ಸಾಕಷ್ಟು ಕುತೂಹಲ ಕೆರಳಿಸಿದ್ದ, ದಿನೇ ದಿನೆ ರೋಚಕತೆ ಹುಟ್ಟಿಸಿದ್ದ ಬಮುಲ್ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ನಿನ್ನೆಗೆ ತೆರೆ ಕಂಡಿದೆ. ಪ್ರತಿ ಕ್ಷೇತ್ರದಲ್ಲೂ ಜಿದ್ದಾಜಿದ್ದಿ ಪೈಪೋಟಿಗೆ ಕಾರಣವಾಗಿದ್ದ ಬಮುಲ್ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದೆ.
ಒಟ್ಟು 14 ಕ್ಷೇತ್ರದಲ್ಲಿ ಘೋಷಣೆಯಾದ ಬಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ 10 ರಲ್ಲಿ ಕಾಂಗ್ರೆಸ್ ಮತ್ತು 4 ರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ಗೆಲುವು ಸಾಧಿಸಿದೆ. ಡೈರಿ ವೃತ್ತದಲ್ಲಿರುವ ಐಟಿಐ ಕಾಲೇಜಿನಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಫಲಿತಾಂಶ ಘೋಷಣೆಯಾಗಿದೆ.
ಬೆಂಗಳೂರು ನಗರ, ಗ್ರಾಮಾಂತರ, ಮತ್ತು ರಾಮನಗರ ಒಳಗೊಂಡಂತೆ ರಚನೆಯಾಗಿರುವ ಬಮೂಲ್ನ 2025-2030ರ ಅವಧಿಯ ಆಡಳಿತ ಮಂಡಳಿಯ ಒಟ್ಟು 14 ನಿರ್ದೇಶಕರ ಪೈಕಿ ಕನಕಪುರ ಕ್ಷೇತ್ರದಿಂದ ಮಾಜಿ ಸಂಸದ ಡಿ.ಕೆ.ಸುರೇಶ್, ಕುದೂರು ಕ್ಷೇತ್ರದಿಂದ ರಾಜಣ್ಣ ಮತ್ತು ಆನೇಕಲ್ ಕ್ಷೇತ್ರದಿಂದ ಆರ್.ಕೆ. ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇನ್ನುಳಿದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ಅಧ್ಯಕ್ಷರಾಗಿ ಡಿ.ಕೆ.ಸುರೇಶ್ ಆಯ್ಕೆಯಾಗುವ ಸಾಧ್ಯತೆ ಇದೆ.
ಗೆದ್ದ ಅಭ್ಯರ್ಥಿಗಳು :
ಹೊಸಕೋಟೆ- ಸತೀಶ್ಗೌಡ( ಕಾಂಗ್ರೆಸ್
ಚನ್ನಪಟ್ಟಣ-ಲಿಂಗೇಶ್ ಕುಮಾರ್( ಕಾಂಗ್ರೆಸ್
ನೆಲಮಂಗಲ-ಭವಾನಿ ಶಂಕರ್ ಬೈರೇಗೌಡ( ಎನ್ಡಿಎ)
ಬೆಂಗಳೂರು ದಕ್ಷಿಣ- ಕೆ.ಎಂ.ಕೃಷ್ಣಯ್ಯ(ಕಾಂಗ್ರೆಸ್)
ದೇವನಹಳ್ಳಿ-ಎಸ್.ಪಿ.ಮುನಿರಾಜು(ಕಾಂಗ್ರೆಸ್)
ಹಾರೋಹಳ್ಳಿ-ಹರೀಶ್ ಕುಮಾರ್(ಕಾಂಗ್ರೆಸ್)
ರಾಮನಗರ-ಪಿ.ನಾಗರಾಜು( ಕಾಂಗ್ರೆಸ್)
ಮಾಗಡಿ-ಎಚ್.ಎನ್.ಅಶೋಕ್( ಕಾಂಗ್ರೆಸ್)
ದೊಡ್ಡಬಳ್ಳಾಪುರ-ಬಿ.ಸಿ.ಆನಂದ್ (ಬಿಜೆಪಿ)
ಬೆಂಗಳೂರು ಪೂರ್ವ-ಎಂ.ಮಂಜುನಾಥ್( ಎನ್ಡಿಎ)
ಬೆಂಗಳೂರು ಉತ್ತರ -ಸತೀಶ್ ಕೆ.ಆರ್.ಕಡತನಮಲೆ( ಎನ್ಡಿಎ)
ಅವಿರೋಧ ಆಯ್ಕೆಯಾದವರು
ಕನಕಪುರ-ಡಿ.ಕೆ.ಸುರೇಶ್( ಕಾಂಗ್ರೆಸ್)
ಕುದೂರು-ರಾಜಣ್ಣ(ಕಾಂಗ್ರೆಸ್)
ಆನೇಕಲ್-ಆರ್.ಕೆ.ರಾಮೇಶ್( ಕಾಂಗ್ರೆಸ್)