Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಎಐ ತಂತ್ರಜ್ಞಾನ ಬಳಸಿ ಕಾಂಗ್ರೆಸ್‌ ನಾಯಕರ ಕಾಮಿಡಿ ಎಫ್‌ಐಆರ್‌ ದಾಖಲು

ಎಐ ತಂತ್ರಜ್ಞಾನ ಬಳಸಿ ಕಾಂಗ್ರೆಸ್‌ ನಾಯಕರ ಕಾಮಿಡಿ ಎಫ್‌ಐಆರ್‌ ದಾಖಲು

ಬೆಂಗಳೂರು : ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ಬಳಸಿ ಕಾಂಗ್ರೆಸ್‌ (Congress) ನಾಯಕರಾದ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar), ಸಚಿವ ಜಮೀರ್‌ ಅಹ್ಮದ್‌, ಸಚಿವ ಮಧು ಬಂಗಾರಪ್ಪ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ, ಸಂಸದ ರಾಹುಲ್‌ ಗಾಂಧಿ ಮುಂತಾದವರ ತಮಾಷೆ ವಿಡಿಯೋಗಳನ್ನು (Troll Video) ಮಾಡುತ್ತಿದ್ದ “ಕ್ರಿಮಿ ಕೀಟ” ಎಂಬ ಫೇಸ್‌ ಬುಕ್‌ ಪೇಜ್‌ (krimikeeta Facebook page) ವಿರುದ್ದ ಕಾಂಗ್ರೆಸ್‌ ಎಫ್‌ಐಆರ್‌ ದಾಖಲಿಸಿದೆ.

ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ದಾಖಲಿಸಿದ್ದ ದೂರನ್ನಧಾರಿಸಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾಂಗ್ರೆಸ್‌ ನಾಯಕರನ್ನು ತಮಾಷೆ ಮಾಡಿ ಗೇಲಿ ಮಾಡಿ ರಚಿಸುತ್ತಿದ್ದ ಈ ವಿಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಈ ಬಗ್ಗೆ ಕುಶಾಲ್‌ ಹರುವೇಗೌಡ ಎಂಬ ಕಾಂಗ್ರೆಸ್‌ ಕಾರ್ಯಕರ್ತ ದೂರು ದಾಖಲಿಸಿದ್ದು, ಈ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿರುವುದಾಗಿ ಹೈಗ್ರೌಂಡ್ಸ್‌ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಕನ್ನಡದ ಸಿನಿಮಾಗಳ ಹಾಸ್ಯದೃಶ್ಯಗಳನ್ನು ನಕಲಿ ಮಾಡಿ ಅದಕ್ಕೆ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಮತ್ತಿತರ ಕಾಂಗ್ರೆಸ್‌ ನಾಯಕರ ಹಾವಭಾವಗಳನ್ನು ನಕಲಿಸಿ ವಿಡಿಯೋ ತಯಾರಿಸಲಾಗುತ್ತಿತ್ತು. ಇದಕ್ಕೆ ಎಐ ತಂತ್ರಜ್ಞಾನದ ನೆರವು ಪಡೆಯಲಾಗುತ್ತಿತ್ತು. ಜೊತೆಗೆ ಅದೇ ರೀತಿಯ ಧ್ವನಿಯನ್ನೂ ಸಹ ಅನುಕರಿಸಲಾಗುತ್ತಿತ್ತು. ಒಂದೊಂದು ವಿಡಿಯೋಗಳೂ ಸಹ ಲಕ್ಷಾಂತರ ವೀಕ್ಷಣೆ ಪಡೆಯುವ ಮೂಲಕ ಜನಪ್ರಿಯತೆ ಗಳಿಸಿದ್ದವು. ಇದು ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಈ ಹಿಂದೆಯೂ ಕುಶಾಲ್‌ ಹರುವೇ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿ ಪೋಸ್ಟ್‌ ಮಾಡಿದ್ದವರ ವಿರುದ್ದ ದೂರು ದಾಖಲಿಸಿದ್ದರು. ಸಿಎಂ ಸಿದ್ದರಾಮಯ್ಯ ಸತ್ತರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ನಿಂದಿಸಿದ್ದ ಪೋಸ್ಟ್‌ ನ ವಿರುದ್ದ ದೂರು ದಾಖಲಿಸಿದ್ದ ಕುಶಾಲ್‌, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

You cannot copy content of this page

Exit mobile version