ಹಾಸನ: ಮಹಿಳೆಯರ ಸಮಸ್ಯೆ ಹೇಳಿಕೊಳ್ಳಲು ಮಹಿಳಾ ಆಯೋಗ, ಮಕ್ಕಳ ಸಮಸ್ಯೆ ಹೇಳಲು ಮಕ್ಕಳ ಆಯೋಗ ರಚನೆ ಮಾಡಿರುವಂತೆ ಪುರುಷರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಂವಿಧಾನಾತ್ಮಕವಾಗಿ ಪುರುಷ ಆಯೋಗ ರಚನೆ ಆಗಲೇಬೇಕೆಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಸಿಇಒ ಅಶೋಕ್ ಒತ್ತಾಯಿಸಿದರು.
ಹುಡುಗರು ಪ್ರೀತಿ ಮಾಡಬೇಕಾದರೆ ದಯವಿಟ್ಟು ಯೋಚಿಸಿ ಹುಡುಗಿ ಕೈ ಕೊಟ್ಟಳು ಅಂತ ಆತ್ಮಹತ್ಯೆ ದಾರೀ ತುಳಿಯಬೇಡಿ. ಪ್ರೀತಿಸಿ ಮೋಸ ಹೋಗಿರುವ ಹುಡುಗರಲ್ಲಿ ಒಂದು ಮನವಿ ಏನೆಂದರೆ ಆ ಶಾಕ್ ನಿಂದ ಹೊರ ಬಂದು ದಯವಿಟ್ಟು ಹೊಸ ಜೀವನ ಶುರು ಮಾಡಿ ನಾನು ಮತ್ತು ನನ್ನ ಫುಡ್ ಪಾರ್ಕ್ ನಿಜವಾದ ಪ್ರೀತಿಗೆ ಯಾವತ್ತು ಆಸರೆಯಾಗಿ ನಿಂತೇ ಇರುತ್ತೇನೆ. ಪ್ರಕಾರ ಈ ಪ್ರಮಾಣ ಶೇ ೨೦-೨೫ ರಷ್ಟು ಇದ್ದು ಕೆಲಸದ ನಿರಂತರ ಒತ್ತಡ ಮತ್ತು ಕುಟುಂಬದ ಒತ್ತಡದಿಂದಾಗಿ ಮಾನಸಿಕ- ಖಿನ್ನತೆಗೆ ಒಳಗಾಗಿರುತ್ತಾರೆ, ಇದು ಇನ್ನೊಂದು ತರಹದ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಆದರೆ ಪೊಲೀಸ್ ಇಲಾಖೆಯ ನೌಕರರು ಎಲ್ಲಿಯೂ ಹೇಳಿಕೊಳ್ಳಲು ಆಗುತ್ತಿಲ್ಲ. ಒಟ್ಟಿನಲ್ಲಿ ಸಮಾಜದ ದುಡಿಯುವ ವರ್ಗ ಪುರುಷ ಮತ್ತು ಯುವಕರು ಒಂದು ರೀತಿಯ ಮಾನಸಿಕ ಒತ್ತಡ ಕ್ಕೆ ಒಳಗಾಗಿರುತ್ತಾರೆ ಎಂದರು.
ಸಂವಿಧಾನದಲ್ಲಿ ಎಲ್ಲಿಯೂ ಹುಡುಗನಿಗೆ ಒಂದು ನ್ಯಾಯ ಹುಡುಗಿಗೆ ಒಂದು ನ್ಯಾಯ ಅಂತ ಎಲ್ಲಿಯೂ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಿ ಹೇಳಿಲ್ಲ. ಹುಡುಗರು ಪ್ರೀತಿ ಮಾಡಬೇಕಾದರೆ ದಯವಿಟ್ಟು ಯೋಚಿಸಿ ಹುಡುಗಿ ಕೈ ಕೊಟ್ಟಳು ಅಂತ ಆತ್ಮಹತ್ಯೆ ದಾರೀ ತುಳಿಯಬೇಡಿ, ಪ್ರೀತಿಸಿ ಮೋಸ ಹೋಗಿರುವ ಹುಡುಗರಲ್ಲಿ ಒಂದು ಮನವಿ ಏನೆಂದರೆ ಆ ಶಾಕ್ ನಿಂದ ಹೊರ ಬಂದು ದಯವಿಟ್ಟು ಹೊಸ ಜೀವನ ಶುರು ಮಾಡಿ ನಾನು ಮತ್ತು ನನ್ನ ಫುಡ್ ಪಾರ್ಕ್ ನಿಜವಾದ ಪ್ರೀತಿಗೆ ಯಾವತ್ತು ಆಸರೆಯಾಗಿ ನಿಂತೇ ಇರುತ್ತೇನೆ ಎಂದ ಅವರು, ಅರಸೀಕೆರೆ ತಾಲೂಕು ಗಂಡಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ, ಸಕಲೇಶಪುರ ತಾಲೂಕಿನಲ್ಲಿ ಪುರುಷ ಆತ್ಮಹತ್ಯೆ ಮಾಡಿಕೊಂಡ ಘಟನೆ, ಚನ್ನರಾಯಪಟ್ಟಣ, ಆಲೂರು, ಹಾಸನ ತಾಲೂಕು ಸೇರಿದಂತೆ ನಾನಾ ಘಟನೆಯನ್ನು ಇದೆ ವೇಳೆ ಮೆಲುಕು ಹಾಕಿದರು. ನಾನು ಓಡಾಡುವುದಕ್ಕೆ ಹಾಸನ ವಿಮಾನ ನಿಲ್ದಾಣ ಇನ್ನು ಒಂದು ವರ್ಷದಲ್ಲಿ ಸಿದ್ದಗೊಳ್ಳಬೇಕು. ನಾನು ಹಾಸನಕೆ, ಸುದಿ ಗೋಷಿ ಮಾಡಲು ಆಗಾಗ ಬರುವ ಕಾರಣ ಕೆ.ಎಸ್.ಆರ್.ಟಿ.ಸಿ. ಬಸ್ ನಿಲಾಣ ಬಳಿ ಇರುವ ಫೈ ಓವರ್ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ವಿದೇಶಗಳಲ್ಲಿ ಅತಿ ಹೆಚ್ಚಿನ ಸ್ನೇಹಿತರು ಇರುವ ಕಾರಣ ನನ್ನನ್ನು ನೋಡಲು ಬರುತ್ತಾರೆ. ಅವರಿಗೆ ಬೇಲೂರು, ಹಳೇಬೀಡು ತೋರಿಸಲು ಸರಿಯಾದ ರಸ್ತೆ ಇಲ್ಲ. ಕಾಲ ಮಿತಿಯಲ್ಲಿ ರಸ್ತೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು. ಕಾರಣ ನಾನು ಕೇಳುವುದಿಲ್ಲ ಸರ್ಕಾರ ಕಾರಣ ಹೇಳಿದರೆ ನಾನು ತೆರಿಗೆ ಕಟ್ಟಲು ನಾನು ಕಾರಣ ಹೇಳುತ್ತೇನೆ. ಬಲ ಪ್ರಯೋಗ ಮಾಡುವ ಪ್ರಯತ್ನ ಬೇಡ. ಬಾಬಾ ಸಾಹೇಬರ ಸಂವಿಧಾನದಿಂದ ಸರ್ಕಾರ ನಡೆಯುತ್ತಿರುವುದು. ಇದೆ ಸಂವಿದಾನ ನನಗು ಕೂಡ ಒಂದಷ್ಟು ಅಧಿಕಾರ ಕೊಟ್ಟಿದೆ ಎಂದು ಹೇಳಿದರು.