Sunday, April 28, 2024

ಸತ್ಯ | ನ್ಯಾಯ |ಧರ್ಮ

ಕಾಟನ್‌ ಕ್ಯಾಂಡಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ: ಮಾರಾಟ ನಿಷೇಧಿಸಿದ ಸರ್ಕಾರ

ಮಕ್ಕಳು ದೊಡ್ಡವರು ಎನ್ನದೆ ಎಲ್ಲರೂ ಆಸೆಯಿಂದ ತಿನ್ನುವ ಕಾಟನ್‌ ಕ್ಯಾಂಡಿ (ಅಜ್ಜನ ಗಡ್ಡ) ತಿನಿಸಿಗೆ ಬಳಸುವ ಬಣ್ಣದಲ್ಲಿ ಕ್ಯಾನ್ಸರ್‌ ಉಂಟುಮಾಡಬಲ್ಲ Rhodaminbe-B ಅಶಂಗಳು ಪತ್ತೆಯಾಗಿವೆ.

Cotton candy banned: ಈ ನಿಟ್ಟಿನಲ್ಲಿ ತಮಿಳುನಾಡುವ ಸರ್ಕಾರವು ಎಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಕಾಟನ್‌ ಕ್ಯಾಂಡಿ ಮಾರಾಟವನ್ನು ನಿಷೇದಿಸಿ ಆದೇಶ ಹೊರಡಿಸಿದೆ.

ಚೆನ್ನೈ ನಗರದಲ್ಲಿ ಇತ್ತೀಚೆಗೆ ಜಪ್ತಿ ಮಾಡಲಾಗಿದ್ದ ಕಾಟನ್‌ ಕ್ಯಾಂಡಿ ಮಿಠಾಯಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳು ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಟನ್‌ ಕ್ಯಾಂಡಿ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎಂ ಸುಬ್ರಮಣಿಯನ್ ಘೋಷಿಸಿದ್ದಾರೆ.

“ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳು ಇರುವುದು ದೃಢಪಟ್ಟಿರುವುದರಿಂದ ತಮಿಳುನಾಡಿನಲ್ಲಿಕಾಟನ್ ಕ್ಯಾಂಡಿ ಮಾರಾಟವನ್ನು ನಿಷೇಧಿಸಲಾಗಿದೆ. ಕಾಟನ್ ಕ್ಯಾಂಡಿ ಮತ್ತು ಬಣ್ಣದ ಮಿಠಾಯಿಗಳಿಗೆ ಕೃತಕ ಬಣ್ಣ Rhodaminbe-B ಅನ್ನು ಸೇರಿಸಲಾಗಿರುವುದು ಸರ್ಕಾರದ ಪ್ರಯೋಗಾಲಯದ ಪರೀಕ್ಷೆಗಳಿಂದ ದೃಢಪಟ್ಟಿದೆ” ಎಂದು ಆರೋಗ್ಯ ಸಚಿವರು ಹೇಳಿದರು.

ಕೆಲವು ವಾರಗಳ ಕೆಳಗೆ ಪುದುಚ್ಚೇರಿ ಕೂಡಾ ಅದರಲ್ಲಿ ಕಂಡುಬಂದ ರಾಸಾಯನಿಕಗಳ ಕಾರಣಕ್ಕಾಗಿ ಕಾಟನ್‌ ಕ್ಯಾಂಡಿಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.

ಹಾನಿಕಾರಕ ರಾಸಾಯನಿಕಗಳನ್ನು ಬೆರೆಸಿದ ಆಹಾರ ಪದಾರ್ಥಗಳ ಮಾರಾಟವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ವಿಭಾಗ 3(1) (zx) ಸೆಕ್ಷನ್ 3(1) (ZZ) (iii) (v) (viii) & (ix) ಮತ್ತು ವಿಭಾಗ 26(1) (2) (i) (ii) & (v) ಅಡಿಯಲ್ಲಿ ಉಲ್ಲಂಘನೆಯಾಗಿದೆ. ಪರೀಕ್ಷಾ ಫಲಿತಾಂಶಗಳು ಮುಟ್ಟುಗೋಲು ಹಾಕಿಕೊಂಡ ಕಾಟನ್ ಕ್ಯಾಂಡಿಯನ್ನು ಗುಣಮಟ್ಟವಿಲ್ಲದ ಅಸುರಕ್ಷಿತ ಆಹಾರವೆಂದು ದೃಢಪಡಿಸಿದೆ.

ಇದಲ್ಲದೆ, “ಮದುವೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರೋಡಮೈನ್-ಬಿ ಹೊಂದಿರುವ ಆಹಾರ ಉತ್ಪನ್ನಗಳನ್ನು ತಯಾರಿಸುವುದು, ಪ್ಯಾಕೇಜಿಂಗ್ ಮಾಡುವುದು, ಆಮದು ಮಾಡಿಕೊಳ್ಳುವುದು, ಮಾರಾಟ ಮಾಡುವುದು, ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು