ಮುಂಬೈ: ಜಾನುವಾರುಗಳ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಮಹಾರಾಷ್ಟ್ರ ಗೋಸೇವಾ ಆಯೋಗ ವು (ಎಂಜಿಎಸ್)ವು ಬಕ್ರೀದ್‌ಗೆ ಮುನ್ನ ಜೂ.1 ಮತ್ತು ಜೂ.8ರ ನಡುವೆ ಯಾವುದೇ ಜಾನುವಾರು ಮಾರುಕಟ್ಟೆಗಳು ಕಾರ್ಯ ನಿರ್ವಹಿಸಬಾರದು, ಪೂರ್ತಿಯಾಗಿ ಬಂದ್ ಆಗಿರಬೇಕು ಎಂದು ಆದೇಶ ಹೊರಡಿಸಿದೆ ಎಂದು ಮುಂಬೈ ಸ್ಥಳಿಯ ಸುದ್ದಿಸಂಸ್ಥೆಯು ರವಿವಾರ ವರದಿ ಮಾಡಿದೆ.
ಬಕ್ರೀದ್ ಅನ್ನು ಜೂ.7ರಂದು ಆಚರಿಸಲಾಗುತ್ತಿದ್ದು, ತ್ಯಾಗದ ಸಂಕೇತವಾಗಿರುವ ಈ ಹಬ್ಬವು ಆಡು ಮತ್ತು ಕುರಿಗಳನ್ನು ವಧೆಯನ್ನು ಒಳಗೊಂಡಿದೆ. ಬಹಳಷ್ಟು, ರೈತರು, ಕುರಿ- ಮೇಕೆ ಸಾಕಾಣಿಕೆದಾರರು ಭಕ್ರೀದ್ ಹಬ್ಬಕ್ಕಾಗಿಯೇ ಕುರಿ ಮೇಕೆಗಳನ್ನು ಸಾಕಿಕೊಂಡು ಹಬ್ಬ ನಡೆಯುವ ಸಂದರ್ಭದಲ್ಲಿ ಮಾರಾಡ ಮಾಡುತ್ತಾರೆ. ಗೋ ಹತ್ಯೆ ನೀಷೇದಕ್ಕಾಗಿ ಕುರಿ ಮೇಕೆಗಳನ್ನು ಮಾರಾಟ ಮಾಡುವ ಜಾನುವಾರು ಮಾರುಕಟ್ಟೆಗಳನ್ನು ಬಂದ್ ಮಾಡಿದರೆ ನಾವು ಕುರಿ ಮೇಕೆ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು ಎಂದು ವಿರೋಧವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಂಜಿಎಸ್ ಮೇ 27ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಅಕ್ರಮ ಗೋಹತ್ಯೆ ನಡೆಯದಂತೆ ನೋಡಿಕೊಳ್ಳಲು ಯಾವುದೇ ಜಿಲ್ಲೆಯಲ್ಲಿ ಜಾನುವಾರು ಮಾರುಕಟ್ಟೆಗಳು ಕಾರ್ಯ ನಿರ್ವಹಿಸುವಂತಿಲ್ಲ ಎಂದು ತನ್ನ ಆದೇಶ ಪತ್ರದಲ್ಲಿ ತಿಳಿಸಿದೆ.