Home ದೆಹಲಿ ಮೋದಿ ಸರ್ಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಕಾಂಗ್ರೇಸ್ ಸುಳ್ಳಿನ ಸಂಕಥನ ಸೃಷ್ಟಿಸುತ್ತಿದೆ – ಹೆಚ್‌.ಡಿ....

ಮೋದಿ ಸರ್ಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಕಾಂಗ್ರೇಸ್ ಸುಳ್ಳಿನ ಸಂಕಥನ ಸೃಷ್ಟಿಸುತ್ತಿದೆ – ಹೆಚ್‌.ಡಿ. ದೇವೇಗೌಡ ವಾಗ್ದಾಳಿ

0

ನವದೆಹಲಿ: ವೋಟ್ ಚೋರಿ (Vote Chori).. ಬಿಜೆಪಿ (BJP) ವಿರುದ್ಧ ಕಾಂಗ್ರೆಸ್​ ಮತಗಳ್ಳತನ ಅಸ್ತ್ರ ಪ್ರಯೋಗಿಸಿದೆ. ವೋಟ್​ ಕದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ. ಇನ್ನೂ ರಾಹುಲ್​ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ದೊಡ್ಡ ಕ್ಯಾಂಪೇನ್ ಕೂಡ ನಡೀತಿದೆ. ಇದಾದ ಬೆನ್ನಲ್ಲೇ ಕಲಬುರಗಿಯಲ್ಲಿ ಎಸ್ಐಟಿ ಫೀಲ್ಡಿಗಿಳಿದಿದೆ. ಸುಭಾಷ್ ಗುತ್ತೇದಾರ್ ತಪ್ಪು ಮಾಡಿದ್ದಾರೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಇದ್ರ ಮಧ್ಯೆ ಕಾಂಗ್ರೆಸ್ (Congress) ಆರೋಪಗಳ ವಿರುದ್ಧ ರಾಜ್ಯಸಭೆಯಲ್ಲಿ ದೇವೇಗೌಡರು (HD Devegowda) ಗುಡುಗಿದ್ದಾರೆ.

ವೋಟ್‌ ಚೋರಿ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು ಭವಿಷ್ಯದಲ್ಲಿ ಘೋರ ಪರಿಣಾಮ ಅನುಭವಿಸುತ್ತವೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಪಕ್ಷಗಳು ಪ್ರಧಾನಿಯವರ ಬಗ್ಗೆ ಹಾದಿ-ಬೀದಿಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಕೆಟ್ಟದ್ದಾಗಿ ಟೀಕೆ ಮಾಡುತ್ತಿರುವ ಬಗ್ಗೆ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ್ರು ಹರಿಹಾಯ್ದಿದ್ದಾರೆ. ‘ನಮ್ಮದು ಬಹಳ ದೊಡ್ಡ ರಾಷ್ಟ್ರ. ಕಾಂಗ್ರೆಸ್‌‍ ಪಕ್ಷವು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಬಹುದು. ನನ್ನ ಪ್ರತಿಪಕ್ಷ ಸ್ನೇಹಿತರೇ ದಯವಿಟ್ಟು ನೆನಪಿಡಿ ವೋಟ್‌ ಚೋರಿ ಎಂಬ ಪದಗಳನ್ನು ಬಳಸುವುದರಿಂದ ನೀವು ಮುಂಬರುವ ದಿನಗಳಲ್ಲಿ ತೊಂದರೆ ಅನುಭವಿಸುತ್ತೀರಿ. ನೀವು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ’ ಎಂದು ದೇವೇಗೌಡರು ಕಟುವಾದ ಶಬ್ದಗಳಲ್ಲಿ ತಿಳಿಸಿದ್ದಾರೆ. ‘ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪ್ರಸ್ತಾಪಿಸಿಯೂ ಕಾಂಗ್ರೆಸ್‌‍ ಪಕ್ಷವು ಇತ್ತೀಚಿಗೆ ಬಿಹಾರ ಚುನಾವಣೆಯಲ್ಲಿ ಸೋಲು ಎದುರಿಸಿತು. ಮತದಾರರ ಪಟ್ಟಿಯ ಕೂಲಂಕಶ ಪರಿಶೀಲನೆಯ ನಂತರವೂ ಆ ರಾಜ್ಯದಲ್ಲಿ ಏನಾಯಿತು ಎಂಬುದನ್ನು ಸ್ವತಃ ಪ್ರತಿಪಕ್ಷ ನಾಯಕರು ಆಲೋಚಿಸಬೇಕು. ಆ ರಾಜ್ಯದಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಆರು ಶಾಸಕರು ಸಿಕ್ಕಿದ್ದಾರೆ’ ಎಂದು ಗೌಡ್ರು ಕಿಡಿಕಾರಿದ್ದಾರೆ.

ಕೇರಳದಲ್ಲಿ 18,000 ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಬರೆದ ಪತ್ರವನ್ನು ದೇವೇಗೌಡ್ರು ಉಲ್ಲೇಖಿಸಿದ್ದಾರೆ. ‘ನೆಹರು ಅವಧಿಯಲ್ಲಿಯೂ ಸಹ ಚುನಾವಣಾ ವ್ಯವಸ್ಥೆಯಲ್ಲಿ ಕೆಲವು ಲೋಪಗಳು ಇದ್ದವು’ ಎಂದು ಜೂನ್‌ 1, 1996 ಮತ್ತು ಏಪ್ರಿಲ್‌ 21, 1997ರ ನಡುವೆ ಪ್ರಧಾನಿಯಾಗಿದ್ದ ದೇವೇಗೌಡರು ತಿಳಿಸಿದ್ದಾರೆ.

‘ನಾನು ಏಳು ದಶಕಗಳಿಗೂ ಹೆಚ್ಚಿನ ಸಾರ್ವಜನಿಕ ಜೀವನದಲ್ಲಿ ಚುನಾವಣೆಯಲ್ಲಿ ಸೋಲು, ಗೆಲುವನ್ನು ಎದುರಿಸಿದ್ದೇನೆ. ನಾನು ಎಂದಿಗೂ ಮತಗಳ್ಳತನದಂತಹ ವಿಷಯಗಳನ್ನು ಹೇಳಲಿಲ್ಲ ಎಂದು ದೇವೇಗೌಡ್ರು ಒತ್ತಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಮತಗಳ್ಳತನ ಆರೋಪ: ಸೆಪ್ಟೆಂಬರ್ 18 ರಂದು ಕರ್ನಾಟಕದಲ್ಲಿ ಮತಗಳ್ಳತನದ ಬಾಂಬ್​ ಸ್ಫೋಟವಾಗಿತ್ತು. ಮಹದೇವಪುರದ ಬಳಿಕ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ ಎಂದು ರಾಹುಲ್ ಗಾಂಧಿ ದಾಖಲೆ ಬಿಚ್ಚಿಟ್ಟಿದ್ರು. ಫೇಕ್​ ಐಡಿ, ಹೊರರಾಜ್ಯದ ಮೊಬೈಲ್ ನಂಬರ್ ಬಳಸಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಮತ ಪರಿಷ್ಕರಣೆ ಮಾಡಿದ್ರು. ಸೂರ್ಯಕಾಂತ್​ಗೆ ಮಾಹಿತಿ ನೀಡದೇ ಆತನ ಹೆಸರು ಡಿಲೀಟ್​ ಮಾಡಿದ್ದಾರೆ. ಸೂರ್ಯಕಾಂತ್ ಸೇರಿ 12 ಜನರ ಹೆಸರು ಡಿಲೀಟ್ ಆಗಿದೆ. 14 ನಿಮಿಷದಲ್ಲಿ 13 ಹೆಸರುಗಳು ನಾಪತ್ತೆಯಾಗಿವೆ. ಈ ಕೆಲಸಕ್ಕೆ ತಮಿಳುನಾಡು, ಜಾರ್ಖಂಡ್ ನಂಬರ್ ಬಳಸಿದ್ದಾರೆ. ಇದ್ರ ಬಗ್ಗೆ ಕರ್ನಾಟಕ ಸಿಐಡಿ 18 ತಿಂಗಳಲ್ಲಿ 18 ಪತ್ರ ಬರೆದಿದೆ, ಆದ್ರೂ CID ಪತ್ರಕ್ಕೆ ಆಯೋಗ ಉತ್ತರ ಕೊಟ್ಟಿಲ್ಲ ಎಂದು ರಾಹುಲ್ ಆರೋಪ ಮಾಡಿದ್ದರು.

You cannot copy content of this page

Exit mobile version