Home Uncategorized ಕಾವಡಿ ಯಾತ್ರಿಗಳಿಂದ ಸಿಆರ್‌ಪಿಎಫ್ ಜವಾನ್ ಮೇಲೆ ದಾಳಿ

ಕಾವಡಿ ಯಾತ್ರಿಗಳಿಂದ ಸಿಆರ್‌ಪಿಎಫ್ ಜವಾನ್ ಮೇಲೆ ದಾಳಿ

0

ಮಿರ್ಜಾಪುರ: ಉತ್ತರ ಪ್ರದೇಶದ ಕಾವಡಿ (ಕಂವರ್) ಯಾತ್ರಿಕರು ದುಸ್ಸಾಹಸ ಎಸಗಿದರು. ಅವರು ಮಿರ್ಜಾಪುರ ರೈಲು ನಿಲ್ದಾಣದಲ್ಲಿ ಸಿಆರ್‌ಪಿಎಫ್ ಜವಾನ್‌ ಒಬ್ಬರನ್ನು ಥಳಿಸಿದ್ದಾರೆ.

ಜಾರ್ಖಂಡ್‌ನ ಬೈದ್ಯನಾಥ ಧಾಮಕ್ಕೆ ಬ್ರಹ್ಮಪುತ್ರ ರೈಲು ಹತ್ತಲು ಬಂದಿದ್ದ ಕನ್ವರ್ ಯಾತ್ರಿಕರು ಮತ್ತು ಸಿಆರ್‌ಪಿಎಫ್ ಜವಾನ ಗೌತಮ್ ನಡುವೆ ಟಿಕೆಟ್ ಖರೀದಿಯ ಬಗ್ಗೆ ವಾಗ್ವಾದ ನಡೆಯಿತು.

ಈ ಪ್ರಕ್ರಿಯೆಯಲ್ಲಿ ಅವರು ಜವಾನನ ಮೇಲೆ ದಾಳಿ ಮಾಡಿದರು. ನೆಲಕ್ಕೆ ಬಿದ್ದ ಜವಾನನಿಗೆ ಕಂವರ್‌ ಯಾತ್ರಿಗಳು ಕಾಲಿನಿಂದ ತುಳಿದರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ನಂತರ, ದಾಳಿಯಲ್ಲಿ ಭಾಗಿಯಾಗಿದ್ದ ಏಳು ಯಾತ್ರಿಗಳನ್ನು ಪೊಲೀಸರು ಬಂಧಿಸಿದರು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

You cannot copy content of this page

Exit mobile version