Home ದೇಶ ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್, ಸುಬ್ರಮಣ್ಯಸ್ವಾಮಿಗೆ ಕೋರ್ಟ್ ಮಹತ್ವದ ಸೂಚನೆ

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್, ಸುಬ್ರಮಣ್ಯಸ್ವಾಮಿಗೆ ಕೋರ್ಟ್ ಮಹತ್ವದ ಸೂಚನೆ

0

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವರದಿಯಾಗಿರುವ ವಿಚಾರಗಳ ಕುರಿತು ಲಿಖಿತ ಕಿರು ಟಿಪ್ಪಣಿ ಸಲ್ಲಿಸುವಂತೆ ಬಿಜೆಪಿ ಸಂಸದ ಸುಬ್ರಮಣ್ಯಸ್ವಾಮಿ ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.

ನಾಲ್ಕು ವಾರಗಳಲ್ಲಿ ವಾದಗಳ ಕುರಿತು ಲಿಖಿತ ಟಿಪ್ಪಣಿ ಸಲ್ಲಿಸುವಂತೆ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರಿಗೆ ಸೂಚಿಸಿದರು. ದೆಹಲಿ ಹೈಕೋರ್ಟ್ ಸೋಮವಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ನಡೆಸಿತು. ಲಿಖಿತ ಟಿಪ್ಪಣಿ ಸಲ್ಲಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು. ಪ್ರಕರಣದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ನೀಡುವಂತೆ ಸುಬ್ರಮಣ್ಯಸ್ವಾಮಿ ಸಲ್ಲಿಸಿದ್ದ ಮನವಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ.

ಸುಬ್ರಮಣ್ಯಸ್ವಾಮಿ 2021ರ ಫೆಬ್ರವರಿ 11ರಂದು ಈ ವಿಷಯವಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

You cannot copy content of this page

Exit mobile version