Home ಬ್ರೇಕಿಂಗ್ ಸುದ್ದಿ ನಮ್ಮ ಮೆಟ್ರೋ ಗುಡ್ ನ್ಯೂಸ್ – ಮೆಜೆಸ್ಟಿಕ್ ಡಿ ಪ್ರವೇಶದ್ವಾರ ಓಪನ್

ನಮ್ಮ ಮೆಟ್ರೋ ಗುಡ್ ನ್ಯೂಸ್ – ಮೆಜೆಸ್ಟಿಕ್ ಡಿ ಪ್ರವೇಶದ್ವಾರ ಓಪನ್

ಬೆಂಗಳೂರು : ಜನರ ಜೀವನಾಡಿಯಾಗಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ (BMRCL) ಕಡೆಯಿಂದ ಗುಡ್ ನ್ಯೂಸ್ ವೊಂದು ಸಿಕ್ಕಿದ್ದು, ಮೆಜೆಸ್ಟಿಕ್ (Majestic) ನಿಲ್ದಾಣದ ಪ್ರವೇಶ ದ್ವಾರ D ಅನ್ನು ತೆರೆಯಲಾಗಿದೆ.

ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್ ನಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಹಿನ್ನಲೆ ಮೆಟ್ರೋ ನಿಲ್ದಾಣದ ಪ್ರವೇಶ D ಅನ್ನು ತೆರೆಯುವಂತೆ ಪ್ರಯಾಣಿಕರು ಸಾಕಷ್ಟು ಬಾರಿ ಒತ್ತಾಯಿಸಿದ್ದರು. 

ಪ್ರಯಾಣಿಕರ ಮನವಿಯ ಮೇರೆಗೆ ಇದೀಗ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪ್ರವೇಶ D ಯಲ್ಲಿ ಪ್ರವೇಶ / ನಿರ್ಗಮನ ದ್ವಾರವನ್ನು ತೆರೆಯಲಾಗಿದೆ. ಇದು ಕೆಎಸ್ ಆರ್ ಟಿಸಿ ಟರ್ಮಿನಲ್ -2 ಕ್ಕೆ ಹಾಗು ಟರ್ಮಿನಲ್ 2A ಗೆ ನೇರ ಪ್ರವೇಶ ನೀಡುತ್ತದೆ..

ಸದ್ಯ ಹಲವಾರು ವರ್ಷಗಳ ಬಳಿಕ ಪ್ರವೇಶ D ಅನ್ನು ತೆರೆದಿದ್ದು, ಈ ಮೂಲಕ ಜನರು ತಮ್ಮ ತಮ್ಮ ಊರಿಗೆ ಹೋಗಲು ಇನ್ನಷ್ಟು ಸುಲಭವಾಗಿದೆ. ಈ ಹಿಂದೆ ಪ್ರವೇಶ B ಅಲ್ಲಿ ನಿರ್ಗಮಿಸಿ ಒಂದು ಸುತ್ತು ಹಾಕಿ ಟರ್ಮಿನಲ್ 2 ಹಾಗು ಟರ್ಮಿನಲ್ 2A ಗೆ ತೆರಳ ಬೇಕಿತ್ತು. 

ಆದರೆ ಇದೀಗ ಬಿಎಂಆರ್ ಸಿಎಲ್ D ಪ್ರವೇಶ ದ್ವಾರವನ್ನು ತೆರೆದಿದ್ದು, ಈ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಪ್ರಯಾಣ ಇನ್ನಷ್ಟು ಸುಲಭವಾಗಿದೆ. ಇನ್ನು ಈ ಬಗ್ಗೆ ನಮ್ಮ ಮೆಟ್ರೊ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ

You cannot copy content of this page

Exit mobile version