ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನ (Vidhanasabha Session) ಇಂದಿನಿಂದ ಆರಂಭವಾಗಿದ್ದು, ಈ ವೇಳೆ ಗುಜರಾತ್ ವಿಮಾನ ದುರಂತ, ಆರ್ ಸಿಬಿ ವಿಜಯೋತ್ಸವ ಕಾಲ್ತುಳಿತ, ಹಾಗೂ ಪಹಲ್ಗಾಮ್ ದಾಳಿಯ ವೇಳೆ ಮೃತಪಟ್ಟಿದ್ದ ಎಲ್ಲರಿಗೂ ಕೂಡ ಸಿಎಂ ಸಿದ್ದರಾಮಯ್ಯ (CM Siddaramaiah) ಸಂತಾಪ ಸೂಚಿಸಿದ್ದಾರೆ.
ಈಗಾಗಲೇ ವಿಧಾನ ಸಭೆಯಲ್ಲಿ ಚರ್ಚೆ ಆರಂಭವಾಗಿದ್ದು, ಅದಕ್ಕೂ ಮೊದಲಿಗೆ ಗುಜರಾತ್ ಏರ್ ಇಂಡಿಯಾದಲ್ಲಿ ದುರಂತ ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ, ಹಾಗೂ ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ ಕರ್ನಾಟಕದ ಮಂಜುನಾಥ್ ರಾವ್ ಮತ್ತು ಭರತ್ ಭೂಷಣ್ ಸೇರಿದಂತೆ ಒಟ್ಟು 28 ಜನ ಮೃತಪಟ್ಟಿರುವುದು ದುಃಖದ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಇದಕ್ಕೂ ಮೊದಲು ಸನ್ಮಾನ್ಯ ಸಭಾಪತಿಗಳಾದ ಯುಟಿ ಖಾದರ್ ಫರೀದ್ ಅವರು, ಡಾ. ಪಾಂಡುರಂಗ ಬಾಪು ಪಾಟೀಲ್, ಎನ್ ರಾಜಣ್ಣ, ವಿಧಾನ ಪರಿಷತ್ ಮಾಜಿ ಹಂಗಾಮಿ ಸಭಾಪತಿಗಳಾದ ಡಾ. ಎಸ್ ಎನ್ ತಿಪ್ಪಣ್ಣ , ಮಾಜಿ ಉಪಸಭಾ ಪತಿ ಹಂಗಾಮಿ ಸಭಾಪತಿ ಡೇವಿಡ್ ಶ್ರೀ ಮೋಹನ್, ರಾಜ್ಯ ಸಭೆಯ ಮಾಜಿ ಸದಸ್ಯರಾದ ಡಾ. ಕೆ. ಕಸ್ತೂರಿ ರಂಗನ್, ಖ್ಯಾತ ಕೃಷಿ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್, ಅಣು ವಿಜ್ಞಾನಿ ಎಂ. ಆರ್. ಶ್ರೀನಿವಾಸನ್, ಹಿರಿಯ ಸಾಹಿತಿ ಪ್ರೊ. ಸಿದ್ದಲಿಂಗಯ್ಯ, ಹಿರಿಯ ಕವಿ ಡಾ. ಹೆಚ್ ಎಸ್ ವೆಂಕಟೇಶ ಮೂರ್ತಿ, ಬಹುಬಾಷಾ ಹಿರಿಯ ನಟಿ ಶ್ರೀಮತಿ ವಿ ಸರೋಜಾ ದೇವಿ, ಮತ್ತು ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ನಿಧನ ಹೊಂದಿದ್ದನ್ನು, ಹಾಗೂ ಪಹಲ್ಗಾಮ್ ಉಗ್ರರ ದಾಳಿಗೆ ಹತರಾದವರಿಗೆ, ಗುಜರಾತ್ ಏರ್ ಇಂಡಿಯಾದಲ್ಲಿ ದುರಂತ ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.