ಹಾಸನ : ಬೇಲೂರಿನ ಶ್ರೀ ಚನ್ನಕೇಶವ ದೇವಾಲಯದ ಹುಂಡಿ ಹಣ ಏಣಿಕೆಯಲ್ಲಿ 37,79,346₹ ರೂಗಳು ಬಂದಿದ್ದು ಎರಡು ವಿದೇಶಿ ಹಣ ಹಾಗು ಚಿನ್ನ ಬೆಳ್ಳಿ ವಸ್ತುಗಳು ಕೂಡ ಈ ಬಾರಿ ಬಂದಿದೆ ಎಂದು ಮುಜರಾಯಿ ತಹಶಿಲ್ದಾರ್ ಶ್ರೀಮತಿ ಲತಾ ತಿಳಿಸಿದ್ದು , ಕಳೆದ ಮೂರು ತಿಂಗಳ ಹಿಂದೆ ಹುಂಡಿ ಹಣವನ್ನು ಏಣಿಕೆ ಸಂದರ್ಭದಲ್ಲಿ 11-6-2025 ರಂದು 36, 41,823 ರೂಗಳು ಬಂದಿತ್ತು . ಈ ಹಣವನ್ನು ದೇವಾಲಯದ ಅಭಿವೃದ್ಧಿ ಗೆ ಹಾಗು ನೌಕರರ ವೇತನಕ್ಕೆ ಬಳಸಲಾಗುತ್ತದೆ ಎಂದರು.
ತಹಶಿಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ ಭಕ್ತರು ಹಾಗು ಪ್ರವಾಸಿಗರು ಅವರ ಭಕ್ತಿಯ ಅನುಸಾರವಾಗಿ ಕಾಣಿಕೆ ರೂಪದಲ್ಲಿ ಬೇಲೂರಿನ ಸರ್ವೋದಯ ಶಾಲೆಯ ವಿದ್ಯಾರ್ಥಿಗಳು ಬ್ಯಾಂಕಿನ ಸಿಬ್ಬಂದಿ ಹಾಗು ದೇಗುಲದ ನೌಕರರ ವರ್ಗದವರು ಈ ಏಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದು ದಾಸೋಹದ ಹುಂಡಿ ಸೇರಿದಂತೆ ದೇಗುಲದ ಎಲ್ಲಾ ಹುಂಡಿಗಳ ಏಣಿಕೆ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಸಕಲೇಶಪುರ ಉಪವಿಭಾಗದ ಅಧಿಕಾರಿ ರಾಜೇಶ್,ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಯೋಗೇಶ್ ಇತರರು ಇದ್ದರು.
