Home ಬ್ರೇಕಿಂಗ್ ಸುದ್ದಿ ಹಾಸನ ಗ್ರಾಮ ಪಂಚಾಯತಿ ನೌಕರರಿಗೆ ವೈಜ್ಞಾನಿಕ ಕನಿಷ್ಟ ವೇತನ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಗ್ರಾಮ ಪಂಚಾಯತಿ ನೌಕರರಿಗೆ ವೈಜ್ಞಾನಿಕ ಕನಿಷ್ಟ ವೇತನ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಹಾಸನ : ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಗಳಲ್ಲಿ ದುಡಿಯುವ ನೌಕರರಿಗೆ ಕನಿಷ್ಠ ವೇತನ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕಾರ್ಮಿಕ ಇಲಾಖೆ ಮುಂದೆ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಪ್ರತಿಭಟಿಸಿ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಇದೆ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಕರ್ನಾಟಕ ಸರ್ಕಾರವು “ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಗಳಲ್ಲಿ” ದುಡಿಯುವ ನೌಕರರಿಗೆ ಕನಿಷ್ಠ ವೇತನವನ್ನು 2021 ನವೆಂಬರ್ ತಿಂಗಳಲ್ಲಿ ರಲ್ಲಿ ಅವೈಜ್ಞಾನಿಕವಾಗಿ ಜಾರಿ ಮಾಡಿರುವುದನ್ನು ಕರ್ನಾಟಕ ಗೌರವಾನ್ವಿತೆ ಉಚ್ಚನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ಸಂಘವು ರಿಟ್ ದಾಖಲೆ ಮಾಡಿದ ನಂತರ ನ್ಯಾಯಾಲಯದಲ್ಲಿ ವಾದ-ವಿವಾದಗಳು 2023 ಸೆಪ್ಟಂಬರ್ ರಿಂದ ಆರಂಭವಾಗಿ 2024ರಲ್ಲಿ ಮಾನ್ಯ ನ್ಯಾಯಾಲಯದ ಏಕ ಸದಸ್ಯ ಪೀಠವು ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಕನಿಷ್ಠ ವೇತನ ನಿಗದಿ ಪಡಿಸಲು 10 ವಾರಗಳ ಗಡುವು ನೀಡಿದ ಮೇಲೆ ಮೂರು ವರ್ಷ ನಾಲ್ಕು ತಿಂಗಳ ನಂತರ 2025 ರಂದು ಸರ್ಕಾರ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು ಎಂದರು. ಇದಕ್ಕೆ ಸಂಘವು ಕರವಸೂಲಿಗಾರ, ಗುಮಾಸ್ತ, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಈ ಹುದ್ದೆಗಳನ್ನು ಅತ್ತಿ ಕುಶಲರಾಗಿ ಪರಿಗಣಿಸಿ ಮೂಲ ವೇತನ ರೂ. 38,021-86 ನಿಗದಿ ಪಡಿಸಲು ಒತ್ತಾಯಿಸುತ್ತದೆ ಎಂದರು. ವಾಟರ್‌ಮೆನ್(ನೀರುಗಂಟಿ), ಪಂಪ್ ಆಪರೇಟರ್ ಕಂ ಮೆಕ್ಯಾನಿಕ್ ಈ ಹುದ್ದೆಗಾಗಿ “ಕುಶಲರಾಗಿ ಪರಿಗಣಿಸಿ” ಮೂಲ ವೇತನ ರೂ.33,062-50 ನಿಗದಿಪಡಿಸಲು ಒತ್ತಾಯಿಸಿದೆ. ಅಟೆಂಡರ್, ಜವಾನರು “ಅರೆ ಕುಶಲರಾಗಿ ಪರಿಗಣಿಸಿ” ಮೂಲ ವೇತನ ರೂ. 28,750-00 ನಿಗದಿಪಡಿಸಲು ಒತ್ತಾಯಿಸಿದೆ. ಕಸಗುಡಿಸುವವರು/ಸ್ವಚ್ಛಾತಾಗಾರರು “ಅಕುಶಲರಾಗಿ ಪರಿಗಣಿಸಿ” ಮೂಲ ವೇತನ ರೂ.25,000 ನಿಗದಿಪಡಿಸಲು ಒತ್ತಾಯಿಸಲಾಗುವುದು ಎಂದು ಹೇಳಿದರು.


ಈ ಕನಿಷ್ಠ ವೇತನದ ಜಾರಿಯನ್ನು 2025ರಿಂದ ಅನ್ವಯವಾಗುವಂತೆ ಜಾರಿ ಮಾಡಬೇಕೆಂದು ಹಾಗೂ 9,469 ಅಂಶಗಳಿಗಿAತ ಹೆಚ್ಚಾಗುವ ಪ್ರತಿ ಅಂಶಕ್ಕೆ ದಿನಕ್ಕೆ ಆರು ಪೈಸೆ ನಿಗದಿಯಾಗಬೇಕೆಂದು ಒತ್ತಾಯಿಸುತ್ತೇವೆ. ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುವ ಸಿಬ್ಬಂದಿಗಳಿಗೆ “ಸೇವಾ ಹಿರಿತನದ” ಮಾನ್ಯತೆ ನೀಡಿ ಮೂಲ ವೇತನಕ್ಕೆ ಶೇಕಡ.2 ಹೆಚ್ಚಳವನ್ನು ಪ್ರತಿ ವರ್ಷ ಪರಿಗಣಿಸಿ ಹೆಚ್ಚುವರಿ ಭತ್ಯೆ ನೀಡಬೇಕೆಂದು ಆಗ್ರಹವಾಗಿದೆ ಎಂದರು. ಬೇಡಿಕೆಗಳನ್ನು ಬಗೆಹರಿಸಬೇಕೆಂದು ರಾಜ್ಯಾದ್ಯಾಂತ ಇರುವ ಎಲ್ಲಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿಗಳ ಮುಂದೆ ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಖಜಾಂಚಿ ಕುಮಾರಸ್ವಾಮಿ, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಕರಿಯಪ್ಪ, ಅರಕಲಗೂಟು ಕಾರ್ಯದರ್ಶಿ ಅಶೋಕ್, ಬೇಲೂರು ತಾಲೂಕು ಕಾರ್ಯದರ್ಶಿ ನಂದೀಶ್, ಅರಸೀಕೆರೆ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಡಿವೈಎಫೈ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್ ಇತರರು ಉಪಸ್ಥಿತರಿದ್ದರು

You cannot copy content of this page

Exit mobile version