Home ರಾಜಕೀಯ ಸಿದ್ದರಾಮಯ್ಯ ಮೇಲೆ ಸಿ.ಟಿ ರವಿ ಕೀಳು ಮಟ್ಟದ ಪದಪ್ರಯೋಗ; ವ್ಯಾಪಕ ಟೀಕೆ

ಸಿದ್ದರಾಮಯ್ಯ ಮೇಲೆ ಸಿ.ಟಿ ರವಿ ಕೀಳು ಮಟ್ಟದ ಪದಪ್ರಯೋಗ; ವ್ಯಾಪಕ ಟೀಕೆ

0

ಕಾಂಗ್ರೆಸ್ ಬಿಜೆಪಿ ವಾಕ್ಸಮರ ಎಲ್ಲರಿಗೂ ತಿಳಿದ ವಿಷಯ. ಸಧ್ಯ ಈ ವಾಕ್ಸಮರ ವಯಕ್ತಿಕ ಟೀಕೆಯ ಹಂತಕ್ಕೆ ಹೋಗಿರುವುದು ಎರಡೂ ಪಾಳಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಅದರಲ್ಲೂ ಬಿಜೆಪಿ ವಕ್ತಾರ ಸಿ.ಟಿ ರವಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಬಳಸಿರುವ ಕೀಳು ಮಟ್ಟದ ಪದ ಪ್ರಯೋಗ ಬಿಜೆಪಿ ವಲಯದಲ್ಲೇ ಅಪಸ್ವರಕ್ಕೆ ಎಡೆಮಾಡಿಕೊಟ್ಟಿದೆ.

ನಿನ್ನೆಯ ದಿನ ಸೆಪ್ಟೆಂಬರ್ 12 ರಂದು ಸಿದ್ದರಾಮಯ್ಯ ತಮ್ಮ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪದಲ್ಲಿ ತೊಡಗಿದ್ದಾಗ ಮಾಧ್ಯಮಗಳು ಬಿಜೆಪಿ ವಕ್ತಾರ ಸಿ.ಟಿ.ರವಿಯವರ ಬಗ್ಗೆ ವಿಚಾರ ಪ್ರಸ್ತಾಪಿಸಿವೆ. ಇದಕ್ಕೆ ಸಿದ್ದರಾಮಯ್ಯ ‘ಚಿಕ್ಕಮಗಳೂರು ಭಾಗದಲ್ಲಿ ಸಿ.ಟಿ.ರವಿಯವರನ್ನು ಲೂಟಿ ರವಿ ಅಂತಲೇ ಕರೆಯುತ್ತಾರೆ. ನಾವು ಹೇಳೋದು ಬೇಡ…” ಎಂಬುದಾಗಿ ಹೇಳಿದ್ದರು.

ಈ ವಿಚಾರ ಮಾಧ್ಯಮಗಳಲ್ಲಿ ಬಂದ ನಂತರ ಸಿ.ಟಿ.ರವಿಯವರು ಸಿದ್ದರಾಮಯ್ಯ ಮಾತಿಗೆ ಕೌಂಟರ್ ಕೊಡಲು ಹೋಗಿ ತೀರಾ ಕೆಳ ಮಟ್ಟದ ಪದಪ್ರಯೋಗಕ್ಕೆ ಇಳಿದಿದ್ದಾರೆ. “ಸಿದ್ದರಾಮಯ್ಯರನ್ನು ಮೈಸೂರು ಭಾಗದಲ್ಲಿ ಕಚ್ಚೆಹರುಕ ಎನ್ನುತ್ತಾರೆ. ನನಗೂ ಹೇಳೋಕೆ ಬರಲ್ವಾ..” ಎಂಬಂತೆ ಹೇಳಿದ್ದಾರೆ. ಮುಂದುವರಿದು “ಪ್ರಾಸಬದ್ಧವಾಗಿ ಮಾತನಾಡುವುದಾದರೆ ಸಿದ್ದರಾಮಯ್ಯನವರಿಗೆ ‘ಸಿದ್ಧ-ಪೆದ್ದ’ ಅಂತಲೂ ನಾನು ಕರೆಯುತ್ತೇನೆ” ಎಂದಿದ್ದಾರೆ.

ಸಿ.ಟಿ.ರವಿಯ ಇಂತಹ ಕೀಳು ಮಟ್ಟದ ಪದಪ್ರಯೋಗ ಇದೇ ಮೊದಲಲ್ಲ. ಈ ಹಿಂದೆಯೂ ಹಲವಷ್ಟು ಬಾರಿ ಸಿ.ಟಿ.ರವಿ ಮೂರನೇ ದರ್ಜೆಯ ಪದಪ್ರಯೋಗಕ್ಕೆ ಸಾಕ್ಷಿ ಆಗಿದ್ದಾರೆ. ‘ಚುನಾವಣೆ ಹೊಸ್ತಿಲಲ್ಲಿ ಈ ರೀತಿಯ ಪದ ಬಳಕೆ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ, ಹಾಗಾಗಿ ಸಿ.ಟಿ.ರವಿ ಹೇಳಿಕೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬಹುದು. ಬಿಜೆಪಿ ಮುಖಂಡರು ಈ ಬಗ್ಗೆ ವಿವೇಚನೆ ಕಳೆದುಕೊಂಡು ಮಾತನಾಡಬಾರದು’ ಎಂದು ಬಿಜೆಪಿ ಆಂತರಿಕ ವಲಯದಲ್ಲಿ ಮಾತುಕತೆ ಶುರುವಾಗಿದೆ.

ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಪಕ್ಷದ ನಾಯಕರೂ ಸಹ ಸಿ.ಟಿ.ರವಿಯವರ ‘ಕಚ್ಚೆಹರುಕ’ ಪದ ಬಳಕೆ ಬಗ್ಗೆ ಟೀಕಿಸಿದ್ದಾರೆ. ಇದು ಬಿಜೆಪಿ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನಿದ್ದರೂ ಅದು ಈ ಮಟ್ಟದ ವಯಕ್ತಿಕ ಟೀಕೆಗೆ ಇಳಿಯುವುದು ಸರಿಯಲ್ಲ. ಇದು ಒಪ್ಪುವಂತಹ ಮಾತಲ್ಲ ಎಂದು ವಿರೋಧ ಪಕ್ಷದ ನಾಯಕರುಗಳು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

You cannot copy content of this page

Exit mobile version