ಗೀಲಾಂಗ್ (ಆಸ್ಟ್ರೇಲಿಯಾ): ಟಿಟ್ವೆಂಟಿ ವಿಶ್ವಕಪ್‌ನ ಗ್ರೂಪ್ ಹಂತದಿಂದ ಕ್ವಾಲಿಫೈ ಆಗಲು ಶ್ರೀಲಂಕಾ ನಾಳೆ ನಡೆಯಲಿರುವ ಯುಎಇ ಜೊತೆಗಿನ ಸೆಣೆಸಾಟದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ನಮೀಬಿಯಾ ಎದುರಿನ ಹೀನಾಯ ಸೋಲಿನ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಶ್ರೀಲಂಕಾ ನಾಳೆಯ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ. ಎ ಗುಂಪಿನಲ್ಲಿ ನೆದರ್‌ಲ್ಯಾಂಡ್ ಮತ್ತು ನಮೀಬಿಯಾ ತಂಡಗಳು ತಲಾ ಎರಡು ಅಂಕಗಳನ್ನು ಗಳಿಸಿವೆ. ಶ್ರೀಲಂಕಾ ಮತ್ತು ಯುಎಇ ಇನ್ನೂ ಖಾತೆ ತೆರೆಯದೇ ಇರುವುದರಿಂದ ನಾಳಿನ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.
ನಾಳೆ ಗ್ರೂಪ್ ಹಂತದಲ್ಲಿ ಮತ್ತೊಂದು ಪಂದ್ಯದಲ್ಲಿ ನಮೀಬಿಯಾ ಮತ್ತು ನೆದರ್‌ಲ್ಯಾಂಡ್ ತಂಡಗಳು ಸೆಣೆಸಾಡಲಿವೆ. ಇತ್ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಜಯಿಸುವುದರೊಂದಿಗೆ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿವೆ.