Home ದೇಶ ಕೇಂದ್ರದಿಂದ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್‌ಗೆ ಮತ್ತೊಂದು ವರ್ಷದ ಅವಕಾಶ: ರಾಹುಲ್ ಗಾಂಧಿ ಅಸಮ್ಮತಿಯ ನಡುವೆಯೇ...

ಕೇಂದ್ರದಿಂದ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್‌ಗೆ ಮತ್ತೊಂದು ವರ್ಷದ ಅವಕಾಶ: ರಾಹುಲ್ ಗಾಂಧಿ ಅಸಮ್ಮತಿಯ ನಡುವೆಯೇ ನೇಮಕಾತಿ ಆದೇಶ

0

ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರ ಅಧಿಕಾರಾವಧಿಯನ್ನು 2027ರ ಮೇ ತಿಂಗಳವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರವೀಣ್ ಸೂದ್ ಅವರ ಅಧಿಕಾರಾವಧಿಯು ವಾಸ್ತವವಾಗಿ 2026ರ ಮೇ 24ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಅವರ ಸೇವೆಯನ್ನು ಮತ್ತೊಂದು ವರ್ಷದ ಅವಧಿಗೆ ವಿಸ್ತರಿಸಲು ಕೇಂದ್ರ ಸರ್ಕಾರವು ಬುಧವಾರ ಅನುಮೋದನೆ ನೀಡಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಸಂಪುಟ ನೇಮಕಾತಿ ಸಮಿತಿಯು (ACC) ಈ ವಿಸ್ತರಣೆಗೆ ಸಮ್ಮತಿ ಸೂಚಿಸಿದೆ.

1986ರ ಬ್ಯಾಚ್‌ನ ಕರ್ನಾಟಕ ಕೆಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರು ಈಗ ಮತ್ತೊಂದು ವರ್ಷಗಳ ಕಾಲ ದೇಶದ ಪ್ರಮುಖ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ. ಈ ಆಯ್ಕೆ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟಿಸ್ ಸೂರ್ಯಕಾಂತ್ ಅವರು ಕೂಡ ಇದ್ದರು ಎಂಬುದು ಗಮನಾರ್ಹ.

ಪ್ರಧಾನಿ ಮೋದಿ ನೇತೃತ್ವದ ಉನ್ನತ ಮಟ್ಟದ ಆಯ್ಕೆ ಸಮಿತಿಯ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಎರಡು ಪುಟಗಳ ಅಸಮ್ಮತಿ ಪತ್ರವನ್ನು (Dissent Note) ಸಲ್ಲಿಸಿದ ಮರುದಿನವೇ ಈ ಅಧಿಕಾರಾವಧಿ ವಿಸ್ತರಣೆಯ ನಿರ್ಧಾರ ಹೊರಬಿದ್ದಿದೆ.

You cannot copy content of this page

Exit mobile version