Home ಬ್ರೇಕಿಂಗ್ ಸುದ್ದಿ ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಪ್ರಕರಣ ; 43 ಇನ್‌ಸ್ಟಾಗ್ರಾಂ ಐಡಿ ಬೆನ್ನತ್ತಿದ ಸಿಸಿಬಿ ಪೊಲೀಸರು

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಪ್ರಕರಣ ; 43 ಇನ್‌ಸ್ಟಾಗ್ರಾಂ ಐಡಿ ಬೆನ್ನತ್ತಿದ ಸಿಸಿಬಿ ಪೊಲೀಸರು

0

ನಟ ದರ್ಶನ್‌ನ ಪುಂಡ ಅಭಿಮಾನಿಗಳ ವಿರುದ್ಧ ಸಮರ ಸಾರಿರುವ ನಟಿ ರಮ್ಯಾ ಪ್ರಕರಣ ಈಗ ಸಿಸಿಬಿ ಮೆಟ್ಟಿಲೇರಿದೆ. ರಮ್ಯಾ ನೀಡಿರುವ ದೂರಿನ ಬಗ್ಗೆ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.. ಸಿಸಿಬಿ ಪೊಲೀಸರು ಸುಮಾರು 43 ಇನ್‌ಸ್ಟಾಗ್ರಾಂ ಅಕೌಂಟ್ ಗಳ ಬೆನ್ನತ್ತಿದ್ದಾರೆ.

ಪ್ರಕರಣದ ಹಿನ್ನೆಲೆಯಲ್ಲಿ ಡಿಸಿಪಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸಿಸಿಬಿ ಪೊಲೀಸರು ನಟಿ ರಮ್ಯಾ ಅವರ ಅಕೌಂಟ್‌ನಿಂದ ಸೈಬರ್ ಕ್ರೈಂ ಪೊಲೀಸರಿಂದ ಅಶ್ಲೀಲ ಮೆಸೇಜ್ ಅಕೌಂಟ್ ಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಯಾವ್ಯಾವ ಪೇಜ್ ಗಳಿಂದ ಅಶ್ಲೀಲ ಮೆಸೇಜ್ ಗಳು ಬಂದಿದ್ದವು? ಅಶ್ಲೀಲ ಸಂದೇಶಗಳು ಬಂದಿದ್ದವು? ಯಾವ ನಂಬರ್ ಗಳಿಂದ ಬೆದರಿಕೆ ಕರೆ ಬಂದಿತ್ತು? ಯಾವ ಅಕೌಂಟ್ ಗಳಿಂದ ಅಶ್ಲೀಲ ಮೆಸೇಜುಗಳು ಬಂದಿದ್ದವು? ಎಂಬುದನ್ನು ಕಲೆ ಹಾಕುತ್ತಿದ್ದಾರೆ.

ನಾವು ಈ ಒಂದು ದೂರನ್ನು ಸಿಸಿಬಿಗೆ ಕೊಟ್ಟಿದ್ದೇವೆ ಅವರು ಕ್ರಮ ಕೈಗೊಳ್ಳುತ್ತಾರೆ. ನಮ್ಮ ಸಿಸಿಬಿ ಸೈಬರ್ ಠಾಣೆಗೆ ನಟಿ ರಮ್ಯಾ ದೂರು ಕೊಟ್ಟಿದ್ದೇವೆ. ಅಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ದೂರಿನ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಮಾಡುತ್ತಾರೆ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅದರ ಬಗ್ಗೆ ಸಿಸಿಬಿ ಜಾಯಿಂಟ್ ಕಮಿಷನರ್ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

You cannot copy content of this page

Exit mobile version