ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವ ಸಲುವಾಗಿ 7 ಕೋಟಿ ವಂಚಿಸಿದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿರುವ ಚೈತ್ರ ಕುಂದಾಪುರ ಆರೋಗ್ಯದಲ್ಲಿ ಏರುಪೇರು ಎಂಬ ಮಾಹಿತಿಯ ಬೆನ್ನಲ್ಲೇ ಆಕೆಯ ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ಕೂಡಾ ಆಸ್ಪತ್ರೆ ಅಧಿಕಾರಿಗಳ ಕಡೆಯಿಂದ ತಿಳಿದು ಬಂದಿದೆ.
ಪಿಟ್ಸ್ (ಮೂರ್ಛೆರೋಗ) ಬಂದಿತ್ತು ಎಂದು ಚೈತ್ರ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದರು. ಸಧ್ಯ ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ನೋಡಲ್ ಅಧಿಕಾರಿಗಳಾದ ಅಸೀಮಾ ಬಾನು ಹೇಳಿಕೆ ನೀಡಿದ್ದಾರೆ.
ಚೈತ್ರ ಕುಂದಾಪುರ ಅವರಿಗೆ ಈ ಹಿಂದೆ ಪಿಟ್ಸ್ ಇತ್ತು ಎಂದು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಅದು ಪಿಟ್ಸ್ ಅಲ್ಲ ಎಂಬುದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಚೈತ್ರ ಅವರಿಗೆ ಈ ಹಿಂದೆ ಪಿಟ್ಸ್ ಇದ್ದರೂ ಅದು ಈಗ ಫಿಟ್ಸ್ ಇಲ್ಲ. ಚೈತ್ರಾಗೆ ಈಗ ಚಿಕಿತ್ಸೆ ನೀಡಿದಾಗ ಪಿಟ್ಸ್ ಎಂಬುದು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಚೈತ್ರಾ ಕುಂದಾಪುರ ಅವರಿಗೆ ಪಿಟ್ಸ್ ಬಂದಿತ್ತು, ಅವರ ಬಾಯಲ್ಲಿ ನೊರೆ ಬಂದಿತ್ತು ಎಂಬ ಸುದ್ದಿ ಹರಿದಾಡಿತ್ತು. ಆದರೆ ಚೈತ್ರಾ ಕುಂದಾಪುರ ಬಾಯಲ್ಲಿ ನೊರೆ ಇರಲಿಲ್ಲ. ಚೈತ್ರಾಗೆ ಇಸಿಜಿ, ಸಿಟಿ ಸ್ಕ್ಯಾನ್ ಸೇರಿ ಎಲ್ಲ ಟೆಸ್ಟ್ ಕೂಡಾ ಮಾಡಲಾಗಿದೆ. ಎಲ್ಲಾ ಸ್ಪೆಷಾಲಟಿ ವೈದ್ಯರಿಂದ ಚೆಕಪ್ ಕೂಡಾ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ. ಎಲ್ಲಾ ಟೆಸ್ಟ್ ರಿಪೋರ್ಟ್ ಬಂದ ಬಳಿಕ ಡಿಸ್ಚಾರ್ಜ್ ಮಾಡಿ ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.