಲರನ್ನೂ ಒಳಗೊಳಿಸುವ ಪ್ರಯತ್ನ ಮಾಡಿದರೂ ‘ಈ ಎಲ್ಲರೂ’ ಎನ್ನುವುದನ್ನು ವ್ಯಾಖ್ಯಾನಿಸಿದ ರೀತಿಯೇ ಜನ ಸಾಮಾನ್ಯರಿಂದ ದೂರವಿದ್ದು ಬಿಡುತ್ತದೆ. ಆದರೆ ಸಾಹಿತ್ಯಕ್ಕೆ ಹೆಚ್ಚಿನ ಸಂದರ್ಭದಲ್ಲಿ ‘ಕಾಲ್ಪನಿಕ’ ಎಂಬ ಹಣೆಪಟ್ಟಿ ಹಾಕಿ ಅದು ನೀಡುವ ನೇರ ಸಂಜ್ಞಾರ್ಥದ ಸಂಕೇತಾರ್ಥದಲ್ಲಿರುವ ಮಾಹಿತಿಗಳು ನಗಣ್ಯವಾಗುವ ಸಂದರ್ಭಗಳೇ ಜಾಸ್ತಿ. ಈ ಕಾರಣದಿಂದಲೇ ನಾವು ಪ್ರಭುತ್ವದ ಭಾಷೆಯೊಂದನ್ನೇ ಅವಲಂಬಿಸದೇ ಆಯಾಯ ಕಾಲದ ಯಾ ಸಮಕಾಲೀನ ಸಮಾಜದ ಜನಸಾಮಾನ್ಯರ ಭಾಷೆಯನ್ನು ಒಳಗೊಂಡ ಇತರ ಆಕರಗಳನ್ನು ಆಶ್ರಯಿಸಬೇಕಾಗುತ್ತದೆ.  ಆರೋಗ್ಯಕರ ಸಮಾಜಕ್ಕೆ ಪ್ರಭುತ್ವದ ಭಾಷೆಯೊಂದೇ ಸಾಲದು. ಜನಸಾಮಾನ್ಯರ ಭಾಷೆಯೂ ಪೂರಕವಾಗಿ ಇರಬೇಕಾಗುತ್ತದೆ. ಈ ದಿಸೆಯಲ್ಲಿ ಮುಖ್ಯವಾಹಿನಿಯ ಚರಿತ್ರೆಯಲ್ಲಿ ದಾಖಲಾಗದ ಇತರ ಮೂಲಗಳಾದ  ಸರಕಾರದ – ಆಡಳಿತದ ಇತರ ದಾಖಲೆಗಳಲ್ಲಿ ನಮೂದಿಸಲ್ಪಟ್ಟ ಹೋರಾಟದ ಬದುಕು ನಡೆಸಿ, ಒಂದು ಸಮಾಜದ ಸಂಕೀರ್ಣತೆಯನ್ನು ಪರಿಚಯಿಸಿದವರನ್ನು ಮುನ್ನೆಲೆಗೆ ತರುವ ಅಗತ್ಯವಿದೆ. ಈ ಪರಿಚಯ ನಮಗೆ ಒಂದು ಕಾಲಘಟ್ಟದ ಬದುಕನ್ನು, ಅದರ ಸಂಕೀರ್ಣತೆಯನ್ನು, ಚೌಕಟ್ಟನ್ನು, ಪ್ರಶ್ನೆಗಳನ್ನು ನಮ್ಮ ಮುಂದಿಡಬಲ್ಲದು. ಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನದ ಮೂಲಕ ಚರಿತ್ರೆಯ ಆಳ ಅಗಲಗಳು ವಿಸ್ತರಿಸುವ ಸಾಧ್ಯತೆ ಇರುತ್ತದೆ.

ನಮ್ಮ ದೇಶದ ಚರಿತ್ರೆಯಲ್ಲಿ 1857ರ ಸಿಪಾಯಿ ದಂಗೆಯನ್ನು ನಾವು ಪ್ರಥಮ ಸ್ವಾತಂತ್ರ್ಯ ಹೋರಾಟವೆಂದು ಗುರುತಿಸುತ್ತೇವೆ. ತದನಂತರದಲ್ಲಿ ಹೋರಾಟವು ಬಿಸುಪು ಹೆಚ್ಚಿಸಿಕೊಂಡು, ಹೋರಾಟಗಾರರು ವಿಭಿನ್ನವಾದ ಶಿಕ್ಷೆಗಳಿಗೆ ಒಳಗಾಗುತ್ತಾರೆ. ಈ ಶಿಕ್ಷೆಗಳಲ್ಲಿ ಸೆಲ್ಯುಲಾರ್ ಜೇಲ್‌ನ ಕಾರಾಗೃಹ ವಾಸವು ಅತ್ಯಂತ ಕಠಿಣ ಹಾಗೂ ದುರದೃಷ್ಟಕರ ಎಂಬುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಪೋರ್ಟ್‌ಬ್ಲೇರ್‌ಗೆ ರಾಜಕೀಯ ಖೈದಿಗಳು ಸ್ಥಳಾಂತರಗೊಂಡ ಸಂದರ್ಭದಲ್ಲೇ, ಸಮಾನಾಂತರವಾಗಿ ವೈಯಕ್ತಿಕ ಬದುಕಿನ ಹೋರಾಟದಲ್ಲಿ ತಿಳಿದೋ ತಿಳಿಯದೆಯೋ ಅಪರಾಧಿಗಳಾದ ಬಹಳಷ್ಟು ಮಹಿಳಾ ಖೈದಿಗಳು ಕೂಡಾ ಪೋರ್ಟ್‌ಬ್ಲೇರ್‌ಗೆ ಸ್ಥಳಾಂತರಗೊಂಡರು. ದೇಶದ ದುರಂತಗಳು ದಾಖಲಾಗುತ್ತವೆ. ಆದರೆ ಸಮಾಜದ ದುರಂತಗಳು ದಾಖಲಾಗಬೇಕಿದ್ದರೆ ಅವುಗಳು ಹೋರಾಟಗಳಾಗಬೇಕು, ವಿಶ್ವದ ಗಮನ ಸೆಳೆಯಬೇಕು. ಆದರೆ ದುರ್ಬಲರಿಗೆ, ಅಸಹಾಯಕರಿಗೆ ಇಂತಹ ಅವಕಾಶಗಳು ಕಡಿಮೆ. ಹಾಗಂತ ಅವರು ನಗಣ್ಯರಲ್ಲ. ದೇಶದ ಚರಿತ್ರೆಗೆ ಸಮಾನಾಂತರವಾಗಿ ಅಂತರ ಗಂಗೆಯಾಗಿ ಹರಿದ ಕೆಲವು ಮಹಿಳೆಯರ ಚರಿತ್ರೆಯನ್ನ ನನ್ನ ಅಂಡಮಾನ್ ಪ್ರವಾಸದಲ್ಲಿ ಕಂಡುಕೊಂಡೆ. ಈ ಹಿನ್ನೆಲೆಯಲ್ಲಿ ಅವರ ಇರವನ್ನು ದಾಖಲಿಸುವುದು ಅಂದಿನ ಸಮಾಜವನ್ನು ತಿಳಿಯಲು ಅಗತ್ಯ ಎನ್ನುವುದು ನನ್ನ ಅಭಿಪ್ರಾಯ.

ನಮ್ಮ ದೇಶದ ಬೇರೆ ಬೇರೆ ಪ್ರಾಂತ್ಯಗಳಿಂದ ವಿಭಿನ್ನ ಸನ್ನಿವೇಶಗಳಲ್ಲಿ ಅಪರಾಧಿಗಳೆಂದು ಹಣೆಪಟ್ಟಿ ಕಟ್ಟಿಕೊಂಡು ಶಿಕ್ಷೆಗೊಳಗಾಗಿ ಸುಲಲಿತ ಬದುಕಿನಿಂದ ವಂಚಿತರಾದ ಹೆಣ್ಣು ಮಕ್ಕಳ ಕಥನ – ಗಾಥೆಯಿದು.

ಇರ‍್ಕಮ್ಮ

ಆಂಧ್ರಪ್ರದೇಶದ ಅಂಕಪಲ್ಲೆಯವಳಾದ ಇರ‍್ಕಮ್ಮ ಅಪರಾಧಿ ಪಟ್ಟ ಪಡೆದದ್ದು ತನ್ನ ೧೨ನೇ ವಯಸ್ಸಿನಲ್ಲಿ. ಆಕೆ ತನ್ನ ಓರಗೆಯವರೊಂದಿಗೆ ಗಿಲ್ಲಿದಾಂಡು ಆಡುತ್ತಿದ್ದ ಎಳಸು ಪ್ರಾಯದ ಆಕೆ ಆ ದಿನ ಆಟದಲ್ಲಿ ತಲ್ಲೀನಳಾಗಿ ದಾಂಡಿನಿಂದ ಗಿಲ್ಲಿಯನ್ನು ಕುಟ್ಟಿ ರಭಸದಿಂದ ಹೊಡೆದಳು. ಗಿಲ್ಲಿಯನ್ನು ಹಿಡಿದರೆ ಆಕೆಯ ಆಟ ಮುಗಿಯಿತು. ಸುತ್ತ ನಿಂತು ಮಕ್ಕಳೆಲ್ಲ ತವಕದಿಂದ ಹಿಡಿಯಲು ಪ್ರಯತ್ನಿಸಬೇಕೆನಿಸುವಷ್ಟರಲ್ಲಿ ಕುಟ್ಟಿ ಬಾಲಕನೊಬ್ಬನ ದವಡೆಗೆ ಹೊಡೆದು ಆತ ಸ್ಥಳದಲ್ಲೇ ಅಸುನೀಗುತ್ತಾನೆ. ಪುಟ್ಟ ಹುಡುಗಿ ಅಪರಾಧಿಯಾಗಿ ಜೈಲು ಸೇರುವುದನ್ನು ತಪ್ಪಿಸಲು ಆಕೆಯ ಭಾವ ತಪ್ಪನ್ನು ತನ್ನ ಮೇಲೆಳೆದುಕೊಳ್ಳಲು ಬಯಸುತ್ತಾನೆ. ಆದರೆ ಆಕೆಯ ಕುಟುಂಬದವರಾರೂ ಇದಕ್ಕೆ ಒಪ್ಪುವುದಿಲ್ಲ. ಆಕೆ ತನ್ನ ತಪ್ಪನ್ನು ಪೊಲೀಸರಲ್ಲಿ ಒಪ್ಪಿಕೊಳ್ಳುತ್ತಾಳೆ. ಆಕೆಯನ್ನು ಕೊಲೆಗಾರ್ತಿಯೆಂದು ದಾಖಲೆಗಳಲ್ಲಿ ನಮೂದಿಸಲಾಗುತ್ತದೆ. ಕುಟುಂಬಸ್ಥರು ಅವಳೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಆಕೆ ಆಂಧ್ರಪ್ರದೇಶದ ಸೆರೆಮನೆಯಲ್ಲಿ ನಾಲ್ಕು ವರ್ಷ ಕಳೆದ ನಂತರ ಉಳಿದ ಸಜೆಯನ್ನು ಅನುಭವಿಸಲು ಒಪ್ಪಿ ತನ್ನ ಹದಿನಾರನೇ ವಯಸ್ಸಿನಲ್ಲಿ ಪೋರ್ಟ್‌ಬ್ಲೇರ್‌ಗೆ ಸ್ಥಳಾಂತರಗೊಳ್ಳುತ್ತಾಳೆ. ಆಕೆಯ ಶಿಕ್ಷಾವಧಿ ಪೂರ್ಣಗೊಂಡ ನಂತರ ಚಿಟ್ಟಿಕುಟ್ಟಿ ಸಿಂಹಾಚಲಮ್ ನಾಯ್ಡುವನ್ನು ವಿವಾಹವಾಗುತ್ತಾಳೆ. ಗಂಡ – ಹೆಂಡತಿಯರಿಬ್ಬರೂ ಹೊಲದಲ್ಲಿ ಶ್ರಮವಹಿಸಿ ದುಡಿದು ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಆದರೆ ಸಿಂಹಾಚಲಮ್ ಹವಾಮಾನಕ್ಕೆ ಹೊಂದಿಕೊಳ್ಳಲಾಗದೆ ಮರಣಿಸುತ್ತಾನೆ. ಇರ‍್ಕಮ್ಮ ಛಲಗಾತಿ. ಆಕೆಗೊಬ್ಬ ಮಗ, ಮುತ್ತುಸ್ವಾಮಿ. ತನ್ನ ಮಗನ ಪಾಲನೆ ಪೋಷಣೆಯ ಜವಾಬ್ದಾರಿಯನ್ನ ಸ್ವಂತ ಉದ್ದಿಮೆ ಪ್ರಾರಂಭಿಸಿ ನಿಭಾಯಿಸುತ್ತಾಳೆ. ಮಗ ಆಕೆಯ ಉದ್ದಿಮೆಯಲ್ಲಿ ಕೈ ಜೋಡಿಸಿ, ಉದ್ದಿಮೆಯನ್ನು ಗಟ್ಟಿಗೊಳಿಸುತ್ತಾನೆ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ದ್ವೀಪದಲ್ಲಿ ಅರಾಜಕತೆಯುಂಟಾಗುತ್ತದೆ. ಇರ‍್ಕಮ್ಮ ದುರಾದೃಷ್ಟವಂತೆ. ಆಕೆಯ ಸಂಪತ್ತೆಲ್ಲವೂ ಲೂಟಿಯಾಗುತ್ತದೆ. ಜಪಾನ್ ಆಕ್ರಮಿತ ಅಂಡಮಾನ್, ಆಕೆಗೆ ದುರಾದೃಷ್ಟಕರವಾಗಿ ಪರಿಣಮಿಸುತ್ತದೆ. ಮುತ್ತುಸ್ವಾಮಿ ಸೆರೆಮನೆಗೆ ತಳ್ಳಲ್ಪಡುತ್ತಾನೆ. ಅಲ್ಲಿ ಭೀಕರ ಚಿತ್ರಹಿಂಸೆಗೊಳಪಟ್ಟು ಸಾವಿಗೀಡಾಗುತ್ತಾನೆ. ಈ ವಿಷಯ ಆಕೆಗೆ ತಲುಪುವಾಗಲೇ ಆತನನ್ನು ಕ್ರಿಶ್ಚಿಯನ್ನರ ರುದ್ರಭೂಮಿಯಲ್ಲಿ ಹೂತುಹಾಕಿ ಹಲವಾರು ದಿನಗಳು ಸಂದಿರುತ್ತದೆ. ಆಕೆಯ ಮೊಮ್ಮಗ ನಾರಾಯಣರಾವ್. ಆತ ಬ್ರಿಟಿಷರ ಪರವಾಗಿ ಬೇಹುಗಾರಿಕೆ ನಡೆಸಿದನೆಂಬ ಆಪಾದನೆಗೆ ಗುರಿಯಾಗಿ ಜಪಾನ್ ಸೈನಿಕರಿಂದ ಗುಂಡೇಟು ತಿಂದು ಕೊಲ್ಲಲ್ಪಡುತ್ತಾನೆ. ಇರ‍್ಕಮ್ಮ ಗಂಡ, ಮಗ ಹಾಗೂ ಮೊಮ್ಮಗನನ್ನು ಕಳೆದುಕೊಂಡು ಛಿದ್ರ ಹೃದಯಿಯಾಗಿ ತನ್ನ ಉಳಿದ ಜೀವನವನ್ನ ನಡೆಸುತ್ತಾಳೆ. ನಾಡಲ್ಲದ ನಾಡಲ್ಲಿ ಬಂದು ದುರಂತಗಳ ಸರಮಾಲೆಯನ್ನು, ಬದುಕನ್ನು ಎದುರಿಸಿದ ಈ ಹೆಣ್ಣುಮಗಳು ಯಾವ ರಾಣಿಯರಿಗಿಂತ ಕಡಿಮೆ ಛಲಗಾತಿ?.

ಅಲ್ಮೋರದಾ ಹೆಣ್ಣುಮಗಳು

ಸಾವಿರದ ಎಂಟುನೂರ ಅರವತ್ತೆಂಟರಲ್ಲಿ ಕೊಲೆಗಾರ್ತಿಯೆಂದು ಶಿಕ್ಷೆಗೊಳಗಾಗಿ ಪೋರ್ಟ್‌ಬ್ಲೇರ್‌ಗೆ ಬಂದ ಅಲ್ಮೋರದಾ ಹೆಣ್ಣುಮಗಳ ಕಥೆ ಹೃದಯ ವಿದ್ರಾವಕ. ಆಕೆ, ಎಳೇ ವಯಸ್ಸಿನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ತರುಣಿ. ಆಕೆ ತೆರೆದ ಬಾವಿಯ ಬಳಿ ತನ್ನ ಗೆಳತಿಯರೊಂದಿಗೆ ಆಟವಾಡುತ್ತಿದ್ದಾಗ, ಆಕೆಯಂತೆಯೇ ಅಲ್ಲಿ ಆಟವಾಡುತ್ತಿದ್ದ ಹುಡುಗಿಯೊಬ್ಬಳು ಆಕಸ್ಮಿಕವಾಗಿ ಕಾಲು ಜಾರಿ ತೆರೆದ ಬಾವಿಯೊಳಗೆ ಬಿದ್ದು ಅಸುನೀಗುತ್ತಾಳೆ. ಆಕೆಗೂ ಮರಣವನ್ನಪ್ಪಿದ ಹುಡುಗಿಯ ಸಾವಿಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ ಆ ಇಬ್ಬರು ಹುಡುಗಿಯರ ತಂದೆಯಂದಿರ ನಡುವೆ ವೈಷಮ್ಯವಿರುತ್ತದೆ. ಹಾಗಾಗಿ ಆಕೆಯೇ ಈ ಸಾವಿಗೆ ಕಾರಣ ಎಂದು ಸುಳ್ಳು ಆಪಾದನೆಯನ್ನು ಹೊರಿಸಿ ಆಕೆಗೆ ಸೆರೆವಾಸವನ್ನು ವಿಧಿಸಲಾಗುತ್ತದೆ. ಆಕೆ ತನ್ನ ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರ, ತನ್ನಂತೆಯೇ ಖೈದಿಯಾಗಿದ್ದು ಶಿಕ್ಷೆ ಪೂರ್ಣಗೊಳಿಸಿದ್ದ ಮೌಲಾನ ಜಾಫರ್ ತನೆಸಾರಿಯನ್ನು ಮದುವೆಯಾಗುತ್ತಾಳೆ. ಬ್ರಿಟೀಷ್ ವಸಾಹತುಶಾಹಿ ಆಡಳಿತವು ಅನ್ಯಧರ್ಮೀಯರೊಂದಿಗೆ ವಿವಾಹವನ್ನು ನಿಷೇಧಿಸಿದ್ದರಿಂದ ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನೆಸಾರಿಯನ್ನು ಮದುವೆಯಾಗುತ್ತಾಳೆ. ಅವರು ಮತ್ತೆ ಅಲ್ಮೋರಾಕ್ಕೆ ಹಿಂತಿರುಗಿ ತಮ್ಮ ಜೀವನ ನಡೆಸುತ್ತಾರೆ.

ಜೀವನಿ

ಜೀವನಿ ಪಂಜಾಬ್‌ನ್ ಆಮೃತಸರದಲ್ಲಿ ಸಂಸಾರ ಹೂಡಿದ್ದಳು. ಆಕೆಗೆ ಮನೆಕೆಲಸಗಳು ಮತ್ತು ತನ್ನ ಗಂಡ ಹಾಗೂ ಮಗುವೇ ಪ್ರಪಂಚ. ತಾಯಿ ಮನೆಗೆಲಸದಲ್ಲಿ ನಿರತಳಾಗಿದ್ದಾಗ ಮಗುವಿನ ಹಠ ಅಳು ತೂಗಿಸುವುದು ಸುಲಭವಲ್ಲ. ಅಳುವ ಮಕ್ಕಳನ್ನು ಇತರರು ಸಂಭಾಳಿಸುವ ರೀತಿಯನ್ನ ಆಕೆ ನೋಡಿ ಕಲಿತಿದ್ದಳು. ಆಗಿನ ಕಾಲದ ವಾಡಿಕೆಯೂ ಇದೇ ಆಗಿತ್ತು. ರಚ್ಚೆ ಹಿಡಿದ ಮಗುವನ್ನು ನಿದ್ರಿಸುವಂತೆ ಮಾಡಲು ತುಸುವೇ ತುಸು ಅಫೀಮನ್ನು ಮಗುವಿಗೆ ನೀಡಿದರಾಯಿತು. ತಾಯಿ ತನ್ನ ಕೆಲಸ ಮುಗಿಸುವವರೆಗೆ ಮಗು ಸುಖವಾಗಿ ನಿದ್ರಿಸುತ್ತದೆ. ಜೀವನಿಯೂ ಹಾಗೇ ತನ್ನ ಅಳುವ ಮಗುವನ್ನು ಸಂಭಾಳಿಸುತ್ತಿದ್ದಳು. ದುರಾದೃಷ್ಟವಶಾತ್ ಒಂದು ದಿನ ಆಕೆ ನೀಡಿದ ಅಫೀಮಿನ ಅಂಶ ಜಾಸ್ತಿಯಾಗಿ ಮಗು ಚಿರನಿದ್ರೆಗೆ ತೆರಳುತ್ತದೆ. ಮಗುವಿನ ಸಾವಿನ ದುಃಖದಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಾಳೆ. ಆಕೆಗರಿವಿಲ್ಲದೇ ತನ್ನ ಪುಟ್ಟ ವಯಸ್ಸಿನ ಭಾವನನ್ನು ಬಾವಿಗೆ ನೂಕುತ್ತಾಳೆ. ತಾನು ತಪ್ಪನ್ನು ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾಳೆ. ಆಕೆಯ ಪತಿ ಹಸನ್ ಆಲಿ ಈ ದುರಂತ ಘಟಿಸಿದ್ದು ಆಕೆಯ ಮಾನಸಿಕ ಸ್ಥಿತಿಯಿಂದ ಉಂಟಾದ ಆಕಸ್ಮಿಕವೆಂದು ವಾದಿಸಿದರೂ ಪ್ರಯೋಜನವಾಗದೇ ಆಕೆ ಕಾರಾಗೃಹದ ಪಾಲಾಗುತ್ತಾಳೆ. ಸ್ವಇಚ್ಛೆಯಿಂದ ಆಕೆ ಪೋರ್ಟ್‌ಬ್ಲೇರ್‌ನ ಕಾರಾಗೃಹಕ್ಕೆ ತೆರಳಲು ಒಪ್ಪುತ್ತಾಳೆ. ಆಕೆಯ ಶಿಕ್ಷಾವಧಿ ಪೂರ್ಣಗೊಂಡ ನಂತರ ಅಮೃತಸರಕ್ಕೆ ಹಿಂತಿರುಗಲು ಇಚ್ಛಿಸದೆ ಹಸನ್ ಆಲಿಯನ್ನು ಅಲ್ಲಿಗೆ ಬರಮಾಡಿಕೊಳ್ಳುತ್ತಾಳೆ. ಅವರು ಅಂಗಡಿಯನ್ನು ತೆರೆದು ವ್ಯಾಪಾರ ನಡೆಸಿ, ಸಮಾಜದಲ್ಲಿ ಅಂತಸ್ತು ಹಾಗೂ ಗೌರವ ಗಳಿಸುತ್ತಾರೆ. ತನ್ನ ಮಕ್ಕಳನ್ನು ನೀತಿಯುತವಾಗಿ ಹಾಗೂ ಮೌಲ್ಯಯುತವಾಗಿ ಬೆಳೆಸುವುದರಲ್ಲಿ ಸಫಲಳಾಗುತ್ತಾಳೆ. ಆಕೆಯ ಹಿರಿಯ ಮಗ ಫರ್ಜಾನ್ ಆಲಿ ಶ್ರಮಜೀವನದಿಂದ ಶ್ರೀಮಂತಿಕೆ ಗಳಿಸಿದ. ಆದರೆ ಎಂದೂ ಅಹಂ ಹೊಂದಲಿಲ್ಲ. ತನ್ನ ಸಂಪತ್ತನ್ನು ಬುದ್ಧಿವಂತಿಕೆಯಿಂದ ವಿನಿಯೋಗಿಸಿದವನು. ೧೯೩೩ ರಲ್ಲಿ ಫರ್ಜಾನ್ ಆಲಿ ಮಾರ್ಕೆಟನ್ನು ಸ್ಥಾಪಿಸಿ, ಅದರಿಂದ ಬಂದ ಲಾಭದಿಂದ ಟ್ರಸ್ಟೊಂದನ್ನು ಪ್ರಾರಂಭಿಸಿ ತನ್ನ ಟ್ರಸ್ಟ್ ಮೂಲಕ ದುರ್ಬಲ ವರ್ಗದ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುತ್ತಾನೆ. ಜಾತಿ, ಧರ್ಮ, ಇತ್ಯಾದಿಗಳನ್ನು ಗಮನಿಸದೇ ಬಡಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ ಇವರ ಸೇವೆಯನ್ನು ಗುರುತಿಸಿ ಸರಕಾರವು ಫರ್ಜಾನ್ ಆಲಿಗೆ ‘ಖಾನ್ ಸಾಹೇಬ್’ ಎಂಬ ಬಿರುದನ್ನು ನೀಡಿ ಗೌರವಿಸುತ್ತದೆ.

ಲಕ್ಷ್ಮೀ

ಆಕಸ್ಮಿಕ ಅವಘಡಗಳಿಂದ ಕಾರಾಗೃಹ ಸೇರಿದ ಹೆಣ್ಣು ಮಕ್ಕಳು ಕೆಲವರಾದರೇ ತಮ್ಮ ಗೌರವ ರಕ್ಷಣೆಗಾಗಿ ಅಪರಾಧಿಗಳಾದವರು ಹಲವರು. ಆಂಧ್ರಪ್ರದೇಶದ ಕಾಕಿನಾಡದ ಲಕ್ಷ್ಮೀಮೈಸೂರಿನ ವಾಸುದೇವರನ್ನು ವಿವಾಹವಾದಳು. ಆಕೆ ಸೌಂದರ್ಯದ ಖನಿ. ಈ ಸೌಂದರ್ಯವೇ ಆಕೆಗೆ ಮುಳುವಾಗಬಹುದೆಂದು ಆಕೆ ಯೋಚಿಸಿಯೇ ಇರಲಿಲ್ಲ. ಆಕೆಯ ಮೈದುನ ಆಕೆಯ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಕಾಮುಕ ದೃಷ್ಟಿಯಿಂದ ನೋಡಲಾರಂಭಿಸುತ್ತಾನೆ. ಈ ವಿಷಯವನ್ನು ತನ್ನ ಗಂಡನಲ್ಲಿ ಹೇಳಲು ಧೈರ್ಯ ಸಾಲದೇ ತನ್ನ ಅತ್ತೆಯಲ್ಲಿ ಹೇಳುತ್ತಾಳೆ. ಆಕೆ ಸೊಸೆಯನ್ನೇ ಅನುಮಾನಿಸಿ ಕೋಪಗೊಂಡು ತನ್ನ ಮಗನ ಹಾಗೂ ಕುಟುಂಬದ ಗೌರವವನ್ನು ಹಾಳುಗೆಡಹುತ್ತೀಯ ಎಂದು ದೂಷಿಸುತ್ತಾಳೆ. ಒಂದು ದಿನ ಮನೆಯವರೆಲ್ಲ ಶ್ರೀಗಂಧ ತರಲೆಂದು ಹೊರಗೆ ಹೋಗಿರುತ್ತಾರೆ. ಮನೆಯಲ್ಲಿ ಆಕೆಯೊಬ್ಬಳೆ ಅಕ್ಕಿ ಕುಟ್ಟುತ್ತ ಮನೆಗೆಲಸದಲ್ಲಿ ತಲ್ಲೀನಳಾಗಿರುತ್ತಾಳೆ. ಆಕೆಯೊಬ್ಬಳೇ ಇರುವುದನ್ನು ತಿಳಿದಿದ್ದ ಆಕೆಯ ಮೈದುನ ಅವಳ ಮೇಲೆರಗುವ ಪ್ರಯತ್ನ ಮಾಡಿದಾಗ ತನ್ನ ಕೈಯಲ್ಲಿದ್ದ ಕಬ್ಬಿಣದ ಒನಕೆಯಿಂದ ಆತನ ತಲೆಗೆ ಹೊಡೆಯುತ್ತಾಳೆ. ಆತ ಸಾವಿಗೀಡಾಗುತ್ತಾನೆ. ಕಾನೂನಿನ ದೃಷ್ಟಿಯಲ್ಲಿ ಆಕೆ ಅಪರಾಧಿ, ಆದರೆ ವಾಸುದೇವನಿಗೆ ಆಕೆಯ ಸ್ಥಿತಿ ಅರ್ಥವಾಗುತ್ತದೆ. ಆತನ ಪ್ರಕಾರ ಆಕೆ ಅಪರಾಧಿಯಲ್ಲ. ಆಕೆಗೆ ಶಿಕ್ಷೆಯಾಗುತ್ತದೆ. ಹಲವು ಮಹಿಳಾ ಖೈದಿಗಳು ಪೋರ್ಟ್‌ಬ್ಲೇರ್‌ನ ಸೆರೆಮನೆಗೆ ಸ್ಥಳಾಂತರಗೊಂಡಾಗ ಆಕೆಯು ತನ್ನ ಸ್ಥಳಾಂತರಕ್ಕೆ ಸಮ್ಮತಿ ಸೂಚಿಸುತ್ತಾಳೆ. ತನ್ನ ಶಿಕ್ಷಾವಧಿ ಮುಗಿದ ನಂತರ ಹಿಂತಿರುಗಿ ತನ್ನೂರಿಗೆ ಬರಲು ಇಚ್ಛಿಸದೆ, ವಾಸುದೇವರನ್ನು ದ್ವೀಪಕ್ಕೇ ಬರಮಾಡಿಕೊಳ್ಳುತ್ತಾಳೆ. ತದನಂತರದಲ್ಲಿ ಆಕೆ ಐದು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ತಾಯಿಯಾಗುತ್ತಾಳೆ. ತನ್ನ ಸಂಸಾರದೊಂದಿಗೆ ಗೌರವಯುತ ಬದುಕನ್ನು ಆಕೆ ಸಂಪಾದಿಸುವಲ್ಲಿ ಸಫಲಳಾಗುತ್ತಾಳೆ. ಆಕೆಯ ಮೊಮ್ಮಗ ಶ್ರೀ ಕೆ. ಆರ್. ಗಣೇಶ್ ಶ್ರೀಮತಿ ಇಂದಿರಾ ಗಾಂಧಿಯವರ ಕ್ಯಾಬಿನೆಟ್‌ನಲ್ಲಿ ಇಂಧನ ಹಾಗೂ ರಾಸಾಯನಿಕ ಮಂತ್ರಿಯಾಗಿ ಸೇವೆ ಸಲ್ಲಿಸಿದಂತಹ ವ್ಯಕ್ತಿಯಾಗಿ ಚರಿತ್ರೆಯಲ್ಲಿ ದಾಖಲಾಗಿದ್ದಾರೆ.

ಗೌರ

ಈಗ ಉತ್ತರಪ್ರದೇಶವಾಗಿರುವ ಅಂದಿನ ಯುನೈಟೆಡ್ ಪ್ರಾವಿನ್ಸ್ ನ ಸೀತಾಪುರದ ಗೌರಳ ಕಥೆ ಉಳಿದವರಿಗಿಂತ ತುಸು ಭಿನ್ನ. ಆಕೆ ತನ್ನ ಗಂಡನ ಆಪ್ತ ಸ್ನೇಹಿತನನ್ನ ಕೊಲೆಗೈಯುತ್ತಾಳೆ. ಗೌರ ಗಟ್ಟಿಗಿತ್ತಿ ರಜಪೂತ ಹೆಣ್ಣುಮಗಳು. ಕೂಡು ಕುಟುಂಬದಲ್ಲಿ ಅತ್ತೆ, ಮಾವ, ಗಂಡ, ಮಗನೊಂದಿಗೆ ಆಕೆಯ ಜೀವನ. ಉಳಿದ ಕೈದಿಗಳಂತೆ/ಅಪರಾಧಿಗಳಂತೆ ಎಳೆಹರೆಯದವಳಲ್ಲ. ನಡುವಯಸ್ಸಿನವಳು. ನಲ್ವತ್ತರ ಆಸುಪಾಸು ಎನ್ನಬಹುದು. ಆಕೆಯ ಗಂಡನ ಆಪ್ತ ಸ್ನೇಹಿತನಿಗೆ ಕುಟುಂಬದೊಡನೆ ಹಲವಾರು ವರ್ಷಗಳ ಸಂಪರ್ಕ, ಬಾಂಧವ್ಯ. ಮನೆಯವರಲ್ಲಿ ಒಬ್ಬನೆನ್ನುವಷ್ಟು ಸಲುಗೆ, ಸ್ವಾತಂತ್ರ್ಯವಿತ್ತು. ಇದನ್ನು ದುರುಪಯೋಗ ಮಾಡಿಕೊಂಡ ಆತ ಗೌರಳೊಡನೆ ಆಗಾಗ್ಗೆ ಸಭ್ಯತೆಯ ಎಲ್ಲೆ ಮೀರಲು ಪ್ರಾರಂಭಿಸುತ್ತಾನೆ. ಆಕೆ ಅವನಿಗೆ ಸಭ್ಯವಾಗಿಯೇ ಹದ್ದು ಮೀರದಂತೆ ಎಚ್ಚರಿಸುತ್ತಾಳೆ, ಗದರುತ್ತಾಳೆ. ಆತ ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ. ಒಂದು ರಾತ್ರಿ ಆತ ಅವರ ಮನೆಯ ಅಂಗಣದಲ್ಲಿ ನಿದ್ರಿಸುತ್ತಿದ್ದಾಗ ಗೌರ ಹರಿತ ಕತ್ತಿಯಿಂದ ಆತನ ಕುತ್ತಿಗೆ ಸೀಳುತ್ತಾಳೆ. ನಂತರ ಮನೆಯವರನ್ನೆಲ್ಲ ಎಬ್ಬಿಸಿ ತಾನು ಕೊಲೆ ಮಾಡಿದುದನ್ನು ತಿಳಿಸುತ್ತಾಳೆ. ಇತರರಿಗೆ ಇದು ತಿಳಿಯದಿರುವ ಕಾರಣ ಕುಟುಂಬದವರು ಈ ವಿಷಯವನ್ನು  ಗುಟ್ಟಾಗಿಡುವ ಎಂದು ತೀರ್ಮಾನಿಸುತ್ತಾರೆ. ಆದರೆ ಗೌರ ಅದಕ್ಕೆ ಸಮ್ಮತಿಸುವುದಿಲ್ಲ. ಆತನ ತಪ್ಪಿಗೆ ಆತನನ್ನು ನಾನು ಶಿಕ್ಷಿಸಿದ್ದೇನೆ. ನನ್ನ ಅಪರಾಧಕ್ಕೂ ಶಿಕ್ಷೆಯಾಗಲೇ ಬೇಕೆಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾಳೆ. ತನ್ನ ಮಗ ಬಾಲಕರಣನ ಬಗ್ಗೆಯೂ ಚಿಂತಿಸುವುದಿಲ್ಲ. ಆಕೆಗೆ ಜೈಲುವಾಸ ವಿಧಿಸಲಾಗುತ್ತದೆ. ಆಕೆ ಸ್ವಇಚ್ಚೆಯಿಂದ ಪೋರ್ಟ್‌ಬ್ಲೇರ್‌ ಕಾರಾಗೃಹದಲ್ಲಿರುತ್ತಾಳೆ. ಶಿಕ್ಷಾವಧಿ ಮುಗಿದ ನಂತರ ಊರಿಗೆ ಹಿಂತಿರುಗುವುದಿಲ್ಲ. ತನ್ನಂತೆಯೇ ಖೈದಿಯಾಗಿದ್ದು ನಂತರದಲ್ಲಿ ಸ್ವತಂತ್ರನಾದ ಗುಲಾಬ್ ಸಿಂಗ್ ಕಂಡೆಲನನ್ನು ಮದುವೆಯಾಗುತ್ತಾಳೆ. ತನ್ನ ಜೀವಿತದ ಕೊನೆಯ ದಿನಗಳನ್ನು ದೇವಸ್ಥಾನದಲ್ಲಿ ಕಳೆಯುತ್ತಾಳೆ.

ಜೀವನಿ, ಗೌರ, ಲಕ್ಷ್ಮೀ, ಇರ‍್ಕಮ ಮತ್ತು ಇಲ್ಲಿ ಹೆಸರಿಸದ ಇನ್ನೊಂದಷ್ಟು ಹೆಣ್ಣುಮಕ್ಕಳ ಕಣ್ಣೀರು ಪೋರ್ಟ್‌ಬ್ಲೇರ್‌ನ ಸಾಗರದಲ್ಲಿ ಕಡಲತೀರದ ಬೆಣ್ಣೆಯ ಮರಳಲ್ಲಿ ಉಪ್ಪಿನ ಹರಳಾಗಿದೆ. ಹತ್ತೊಂಬತ್ತನೆಯ ಶತಮಾನದ ಕೊನೆ ಹಾಗೂ ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಸಮಾಜದ, ಕಾನೂನಿನ ಕೈಗನ್ನಡಿಯಾದ ಇವರು ಅಸಹಾಯಕರಾದರೂ ಗಟ್ಟಿ ಗಿತ್ತಿಯರು, ಛಲಗಾತಿಯರು ಛಾತಿಯಿಂದ ಕತ್ತಲೆಯನ್ನ ಎದುರಿಸಿ ಹಿರಿದವರು. ಆತ್ಮಹತ್ಯೆಗೆ ಶರಣಾಗದೇ ಚದುರಿ ಹೋದ, ದುರ್ಬಲ ದಾರಗಳ ತುಂಡುಗಳನ್ನೇ ಆಯ್ದು, ತಮಗೆ ತೋಚಿದಂತೆ ನೇಯ್ದು ಬದುಕ ಬಟ್ಟೆಯನ್ನ ತೊಟ್ಟವರು.

ಇತಿಹಾಸದ ಬಗೆಗೆ ಚಾಲ್ತಿಯಲ್ಲಿರುವ ರಮ್ಯ, ರುದ್ರ ಕಥಾನಕಗಳು ಮೇಲೆ ಹೇಳಿದ ಸಾಮಾನ್ಯರು, ತಮ್ಮ ಬದುಕಿನ ಉಳಿವಿಗೆ ನಡೆಸುವ ಹೋರಾಟಗಳನ್ನು ಒಳಗೊಂಡಿರುವುದು ಕಡಿಮೆ. ಇಂದು ಇತಿಹಾಸವನ್ನು ಮರು ಓದುವ, ಮರು ಸಂದರ್ಶಿಸುವ ಉತ್ಸಾಹ ಕಂಡು ಬರುತ್ತದೆ. ಇಂತಹ ಮರು ಓದು, ಮರು ಸಂದರ್ಶನ ಯಾವ ಕಡೆಗಿದೆ? ಎನ್ನುವುದು ಒಂದು ಪ್ರಶ್ನೆಯಾದರೆ, ಇತಿಹಾಸದ ಎಲ್ಲಾ ಕೋನಗಳನ್ನು ನೋಡುವುದು ಎಂದಿಗಾದರೂ ಪೂರ್ಣವಾಗಬಹುದೇ? ಅಥವಾ ಇಂತಹ ಪ್ರಯತ್ನ ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸಲು ನೀಡಬಹುದಾದ ಕೊಡುಗೆಯಾದರೂ ಏನು ಎನ್ನುವ ಕುರಿತು ವಿವೇಕಯುತವಾಗಿ ಯೋಚಿಸುವುದು ಅಗತ್ಯ ಎನ್ನುವುದು ನನ್ನ ಮನದಿಂಗಿತ.

ರಾಜಲಕ್ಷ್ಮಿ ಎನ್‌ ಕೆ

ನಿವೃತ್ತ ಉಪನ್ಯಾಸಕರು

ಇದನ್ನೂ ಓದಿ-“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”https://peepalmedia.com/from-bedroom-to-boardroom/

ತಿರುಗಾಡಿ ಬಂದೊ-10
ಕಳೆದ ಹತ್ತು ವಾರಗಳಿಂದ ನಿರಂತರವಾಗಿ ಮೂಡಿ ಬರುತ್ತಿದ್ದ ತಿರುಗಾಡಿ ಬಂದೋ ಅಂಕಣ ತನ್ನ ಕೊನೆಯ ಅಂಕಕ್ಕೆ ತಲುಪಿದೆ. ತಮ್ಮೆಲ್ಲ ಕೆಲಸಗಳ ನಡುವೆಯೂ ನಮಗಾಗಿ ವಾರ-ವಾರವೂ ತಪ್ಪದೆ ಲೇಖನ ಬರೆದುಕೊಟ್ಟ ರೋಹಿತ್‌ ಅಗಸರಹಳ್ಳಿಯವರಿಗೆ ಪೀಪಲ್‌ ಮೀಡಿಯಾ ಕೃತಜ್ಞ. ಇನ್ನಷ್ಟು ಪ್ರವಾಸ ಕಥನಗಳಿಗಾಗಿ ನಮ್ಮ ಪೀಪಲ್‌ ಮೀಡಿಯಾ ಡಾಟ್‌ ಕಾಮ್‌ಗೆ ಆಗಾಗ ಭೇಟಿ ನೀಡುತ್ತಿರಿ. ಈ ಬಾರಿಯ ತಮ್ಮ ಅಂಕಣದಲ್ಲಿ ರೋಹಿತ್‌ ನಮ್ಮೆಲ್ಲರನ್ನು ಪುಷ್ಕರ್‌ ಮತ್ತು ಆಜ್ಮೈರ್‌ಗಳಿಗೆ ಕರೆದೊಯ್ಯಲಿದ್ದಾರೆ. ಬನ್ನಿ ತಿರುಗಾಡಿ ಬರೋಣ

ನಮ್ಮ ಪ್ರವಾಸದ ಕಡೇ ದಿನ ಅಜ್ಮೇರ್ ಮತ್ತು ಪುಷ್ಕರ್ ನೋಡುವುದಾಗಿತ್ತು. ವಾಸ್ತವದಲ್ಲಿ ಪ್ರವಾಸ ಹೊರಡೋ ಮುನ್ನ ಅಜ್ಮೇರ್ ಬದಲಿಗೆ ಉದಯಪುರ ಮತ್ತು ಜೈಸಲ್ಮೇರ್ ಗಳು ಚರ್ಚೆಗೆ ಬಂದವು; ಆದರೆ ಅವೆರಡೂ ಜೈಪುರದಿಂದ ದೂರ ಎಂಬ ಕಾರಣಕ್ಕೆ ಡ್ರಾಪ್ ಮಾಡಿದ್ದೆವು. ಅಜ್ಮೇರ್ ಪಟ್ಟಿಗೆ ಸೇರಿದ್ದಷ್ಟೇ ಅಲ್ಲ, ಅಲ್ಲಿಯೇ ಎರಡು ದಿನ ಉಳಿದು ಸುತ್ತಾಡಬೇಕೆಂದು ಗೆಸ್ಟ್ ಹೌಸ್ ಕೂಡ ಬುಕ್ ಮಾಡಿದ್ದೆವು. ಊರಿಗೆ ವಾಪಾಸು ಬಂದಮೇಲೆ ಗೊತ್ತಾದ ಸಂಗತಿ ಎಂದರೆ ನಮ್ಮ ಅರಸೀಕೆರೆಯಿಂದ (ಮಾರ್ಗ) ಅಜ್ಮೇರ್ ಗೆ ನೇರ ಟ್ರೈನ್ ಇದೆಯಂತೆ.

ಹಿಂದಿನ ದಿನವೇ ತೀರ್ಮಾನಿಸಿದ್ದಂತೆ ಡ್ರೈವರ್ ಗೆ ಮುಂಜಾನೆ ಆರಕ್ಕೆ ಬರಲು ಹೇಳಿದ್ದೆವು. ಆತ ಬಂದ ಕೂಡ. ಹೊರಡುತ್ತಲೇ ಅವನಿಗೇ ಕೇಳಿದೆವು ಪುಷ್ಕರ್ ಮತ್ತು ಅಜ್ಮೇರ್ ಎರಡರಲ್ಲಿ ಮೊದಲು ಎಲ್ಲಿಗೆ ಹೋಗುವುದೆಂದು. ವಾತಾವರಣ ಹಿಂದಿನ ದಿನದಂತೇ ತಂಪಾಗಿತ್ತು, ತುಂತುರು ಮಳೆಯೊಂದಿಗೆ. ಆತ ಹೇಳಿದ ಮೊದಲು ಪುಷ್ಕರ್ ಗೆ ಹೋಗಿ ಬಂದುಬಿಡಬಹುದು, ಆಮೇಲೆ ದರ್ಗಾ ನೋಡಿ ಹೊರಡಬಹುದು ಎಂದು. ಜೈ ಎಂದೆವು. ದಿನೇಶ್ ಜೈಸಲ್ಮೇರ್ ಗೆ ಹೋಗಿ ಥಾರ್ ಮರುಭೂಮಿಯಲ್ಲಿ ಬೆಳದಿಂಗಳ ರಾತ್ರಿಯೊಂದನ್ನು ಆಕಾಶ ನೋಡುತ್ತ ಕಳೆಯಬೇಕು ಎಂದು ಹೇಳುತ್ತಿದ್ದರೂ ಅದು ಸಾಧ್ಯವಾಗದ ಕಾರಣ, ಪುಷ್ಕರಿನಲ್ಲಿ ಒಂಟೆ ಸವಾರಿ ಮಾಡಿ ಜೈಸಲ್ಮೇರ್ ಕೊರತೆಯನ್ನು ತುಂಬಿಸಿಕೊಳ್ಳುವ ಹವಣಿಕೆಯಲ್ಲಿದ್ದರು.

ಪುಷ್ಕರ್ ಅಜ್ಮೇರ್ ಗೆ ಹೊಂದಿಕೊಂಡಂತೇ ಇರುವ ಊರು. ಪುಷ್ಕರ್ ಎಂಬ ಹೆಸರೇ ಸರೋವರದ ಕಾರಣಕ್ಕಾಗಿ ಬಂದಿರಬಹುದು. ಪುಷ್ಕರಿಣಿ ಎಂದರೆ ಕೊಳ ಅಲ್ಲವೆ? ಸರೋವರದ ಬಳಿ ಗುಡ್ಡದಂಥಾ ಜಾಗದಲ್ಲಿ ಬಿಳಿ ಅಮೃತ ಶಿಲೆಯಿಂದ ನಿರ್ಮಿಸಿದ ದೇವಾಲಯವಿದೆ. ಅದು ಬ್ರಹ್ಮ ದೇವಾಲಯ. ಪುರಾಣದ ಕತೆಯೊಂದರ ಪ್ರಕಾರ ಶಿವ ಬ್ರಹ್ಮನಿಗೆ ಎಂದೋ ಶಾಪ ಕೊಟ್ಟನಂತೆ, ನಿನ್ನನ್ನು ಭೂಲೋಕದಲ್ಲಿ ಜನ ಗುಡಿ ಕಟ್ಟಿ ಪೂಜಿಸದಿರಲೆಂದು. ಹಾಗಾಗಿ ತ್ರಿಮೂರ್ತಿಗಳಲ್ಲಿ ಒಬ್ಬನೂ, ಚತುರ್ಮುಖನೂ ಆದ ಬ್ರಹ್ಮನಿಗೆ ಭೂಲೋಕದಲ್ಲಿ ಎಲ್ಲೂ ದೇವಾಲಯಗಳು ಇಲ್ಲವಂತೆ. ಎಲ್ಲೆಲ್ಲಿ ಬ್ರಹ್ಮ ದೇವಾಲಯಗಳು ಇವೆಯೋ ಅಲ್ಲೆಲ್ಲಾ ಈ ಕತೆಯೂ ಇದೆ. ನಾನು ಕೊಡಗಿನಲ್ಲಿ ಇದ್ದಾಗ ಅಲ್ಲಿ ನೋಡಿದ ಬ್ರಹ್ಮ ದೇವಾಲಯದಲ್ಲಿ ಕೂಡ ಈ ಕತೆಯನ್ನು ಕೇಳಿದ್ದೆ. ಹಾಗೆಯೇ ಕೊಡಗಿನಲ್ಲಿ ನಮ್ಮ ಪ್ರಿನ್ಸಿಪಾಲರಾಗಿದ್ದ ಕೆಂಚಪ್ಪ ಅವರು ಪ್ರತೀ ವರ್ಷ ಟೂರ್ ಮಾಡೊವ್ರು. ಅವರೇ ಒಮ್ಮೆ ಅಜ್ಮೇರ್ ದರ್ಗಾ ಬಗ್ಗೆ ಹೇಳಿದ್ದರು. ಭಾರೀ ನೂಕುನುಗ್ಗಲು ಅಲ್ಲಿ ಎಂದಿದ್ದರು.

ಬಹುತೇಕ ದೇವಾಲಯಗಳಂತೆ ಇಲ್ಲೂ ಚಪ್ಪಲಿ ಸ್ಟ್ಯಾಂಡು, ಪೂಜೆಯ ಬುಟ್ಟಿ ಬಾಡಿಗೆ ಕೊಡುವವರ ನಡುವೆ ಸ್ಪರ್ಧೆ ನಡೆಯುತ್ತಿದ್ದವು.‌ ಒಂದೆಡೆ ಚಪ್ಪಲಿ ಕಳಚಿಟ್ಟು ಬುಟ್ಟಿ ಪಡೆಯದೆ ಹೊರಡಲನುವಾದ ಕಾರಣ ಚಪ್ಪಲಿ ಕಾಯಲು ನಿರಾಕರಿಸಿದ. ಆಮೇಲೆ ಸುಮ್ಮನೆ ಖಾಲಿ ಜಾಗದಲ್ಲಿ ರಾಶಿ ಚಪ್ಪಲಿಗಳ ನಡುವೆ ಬಿಟ್ಟು ಮುಂದೆ ಹೋದೆವು. ದೇವಾಲಯ ನಮ್ಮನ್ನೇನೂ ಹೆಚ್ಚು ಹೊತ್ತು ಹಿಡಿದಿಡಲಿಲ್ಲ. ಅಲ್ಲಿಂದ ಇಳಿದುಬಂದು ಪುಷ್ಕರ್ ಸರೋವರ ನೋಡಲು ತೆರಳಿದೆವು. ನಮ್ಮ ಮೇಲುಕೋಟೆಯ ಪುಷ್ಕರಿಣಿಗಿಂತ ಕೊಂಚ ದೊಡ್ಡದಾದ ಸರೋವರ. ಮೂರು ಕಡೆ ವಿಸ್ತಾರವಾದ ಮೆಟ್ಟಿಲು ಇದ್ದವು.ನಮ್ಮ ಜನ ಪವಿತ್ರವೆಂದು ಭಾವಿಸಿದ ಮೇಲೆ ಎಷ್ಟು ಗಲೀಜಿರಬೇಕಿತ್ತೊ ಅಷ್ಟೂ ಇತ್ತು.‌ ಮರಳುಗಾಡಿಗೆ ಹೊಂದಿಕೊಂಡಂತೆ ಇದ್ದ ಕಾರಣ ಬೇರೇನೂ ನೀರಿನ ಮೂಲಗಳು ಆ ಪ್ರದೇಶದಲ್ಲಿ ಇದ್ದಿರಲಾರದು ಎಂದುಕೊಂಡೆ.  ಓಡಾಡಿ ಸುಸ್ತಾಗಿದ್ದ ಸುಜಾತ ಲಸ್ಸಿ ಕೊಡಿಸುತ್ತೇನೆಂದು ನಿಲ್ಲಿಸಿದಳು. ಅಜ್ಮೇರಲ್ಲಿ ಎಲ್ಲ ಕಡೆ ಲಸ್ಸಿ ಫೇಮಸ್ಸು. ಅಲ್ಲಿಯ ಹವಾಮಾನದ ಪ್ರಕಾರ ವರ್ಷದ 12 ತಿಂಗಳು ಮಾತ್ರವೇ ಬಿಸಿಲಂತೆ! ಮಳೆಯಂತೂ ವರ್ಷಕ್ಕೆ ಬರೋಬ್ಬರಿ 20 ಇಂಚಂತೆ. ನಾವೆಷ್ಟು ಅದೃಷ್ಟವಂತರೆಂದರೆ ಅಲ್ಲಿ ಉರಿಯೋದೇವರ (ಸೂರ್ಯ) ಮುಖ‌ ನೋಡಿದ್ದು ಅಪರೂಪವೆ. ಅಲ್ಲಿ ಲಸ್ಸಿ ಎಂದರೆ ಬರೇ ಮೊಸರು ಸಕ್ಕರೆ ಮಿಶ್ರಣವಾಗಿರಲಿಲ್ಲ, ಜೊತೆಗೆ ಗುಲ್ಕಂದ್( ಗುಲ್ಕನ್) ಕೂಡ ಬೆರೆಸಿದ್ದರು. ಬಹಳ ರುಚಿಯಾಗಿತ್ತು.

ಒಂಟೆ ಸವಾರಿ….

ಮಕ್ಕಳಿಬ್ಬರಿಗೂ ಕಳೆದೊಂದು ವಾರದಿಂದ ಹೇಳಿ ಹೇಳಿ ನಿರೀಕ್ಷೆ ಹೆಚ್ಚಿಸಿದ್ದ ಒಂಟೆ ಸವಾರಿ ಬಂದೇ ಬಿಟ್ಟಿತು.‌ ಒಂಟೆ ಸ್ಟ್ಯಾಂಡಿಗೆ ನಮ್ಮ ಕಾರು ನಿಲ್ಲುವ ಹೊತ್ತಿಗೆ ಯಾವ ಪ್ರವಾಸಿ ತಂಡಗಳೂ ಅಲ್ಲಿರಲಿಲ್ಲ. ಇದ್ದಿದ್ದರೆ‌ ನಮ್ಮ ಒಂದೆರಡು ಸಾವಿರ ರೊಕ್ಕ ಉಳಿದಿರುತ್ತಿತ್ತೇನೊ. ನಾವು ವಿಶಾಲ ಮರಳುಗಾಡನ್ನು ನಿರೀಕ್ಷಿಸಿದ್ದೆವು ಆದರದು ಅರೆಮರಳುಗಾಡು ಪ್ರದೇಶವಾಗಿತ್ತು. ಅಲ್ಲಲ್ಲೇ ಗಿಡಮರಗಳೂ, ಕುರುಚಲು ಕಾಡೂ, ಊರೂ, ಬೆಟ್ಟಸಾಲೂ (ಅರಾವಳಿ ರೇಂಜ್) ಎಲ್ಲವೂ ಕಾಣುತ್ತಿದ್ದವು. ಓಡಾಟಕ್ಕೆ ಎರಡು ಮೋಡುಗಳಿವೆಯೆಂದೂ, ಒಂದು ಒಂಟೆ ಎಳೆಯುವ ಗಾಡಿ. ಓಡಾಟದ ದೂರ ಐದು ಕಿ.ಮೀ., ಮತ್ತೊಂದು ಓಪನ್ ಜೀಪಿನಲ್ಲಿ ಇಪ್ಪತ್ತೈದು ಕಿ.ಮೀ. ಓಡಾಟಕ್ಕೆ ಅಂದಾಜು ಐದು ಸಾವಿರವೆಂದೂ ಹೇಳಿದರು. ಎಲ್ಲರಿಗೂ ರಾಜಸ್ತಾನಿ ಪಟ್ಗಾ (ರುಮಾಲಿನಿಂದ ಮಾಡಿದ ಪೇಟ) ಕೂಡ ನೀಡಿದರು. ಕೆಲವೇ ಹೊತ್ತಿನಲ್ಲಿ ನಮಗೆ ಟೋಪಿ ಹಾಕಿದ್ದಾರೆನ್ನುವುದು ಗೊತ್ತಾಯ್ತು!

ನಿಧಾನ ಗತಿಯ ಒಂಟೆ ಬಿಟ್ಟು ವೇಗದ ಜೀಪನ್ನೇ ಆಯ್ಕೆ ಮಾಡಿಕೊಂಡೆವು. ಜೀಪ್ ಓಡಿಸುವ ಅಣ್ಣ ಎಲ್ಲರೂ ಬಿಗಿಯಾಗಿ ಜೀಪಿನ ಕಂಬಿಗಳನ್ನು ಹಿಡಿದು ಕೂರಲು ಹೇಳಿ ಸಾಹಸಕ್ರೀಡೆಗೆ ಮುಂದಾದ. ಮುಂಜಾನೆ ಜೈಪುರ- ಅಜ್ಮೇರ್ ದಾರಿಯಲ್ಲಿ ತಿಂದಿದ್ದ ಬತ್ತೂರ- ಬಟಾಣಿ ಜೀರ್ಣವಾಗಿದ್ದ ಕಾರಣಕ್ಕೆ ಅವನ ಜೀಪು ಸ್ವಚ್ಛವಾಗುಳಿಯಿತು; ಇಲ್ಲದಿದ್ದರೆ‌ ಅಲ್ಲೊಂದು ಸ್ವಚ್ಛ ಭಾರತ್ ಅಭಿಯಾನವೇ ಜರುಗಬೇಕಿತ್ತು. ಮಕ್ಕಳು ಹೋ ಎಂದು ಕೂಗಿ ಜೀಪಿನ ವೇಗದ ಏರಿಳಿತವನ್ನು ಎಂಜಾಯ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಸಿಗುತ್ತಿದ್ದ ಮರಳ ಗುಡ್ಡಗಳನ್ನು ಏರಿಸಿ ರೊಯ್ಯನೆ ಇಳಿಸುತ್ತಿದ್ದ. ಕುಂತ ನಮಗೆ ಬಿದ್ದೇ ಬಿಡುತ್ತೇವೇನೊ ಎನಿಸುತ್ತಿತ್ತು. ಮುಂದೆ ಡ್ರೈವರ್ ಸೀಟ್ ಪಕ್ಕ ಸೇಫ್ ಜಾಗದಲ್ಲಿ ಕುಳಿತಿದ್ದ ಸುಜಾತಾಳ ಗಲಾಟೆಯೇ ಅಧಿಕ! ತಾನು ಇಳಿದೇ ಬಿಡುವುದಾಗಿ ಧಮ್ಕಿ ಕೊಡುತ್ತಿದ್ದಳು; ಆದರೆ ಯಾರೂ ಕ್ಯಾರೇ ಅನ್ನದ ಕಾರಣ ಸುಮ್ಮನಾದಳು. ಒಂದೈದಾರು ಕಿ.ಮೀ. ಹೀಗೆ ಗುಡ್ಡ ಏರಿಸಿ ಇಳಿಸಿ ಒಂದೆಡೆ ನಿಲ್ಲಿಸಿದ‌. ಅಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮತ್ತು ಒಂದು ಸಣ್ಣ ರೌಂಡು ಬರಲು ಒಂಟೆ ಬಾಡಿಗೆಗೆ ದೊರೆಯುತ್ತವೆ. ಈಗಾಗಲೆ ಜೀಪಿನ ವಿಷಯದಲ್ಲಿ ಟೋಪಿ ಇಕ್ಕಿಸಿಕೊಂಡಿದ್ದ ನಾವು ಒಂಟೆ ಸವಾರಿ ವಿಷಯದಲ್ಲಿ ಜಾಗರೂಕರಾದೆವು. 1600 ಹೇಳಿ ಕಡೆಗೆ ಇನ್ನೋರೋ ಮುನ್ನೂರೋ ಕೊಡಿ ಎಂದರು. ಶಾಲೆಗೆ ಹೋಗುವ ಚಿಕ್ಕ ವಯಸ್ಸಿನ ಮಕ್ಕಳು ರಾಜಾಸ್ತಾನಿ ಟೋಪಿ ಬಾಡಿಗೆಗೆ ಕೊಡುವ ಕೆಲಸ ಮಾಡುತ್ತಿದ್ದವು.

ಒಂಟೆಯನ್ನು ಬಹುತೇಕ ಟಿ.ವಿ. , ಸಿನೆಮಾದಲ್ಲಿ ಮಾತ್ರವೇ ನೋಡಿದ್ದ ನಮಗೆ‌ ಹತ್ತಿರದಿಂದ ನೋಡುವ ಸವಾರಿ ಮಾಡುವ ಅವಕಾಶ ಸಿಕ್ಕಿತ್ತು. ಅದರ ಬೆನ್ನೇರಿದ ಮೇಲೆ ಅನಿಸಿದ್ದು ತಾವೆಲ್ಲೋ ಫರ್ಸ್ಟ್ ಫ್ಲೋರಿನಲ್ಲಿ ಇದ್ದೇವೆಂಬ ಭಾವನೆ. ಒಂಟೆ ಏರೋದು ಸುಲಭ, ಇಳಿಯೋದು ಕೊಂಚ ಕಷ್ಟ. ಮೊದಲು ತನ್ನ ಮುಂದಿನೆರಡು ಕಾಳುಗಳ ಮಡಚಿ‌ ಅದು ಕೆಳ ಕೂರುವುದರಿಂದ ಒಮ್ಮಲೇ ಐದಾರು ಅಡಿ ಕುಸಿದಂತಾಗಿ‌ ಬ್ಯಾಲೆನ್ಸ್ ಸಿಕ್ಕದು. ಕೊಂಚ ಹಿಂದಕ್ಕೆ ಒರಗಿದಂತೆ‌ ಕೂರಬೇಕು.

ಒಂದಷ್ಟು ಫೋಟೋ ಕ್ಲಿಕ್ಕಿಸಿ ಫೋಟೋಗ್ರಾಫರನೊಂದಿಗೆ ಚೌಕಾಶಿ ಮುಗಿಸುವ ಹೊತ್ತಿಗೆ, ಮತ್ತೆ ಶುರುವಾಯ್ತು ಜೀಪ್ ಸವಾರಿ. ಈಗ ಕೊಂಚ ಮಟ್ಟಸವಾದ ದಾರಿ. ಒಂದೆರಡು ಹಳ್ಳಿ, ಒಂದಷ್ಟು ನೇರಳೆ ಮತ್ತು ನೆಲ್ಲಿಕಾಯಿ‌ ತೋಟಗಳನ್ನು ತೋರಿಸಿದ. ಆ ಪ್ರದೇಶದ ನೇರಳೆ ಫೇಮಸ್ಸಂತೆ. ಪುಟ್ಟಂಪೂರ ಮರಳುಗಾಡು ಎಂದು ಭಾವಿಸಿಕೊಂಡಿದ್ದ ನಮಗೆ ಆ ಸಮೃದ್ಧ ತೋಟಗಳನ್ನು ನೋಡಿ ಅಚ್ಚರಿಯಾಯ್ತು. ಸುಜಾತ ಮುಂದೆ ಕೂತು ಡ್ರೈವರಣ್ಣಂಗೆ ಏನೇನೊ‌ ಕೇಳುತ್ತಿದ್ದಳು. ಅದರ ಸಾರಾಂಶದಂತೆ ನಡುವೆ ಸಿಕ್ಕ ಹಳ್ಳಿಯ ಜನ ಮೊದಲು ಉಪ್ಪು ತಯಾರಿಸುತ್ತಿದ್ದರಂತೆ (ನಮ್ಮ ಉಪ್ಪಾರರಂತೆ) ಈಗ ಪ್ಯಾಕೆಟ್ ಉಪ್ಪಿನ ಕಾರಣಕ್ಕೆ ಅವರೆಲ್ಲ ಉದ್ಯೋಗವಿಲ್ಲದೆ ಬೇರೆ ಏನೇನೊ ವೃತ್ತಿಗಳನ್ನು ಮಾಡುತ್ತಿರುವರಂತೆ. ನೇರಳೆ ತೋಟಗಳನ್ನು ಹಾಯ್ದು ಮೇನ್ ರೋಡಿಗೆ ಬರೋ ಹೊತ್ತಿಗೆ ಡ್ರೈವರ್ ಗೆ ನಾಕಾರು ಫೋನು ಬಂದವು. ನಮ್ಮ ಬಳಿ ಕೊಂಚ ಹೆಚ್ಚೇ ಕಾಸು ಪಡೆದಿದ್ದ ಅಪರಾಧಿ ಭಾವಕ್ಕೋ ಏನೊ ನಿಧಾನವಾಗಿ‌ ಅಲ್ಲಿನ ಕೃಷಿ, ಜನಜೀವನ, ಭಾಷೆ, ಸಂಸ್ಕೃತಿ ಬಗ್ಗೆ ವಿಸ್ತಾರ ವಿವರಣೆ ನೀಡುತ್ತಿದ್ದ.

ಅಜ್ಮೇರ್ ದರ್ಗಾ….

ಅಜ್ಮೇರ್ ಪ್ರವಾಸ ಹೋಗುವವರ ಮೊದಲ ಆಕರ್ಷಣೆ ಅಜ್ಮೇರ್ ದರ್ಗಾವೇ ಆಗಿರುತ್ತದೆ. ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಸಮಾಧಿಯೇ ಈ ಅಜ್ಮೇರ್ ದರ್ಗಾ. ಇಸ್ಲಾಮಿನ ನಂಬಿಕೆ ಪ್ರಕಾರ ಜೀವಂತ ಮನುಷ್ಯರಾಗಲಿ, ಸಮಾಧಿಗಳಾಗಲಿ ಪೂಜನೀಯರಲ್ಲವಂತೆ; ಆದರೆ ಸೂಫಿಗಳ ದರ್ಗಾಗಳು ಎಲ್ಲ ಧರ್ಮೀಯರು ಹೋಗಬಹುದಾದ, ಪ್ರಾರ್ಥಿಸಬಹುದಾದ ಸ್ಥಳಗಳು. ಹದಿಮೂರನೇ ಶತಮಾನದ ಈ ಸಂತನ ದರ್ಗಾ ದಿನಕ್ಕೆ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ನಮ್ಮ ಉತ್ತರ ಕರ್ನಾಟಕದ ಬಹುತೇಕ ಊರುಗಳಲ್ಲಿ ದರ್ಗಾಗಳಲ್ಲಿ ಸಕ್ಕರೆ ಓದಿಸುವ ಇಸ್ಲಾಮೇತರರ ಶ್ರದ್ಧೆ ರೂಢಿಯಲ್ಲಿದೆ. ಕೆಲವು ದರ್ಗಾಗಳಲ್ಲಿ  ಮಹಿಳೆಯರಿಗೆ ಪ್ರವೇಶವಿಲ್ಲ; ಆದರೆ ಅಜ್ಮೇರ್ ದರ್ಗಾದಲ್ಲಿ ಈ ಷರತ್ತಿಲ್ಲ. 13 ನೇ ಶತಮಾನದಿಂದ ಹಿಡಿದು 19ನೇ ಶತಮಾನದವರೆಗೂ ಹಲವು ದೊರೆಗಳ ಕಾಲಘಟ್ಟಗಳಲ್ಲಿ ಈ ದರ್ಗಾ, ಮಸೀದಿ ಇತ್ಯಾದಿಗಳ ಕಟ್ಟೋಣಿಕೆ ನಡೆದಿದೆ. ದೆಹಲಿ ಸುಲ್ತಾನೇಟಿನ ಇಲ್ತಮಶ್ ಕಾಲದಲ್ಲಿ ಮೊದಲ ನಿರ್ಮಾಣ ಜರುಗಿತಂತೆ. ನಂತರ ಅಕ್ಬರ್, ಜಹಾಂಗೀರ್, ಷಹಜಹಾನ್ ಮತ್ತು ರಜಪೂತ ದೊರೆಗಳು ಕೈಜೋಡಿಸಿದ್ದಾರೆ. ಅಕ್ಬರ್ ತನ್ನ ಆಳ್ವಿಕೆಯ ಕಾಲದಲ್ಲಿ ಸುಮಾರು 14 ಸಾರ್ತಿ ಆಗ್ರಾದಿಂದ ಆಜ್ಮೇರ್ ಗೆ ಬರಿಗಾಲಲ್ಲಿ ನಡೆದು ಬಂದು ಪ್ರಾರ್ಥಿಸಿದ್ದನಂತೆ. ಆಗ ದೊರೆಯ ಬರವಿಗೆಂದೇ ದಾರಿಯುದ್ದಕ್ಕೂ ತಂಗುದಾಣಗಳನ್ನು ನಿರ್ಮಿಸಲಾಗಿತ್ತಂತೆ. ಅಕ್ಬರ್ ಕಾಲದಲ್ಲಿ ದರ್ಗಾಗೆ ಕೊಡುಗೆಯಾಗಿ ನೀಡಲ್ಪಟ್ಟ ದೊಡ್ಡ ಬೋಗುಣಿಗಳಿವೆ. ಅದರಲ್ಲಿ ಒಂದಂತೂ ಇಪ್ಪತ್ತು ಅಡಿ ಸುತ್ತಳತೆ ಮತ್ತು ಸುಮಾರು ಹದಿನೈದು ಅಡಿ ಆಳವಿದೆ. ಈ ಬೋಗುಣಿಯ ಬಳಿ ನಿಂತು ನಾನು- ದಿನೇಶ್ ಚರ್ಚಿಸುವಾಗ ಕನ್ನಡದ ದನಿಯೊಂದು ಕಿವಿಗೆ ಬಿತ್ತು. ಇವತ್ತು ಹಬ್ಬ ಸಾರ್.. ಅಂತ. ಆತ ಬೆಂಗಳೂರಿನಿಂದ ಅಂದಿನ ವಿಶೇಷ ಪ್ರಾರ್ಥನೆಗೆ ಬಂದ ಹುಡುಗ. ನಾವಿಬ್ಬರೂ ಕನ್ನಡದಲ್ಲಿ ಮಾತನಾಡುತ್ತಿದ್ದುದು ಕೇಳಿ ಅವನೂ ಮಾತಿಗೆ ಸೇರಿದ್ದ. ಅಂದು ಮಳೆ ಸುರಿಯುತ್ತಲೇ ಇತ್ತು. ಜನ ತುಂಬಿ ಕೋಡಿ ಬಿದ್ದಿತ್ತು. ದರ್ಗಾ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಮಸೀದಿ ತುಂಬಿ ತುಳುಕುತ್ತಿತ್ತು. ಆಗ ಮದ್ಯಾಹ್ನದ ವಿಶೇಷ ನಮಾಝ್ ಅಂತೆ. ಅದೂ ಅಲ್ಲದೆ ಅಂದು ಪೈಗಂಬರರ ಜನ್ಮದಿನವೂ ಅಂತೆ. ಇವೆಲ್ಲವುಗಳ ಜತೆಗೆ ಬೆಟ್ಟದ ತಪ್ಪಲಲ್ಲಿರುವ ಆ ದರ್ಗಾಗೆ ಮಾಡಿದ ರಸ್ತೆಗಳೆಲ್ಲ ಐದು ಶತಮಾನ ಹಿಂದಿನವು. ಅವೆಲ್ಲ ಈಗ ಕಿಷ್ಕಿಂದೆಯಾಗಿವೆ.

ಅಜ್ಮೇರ್ ತಲುಪುತ್ತಿದಂತೆಯೇ ನಮ್ಮ ಡ್ರೈವರಣ್ಣ ಹೇಳಿಬಿಟ್ಟ‌. ಇಂದು ಪೂರ ರಶ್ಯು, ಇಲ್ಲಿಂದ ಒಂದು ಆಟೋ ಹಿಡಿದರೆ ಸೀದ ದರ್ಗಾ ಹತ್ತಿರ ಒಯ್ಯುತ್ತಾನೆ. ನಡೆದೇ ಹೋದರೆ ತಡವಾಗಬಹುದು ಎಂದು.ಹಾಗೇ ಮಾಡಿದೆವು. ಆಟೋವಾಲ ನಾವು ಇಳಿಯೋಹೊತ್ತಿಗೆ ಹತ್ತು ಸಾರ್ತಿ ಹೇಳಿದ ಪರ್ಸು ಹುಷಾರು ಎಂದು. ಅಲ್ಲಿ ಕಾಲಿಡಲೂ ತೆರಪಿಲ್ಲದಂತೆ ಜನವಿದ್ದುದೇನೊ ನಿಜವೇ ಆಗಿತ್ತು. ದರ್ಗಾದ ಎದುರು ರಸ್ತೆಯಲ್ಲಿ ಹಲವು ಅಂಗವಿಕಲರು ಭಕ್ತಾದಿಗಳಲ್ಲಿ ಕರುಣೆ ಹುಟ್ಟಿಸಿ ಭಿಕ್ಷೆ ಪಡೆಯಲು ಆ ಮಳೆಯಲ್ಲೇ ಹೊರಳುತ್ತಿದ್ದುದು ಸೋನೆಮಳೆಯ ಗಲೀಜೂ ಸೇರಿ ರೇಜಿಗೆ ಹುಟ್ಟಿಸುತ್ತಿತ್ತು. ಅಕ್ಬರ್ ಕೊಡುಗೆಯಾಗಿ ನೀಡಿರುವ ಬೋಗುಣಿ‌ ಏಳು ಲೋಹಗಳಿಂದ ಮಾಡಿದ್ದಂತೆ. ಅದರಲ್ಲಿ ಕನಿಷ್ಟ ಐವತ್ತು ಸಾವಿರ ಜನರಿಗೆ ನೀಡಬಹುದಾದಷ್ಟು ಪ್ರಸಾದವನ್ನು ಒಮ್ಮೆಲೇ ತಯಾರಿಸುವರಂತೆ. ಕಳೆದ ಐನೂರು ವರ್ಷಗಳಿಂದ ಇರುವ ಅದಿನ್ನೂ ವರ್ಕಿಂಗ್ ಕಂಡೀಷನ್ನಿನಲ್ಲಿದೆ. ಅದನ್ನು ಶ್ರೀಲಂಕಾದಿಂದ ಮೂರು ತುಂಡುಗಳಂತೆ ಪ್ರತ್ಯೇಕವಾಗಿ ತರಿಸಿ, ಬೆಸೆಯಲಾಯ್ತೆಂದು ಹೇಳಲಾಗುತ್ತದೆ.

ದರ್ಗಾ ಒಳಗೆ ಹೋಗಿ ಬರುವ ಶಾಸ್ತ್ರ ಮಾಡಿದೆವಾದರೂ ರಾಕ್ ಸ್ಟಾರ್ ಸಿನೆಮಾದಲ್ಲಿ ತೋರಿಸಿದಷ್ಟು ಆಕರ್ಷಕವಾಗಿ ಆ ಜಾಗ ಗೋಚರಿಸಲಿಲ್ಲ‌. ಇನ್ನೊಮ್ಮೆ ಎಂದಾದರೂ ಜನಬಾಹುಳ್ಯ ಕಡಮೆ ಇದ್ದಾಗ ನೋಡಬೇಕು ಎಂದುಕೊಂಡು ಹೊರಬಂದು ಕಾರು ಹೊಕ್ಕೆವು.

ಅಕ್ಬರ್ ಸೆಕ್ಯುಲರ್ರೇ ಮತ್ತು ಡ್ರೈವರಣ್ಣಂಗೆ ಭಾಷಾ ವಿಜ್ಞಾನದ ಪಾಠ!

ನಾವು ತಿರುಗಾಡಿದ ಏಳೆಂಟು ದಿನಗಳು ಬಹುತೇಕ ಉತ್ತರ ಭಾರತದ ದಿಲ್ಲಿ ಸುಲ್ತಾನರ ಮತ್ತು ಮುಘಲ್ ದೊರೆಗಳ ಆಳ್ವಿಕೆಯ ಪ್ರದೇಶ ಮತ್ತು ಸ್ಥಳ, ಕೋಟೆ, ಅರಮನೆ, ಗೋರಿ ಇತ್ಯಾದಿಗಳೇ ಆಗಿದ್ದರಿಂದ ಮತ್ತೆ ಮತ್ತೆ ಚರಿತ್ರೆಯ ವಿಚಾರಗಳು ನನ್ನ ಮತ್ತು ದಿನೇಶ್ ಅವರ ಮಾತುಕತೆಯಲ್ಲಿ ಪ್ರಸ್ತಾಪವಾಗುತ್ತಲೇ ಇದ್ದವು.

ಅಂದು ಅಜ್ಮೇರಿನಿಂದ ಜೈಪುರಕ್ಕೆ ಹೊರಟ ಮೂರು- ಮೂರೂವರೆ ತಾಸು ಚರ್ಚೆಗೀಡಾದ ಸಂಗತಿ ಅಕ್ಬರ್ನ ಸೆಕ್ಯುಲರಿಸಂ ಮತ್ತು ಔರಂಗಝೇಬನ ಕಮ್ಯೂನಲಿಸಂ. ದಿನೇಶ್ ಹಲವು ಸಾರ್ತಿ ಮಾತಿನ ನಡುವೆ ಅಕ್ಬರ್ ಸೆಕ್ಯುಲರ್ ಆದರೆ ಔರಂಗಝೇಬ್ ಕಮ್ಯೂನಲ್ ಎಂದು ಹೇಳುತ್ತಲೇ ಇದ್ದರು. ಈಗ ಸಮಯ ಸಿಕ್ಕ ಕಾರಣಕ್ಕೋ ಏನೊ ಮೊದಲ ಬಾರಿ ಪ್ರತಿಕ್ರಿಯಿಸಿದೆ. ಚರಿತ್ರಕಾರರ ಪ್ರಕಾರ ಅಕ್ಬರ್ ಸೆಕ್ಯುಲರ್ರೂ ಅಲ್ಲ ಔರಂಗಝೇಬ ಕಮ್ಯೂನಲ್ಲೂ ಅಲ್ಲ; ಅವರಿಬ್ಬರೂ ಭಾರತದ ಮಧ್ಯಕಾಲೀನ ದೊರೆಗಳಷ್ಟೇ.

ಈ ಸೆಕ್ಯುಲರ್ ಕಮ್ಯೂನಲ್ ಚರ್ಚೆ ಭಾರತದ ಚರಿತ್ರೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾ ಬಂದಿದೆ.  ಅದೂ ಅಲ್ಲದೆ ಈ ‘ಭೂತ’ ವರ್ತಮಾನವನ್ನೂ ನಿರ್ದೇಶಿಸುತ್ತಿದೆ. ಅಂದರೆ ಕೆಲವು ಭೂತ ಕಾಲದ ದೊರೆಗಳ ಆಳ್ವಿಕೆಯನ್ನು ಅಥವಾ ಹಳವಂಡಗಳನ್ನು ಇಂದಿನ ಅದೇ ಧರ್ಮಶ್ರದ್ಧೆಯ ಜನರ ಮೇಲೆ ಹೇರಲಾಗುತ್ತಿದೆ. ಎಲ್ಲಿಯವರೆಗೆಂದರೆ ಯಾರೊ ನಟಿ ತನ್ನ ಮಗನಿಗೆ ತೈಮೂರ ಎಂದು ಹೆಸರಿಟ್ಟರೆ, ಅದೇ ಹೆಸರಿನ ಒಬ್ಬ ಹಿಂದೆ ಭಾರತದ ಮೇಲೆ ಧಾಳಿ ಮಾಡಿದ್ದ ಎಂದು ಹೇಳುವಷ್ಟರ ಮಟ್ಟಿಗೆ. ರೊಮಿಲಾ ಥಾಪರ್ ಅವರು ತಮ್ಮ ಲೇಖನವೊಂದರಲ್ಲಿ ಈ ಇತಿಹಾಸ ರಚನಾಕ್ರಮದ ವೈಚಿತ್ರ್ಯವನ್ನು ಕುರಿತು ಚರ್ಚಿಸಿದ್ದಾರೆ. ಅವರು ಹೇಳುವುದಿಷ್ಟು. ಅಕ್ಬರನನ್ನು ಉದಾರವಾದಿ ಎಂದು ಚಿತ್ರಿಸಿದಷ್ಟೂ ಔರಂಗಝೇಬನನ್ನು ಅನುದಾರವಾದಿ ಅಥವಾ ಕಟ್ಟರ್ ಎಂದು ಚಿತ್ರಿಸಲು ಇಂಬು ದೊರೆಯುತ್ತದೆ ಎಂಬುದು. ಅಷ್ಟಕ್ಕೂ ಕಳೆದ ಸಾವಿರ ವರ್ಷಗಳಿಂದ ಇಲ್ಲಿನ ಬಹುತೇಕ ಪ್ರದೇಶವನ್ನು ಆಳ್ವಿಕೆ ಮಾಡಿದವರು ಎಂದೂ ಬಹುಸಂಖ್ಯಾತರಾಗಿರಲಿಲ್ಲ‌. ತನ್ನ ಧಾರ್ಮಿಕ ಶ್ರದ್ಧೆಯ ವಿಚಾರವನ್ನು ಉಳಿದೆಲ್ಲರ ಮೇಲೆ ಹೇರುವುದು ಅಷ್ಟು ಸರಳವಾಗಿರಲಿಲ್ಲ. ಸಾಧ್ಯವೂ ಇರಲಿಲ್ಲ. ಇದಕ್ಕೆ ಅವರು ದೆಹಲಿ ಸುಲ್ತಾನನೊಬ್ಬನ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ. ನನ್ನ ಕಣ್ಣ ಮುಂದೆಯೇ ತನ್ನ ಶ್ರದ್ಧೆಗೆ ವಿರುದ್ಧವಾದ ಆಚರಣೆಗಳನ್ನು ಮಾಡುವುದನ್ನು ತಾನು ತಡೆಯಲಾರದವನಾಗಿರುವೆ‌ ಎಂಬ ಅರ್ಥದ್ದು. ಅದಕ್ಕೆ ಕಾರಣ ಸರಳ. ಆಡಳಿತದ ನೂರಾರು ಹಂತ, ವಿಭಾಗ, ಪ್ರಜೆಗಳಲ್ಲಿ ಇದ್ದವರೆಲ್ಲ ಬಹುತೇಕ ದೊರೆ ಪ್ರತಿನಿಧಿಸುತ್ತಿದ್ದ ಸಾಂಸ್ಥಿಕ ಧರ್ಮಕ್ಕೆ ಸೇರಿದವರಾಗಿರಲಿಲ್ಲ. ಆದರೆ ಅವರೆಲ್ಲದ ಸಹಕಾರವಿಲ್ಲದೆ ದೊರೆ ಉಸಿರಾಡಲೂ ಸಾಧ್ಯವಿರಲಿಲ್ಲ. ಈ ಲೆಕ್ಖದಲ್ಲಿ ಅಕ್ಬರ್ ನ ಕೆಲವು ನೀತಿಗಳು ಉದಾರವಾಗಿ ಗೋಚರಿಸುತ್ತವೆ. ಔರಂಗಜೇಬ್ ನ ನೀತಿಗಳು ಕಟುವಾಗಿ ಗೋಚರಿಸುತ್ತವೆ. ಈತ ಹಲವು ಹಿಂದೂ ಮಂದಿರಗಳನ್ನು ನಾಶ ಮಾಡಿದನೆಂದು ಹೇಳುವ ವಿಚಾರದ ಕುರಿತು ಪುಸ್ತಕವೊಂದಿದೆ( ಔರಂಗಝೇಬನ ಆದೇಶಗಳು ಮತ್ತು ಹಿಂದೂ ಮಂದಿರಗಳು ಎಂದೇನೊ ಅದರ ಶೀರ್ಷಿಕೆ. ಲೋಹಿಯಾ ಪ್ರಕಾಶನ ,ಬಳ್ಳಾರಿ) ಅದರ ಪ್ರಕಾರ ಆತ ಸಾವಿರಾರು ಸಂಖ್ಯೆಯ ಪ್ರಾರ್ಥನಾಲಯಗಳನ್ನು ಒಡೆಸಿಹಾಕಿದ ಎಂದು ಹೇಳುವುದು ನಿಜವಂತೆ; ಆದರೆ ಹಾಗೆ ಒಡೆಸಿ ಹಾಕಿದವಲ್ಲಿ ಅನಧಿಕೃತ ಎಂದು ಪರಿಗಣಿಸಲ್ಪಟ್ಟ ಮಸೀದಿ, ದರ್ಗಾ, ಬಸದಿ, ಮಂದಿರ ಎಲ್ಲವೂ ಇದ್ದವಂತೆ. ಅಂದರೆ ಈ ಮಂದಿರ ನಾಶದ ಥಿಯರಿ ಆಡಳಿತಾತ್ಮಕ ಸಂಗತಿಯೇ ಹೊರತು ಆತನ ಧಾರ್ಮಿಕ ನೀತಿಯ ಭಾಗವಲ್ಲ. ಹೀಗೆ ಸಾಗುತ್ತಿದ್ದ ಚರ್ಚೆ ಒಂದೇ ಏಟಿಗೆ ಅಜ್ಮೇರಿನಿಂದ ಬಿಜಾಪುರಕ್ಕೆ ಶಿಫ್ಟ್ ಆಗಿಬಿಡಬೇಕೆ!

ದಿನೇಶ್ ಈ ವಿಚಾರ ಹಿಡಿದು ಧರ್ಮಗಳಿಗೂ ರಾಜಪ್ರಭುತ್ವಗಳ ನಡುವಿನ ಯುದ್ಧಗಳಿಗೂ ಸಂಬಂಧವಿಲ್ಲವೆ ಎಂದು ರಕ್ಕಸ ತಂಗಡಗಿಗೆ ಜಂಪ್ ಮಾಡಿದರು. ಖಂಡಿತ ಸಂಬಂಧವಿದೆ; ಆದರೆ ರಕ್ಕಸ ತಂಗಡಗಿ ಯುದ್ಧಕ್ಕೆ ಧರ್ಮ ಅನ್ನೋದು ಪ್ರಾಥಮಿಕ ಕಾರಣವಾಗಿರಲಿಲ್ಲ ಎಂದೆ. ಹೇಗೆಂದರೆ ಚರಿತ್ರೆಯ ಪ್ರಕಾರ ಬಹಮನಿ ಮತ್ತು ವಿಜಯನಗರ ಸಾಮ್ರಾಜ್ಯಗಳೆರಡೂ ಹದಿನಾಲ್ಕನೇ ಶತಮಾನದಲ್ಲಿ ರೂಪುಗೊಂಡವು. ಈ ಎರಡೂ ಸಾಮ್ರಾಜ್ಯಗಳ‌ ನಡುವೆ ಹಲವು ಯುದ್ಧಗಳು ಸಂಭವಿಸಿವೆ, ಅದು ಸಹಜ ಕೂಡ. ಆ ಎಲ್ಲ ಸಂಘರ್ಷಕ್ಕೆ ಯಾವುದೇ ಎರಡು ಸಾಮ್ರಾಜ್ಯಗಳ ನಡುವಿನ ವಿಸ್ತರಣೆಯ ಉದ್ದೇಶವಿದೆಯೇ ಹೊರತು ಧರ್ಮ ಕಾರಣವಾಗಿರಲಿಲ್ಲ ಎಂಬುದಕ್ಕೆ ಸಾವಿರ ಸಾಕ್ಷಿಗಳಿವೆ. ಆಗ ವಿಜಯನಗರದಲ್ಲಿ ಮುಸ್ಲಿಂ, ಸೈನಿಕರು, ಪ್ರಜೆಗಳೂ, ಮಂತ್ರಿಗಳೂ , ಸೇನಾಪತಿಗಳೂ ಇದ್ದಹಾಗೆ ಬಹಮನಿ ಶಾಹಿ ರಾಜ್ಯಗಳಲ್ಲಿಯೂ ಮುಸ್ಲಿಮೇತರ (ಆಗ ಹಿಂದೂ ಟರ್ಮ್ ಬಳಕೆಯಲ್ಲಿರಲಿಲ್ಲ) ಪ್ರಜೆಗಳು, ಸೈನಿಕರು, ಮಂತ್ರಿ, ಸೇನಾಪತಿಗಳೂ ಇದ್ದರು.‌

ಅಳಿಯ ರಾಮರಾಯನ ಕಾಲಕ್ಕೆ ಐದು ಶಾಹಿ ರಾಜ್ಯಗಳೊಂದಿಗೆ ಪ್ರತ್ಯೇಕ ವಾಗಿ ಹಲವು ಯುದ್ಧಗಳನ್ನು ಮಾಡಿದ್ದ ರಾಮರಾಯ ಪ್ರತೀ ಬಾರಿಯೂ ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟಿ ವಿಭಜಿಸಿ ಆಳುವ ನೀತಿ ಅನುಸರಿಸಿದ್ದ. ಇದನ್ನು ಒಂದು ಹಂತದಲ್ಲಿ ಅರ್ಥೈಸಿಕೊಂಡ ಐದೂ ಶಾಹಿ ರಾಜ್ಯಗಳ ದೊರೆಗಳೂ ಒಟ್ಟಾಗಿ ವಿಜಯನಗರದ ಎದುರು ಸೆಣಸಿದರು. ಅದರ ಪರಿಣಾಮವೇ ವಿಜಯನಗರದ ಪತನ‌. ಈ ಯುದ್ಧದಲ್ಲಿ ವಿಜಯನಗರದ ಕೆಲವು ಸೇನಾಪತಿಗಳು ತಮ್ಮ ಮಾತೃಸೈನ್ಯಕ್ಕೆ ದ್ರೋಹವೆಸಗಿದ್ದಕ್ಕೆ ದಾಖಲೆ ಸಿಗುತ್ತದೆ ಅದೂ ಕೂಡ ಅಂದಿನ ಕಾಲದ ಒಂದು ಫೆನೋಮೆನಾವೇ ಹೊರತು ಧರ್ಮ ಅದಕ್ಕೆ ಕಾರಣವಲ್ಲ. ಹೀಗಾಗಿ ಚರಿತ್ರೆಯ ಸಂಗತಿಗಳನ್ನು ಇಂದಿನ ರಾಜನೀತಿಯ ಹಿನ್ನೆಲೆಯಲ್ಲಿ ನೋಡಹೋಗುವುದು ಸಮಸ್ಯಾತ್ಮಕ ಎಂದೂ ಥಾಪರ್ ಅವರ ಪುಸ್ತಕ ಹುಡುಕಿ ಕೊಡುವೆ, ಓದಿನೋಡಿ ಎಂದೆ.

“ಅಪ್ಪ ರೆಸ್ಟ್ ಗೆ ಹೋಗ್ಬೇಕು” ಎಂದ ಪ್ರಣತಿಯ ಡೈಲಾಗ್ ಬಹುಶಃ ನಮ್ಮ ಈ ಚರ್ಚೆಗೆ ಬ್ರೇಕು ಹಾಕಿರಬೇಕು. ಸುಜಾತ ಮತ್ತು ರೋಹಿಣಿ ಮೇಡಂ ಇಬ್ಬರಿಗೂ ಈ ಚರ್ಚೆ ಬೇಡವಾಗಿತ್ತು. ಕಾರಿನಲ್ಲಿ ಮೊದಲ ಸೀಟಲ್ಲಿ ದಿನೇಶೂ, ಕಡೇ ಸೀಟಲ್ಲಿ ನಾನೂ ಇದ್ದ ಕಾರಣ ನಮ್ಮೀ ಚರ್ಚೆಯ ಧಾಳಿಯಿಂದ ಯಾರೂ ತಪ್ಪಿಸಿಕೊಳ್ಳುವಂತಿರಲಿಲ್ಲ!

ಇಷ್ಟೇಲ್ಲಾ ಆಗುವ ಹೊತ್ತಿಗೆ ಡ್ರೈವರ್ ಕಡೆ ತಿರುಗಿ ನಮ್ಮ ಮಾತುಗಳು ನಿಮಗೆ ಅರ್ಥವಾದುವ ಎಂದು ಕೇಳಿದೆವು. ಅದಕ್ಕೆ ಅವನೆಂದಾ, ಸಾರ್ ದೇಶದ ನಾನಾ ಕಡೆಯಿಂದ ಬಂದ ಜನರ ಮಾತುಗಳನ್ನ ಕೇಳಿದೀನಿ. ನಿಮ್ಮ ಮಾತು ಚೂರೂ ಅರ್ಥವಾಗಲ್ದು ಎಂದ. ಆಗ ನಾನು ದಿನೇಶ್ ಇಬ್ರೂ ಸೇರಿ ಇಂಡೋ ಆರ್ಯನ್, ದ್ರಾವಿಡ ಭಾಷೆಗಳ‌ ವ್ಯತ್ಯಾಸ ಮತ್ತು ಹಿಂದಿ, ಉರ್ದು ,ರಾಜಸ್ತಾನಿ ಭಾಷೆಗಳನ್ನು ಬಲ್ಲ ನಿಮಗೆ ಉತ್ತರ ಭಾರತದ ಭಾಷೆಗಳು ಏಕೆ ಅರ್ಥವಾಗುತ್ತವೆ ಮತ್ತು ದಕ್ಷಿಣದ ಭಾಷೆಗಳು ಏಕೆ ಅರ್ಥವಾಗುವುದಿಲ್ಲ ಎಂಬುದನ್ನೆಲ್ಲಾ ಕೊರೆದೆವು.

ಹಾಗೇ ನಾವು ತ್ರಿಭಾಷಾ ಸೂತ್ರದ ಪ್ರಕಾರ ಮೂರು ಭಾಷೆ ಕಲಿತರೆ ನೀವು‌ ಮತ್ತು ನಿಮ್ಮ ಮಕ್ಕಳು ಹಿಂದಿ – ಇಂಗ್ಲಿಷ್ ಎರಡೇ‌ ಕಲಿತೀರಿ ಅದಕ್ಕೆ ನಮ್ಮ ಭಾಷೆ ನಿಮಗೆ ಅರ್ಥವಾಗದಿದ್ದರೂ, ನಿಮ್ಮ ಮಾತು ನಮಗೆ ಸುಲಭವಾಗಿ‌ ಅರ್ಥವಾಗುತ್ತದೆ‌ ಎಂದೆವು. ಇವೆಲ್ಲ ಅವನಿಗೆ ಅಷ್ಟು ಅರ್ಥವಾಯ್ತೋ ಇಲ್ಲವೇ ‘ಅರ್ಥ’ ಮುಖ್ಯ ಎಂದು ಸುಮ್ಮನೇ ಹ್ಞೂಂಗುಟ್ಟಿದನೋ ಕಾಣೆ. ಅಂತೂ ಮೇಷ್ಟ್ರು ಗಳೆಂದರೆ ಆಲ್ವೇಸ್ ಮೇಷ್ಟ್ರು ಗಳೇ ಸಿಕ್ಕೋರಿಗೆಲ್ಲ ಪಾಠವೇ…

ಕ್ಷೇಮವಾಗಿ ಹೋಟೆಲ್ ರೂಮು ತಲುಪಿಸಿದ ಅವನಿಗೆ ಶುಕ್ರಿಯಾ ಹೇಳಿ, ಮಾರನೇ ಮುಂಜಾನೆ ವಾಪಾಸು ಹೊರಡೋಕೆ ಸಣ್ಣ ಡ್ರಾಪ್ ಕೊಡಲು ಫಿಕ್ಸ್ ಮಾಡಿ ವಿದಾಯ ಹೇಳಿದೆವು. ಅಂದು ಸಂಡೇ. ನಿನ್ನೆ ಮಳೆಯ ಕಾರಣಕ್ಕೆ ಮೊಟಕುಗೊಳಿಸಿದ್ದ ಶಾಪಿಂಗನ್ನ ರೋಹಿಣಿ ಮೇಡಂ ಮತ್ತು ದಿನೇಶ್ ತಾರ್ಕಿಕ ಅಂತ್ಯ ಮುಟ್ಟಿಸಿದರು ಎಂದು ಅವರು ರಾತ್ರಿ ಬಿರಿಯಾನಿ ಪಾರ್ಸೆಲ್ ಹಿಡಿದು ಬಂದಾಗ ತಿಳಿಯಿತು.  ಅಂತೂ ಇಂತೂ ಬೆಂಗಳೂರಿಗೆ ದಿನೇಶ್ ತಮ್ಮ ಕಾರು ಬರುವಂತೆ ವ್ಯವಸ್ಥೆ ಮಾಡಿ, ನಮ್ಮನ್ನು ಮನೆ ಬಾಗಿಲಿಗೆ ತಲುಪಿಸೋ ಹೊತ್ತಿಗೆ ನಾವು ಮನೆ ಬಿಟ್ಟು ಬರೋಬ್ಬರಿ ಹತ್ತು ದಿನಗಳಾಗಿತ್ತು.

(ಮುಕ್ತಾಯ)

ರೋಹಿತ್‌ ಅಗಸರಹಳ್ಳಿ
ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

ಪಿಂಕ್‌ ಸಿಟಿಗೆ ಅದಾಗಲೇ ʼಮಮ್ಮಿʼಬಂದಿದ್ದರು! -ತಿರುಗಾಡಿ ಬಂದೊ-9
ಸುಜಾತ ಮತ್ತು ರೋಹಿಣಿ ಮೇಡಂ ಅವರ ಶಾಪಿಂಗ್‌ ಚೌಕಾಶಿ ಬೇಗ ಮುಗಿಯಲೆಂದೇ ಯಾವಾಗಲೂ ಬಯಸುತ್ತಿದ್ದ ರೋಹಿತ್‌  ಅಂದು ಮಾತ್ರ ಅದು ಲಂಬಿಸಲೆಂದು ಹಾರೈಸುತ್ತಿದ್ದರು. ಏಕಿರಬಹುದು? ರೋಹಿತ್‌ ಅಗಸರಹಳ್ಳಿಯವರ ತಿರುಗಾಟದ ಅನುಭವದ ಒಂಬತ್ತನೇ ಕಂತು ಇಲ್ಲಿದೆ.

ಜಲ್ ಮಹಲ್ ನೋಡಿದ್ದಕ್ಕಿಂತ ನಮ್ಮ ತಂಡದ ಸದಸ್ಯರು ಫೋಟೋ ಕ್ಲಿಕ್ಕಿಸಿಕೊಂಡದ್ದೇ ಹೆಚ್ಚು. ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಯ್ತು. ಊಟದ ಕರ್ತವ್ಯ ಪೂರೈಸಲು ಹೋಟೆಲೊಂದಕ್ಕೆ ನುಗ್ಗಿದೆವು. ಬಿಲ್ ಪಾವತಿಸಿ ಬರುವ ಹೊತ್ತಿಗೆ ಮಳೆ ಕೊಂಚ ಬಿರುಸು ಕಳಕೊಂಡಿತ್ತು. ಅನತಿ ದೂರದಲ್ಲಿಯೇ ಹವಾ ಮಹಲ್. ಹವಾ ಮಹಲ್ ಇರುವ ಬೀದಿಯೇ ಪೂರ ಪಿಂಕ್ ಪಿಂಕ್.  ಪಿಂಕ್ ಸಿಟಿಯ ಅಭಿದಾನಕ್ಕೆ ಕಾರಣ ಆ ವೀಧಿಯೇ ಇರಬೇಕು. ಅಲ್ಲಿರುವ ಎಲ್ಲ ಸರ್ಕಾರಿ, ಖಾಸಗೀ ಕಟ್ಟಡಗಳೂ ಪಿಂಕ್ ಬಣ್ಣ ಬಳಿದುಕೊಂಡು ವಿಶಿಷ್ಟವಾಗಿ ಕಾಣುತ್ತವೆ.

ಕಿಟಕಿಗಳೇ ಕಾಣುವ ಹವಾ ಮಹಲ್

ಹವಾ ಮಹಲ್ ನೋಡಿದರೆ ಬರೇ ಕಿಟಕಿಗಳೇ ಕಾಣುತ್ತವೆ. ಹತ್ತಿರ ಹತ್ತಿರ ಸಾವಿರ ಕಿಟಕಿಗಳಿರುವ ಐದು ಅಂತಸ್ತಿನ ಕಟ್ಟಡವದು. ಕಟ್ಟಡದ ಎದುರು(?) ನಿಂತು ಫೋಟೋ ಕ್ಲಿಕ್ಕಿಸಿಕೊಂಡವರು ಒಳ ಪ್ರವೇಶ ಮಾಡಬೇಕೆಂದಾಗಷ್ಟೇ ಬಾಗಿಲೆಲ್ಲೆಂದು ಹುಡುಕೋದು. ಅದಕ್ಕೆ ರಸ್ತೆಗೆ ಅಭಿಮುಖವಾಗಿ ಬಾಗಿಲೇ ಇಲ್ಲ! ಏಕೆಂದರೆ ರಸ್ತೆಗೆ ಎದ್ದು ನಿಂತು ಎತ್ತರವಾಗಿಯೂ ಸುಂದರವಾಗಿಯೂ ಕಾಣುವ ಭಾಗ ಅರಮನೆಯ ಮುಂಭಾಗವಲ್ಲ ಹಿತ್ತಿಲು. ಹಿತ್ತಿಲು ಏಕೆಂದರೆ 1799 ರಲ್ಲಿ ನಿರ್ಮಾಣವಾದ ಈ ಅರಮನೆಯ ಈ ಭಾಗದ ಅಂದರೆ ರಸ್ತೆಗಿರುವ ಹಿಂಭಾಗದ ಉದ್ದೇಶವೇ ಪರದೆಯ ಹಿಂದೆಯೇ ಇರುವ ಜನಾನಾದ ರಾಣಿ ವಾಸದವರಿಗೆ ಊರ ಚಟುವಟಿಕೆ, ಉತ್ಸವ, ಮೆರವಣಿಗೆ ಇತ್ಯಾದಿ ನೋಡಲೆಂದು. ಗುಲಾಬಿ ಮತ್ತು ಕೆಂಪು ‌ಬಣ್ಣದ ಮರಳು ಶಿಲೆಗಳಿಂದ ಕೂಡಿ ನಯನ ಮನೋಹರವಾಗಿ‌ ಕಾಣುವ ಕಿಟಕಿಗಳ ಭಾಗ ಕಾಣುತ್ತದೆ. ಹೆಣ್ಣು ಮಕ್ಕಳ ವಿಷಯದಲ್ಲಿ ದೇಶದ ಎಲ್ಲ ಮತಗಳ ರಾಜರೂ ಒಂದೇ ಮನೋಭಾವದವರು. ರಾಣೀವಾಸದವರೆಂದೂ ಹಿತ್ತಿಲಲ್ಲೇ ಇರಬೇಕು; ಜಗಲಿಗೆ ಬರಲೇಬಾರದು. ಅದಕ್ಕೆ ಹಿತ್ತಿಲನ್ನೇ ಜಗಲಿಯಂತೆ ಮಾರ್ಪಡಿಸಿ ಬಿಟ್ಟಿದ್ದಾರೆ-ನಮ್ಮ ಕನಕನ ಕಿಂಡಿಯಂತೆ. ಕೃಷ್ಣ ಹಿಂದೆ ತಿರುಗಿದನೋ ಇಲ್ಲವೋ ಕಿಂಡಿಯಂತೂ ದೇವಾಲಯದ ಹಿಂಭಾಗಕ್ಕಿದೆ. ಅಂದ ಹಾಗೆ ಇದನ್ನು ಕಟ್ಟಿಸಿದ ದೊರೆ ಸವಾಯಿ ಪ್ರತಾಪ್ ಸಿಂಗ್ ಮತ್ತು ಶಿಲ್ಪಿ ಲಾಲ್ ಚಂದ್ ಉಸ್ತಾದ್ ಅಂತೆ.

ವಾಸ್ತುಶಿಲ್ಪದ ದೃಷ್ಟಿಯಿಂದ ವಿಶಿಷ್ಟವಾದ ಮತ್ತು ಸುಂದರ ಕಟ್ಟಡ ಹವಾ ಮಹಲ್. ಬಿರುಬಿಸಿಲಿನ ನಾಡಲ್ಲಿ ತಂಪನೆಯ ಗಾಳಿ ಬೀಸಿಬರುವಂತೆ ಕಟ್ಟಲಾಗಿದೆಯಂತೆ. ಹವಾ ಮಹಲ್ ಸಿಕ್ಕ ಕೂಡಲೆ ಫೋಟೋ ತೆಗೆಯಲು ಯತ್ನಿಸುವವರಿಗೊಂದು ಸವಾಲು ಎದುರಾಗುತ್ತದೆ. ಪೇಟೆಯ ರಸ್ತೆಯಲ್ಲಿಯೇ ಇರುವುದರಿಂದ ಈ ಎತ್ತರದ ಕಟ್ಟಡ ಪೂರ್ಣವಾಗಿ ಕೆಮೆರಾ ಕಣ್ಣಿಗೆ ದಕ್ಕದು. ಪೂರ ಕವರ್ ಮಾಡಬೇಕೆಂದರೆ ಎದುರಿನ ಫುಟ್ಪಾತ್ ನಲ್ಲಿ ಕೊಂಚ ಪಾರ್ಶ್ವಕ್ಕೆ ಹೊರಳಬೇಕು. ಹಾಗೆ ಹೊರಳಿಕೊಂಡ ಕೂಡಲೆ ಓರೆ ಚಿತ್ರ‌ ಮಾತ್ರ ಲಭ್ಯ. ಇದಕ್ಕೊಂದು ಪರಿಹಾರವೂ ಇದೆ. ಈ ಅರಮನೆಯ ಎದುರೇ ಇರುವ ವಾಣಿಜ್ಯ ಕಟ್ಟಡಗಳಲ್ಲಿ ಒಂದು ಹೋಟೆಲೂ, ಮತ್ತೆ ಕೆಲವು ಕನಕೇತರ ಲೋಹಗಳ ಒಡವೆ ವಸ್ತುಗಳನ್ನು ಮಾರುವ ಮಳಿಗೆಗಳಿವೆ. (ಕಾರ್ಪೆಟ್ ಮತ್ತು ಇಂಥ ಒಡವೆಗಳನ್ನು ತಯಾರಿಸುವುದು ರಾಜಸ್ಥಾನದ ದೊಡ್ಡ ಉದ್ಯಮವಂತೆ) ಮೂರನೇ ಮಹಡಿಯ ಹೋಟೆಲು ಮುಚ್ಚಿತ್ತು. ಆ ಹೋಟೆಲಿಂದ ಸೆಲ್ಫಿ ಹಿಡಿದರೆ ಹವಾ ಮಹಲ್ ಪೂರ ಕವರ್ ಆಗುವುದೆಂದು ದಿನೇಶ್ ಮೊದಲೇ ಸಂಶೋಧನೆ ಮಾಡಿ ಕಂಡುಕೊಂಡಿದ್ದರು. ಎರಡನೇ ಮಹಡಿಯ ಅಂಗಡಿ ಮಳಿಗೆಯ ಮಾಲಕನೊಬ್ಬ ತನ್ನ ಅಂಗಡಿಯ ಬಾಲ್ಕನಿಯಿಂದ ಅರಮನೆಯ ಪೂರ ಎದುರುನೋಟ ಕವರ್ ಆಗುವ ಜಾಗಕ್ಕೆ ಹಗ್ಗ ಕಟ್ಟಿ ನಿರ್ಬಂಧಿಸಿದ್ದ. ಅವನ ಅಂಗಡಿ ವ್ಯಾಪಾರಕ್ಕೆ ಹೋದವರಿಗೆ ಮಾತ್ರ ನೋಡಲು ಫೋಟೋ ಕ್ಲಿಕ್ಕಿಸಲು ಅವಕಾಶ. ಆಗ ನಮ್ಮ ಸಹಾಯಕ್ಕೆ ಬಂದದ್ದು ಸುಜಾತ ಮತ್ತು ರೋಹಿಣಿ ಮೇಡಂ ಅವರ ಶಾಪಿಂಗು! ಎಂದೂ ಅವರ ಚೌಕಾಶಿ ಬೇಗ ಮುಗಿಯಲೆಂದೇ ಬಯಸುತ್ತಿದ್ದ ನಾನು, ಅಂದು ಮಾತ್ರ ಅದು ಲಂಬಿಸಲೆಂದು ಹಾರೈಸುತ್ತಿದ್ದೆ. ಅವರು ನಮ್ಮ ಚಿತ್ತವನ್ನರಿತೋ ಏನೊ ಒಂದೆರಡು ಬೆಂಡೋಲೆ, ಹ್ಯಾಂಗಿಂಗ್ ಗಳನ್ನು ಬಹಳೇ ಹೊತ್ತು ಚೌಕಾಶಿ ಮಾಡಿಯೇ ಕೊಂಡರು.

ಹವಾ ಮಹಲ್‌ ಒಳಹೋಗಲು ದಾರಿ ಹುಡುಕಿದರೆ, ಅದೊಂದು ದೂರದ ಕಟ್ಟಡದ‌ ಮೂಲೆಯಲ್ಲಿತ್ತು. ಅಲ್ಲಿ ಪ್ರವೇಶ ಮಾಡಿದರೆ‌ ಅರಮನೆಯ ಮುಂಭಾಗ ಸಿಗುತ್ತದೆ. ಅಲ್ಲಿಯೇ ಪಾರ್ಕಿಂಗ್ ಇತ್ಯಾದಿ ಇವೆ. ಒಳ ಹೋದ ಕೂಡಲೆ ಒಂದು ಕಾರಂಜಿಯೂ ಮತ್ತು ಎಡಭಾಗದಲ್ಲಿ ಮೇಲಿನ ಮಹಡಿಗೆ ಸ್ಟೇರ್ ಕೇಸ್ ಇದೆ; ಆದರೆ‌ ಮೆಟ್ಟಿಲ ಬದಲಿಗೆ ಸುರುಳಿಯಾಕಾರದ ರ‍್ಯಾಂಪ್ ಇದೆ. ರಸ್ತೆಯಿಂದ ನೋಡುವ ಅರಮನೆಯೇ ಬೇರೆ‌ ಒಳಾವರಣದಲ್ಲಿ ನೋಡುವುದೇ ಬೇರೆ. ರಸ್ತೆಗೆ ಭವ್ಯವಾಗಿ ಕಾಣುವ ಹಿಂಭಾಗವೇ ಅರಮನೆಯ ಜೀವಾಳ. ಒಳಬಂದರೆ ಕೇವಲ ಹಂದರ ಮಾತ್ರ. ಒಂದೊಂದೇ ಫ್ಲೋರು ಏರುತ್ತಲೂ ಜಾಗ ಕಿರಿದಾಗುತ್ತಾ ಹೋಗಿ ಕೊನೆಯ ಫ್ಲೋರು ತಲುಪುವ ಹೊತ್ತಿಗೆ ಒಬ್ಬರ ಹಿಂದೊಬ್ಬರು   ನಡೆಯುವಷ್ಟು ಇಕ್ಕಟ್ಟು. ಪ್ರತೀ ಮಹಡಿ ತಲುಪಿದಾಗಲೂ  ಅಲ್ಲಿರುವ ಕಲ್ಲಿನ ಜಾಲಂಧ್ರ ಮತ್ತು ಕಿರಿದಾದ ಮರದ ಕಿಟಕಿಗಳ ಮೂಲಕ ಜೈಪುರದ ವಿಹಂಗಮ ನೋಟ ಸಿಗುತ್ತದೆ. ಐದನೇ ಮಹಡಿಯಲ್ಲಿ ಕಿಟಕಿ ಬಳಿ ಹೋಗುವುದೇ ಒಂದು ಸರ್ಕಸ್.  ಅತೀ ಇಕ್ಕಟ್ಟಿನ ಕಿಟಕಿ ಬಳಿ ನುಸುಳಿ ಎತ್ತರದಿಂದ ಊರು ನೋಡುವುದೇ ಒಂದು ಚೆಂದ.

ಅಚ್ಚಕನ್ನಡದಲ್ಲಿಯೇ ಚೌಕಾಶಿ!

ಕೆಳಗಿಳಿದು ಬರೋ ಹೊತ್ತಿಗೆ‌ ಸುಜಾತ ಸುಸ್ತಾಗಿ ಮೂರನೇ ಮಹಡಿಯಿಂದ ವಾಪಾಸು ಬಂದಿದ್ದಳು. ನೆಲಮಹಡಿಯ ಕಾರಂಜಿಯ ಎದುರೊಂದು ಗುಂಪುಚಿತ್ರ ಸೆರೆಹಿಡಿದುಕೊಂಡು ಹೊಂಟೆವು. ಹವಾ ಮಹಲ್ ತಲುಪಿಸುವಾಗಲೇ ಡ್ರೈವರ್ ಇಲ್ಲಿ ಮುಗಿಸಿ ಪಕ್ಕದಲ್ಲೇ ಇರುವ ಜಂತರ್ ಮಂತರ್ ಗೆ ಬಂದುಬಿಡಿ, ಇಲ್ಲಿ ಪಾರ್ಕಿಂಗ್ ಇಲ್ಲ ಅಲ್ಲೇ ಕಾಯುತ್ತಿರುತ್ತೇನೆ ಎಂದಿದ್ದ. ಜಂತರ್ ಮಂತರ್ ಕೂಗಳತೆ ದೂರದಲ್ಲೇ ಇತ್ತು. ಒಳಹೊಕ್ಕು ನೋಡಿದರೆ ಏನೇನೂ ಅರ್ಥವಾಗದು. ಅರ್ಥವಾಗಲು ಮಾರ್ಗದರ್ಶಕರು ಬೇಕೇನೊ.‌ ದಿಲ್ಲಿಯ ಜಂತರ್ ಮಂತರ್ ಗಿಂತ ಇದು ವಿಶಾಲವಾದುದೂ ಹೆಚ್ಚು ಸಂಕೀರ್ಣ ರಚನೆಗಳನ್ನು ಒಳಗೊಂಡುದೂ ಆಗಿದೆ. ದೇಶದಲ್ಲಿರುವ ಮೂರು ರಚನೆಗಳಲ್ಲಿ ಇದೂ ಒಂದಂತೆ. ಅತಿಬೇಗ ಅಲ್ಲಿಂದ ಹೊರಬಂದೆವು. ಹೆಣ್ಣು ಮಕ್ಕಳು ಮೈಚಳಿ ಬಿಟ್ಟು ಶಾಪಿಂಗ್ ಮೂಡಿಗೆ ತಿರುಗುತ್ತಿದ್ದರು. ನಾನು ದಿನೇಶ್ ಮಟ್ಕಾ ಚಹಾ ಹುಡುಕಾಡುತ್ತಿದ್ದರೆ ಹೆಮ್ಮಕ್ಕಳು ಏನೋ ಕೊಳ್ಳಲು ಚೌಕಾಶಿಗಿಳಿದಿದ್ದರು.  ನಮ್ಮ ಗುಂಪಿನಲ್ಲಿ ಭಾಷೆಯ ತೊಡಕು ಅಷ್ಟಾಗಿ ಕಾಡದಿದ್ದುದು ಸುಜಾತ ಮತ್ತು ಆರುಷನಿಗೆ ಮಾತ್ರ. ದಿನೇಶ್ ಭಯ್ಯಾ ಎಂದು ಆರಂಭಿಸಿ ಅಚ್ಚಗನ್ನಡದಲ್ಲಿ ಡೈಲಾಗ್ ಮುಗಿಸುತ್ತಿದ್ದರು. ನಾನು ಹರುಕು ಮುರುಕು ಹಿಂದಿ ಪದಗಳನ್ನು ಜೋಡಿಸುತ್ತಾ, ನಾಲಗೆ ತೊಡರಿಕೊಂಡ ಕೂಡಲೆ ಸುಜಾತಾಗೆ ದಾಟಿಸಿ ಬಿಡುತ್ತಿದ್ದೆ! ರೋಹಿಣಿ ಮೇಡಂ ಅಂತೂ ಯಾವ ಬೇಧ ಭಾವ ಮಾಡದೆ ಎಲ್ಲರ ಬಳಿಯೂ ಅಚ್ಚಕನ್ನಡದಲ್ಲಿಯೇ ಚೌಕಾಶಿ ಮಾಡುತ್ತಿದ್ದರಂತೆ. ಅಲ್ಲಿ ನಮ್ಮ ಕೈಹಿಡಿಯುತ್ತಿದ್ದುದು ಇಂಗ್ಲಿಷ್ ಅಂಕಿಗಳು ಮಾತ್ರ! ಹಿಂದಿಯಲ್ಲಂತೂ ಬೀಸ್ ವರೆಗೆ ಮಾತ್ರ ನಂಗೆ ಅರ್ಥವಾಗೋದು. ಪಚ್ಚಾಸ್ ಮತ್ತು ಪಚ್ಚೀಸ್ ಎರಡೂ ಈಗ್ಲೂ ಬಹಳ ಸರ್ತಿ ಕೈಕೊಡೋದೆ.

ನೆನಪಲ್ಲುಳಿದ ರಾಜಸ್ಥಾನದ ಟೀ

ರಾಜಸ್ಥಾನದಲ್ಲಿ ಟೀ ಅದ್ಭುತವಾಗಿ ಮಾಡ್ತಾರೆ ಅಂತ ಬಹಳ ಬೇಗ ಅರ್ಥವಾಗಿತ್ತು; ಅದಕ್ಕೇ ಅವಕಾಶವಾದಾಗಲೆಲ್ಲ ಟೀಗೆ ಮುಗಿಬೀಳುತ್ತಿದ್ದೆವು. ಸಿಟಿ ಪ್ಯಾಲೇಸ್ ಎದುರು ರಸ್ತೆ ಬದಿ ಒಬ್ಬ ಚಾ ಮಾರುವಾತ, ಈಗಷ್ಟೇ ಮುಗಿದಿದೆ ಫ್ರೆಶ್ ಟೀ ಕೊಡುವೆ ಇರಿ ಎಂದು ಆಸೆ ತೋರಿಸಿದ. ಸುಮಾರು ಇಪ್ಪತ್ತು ನಿಮಿಷ ಕಾಯಿಸಿ ಕೊಟ್ಟ. ಕಾಯುವಿಕೆಗೂ ಒಂದು ಸಾರ್ಥಕತೆ ಒದಗಿತ್ತು. ಹಿತ್ತಾಳೆ ಪಾತ್ರೆಯಲ್ಲಿ ಮಾಡುವ ಕಾರಣಕ್ಕೆ ಆ ರುಚಿ ಎಂದು ಹೇಳಿದ ಸುಜಾತ, ಬಂದ ಕೂಡಲೆ ಅಮೇಜಾನ್ ಗೆ ಬಲೆ ಬೀಸಿ ಹಿತ್ತಾಳೆ ಟೀ ಗಿಂಡಿಯೊಂದನ್ನು ಹುಡುಕಿ, ಕೊಳ್ಳಲು ಗಂಟುಬಿದ್ದಿದ್ದಳು. ಒಮ್ಮೆ ಬುಕ್ ಮಾಡಿ ಅದು ದೊಡ್ಡದಾಯ್ತು ಎಂದು ಕ್ಯಾನ್ಸೆಲ್ ಮಾಡಿದ್ದೂ ಆಯ್ತು. ಅಲ್ಲಿಂದ ಬಂದ ಇಷ್ಟು ದಿನಗಳ ನಂತರವೂ ಮಣ್ಣ ಕುಡಿಕೆಯ ಟೀ ರುಚಿ ಹಾಗೇ ನಾಲಗೆ ಮೇಲೆ ನಿಂತಿದೆ. ಜಂತರ್ ಮಂತರ್ ಎದುರೇ ಸಿಟಿ ಪ್ಯಾಲೇಸ್ ಇತ್ತು. ನಮ್ಮ ಕಾಂಬೋ ಟಿಕೇಟಲ್ಲಿ ಇಲ್ಲದ ಕಾರಣಕ್ಕೋ, ಇಲ್ಲವೇ ಈಗಾಗಲೇ ಎರಡು ಅರಮನೆ ನೋಡಿ, ಆಲ್ಬರ್ಟ್ ಮ್ಯೂಸಿಯಂ ಕಡೆ ಹೊರಡುತ್ತಿದ್ದ ಕಾರಣಕ್ಕೋ, ಇಲ್ಲವೇ ಅರಮನೆಗಳಲ್ಲಿ ಮಹಾ ಏನಿದ್ದೀತು ಎಂಬ ಉದಾಸೀನವೋ ಸಿಟಿ ಪ್ಯಾಲೇಸ್ ಗೆ ಹೋಗಬೇಕೆಂಬ ನಿರ್ಬಂಧ ಯಾರಲ್ಲೂ ಹುಟ್ಟಲಿಲ್ಲ.

ಆಲ್ಬರ್ಟ್ ಮ್ಯೂಸಿಯಂ

ಅಂದು ನಾವು ಮಿಸ್ ಮಾಡಿಕೊಂಡ ಮತ್ತೊಂದು ಜಾಗೆ ನಹಾರ್ಗಡ ಕೋಟೆ. ಅದು ನಮ್ಮ ಟ್ರಾವೆಲ್ ಏಜೆಂಟನ ಪಟ್ಟಿಯಲ್ಲಿ ಇರಲಿಲ್ಲ. ಇನ್ನು ಉಳಿದದ್ದು ಆಲ್ಬರ್ಟ್ ಮ್ಯೂಸಿಯಂ ಮಾತ್ರ. ಇದರ ಪೂರ್ಣ ಹೆಸರು ಆಲ್ಬರ್ಟ್ ಹಾಲ್ ಮ್ಯೂಸಿಯಂ. ಈ ಹೆಸರಿಗೆ ಕಾರಣ ಇಂಗ್ಲೆಂಡ್ ರಾಜ ಆಲ್ಬರ್ಟ್. ಈ ಕಟ್ಟಡಕ್ಕೆ 1876 ರಲ್ಲಿ ಅಡಿಗಲ್ಲು ಹಾಕಿದ ಕಾರಣಕ್ಕಂತೆ‌ 1887 ರಲ್ಲಿ ಕಟ್ಟಡ ಪೂರ್ಣಗೊಂಡಾಗ ಇದನ್ನು ಜೈಪುರದ ಟೌನ್ ಹಾಲ್ ಮಾಡುವ ಯೋಚನೆ ಇತ್ತಂತೆ; ಅದರೆ ದೊರೆ ಮಾಧೋಸಿಂಗ್ ಇದನ್ನು ಮ್ಯೂಸಿಯಂ ಮಾಡಬೇಕೆಂದು ತೀರ್ಮಾನಿಸಿದನಂತೆ. ರಾಜಸ್ಥಾನದ ಕಲೆ, ಕರಕುಶಲ ವಸ್ತುಗಳು ಮತ್ತು  ದೇಶದ ಮತ್ತು ಜಗತ್ತಿನ ಹಲವು ಅಮೂಲ್ಯ ವಸ್ತುಗಳು ಮತ್ತು ಚಿತ್ರಗಳು ಇಲ್ಲಿ ಪ್ರದರ್ಶನಕ್ಕಿವೆ. ಇದು ಇಂಡೋಸರಾಸೆನಿಕ್ ಶೈಲಿಯ ಸುಂದರ ಕಟ್ಟಡ. ಹೊರಗಿನಿಂದ ನಮ್ಮ ಮೈಸೂರು ಅರಮನೆಯಂತೆಯೂ, ಒಳಾಂಗಣದಲ್ಲಿ ಜಗನ್ಮೋಹನ ಅರಮನೆಯಂತೆಯೂ ಕಾಣುತ್ತದೆ. ಅಮೂಲ್ಯ ಕಲಾಕೃತಿಗಳು ಮತ್ತು ವಸ್ತುಗಳೇನೊ ಇವೆ. ಕೆಲವೆಡೆ ಕ್ರಮಬದ್ಧವಾಗಿಲ್ಲ ಎನಿಸಿತು. ಮತ್ತೂ ಕೆಲವೆಡೆ ಧೂಳು ಮೆತ್ತಿಕೊಂಡ ವಸ್ತುಗಳು ಮೇಂಟೆನೆನ್ಸ್ ಕೊರತೆಯನ್ನು ಸದ್ದಿಲ್ಲದೆ ಅರುಹುತ್ತಿದ್ದವು. ಮ್ಯೂಸಿಯಂ ತುಂಬಿಸಬೇಕೆಂಬ ಉತ್ಸಾಹದಲ್ಲಿ ಭಗ್ನಗೊಂಡ ಹಲವು ಶಿಲ್ಪಗಳು ಮತ್ತು ಜೀರ್ಣಾವಸ್ಥೆಗೆ ಸಲ್ಲಲು ಹವಣಿಸುತ್ತಿರುವ ಸಾಧಾರಣ ಪೇಟಿಂಗುಗಳನ್ನು ಹಲವೆಡೆ ಪೇರಿಸಲಾಗಿದೆ. ಪಿಂಗಾಣಿ ಮತ್ತು ದೊಡ್ಡ ಹಿತ್ತಾಳೆಯ ತಟ್ಟೆಗಳ ಮೇಲೆ ಪುರಾಣದ ಹಲವು ಕತೆಗಳನ್ನು ಚಿತ್ರಿಸಲಾಗಿದೆ. ಕೆಲವು ತಟ್ಟೆಗಳು ಎಂಟು ಹತ್ತು ಅಡಿ ಸುತ್ತಳತೆಯಷ್ಟು ದೊಡ್ಡವು. ಈ ತಟ್ಟೆಗಳ ಮೇಲಿನ ಚಿತ್ರಣ ನಮ್ಮ ಬಿದರಿ ಕಲೆಯನ್ನು ಹೋಲುವಂಥದು.

ಮಳೆಯಲ್ಲೊಂದು ಗೊಂಬೆ ನಾಟಕ

ರಾಜಸ್ತಾನದ ಮಣ್ಣಿನ ಕುಶಲವಸ್ತುಗಳು ಮತ್ತು ಲೋಹ ಶಿಲ್ಪಗಳಲ್ಲದೆ ಆನೆಯ ದಂತದ ಕಲಾಕೃತಿಗಳು ಮತ್ತು ಕಾಷ್ಟ ಕೆತ್ತನೆಯ ಬೃಹತ್ ವಸ್ತುಗಳೂ ಪ್ರದರ್ಶಿಸಲ್ಪಟ್ಟಿವೆ. ಎಲ್ಲಕ್ಕೂ ಕಲಶಪ್ರಾಯದಂತೆ ಒಂದು ʼಮಮ್ಮಿʼಯೂ ಇದೆ. ಎಷ್ಟೋ ಸಾವಿರ ವರ್ಷಗಳ ಹಳತಂತೆ‌. ರಜಪೂತ ದೊರೆಗಳ ಬಂದೂಕು, ಕತ್ತಿಗಳು ಮತ್ತು ಉಡುಪುಗಳು ಕೂಡ ಪ್ರದರ್ಶನಕ್ಕಿವೆ. ಇವೇನೂ ನನಗೆ ಅಷ್ಟು ಆಕರ್ಷಣೆ ಹುಟ್ಟಿಸಲಿಲ್ಲ. ಸಾವಧಾನದ ಬೆನ್ನೇರಿದಂತೆ ಬರುತ್ತಿದ್ದ ನನ್ನನ್ನು ಮಕ್ಕಳಿಬ್ಬರೂ (ಪ್ರಣತಿ, ಆರುಷ) ಓಡಿಬಂದು ಗೊಂಬೆನಾಟಕ ಇದೆಯಂತೆ ನೋಡಲು ಬರಬೇಕಂತೆ ಎಂದರು. ಮಳೆ ಮತ್ತೆ ಜೋರಾಗಿ ಬಡಿಯತೊಡಗಿತ್ತು, ಆದರೆ ಒಳಗಿದ್ದ ನಮಗೆ ಇದರ ಸೂಚನೆ ಇರಲಿಲ್ಲ. ಎಲ್ಲ ಮುಗಿಸಿ ಮ್ಯೂಸಿಯಂನ ಎಕ್ಸಿಟ್ ಗೆ ಬರುವ ಹೊತ್ತಿಗೆ ಜನಜಾತ್ರೆಯೇ ನೆರೆದಿತ್ತು.‌ ಗೊಂಬೆ ನಾಟಕ ಮುಗಿದು ಜನಪದ ಹಾಡುಗಾರಿಕೆ ಆರಂಭವಾಗಿತ್ತು. ಜನ ಇಡಿಕಿರಿದಿದ್ದುದು ನಾಟಕ ಸಂಗೀತದ‌ ಕಾರಣಕ್ಕಾಗಿ ಅಲ್ಲ; ಮಳೆ ಅವರ್ಯಾರೂ ಹೊರ ಹೋಗದಂತೆ ತಡೆದಿತ್ತು ಎಂಬುದು ಬೇಗ ಅರ್ಥವಾಯ್ತು. ಮಳೆ ಕೊಂಚ ಇಳಿದದ್ದೇ ನಮ್ಮ ರಥದ ಸಾರಥಿಗೆ ಬರಲು ಫೋನು ಹಚ್ಚಿ ಹೋಟೆಲ್ ರೂಮ್ ಸೇರಿಕೊಂಡೆವು.‌ ಬೆಳಗಿನಿಂದ ನಮ್ಮೊಂದಿಗೆ ಬೆಂದಿದ್ದ ಡ್ರೈವರಣ್ಣನನ್ನೇ ನಾಳಿನ ಮತ್ತು ಕೊನೆಯ ದಿನದ ಅಜ್ಮೇರ್ ಮತ್ತು ಪುಷ್ಕರ್ ಗೂ ನಿಕ್ಕಿ ಮಾಡಿಕೊಂಡೆವು. ಬೆಳಿಗ್ಗೆ ಆರಕ್ಕೇ ಹೊರಟು ಬರಲು ಹೇಳಿದೆವು. ಕಳೆದೊಂದು ವಾರದಿಂದ ನಮ್ಮ ತಂಡದ ಹೆಂಗೂಸುಗಳು ಶಾಪಿಂಗಿಗೆ ಸರಿಯಾದ ಜಾಗ ಮತ್ತು ಕೊಳ್ಳುವ ಐಟಮ್ ಗಳು ಸಿಗದೆ ಚಡಪಡಿಸುತ್ತಿದ್ದವು. ಇಂದು ಸಮಯ ಕೂಡಿ ಬಂದಿತ್ತು. ಊಟಕ್ಕೆ ಹೇಗೂ ಹೊರ ಹೋಗಬೇಕಿತ್ತು. ಅದೇ ನೆವ ಹಿಡಿದು ಇಬ್ಬರೂ ಬಾಪು ಬಝಾರ್ ಗೆ ತೆರಳಿ ಅರಿಯದೆರಡು ಕೂಸುಗಳನ್ನು ಅವರ‌ವರ ಅಪ್ಪಂದಿರ ಸುಪರ್ದಿಗೆ ಒಪ್ಪಿಸಿ ಮಾಯವಾದರು. ಮತ್ತೆ ಮಳೆ ಆರಂಭವಾಗಿ‌ ನಿಲ್ಲುವ ಲಕ್ಷಣವೇ ಇಲ್ಲ. ಮಳೆಯಾದರೂ ನಿಂತೀತು; ಇವರ ಶಾಪಿಂಗು‌ ಮುಗಿಯಲೊಲ್ಲದು.

ನಡುವೆ ಒಂದೆಡೆ ಇಬ್ಬರನ್ನೂ ಎಬ್ಬಿಸಲೋಗಿ ಅಂಗಡಿಯ ಯಜಮಾನನಿಂದ ಹೋಟೆಲೊಂದರ ವಿಳಾಸ ಪಡೆದು ಬಂದೆವು. ಅದು ಬಾಪೂ ಬಝಾರಿನ ಪಕ್ಕದ ನೆಹ್ರೂ ಬಝಾರಿನ ಅಂಚಿನಲ್ಲಿತ್ತು. ಅಂತೂ ರಾತ್ರಿ ಒಂಬತ್ತು ದಾಟೋ ಹೊತ್ತಿಗೆ ಅಂಗಡಿ ಸಾಲು ಬಾಗಿಲಿಕ್ಕಿಕೊಳ್ಳಲು ಆರಂಭವಾಗಲಾಗಿ ನಮ್ಮ ಹೆಣ್ಣುಮಕ್ಕಳು ಅನಿವಾರ್ಯವಾಗಿ ಜಾಗ ಖಾಲಿ ಮಾಡಿದರು. ಸಮಯ ಮೀರಿದ ಕಾರಣಕ್ಕೆ ಆಟೊ ಸಿಗದೆ ಮಳೆಯಲ್ಲಿ ನೆನೆಯುತ್ತಾ ಎಲೆಕ್ಟ್ರಿಕ್ ಆಟೋವೊಂದಕ್ಕೆ ಕೈ ಅಡ್ಡ ಹಾಕಿ ಹೋಟೆಲ್ ಸೇರಿಕೊಳ್ಳುವ ಹೊತ್ತಿಗೆ ರಾತ್ರಿ ಹತ್ತಾಗಿತ್ತು. ಹೊಟ್ಟೆ ಬಿರಿಯೆ ಬಿರಿಯಾನಿ ತಿಂದು ದಿನ ಮುಗಿಸಿದೆವು.

ರೋಹಿತ್‌ ಅಗಸರಹಳ್ಳಿ

ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

ಆ ಕಾಲದ ಹೀರೊ ರಾಜೇಶ್‌ ಖನ್ನಾ ರಾಜಸ್ಥಾನದಲ್ಲಿ ಸಿಕ್ಕಾಗ – ತಿರುಗಾಡಿ ಬಂದೊ-8
ದೆಹಲಿ ಅಗ್ರಾ ಪ್ರಯಾಣದ ನಂತರ ಈ ಬಾರಿ ರೋಹಿತ್‌ ರಾಜಸ್ಥಾನದ ಜೈಪುರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ದೇಶದ ಅತಿ ವಿಸ್ತಾರವುಳ್ಳ ರಾಜ್ಯದ ಕುರಿತಾದ ಪ್ರವಾಸಿ ಅನುಭವಗಳನ್ನು ಈ ಬಾರಿಯ ತಿರುಗಾಡಿ ಬಂದೋ ಅಂಕಣದಲ್ಲಿ ಓದಿ

ನಮ್ಮ ಪಯಣ ಕಡೆಯ ಹಂತಕ್ಕೆ ಬಂದಿತ್ತು. ಕಡೆಯ ಊರುಗಳಲ್ಲೊಂದು ಜೈಪುರ. ವಾಸ್ತವದಲ್ಲಿ ಡೆಲ್ಲಿಯಿಂದಲೇ ನೇರ ಅಜ್ಮೇರ್ ಹೋಗಿ ಅಲ್ಲಿಯೇ ತಂಗಿ, ಪುಷ್ಕರ್ ಇತ್ಯಾದಿ ಓಡಿಯಾಡಿ ನಂತರ ಜೈಪುರಕ್ಕೆ ಬರುವ ಆಲೋಚನೆ ಇತ್ತು ಅಷ್ಟೇ ಅಲ್ಲ, ಟ್ರೇನ್ ಮತ್ತು ಗೆಸ್ಟ್ ಹೌಸ್ ಕೂಡ ಬುಕ್ ಮಾಡಿದ್ದೆವು. ಕಾರಣಾಂತರಗಳಿಂದ ಅವೆಲ್ಲ ರದ್ದಾಗಿ ಸದರಿ ಆಗ್ರಾ- ಜೈಪುರ್ ಯಾತ್ರೆ ಜೀವಪಡೆದಿತ್ತು.

ಟ್ರೇನು ಆಗ್ರಾ ಬಿಟ್ಟಾಗ ಇನ್ನೂ ಬೆಳಕಿತ್ತು. ಬಹುಶಃ ತಾಸರ್ಧ ತಾಸಿನಲ್ಲಿ ಯೂಪಿ ದಾಟಿ ರಾಜಸ್ತಾನ್ ಪ್ರವೇಶ ಮಾಡಿದ್ದೆವು. ನೀರ ಪಸೆ ಆರಿ ಒಣ ಭೂಮಿಯೇ ಕಣ್ಣು ಹಾಯಿಸುವಷ್ಟು ದೂರವೂ ಕಾಣುತ್ತಿತ್ತು. ಅಲ್ಲಲ್ಲೇ ಊರುಗಳು. ಎಲ್ಲ ಊರುಗಳ ಬಳಿಯೂ ಯಾವುದೋ ಬೆಳೆ ಬೆಳೆಯಲು ಉತ್ತು ಬಿತ್ತನೆಗೆ ರೆಡಿಯಾದಂತಿದ್ದ ಚೊಕ್ಕ ಹೊಲಗಳು. ಜೋಳ, ಬಾರ್ಲಿ, ಗೋಧಿ ಹೆಚ್ಚು ಬೆಳೆಯಲಾಗುತ್ತದೆ ಎಂದು ಗೂಗಲ್ ಹೇಳಿತು.

ವರ್ಷಗಳ ಹಿಂದೆ ಓದಿದ್ದ ಇಂದಿರಾ ಕೆನಾಲ್ ನೆನಪಾಯ್ತು. ಪಂಜಾಬಿನ ಬಾಕ್ರಾನಂಗಲ್ ಡ್ಯಾಮಿನಿಂದ 1600 ಕಿ.ಮೀ. ಕೆನಾಲ್ ಅಗೆದು ರಾಜಸ್ತಾನಕ್ಕೆ ನೀರು ತರಲಾಗಿದೆ. ಇದು ಜಗತ್ತಿನ ಅತಿ ಉದ್ದದ ಮಾನವನಿರ್ಮಿತ ಕಾಲುವೆಗಳಲ್ಲಿ ಒಂದಂತೆ. ಅದು ಜೈಪುರದಿಂದ ದೂರವಂತೆ.

ಯೂಪಿ ಮತ್ತು ರಾಜಸ್ತಾನ್ ಎರಡೂ ದೇಶದಲ್ಲಿ ನಂಬರ್ ಒನ್ ರಾಜ್ಯಗಳು. ಒಂದು ಜನಸಂಖ್ಯೆಯಲ್ಲಿ ಮತ್ತೊಂದು ಭೂಪ್ರದೇಶದಲ್ಲಿ. ಯೂಪಿ ಬರೋಬ್ಬರಿ 23 ಕೋಟಿ ಜನರಿಂದ ತುಂಬಿತುಳುಕಿದರೆ, ರಾಜಸ್ತಾನ ಮೂರೂವರೆ ಲಕ್ಷ ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಕರ್ನಾಟಕದ ಒಂದೂಮುಕ್ಕಾಲು ಪಟ್ಟು. ದೇಶದ ಶೇಕಡ 10ರಷ್ಟು ಭೂಪ್ರದೇಶ ಈ ರಾಜ್ಯದ್ದು. ಅದರಲ್ಲಿ ದೇಶದ ಏಕೈಕ ನಿಸರ್ಗ ನಿರ್ಮಿತ ಮರುಭೂಮಿಯೂ ಸೇರಿದೆ ಎನ್ನಿ. (ಮಾನವ ನಿರ್ಮಿತ ಮರುಭೂಮಿ‌ ಕರ್ನಾಟಕದಲ್ಲಿಯೇ ಇದೆಯಂತೆ. ಅಂತರ್ಜಲ ಕಮ್ಮಿಯಾಗಿ, ನೀರ ಬಳಕೆ ಹೆಚ್ಚಾಗಿ ಬೆಳೆ ಬೆಳೆಯಲು ಬಾರದ ಬಂಜರು ನೆಲ ಸೃಷ್ಟಿಯಾಗಿರುವುದು)

ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಇಳಿದಾಗ ಸುಮಾರು ಎಂಟುಗಂಟೆ. ವಸತಿ ವಿಚಾರದಲ್ಲಿ ಬಹಳಷ್ಟು ಆನ್ಲೈನ್ ಸಂಶೋಧನೆ ಟ್ರೇನಿನಲ್ಲೇ ನಡೆಸಿದ್ದರೂ‌ ಬುಕ್ ಮಾಡಿರಲಿಲ್ಲ. ಚಿತ್ರಕಥಾ ಎಂಬ ವಿಚಿತ್ರ ಹೆಸರಿನ ಹೊಟೆಲೊಂದರ ರಿವ್ಯೂಗಳು ಗಮನ ಸೆಳೆಯುವಂತಿದ್ದವು. ಗೆಳೆಯ ಚಿದಂಬರ ಹೋಟೆಲೊಂದರ ಹೆಸರು ಸೂಚಿಸಿದ್ದರೂ‌ ಅದರ ಆನ್ಲೈನ್ ಬುಕಿಂಗ್ ಸಿಗದ ಕಾರಣ ಕೈಬಿಟ್ಟೆವು. ಲಗ್ಗೇಜ್ ಇದ್ದ ಕಾರಣ ಎರಡು ಆಟೋ ಹಿಡಿದು ಹೊರಟೆವು. ಜೈಪುರ ರಾಜ್ಯವೊಂದರ ರಾಜಧಾನಿಯಾದರೂ ಅಷ್ಟೇನೂ ಜನಸಂದಣಿ ನಿಲ್ದಾಣದಲ್ಲಿ ಇರಲಿಲ್ಲ. ಹೊರಗೆ ಕೂಡ. ನನಗೆ ತ್ರಿವೇಂಡ್ರಂ ನೆನಪಾಯ್ತು. ಅದೂ ಕೂಡ ಕೇರಳದ ರಾಜಧಾನಿಯಾಗಿದ್ದರೂ ಅದೇ ರಾಜ್ಯದ ಇತರ ನಗರಗಳಿಗಿಂತ ವಿರಳ ಜನಸಂಖ್ಯೆಯ ನಗರ. ಆಟೋದವರು ಚಿತ್ರಕಥಾಗೆ ಕರೆದೊಯ್ಯುವಾಗ ಅವರ ಬ್ರೋಕರ್ ಗಿರಿಯಿಂದ ಬಚಾವಾಗಲು ಈಗಾಗಲೇ ನಮಗೆ ಹೋಟೆಲ್ ಬುಕಿಂಗ್ ಆಗಿದೆ ಎಂದೆವು. ಎಷ್ಟಕ್ಕೆಂದಾಗ ಆನ್ಲೈನ್ ರೇಟನ್ನೇ ಅರುಹಿದೆವು, ಅದಕ್ಕವರು ಅಷ್ಟೇಕೆ ಕೊಟ್ಟಿರಿ; ಅದಕ್ಕಿಂತ ಕಡಮೆಗೆ ಅದೇ ಹೋಟೆಲ್ ಕೊಡಿಸುತ್ತಿದ್ದೆವು ಎಂದರು! ಅವರಿಗೆ ಮನದಲ್ಲೇ ಥ್ಯಾಂಕ್ಸ್ ಹೇಳಿ ಅದನ್ನೇ ಹಿಡಿದು ದಿನೇಶ್ ಚೌಕಾಸಿ ಮಾಡಿ ಒಂದಷ್ಟು ಉಳಿಸಿದರು. ಮೂರು ದಿನಕ್ಕೆ ಎರಡು ರೂಮು ಹಿಡಿದು ಫ್ರೆಶ್ ಆಗಿ ಊಟಕ್ಕೆ ಹೊರಡೋ ಹೊತ್ತಿಗೆ ಹೊಟೆಲಿನವ ತಮ್ಮದೆ ರೆಸ್ಟುರಾ‌ ಟೆರೇಸಿನಲ್ಲಿರುವುದಾಗಿಯೂ, ಅಲ್ಲಿ ಮೇಕೆ ಬಿರಿಯಾನಿ ಫೇಮಸ್ಸೆಂದು ಆಸೆ ಹುಟ್ಟಿಸಿದ.

ಟೆರೇಸ್ ರೆಸ್ಟುರಾ ನಿಜವಾಗಿಯೂ ಚೆಂದವಿತ್ತು. ಹೊಟೆಲ್ ಕಟ್ಟಡ ಹಳತಾದರೂ ಚೆನ್ನಾಗಿ ಅಲಂಕರಿಸಿ ನೀಟಾಗಿ ಇಟ್ಟಿದ್ದರು. ಎರಡೂ ರೂಮುಗಳಿಗೂ ಪುಟ್ಟ ಬಾಲ್ಕನಿ ಕೂಡ ಇತ್ತು; ಆದರೆ ಎಸಿಗಳು ಪುರಾತನ ಕಾಲದವು. ಬಳಸದೆ ವಿಧಿ ಇರಲಿಲ್ಲ. ಪ್ರತೀ ಫ್ಲೋರಿನ ಗೋಡೆಗಳು ಮತ್ತು ರೂಮಿನ ಒಳಾವರಣ ಕೂಡ ಸುಂದರ ಚಿತ್ರಗಳು ಇಲ್ಲವೇ ಪೇಂಟಿಂಗ್‌ಗಳಿಂದ ಅಲಂಕೃತಗೊಂಡಿದ್ದವು.

ಮೆನು ಪಡೆದು ಬೆಲೆ ನೋಡಿ ಯಾಕೋ ಎಡವಟ್ಟೆನ್ನಿಸಿತು. ಮೂರು ಪೀಸ್ ಚಿಕನ್ ಇರುವ ಬಿರಿಯಾನಿಗೆ ಕೇವಲ 650!. ಕಾಸು ಉಳಿಸಲು ಒಂದು ಬೇಯಿಸಿದ ಮೊಟ್ಟೆ ಹೇಳಿದರೆ ಅದಕ್ಕೆ ಎಂಬತ್ತಂತೆ. ಬೇರೆಲ್ಲೋ ಹೋಗಿ‌ ಹುಡುಕಿ ತಿನ್ನುವಷ್ಟು ತಾಳ್ಮೆ ಇಲ್ಲದ ಕಾರಣ ಏನೋ ಒಂದಷ್ಟು ತಿಂದು ದಿನ ಮುಗಿಸಿದೆವು. ಮದ್ಯಾಹ್ನ ಆಗ್ರಾ ಬಿಡುವಾಗ ಬೇರೆ ಊಟಕ್ಕೆ  ಅವಕಾಶವಾಗಿರಲಿಲ್ಲ.

ಮಾರನೇ ದಿನ ಎಲ್ಲಿಗೆಲ್ಲ ಹೋಗುವುದು ಎಂಬ ಚರ್ಚೆ ಊಟದ ಟೇಬಲ್ಲಿನಲ್ಲೇ ನಡೆಯಲಾಗಿ, ಎರಡೂ ಕುಟುಂಬಗಳು ತಮತಮಗೆ ತೋಚಿದಂತೆ ತೋಚಿದ ರೂಪದಲ್ಲಿ ಸುತ್ತುವುದು ಎಂದು ಅಖೈರು ಮಾಡಿ ವಿಶ್ರಮಿಸಿದೆವು. ಮುಂಜಾನೆ ಹೊತ್ತಿಗೆ ಮತ್ತೆ ಎಲ್ಲರೂ ಕಲೆತೇ ದಿನ ಆರಂಭಿಸಿದೆವೆನ್ನಿ.

ಈ ನಡುವೆ ನಂಗೆ ಅಂದಕಾಲತ್ತಿಲ್ ಹೀರೋ ರಾಜೇಶ್ ಖನ್ನ ದರ್ಶನವಾಯ್ತು ಸಲೂನೊಂದರಲ್ಲಿ.

ರಾತ್ರಿ ಊಟ ಮುಗಿಸಿ ನಾನು ಎಟಿಮ್ ಹುಡುಕಿ, ದಿನೇಶ್ ಅವರ ಶ್ರೀಮತಿಯವರಿಗೆ ಮಾತ್ರೆ ಹುಡುಕಿ ಹೊರಬಿದ್ದೆವು. ನಂಗೆ ಎಟಿಎಮ್ ಸಿಗದಿದ್ದರೂ ಸಲೂನೊಂದು ಕಣ್ಣಿಗೆ ಬಿತ್ತು. ಇರೋ ಲಗ್ಗೇಜಿಗೆ ಹಡಪದ ಪೆಟ್ಟಿಗೆ ಕೂಡ ಏಕೆ ಸೇರಬೇಕು ಎಲ್ಲ ಊರಲ್ಲೂ ಸಲೂನು ಇರುತ್ತವೆಂದು ಹಾಗೇ ಬಂದಿದ್ದೆ. ಆಗ್ರಾದಲ್ಲಿ ಸಲೂನ್ ಸಂಶೋಧನೆ ಮಾಡಿ ಗೆಲ್ಲಲಾರದೆ ಕೈಚೆಲ್ಲಿದ್ದೆ. ಇಲ್ಲಿ ಸಲೂನು ಸಿಕ್ಕಿತು ಆದರೆ ಪರ್ಸಿನಲ್ಲಿ ನಯಾಪೈಸೆ ಕ್ಯಾಶ್ ಇಲ್ಲ. ಸಲೂನ್ ಅಜ್ಜನಿಗೆ ಕ್ಯಾಶ್ ಇಲ್ಲ ಫೋನ್ ಮೂಲಕ ಪೇ ಮಾಡುವೆ ಆಗಬಹುದೆ ಎಂದೆ. ಆಗಲಿ ಅನ್ತು. ಇನ್ಯಾರೋ ಗಿರಾಕಿ ಇದ್ದರು. ಅದೊಂದು ಹಳೇ ಕಟ್ಟಡ, ಅದರಲ್ಲೂ ಮೂಲೆ ಅರ್ಧಚಂದ್ರಾಕೃತಿಯ ಒಂದೇ ಸೀಟಿನ ಇಕ್ಕಟ್ಟಿನ ಸ್ಥಳ. ಗೋಡೆಯ ಮೇಲೆ ಹಳೇ ಕಾಲದ ಸಿನೆಮಾ ಹೀರೋ ಅವತಾರದ ಸ್ಮಾರ್ಟ್ ಹುಡುಗನ ಹಳೆಯ ಫೋಟೋ ಫ್ರೇಮುಗಳು. ಮತ್ತೆ ಮತ್ತೆ ನೋಡಿದ ಮೇಲೆ ಗುರುತಾಯ್ತು. ಅವೆಲ್ಲ ಅದೇ ತಾತನ ಯೌವನದ ಫೋಟೋಗಳು. ಅವಕ್ಕೆ ಕನಿಷ್ಟ ಅರ್ಧ ಶತಮಾನ ವಯಸ್ಸಾಗಿತ್ತು. ತಾತ ಏನೇನೊ ಹೇಳಲು ಯತ್ನಿಸಿದರೂ ನಾನು ಅರ್ಥ ಮಾಡಿಕೊಂಡು ಹ್ಞೂಂಗುಡುತ್ತಿದ್ದೆ. ಆಮೇಲೆ ಮಾತಿನ ನಡುವೆ ನಾನು ಕರ್ನಾಟಕದಿಂದ ಪ್ರವಾಸಕ್ಕೆ ಬಂದವನೆಂದು ಹೇಳಿದ ಮೇಲೆ ಇವನೊಂದಿಗೆ ಮಾತಾಡಿ ಪ್ರಯೋಜನವಿಲ್ಲವೆನಿಸಿ ಮಾತು ನಿಲುಗಡೆಗೆ ಬಂದವು ಅಷ್ಟು ಹೊತ್ತಿಗೆ ದಾಡಿ ಕೆಲಸವೂ ಪೂರೈಸಿತ್ತು. ಪೇಮೆಂಟ್ ಪಡೆಯಲು ತಾತ ಪಕ್ಕದ ಅಂಗಡಿಯವನಿಗೆ ಕೇಳಿದರೆ ಅವನು ಕೈಜಾಡಿಸಿಬಿಟ್ಟ. ಆಮೇಲೆ ಅಲ್ಲೇ ಪಾನೀಪೂರಿ ಮಾರುತ್ತಿದ್ದವ ಒಪ್ಪಿ ಹಣ ಪಡೆದ.

ಬೆಳಗ್ಗೆ ಹೊತ್ತಿಗೆ ಎರಡೂ ಕುಟುಂಬದವರೂ ತಾವು ನೋಡಬೇಕು ಎಂದುಕೊಂಡಿದ್ದ, ನೋಡಬಹುದಾದ ಸ್ಥಳಗಳ ಪಟ್ಟಿ ಮಾಡಿಕೊಂಡಿದ್ದೆವು; ಎರಡೂ ಸೇಮ್ ಟು ಸೇಮ್! ಒಟ್ಟಿಗೇ ತಿಂಡಿ ತಿಂದು ಅಲ್ಲಿಂದ ಆರಂಭಿಸುವುದೆಂದು ತೀರ್ಮಾನಿಸಿ ಸೌತ್ ರೆಸ್ಟುರಾವೊಂದಕ್ಕೆ ತಲುಪಿದೆವು. ದಿನೇಶ್ ಮಾತ್ರ ತಾವು ಲೋಕಲ್ ಫುಡ್  ಸವಿಯುವುದಾಗಿ‌ ಹೋದರು, ಉಳಿದೈವರು ಸೌತ್ ಪ್ರೀತಿಯ ಭಾರವನ್ನು ಹೊರಲಾರದೆ ಹೊತ್ತೆವು. ನಮ್ಮ ಯೋಜನೆ ಪ್ರಕಾರ ಮೊದಲು ಅಂಬರ್ (ಅಮೆರ್) ಫೋರ್ಟ್ ನಂತರ ಉಳಿದವೆಲ್ಲ. ಆನ್ಲೈನಲ್ಲಿ ಎರಡೆರಡು ಸಾರ್ತಿ ಟ್ಯಾಕ್ಸಿ ಬುಕ್ ಮಾಡಿದರೂ ಬರಲು ನಿರಾಕರಿಸಿದರು; ಕಾರಣ ನಾವು ಡ್ರಾಪ್‌ ಮಾತ್ರ ಬೇಕೆಂದು‌ ಕೇಳಿದೆವು. ಕೇವಲ ಡ್ರಾಪಿಗೆ ಬಂದರೆ ಲಾಸ್ ಆಗುವುದೆಂಬುದು ಅವರ‌ ದೂರು. ವಾತಾವರಣ ಹಿತವಾಗಿತ್ತು, ಮಳೆ ಮೋಡವಿದ್ದರೂ ಮಳೆ ಇಲ್ಲ, ಬಿಸಿಲಿನ ಹವಾ ಕೂಡ ಇಲ್ಲ. ಬಿಸಿಲ ನಾಡಿನಲ್ಲಿ ಗಿರಿಧಾಮದ ಅನುಭವ ಯಾರಿಗುಂಟು ಯಾರಿಗಿಲ್ಲ.

ಅರ್ಧ ತಾಸು ಸಮಯ ವ್ಯರ್ಥ ಮಾಡುವ ಹೊತ್ತಿಗೆ ನಮಗೆ ಅರ್ಥವಾದ ಸಂಗತಿ‌, ದಿನದ ಲೆಕ್ಕದ ಟ್ಯಾಕ್ಸಿ ಹಿಡಿದರಷ್ಟೇ ನಾವು ಅಂಬರ್ ಫೋರ್ಟ್ ತನಕ ಹೋಗಲು ಸಾಧ್ಯವೆಂಬುದು. ಕಡೆಗೆ ಒಬ್ಬ ಆಟೋವಾಲಾ ಟ್ರಾವೆಲ್ ಏಜೆಂಟನ ಬಳಿ ಕರೆದೊಯ್ದ. ಅಲ್ಲಿ ಒಂದು ಇನ್ನೋವಾವನ್ನು ದಿನದ ಓಡಾಟಕ್ಕೆ ಬುಕ್ ಮಾಡಿದೆವು. ಅವನೊಂದು ಬ್ರೋಷರ್ ಕೊಟ್ಟ. ಅದರಲ್ಲಿ ಎಂಟು ಜಾಗ ಗುರುತು‌ ಮಾಡಿದ್ದ. ವರ್ತ್ ಅನ್ನಿಸಿತು. ಈ ಎಂಟರ ಬಂಡವಾಳ  ಮದ್ಯಾಹ್ನದ ಹೊತ್ರಿಗೆ‌ ಅರ್ಥವಾಯ್ತು. ಡ್ರೈವರ್ ಹೊಂಟವನೇ ಅಲ್ಲಿ ಬೇಡ ಇಲ್ಲಿ ಹೋಗೋಣ ಎಂದು ಕ್ಯಾತೆ ಶುರು ಮಾಡಿದ; ನಾನು ನಂಗೆ ಗೊತ್ತಿರುವ ಸಮಸ್ತ ಹಿಂದಿಯನ್ನೂ ಬಳಸಿ “ನೋಡಣ್ಣ ನಾವು ಹೇಳಿದಲ್ಲಿ ಕರೆದೊಯ್ಯಿ, ಇಲ್ಲವೇ ಈಗಲೇ ಇಳಿಸಿಬಿಡು ಒಪ್ಪಂದ ರದ್ದು ಮಾಡುವ” ಎಂದೆ. ಅದೇ‌ ಕೊನೆ. ಮುಂದಿನ ಮೂರು ದಿನ ಅವ ನಮ್ಮೊಂದಿಗೇ ಅಂಟಿಕೊಂಡು ಕಳೆದ ದೂಸರಾ ಮಾತನಾಡದೆ.

ದಾರಿಯಲ್ಲೇ ಹವಾಮಹಲ್ ನೋಡಿಕೊಂಡುಬಿಡಿ ಎಂದ, ನಿರಾಕರಿಸಿ ಅಂಬರ್ ಕೋಟೆಗೆ ದೌಡಾಯಿಸಲು ಹೇಳಿದೆವು. ನಡುವೆ ಜಲ್ ಮಹಲ್ ಸಿಕ್ಕರೂ‌ ನಿಲ್ಲಲಿಲ್ಲ. ಅಂಬರ್ ಕೋಟೆ ಬೆಟ್ಟದ ಮೇಲಿದೆ. ಜೈಪುರ್ ದಾಟುತ್ತಿದ್ದಂತೇ ಬೆಟ್ಟ ಸಾಲಿನ ಕಡೆ ಪಯಣ. ಆಗ ಶುರುವಾದ ಮಳೆ ಅಂದು ಇಡೀ ದಿನ ಬಿಡದೆ ತೊಟ್ಟಿಕ್ಕುತ್ತಲೇ ಇತ್ತು. ಆ ಮಳೆಯ ರೌದ್ರಾವತಾರ ನೋಡಿ , ಟುಕ್ ಟುಕ್ (ಅಲ್ಲಿ ಆಟೋಗಳಿಗೆ ಹಾಗಂತಾರೆ) ಹಿಡಿದು ಎಲ್ಲ ಎಕ್ಸ್‌ಪ್ಲೋರ್‌ಮಾಡುವ ಉತ್ಸಾಹದಲ್ಲಿದ್ದ ದಿನೇಶ್ ಇದೇ ಸರಿಹೋಯ್ತು. ಹಾಗೆ ಬಂದಿದ್ದರೆ ಮಳೆ ಹೊಡೆತಕ್ಕೆ ಸಿದ್ಧತೆ ಇಲ್ಲದ ನಾವು ತೋಯ್ದು ತೊಪ್ಪೆಯಾಗಬೇಕಿತ್ತು‌ ಅಂದರು.

ಅಂಬರ್ ಕೋಟೆಯ ಕೆಳಗೇ ಒಂದು ಸರೋವರವಿದೆ. ಮೆಟ್ಟಿಲ ದಾರಿ ದೂರವಿಲ್ಲದಿದ್ದರೂ ಮೇಲೆ ಕೋಟೆಯ ಬಳಿ ಪಾರ್ಕಿಂಗ್ ಜಾಗಕ್ಕೆ ಹೋಗಲು ಮುಂದೆ ಹೋಗಿ ಸುತ್ತಿ ಬರಬೇಕು. ಕಲ್ಲುಗಳನ್ನು ನೆಲಕ್ಕೆ ಸಮನಾಗಿ ಹೂತು ಮಾಡಿದ ಅಚ್ಚುಕಟ್ಟಾದ ರಸ್ತೆ. ಮಳೆ‌ನೀರು ಇಡಿ ರಸ್ತೆ ತುಂಬ ಹರಿಯುತ್ತಿತ್ತು. ತುದಿ ಮುಟ್ಟುವ ಹೊತ್ತಿಗೆ ಮಳೆ ಕೊಂಚ ನಿಲುಗಡೆಗೆ ಬಂದಂತೆ‌ ಕಂಡಿತು.

ಜೈಪುರದ ಸ್ಮಾರಕಗಳ ಟಿಕೆಟ್ ಬಿಡಿಬಿಡಿಯಾಗಿ ಕೊಂಡರೆ ಕೊಂಚ ಜೇಬಿಗೆ ಭಾರ ಎನಿಸಿದರೂ ಕಾಂಬೊ ಟಿಕೆಟ್ ಲಭ್ಯವಿವೆ. ಅದರಂತೆ ನಾವು ಐದಾರು ಸ್ಥಳಗಳ ಪ್ರವೇಶಕ್ಕೆ ಒಮ್ಮೆಗೇ ಮತ್ತು ಒಂದೇ ಟಿಕೆಟ್ ಖರೀದಿಸಿದ್ದೆವು. ಗಣೇಶ ಗೇಟ್ ಮೂಲಕ ಪ್ರವೇಶ ಪಡೆದು ಒಳಹೊಕ್ಕೆವು. ನಿರ್ವಹಣೆ ಚೆನ್ನಾಗಿದೆ. ಅಮೆರ್ ಊರ ಬಳಿ ಇರುವ ಕಾರಣ ಅದೇ ಹೆಸರಿನಿಂದಲೂ ಅಂಬಾ (ದುರ್ಗಾ) ದೇವಿಯ ಕಾರಣಕ್ಕೆ ಅಂಬರ್ ಎಂತಲೂ ಕರೆಯಲಾಗುವುದಂತೆ. ಮೂಟ ಸರೋವರ ಒಂದೆಡೆಗಿದೆ. ಆ ಸರೋವರ ಅರಮನೆ ಬಳಿಯ ಬಾಲ್ಕನಿಯಿಂದ ಸುಂದರವಾಗಿ ಕಾಣುತ್ತದೆ. ಸರೋವರದ ನಡುವಿನ ತೋಟದ ಪ್ರಯೋಗ ಮುಘಲ್ ಹೂದೋಟದ ನಕಲೆಂದೂ, ಅಯಶಸ್ವಿಯೆಂದೂ ಗೈಡ್ ಒಬ್ಬ ಯಾರಿಗೊ ಹೇಳುತ್ತಿದ್ದುದು ಆಯಾಚಿತವಾಗಿ ಕಿವಿಗೆ ಬಿತ್ತು. ಅದೇ ಬಾಲ್ಕನಿಯಲ್ಲಿ ಇಣುಕಿ ಕೋಟೆಯ ಕೆಳಗಿನ ದಾರಿ ನೋಡುವಾಗ ಸಾಲಾಗಿ ಆನೆಗಳು ತೆರಳುತ್ತಿದ್ದುದು ಕಂಡಿತು. ಪ್ರವಾಸೋದ್ಯಮ ರಾಜಸ್ತಾನದ ಆದಾಯದ ಮುಖ್ಯ ಮೂಲಗಳಲ್ಲೊಂದು ಎಂದು ಕಾಣುತ್ತದೆ. ಆನೆ ಸವಾರಿ ಮತ್ತು ಅವುಗಳ ಸಾಕಾಣಿಕೆಯ ಏರುಪೇರಿನ ಬಗ್ಗೆ ಹಲವು ದೂರುಗಳಿವೆಯಂತೆ.‌ ಮಳೆಯ ಕಾರಣ ಅರಮನೆ ಅಷ್ಟೇನೂ ಝಗಮಗಿಸಿದಂತೆ ಕಾಣುತ್ತಿರಲಿಲ್ಲ. ಬಿಸಿಲಲ್ಲೇ ಹೆಚ್ಚು ಹೊಳಪೆಂದು ಕಾಣುತ್ತದೆ. ಅರಮನೆ ಒಳಹೊಕ್ಕರೆ ಎಡಕ್ಕೆ ಶೀಶ್ ಮಹಲ್ ಇದೆ. ಬಹುತೇಕ ಗಾಜಿನ ಚೂರು (ಕನ್ನಡಿ)ಗಳಿಂದ ಅಲಂಕೃತವಾದ ಅದು ಆಕರ್ಷಕವಾಗಿದೆ. ಗಾಜಿನ ಚೂರುಗಳಲ್ಲಿ ಕಾಣುವ ತಮ್ಮ ಸೆಲ್ಫಿ ಬಿಂಬವನ್ನು ಹಲವು ಪ್ರವಾಸಿಗರು ಸೆರೆಹಿಡಿದುಕೊಳ್ಳುತ್ತಿದ್ದರು.

ಇಲ್ಲಿನ ಬಹುತೇಕ ರಚನೆಗಳ ಮೇಲೆ ಮುಘಲ್ ವಾಸ್ತುಶಿಲ್ಪದ ಪ್ರಭಾವವಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅದೂ ಅಲ್ಲದೆ ಇಲ್ಲಿನ ದಿವಾನ್ ಇ ಆಮ್ ಮತ್ತು ದಿವಾನ್ ಇ ಖಾಸ್ ಕೂಡ ಇದನ್ನೇ ಪುಷ್ಠೀಕರಿಸುತ್ತವೆ.

ಜೈಗಡ್ ಕೋಟೆ ಕೂಡ ಇದೇ ಕೋಟೆಗೆ ಹೊಂದಿಕೊಂಡಂತಿದೆ. ಎರಡೂ ಸೇರಿ ಕಿ.ಮೀ. ಗಟ್ಟಲೆ ಕೋಟೆ ಅರಾವಳಿ ಬೆಟ್ಟಸಾಲನ್ನು ಅಲಂಕರಿಸಿವೆ. ಜೈಗಡ್ ಕೋಟೆಯನ್ನು ಒಂದುವೇಳೆ ಶತ್ರುಗಳಿಂದ ರಾಜಪರಿವಾರ ಪಾರಾಗುವ ಸಂದರ್ಭಕ್ಕೆಂದು ಇದಕ್ಕೆ ಸೇರಿಸಲಾಗಿತ್ತು ಎನ್ನಲಾಗುತ್ತದೆ. 1727ರಲ್ಲಿ ಎರಡನೇ ಸವಾಯಿ ಜೈಸಿಂಗ್ ರಾಜಧಾನಿಯನ್ನು ಜೈಪುರಕ್ಕೆ ವರ್ಗಾಯಿಸುವವರೆಗೆ ಇದುವೇ ರಾಜಧಾನಿಯಂತೆ. ಕೋಟೆ ಮೊದಲು ನಿರ್ಮಾಣವಾದ್ದು ರಾಜಾ ಮಾನ್ ಸಿಂಗ್ ಕಾಲದಲ್ಲಂತೆ. ಸುಖ್ ನಿವಾಸ್ ಎಂಬ ಮತ್ತೊಂದು ರಚನೆ ಇದ್ದು ಅಲ್ಲಿ ಬಿರುಬಿಸಿಲಲ್ಲೂ ತಂಪಾದ ಗಾಳಿ ಬೀಸುವ ವ್ಯವಸ್ಥೆ ಮಾಡಿದ್ದರಂತೆ. ಎಲ್ಲವನ್ನೂ ಸುತ್ತಾಡಿ ಒಂದೆರಡು ಟನೆಲ್ ಮಾದರಿಯ ದಾರಿಗಳಲ್ಲಿ ಕೂಡ ಸಾಗಿ‌ ಬರುವ ದಾರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಒಂದಷ್ಟು ಅಂಗಡಿಗಳೂ ಸಿಕ್ಕವು.

ರಾಜಸ್ತಾನದ ಎಲ್ಲ ಕಡೆಯೂ ಕಾಣುವ ಒಂದು ಸಾಮನ್ಯ ಸಂಗತಿ ಸಂಗೀತ‌,ನೃತ್ಯ ಮತ್ತು ಬೊಂಬೆ ನಾಟಕ ಕಲೆಗಳದ್ದು. ಅಂಬರ್ ಕೋಟೆಯ ಹೊರಬರುವ ಮೆಟ್ಟಿಲ ಮೇಲೆ ಜೋರು ಮಳೆಯ ನಡುವೆಯೂ ಹಲವು‌ ಕಲಾವಿದರು ತಮ್ಮ ಪಾಡಿಗೆ ತನ್ಮಯರಾಗಿ ತಮ್ಮ ಸಂಗೀತ ವಾದ್ಯ ನುಡಿಸುತ್ತಿದ್ದರು. ಇಂಥದೇ ದೃಶ್ಯವನ್ನು ಇನ್ನೂ ಹಲವೆಡೆ ಕಂಡೆವು.

ಮಿಸ್ ಆದ ಪನ್ನಾ ಮೀನಾ ಕ ಕುಂಡ್.

ಜೋರು ಮಳೆಯ ಅವಸರದಲ್ಲಿ ಪನ್ನಾ ಮೀನಾ ಕಾ ಕುಂಡ್ ಬಳಿಯೇ ಮುಂದೆ ಹೋದೆವು. ನಂತರ ಡ್ರೈವರಣ್ಣ ಈಗ ಅಲ್ಲಿಗೆ ಹೋಗಬೇಕೆಂದರೆ ಮತ್ತೆ ಹತ್ತನ್ನೆರಡು ಕಿ.ಮೀ. ಹಿಂದೆ ಹೋಗಬೇಕು ಎಂದ. ನಮಗೆ ಒಂದೇ ದಿನದಲ್ಲಿ ಜೈಪುರದ ಇನ್ನೂ ಹಲವು ಜಾಗಗಳ ದರ್ಶನ ಆಗಬೇಕಿದ್ದರಿಂದ ಒತ್ತಾಯಿಸದೆ ಸುಮ್ಮನಾದೆವು. ಈ ಕುಂಡ ನಮ್ಮ ಹಂಪಿಯ ಕಲ್ಲು ಬಾವಿಯಂತಿದೆ (ಗೂಗಲಲ್ಲಿ ಕಂಡದ್ದು)

ಅಂಬರ್ ಕೋಟೆಯಿಂದ ತಿರುಗಿ ಬರುವ ದಾರಿಯಲ್ಲಿ ಜಲ್ ಮಹಲ್ ಬಳಿ ನಿಂತೆವು. ಆ ಹೊತ್ತಿಗೆ ಮಳೆಯೂ ನಿಲುಗಡೆಗೆ ಬಂದಿತ್ತು. ಮನ್ ಸಾಗರ್ ಸರೋವರದ ನಡುವೆ ತೇಲುತ್ತಿರುವಂತೆ ಕಾಣುವ ಇದು ನಿರ್ಮಾಣವಾದ್ದು 1699ರಲ್ಲಿಯಂತೆ. ನಂತರ ಹಲವು ಸಾರ್ತಿ ಪುನರುಜ್ಜೀವನಗೊಂಡಿದೆಯಂತೆ. ಒಟ್ಟು ಐದು ಮಹಡಿಗಳ ಕಟ್ಟಡದಲ್ಲಿ ಸಧ್ಯ ಕಾಣುವುದು ಒಂದು/ ಇಲ್ಲವೆ ಎರಡು ಮಹಡಿಗಳು ಮಾತ್ರ. ಇದರ ಒಳಾಂಗಣ ಮತ್ತು ಸಮೀಪ ದರ್ಶನಕ್ಕೆ ದೋಣಿ ವ್ಯವಸ್ಥೆ ಇದೆಯಂತೆ. ಸಧ್ಯ ನಾವು ಹೋದಾಗ ಅಂತ ವ್ಯವಸ್ಥೆ‌ ಇದ್ದಂತೇನೂ ಕಾಣಲಿಲ್ಲ‌. ಜಲ್ ಮಹಲ್ ನ ಒಳಂಗಣ‌‌ ಮತ್ತು ಮೇಲ್ಚಾವಣಿಯ ತೋಟದ ಇಮೇಜುಗಳು ಅಂತರ್ಜಾಲದಲ್ಲಿ ಕಾಣಸಿಗುತ್ತವೆ.

ಜಲ್ ಮಹಲ್ ಅನ್ನು ಹಿನ್ನೆಲೆಯಾಗಿರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಅಭಿಮಾನಿಗಳ ನೂಕುನುಗ್ಗಲೇ ಇತ್ತು‌. ಜೊತೆಗೆ ಸಾಂಪ್ರದಾಯಿಕ ರಾಜಸ್ಥಾನಿ ವೇಷಭೂಷಣ ಬೇರೆ ಬಾಡಿಗೆಗೆ ಲಭ್ಯ. ಅಂತೂ ಇಲ್ಲಿ ನಮ್ಮ ತಂಡದ ಭಾರೀ ಫೋಟೋ ಸೆಷನ್ ಜರುಗಿತು.

ರೋಹಿತ್‌ ಅಗಸರಹಳ್ಳಿ

ಹಾಸನದ ನಿವಾಸಿಯಾದ ಇವರು ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.